ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ  06/02/2023  ರಂದು ಬೆಳಿಗ್ಗೆ  9:40 ಗಂಟೆಗೆ  ಕುಂದಾಪುರ  ತಾಲೂಕಿನ  ಕೊಟೇಶ್ವರ ಗ್ರಾಮದ  ಕಾಗೇರಿಯ ಕಂದಾವರ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಬಳಿ ರಸ್ತೆಯಲ್ಲಿ, ಆಪಾದಿತ  ಸುರೇಶ KA-20-MD-5989 ನೇ KIA ಸೆಲ್ಟೋಸ್‌ ಕಾರನ್ನು  ಕೊಟೇಶ್ವರ ಕಡೆಯಿಂದ ಹುಣ್ಸೆಮಕ್ಕಿ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ರಸ್ತೆಯ ಬಲಬದಿಗೆ ಹೋಗಿ, ಕಂದಾವರ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಕಡೆಯಿಂದ ಶಂಕರ ಆಚಾರ್‌ ಎಂಬುವವರು KA-20-EW-6645ನೇ ಬೈಕನ್ನು ಇಂಡಿಕೇಟರ್‌‌ ಹಾಕಿ ಮುಖ್ಯ ರಸ್ತೆಗೆ  ಸವಾರಿ ಮಾಡಿಕೊಂಡು ಬಂದು  ರಸ್ತೆಯ ಎಡಬದಿಯಲ್ಲಿ ಕೊಟೇಶ್ವರ ಕಡೆಗೆ ಹೋಗುತ್ತಿರುವಾಗ ಅವರ ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ, ಶಂಕರ ಆಚಾರ್‌ರವರ  ಎಡಕೈಗೆ ಒಳಜಖಂ ಗಾಯ ಹಾಗೂ ಮೈ ಕೈಗೆ  ತರಚಿದ ಗಾಯವಾಗಿ ಬಗ್ಗೆ   ಕೊಟೇಶ್ವರ  ಎನ್‌. ಆರ್‌ಆಚಾರ್ಯ  ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ  ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 15/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಸಂತೋಷ ಕುಮಾರ್ ಶೆಟ್ಟಿ (60), ತಂದೆ: ದಿ. ವಿಠ್ಠಲ ಶೆಟ್ಟಿ, ವಾಸ: ಹಟ್ಟಿಯಂಗಡಿ ಗ್ರಾಮ ಮತ್ತು ಅಂಚೆ, ಕುಂದಾಪುರ ತಾಲೂಕು ಇವರು ಮತ್ತು ಪರಿಚಯದ ಗೊವಿಂದರಾಜು ಶೆಟ್ಟಿ ರವರು ದಿನಾಂಕ 04/02/2023 ರಂದು 14:30 ಗಂಟೆಗೆ ತನ್ನ  KA-05-MJ-0875 ನೇ ಕಾರಿನಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ  ಹೋಗುತ್ತಿರುವಾಗ ಮಣೂರು ಗ್ರಾಮದ ಬಾಳೆಬೆಟ್ಟು ಹತ್ತಿರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ತಲುಪುವಾಗ ಉಡುಪಿ ಕಡೆಯಿಂದ ಬಂದ KA-20-5381 ನೇ ಮಹೇಂದ್ರ ಮೆಟೊಡೋರ್ ವಾಹನದ ಚಾಲಕ ಮುತ್ತಪ್ಪ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ಕಾರಿಗೆ ಡಿಕ್ಕಿ ಹೊಡೆದಿದ್ದು ಕಾರು ಪಲ್ಟಿಯಾಗಿ ಪಕ್ಕದ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಪಕ್ಕದಲ್ಲಿ ಕುಳಿತಿದ್ದ ಗೊವಿಂದರಾಜು ಶೆಟ್ಟಿ ರವರ ಬಲಬುಜ, ಬೆನ್ನಿಗೆ ನೋವಾಗಿದ್ದು ಬಲಗೈ ಮೊಣಗಂಟಿನ ಹತ್ತಿರ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ದಿನೇಶ್ ಪೂಜಾರಿ (49), ತಂದೆ: ಬಾಬು ಪೂಜಾರಿ, ವಾಸ: ರಾಮೆಟ್ಟುಪಲ್ಕೆ ಮನೆ, ಹೆಪೆಜಾರು, ಬಜಗೋಳಿ ಅಂಚೆ, ಮುಡಾರು ಗ್ರಾಮ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರ ತಾಯಿ ಲಲಿತಾ(68) ಇವರು  ಒಂದು ವರ್ಷದ ಹಿಂದೆ ಮನೆಯಲ್ಲಿ ದನವನ್ನು ಕಟ್ಟುವಾಗ ಅಕಸ್ಮಿಕವಾಗಿ ಬಿದ್ದು, ಅವರ ಎಡಕಾಲು ಜಖಂಗೊಂಡಿದ್ದು, ಕಾಲಿಗೆ ಚಿಕಿತ್ಸೆ ಮಾಡಿದರೂ ಅವರಿಗೆ ಸರಿಯಾಗಿ ನಡೆದಾಡಲು ಆಗದೇ ಇದ್ದು,  ಅಲ್ಲದೆ ಅವರು ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದು, ಖಾಯಿಲೆಗೆ ಬಜಗೋಳಿಯ ವೈದ್ಯರಿಂದ ಚಿಕಿತ್ಸೆ ಪಡೆದರೂ ಖಾಯಿಲೆ ಗುಣಮುಖವಾಗದೇ ಇದ್ದುದರಿಂದ ಮನನೊಂದು ದಿನಾಂಕ 06/02/2023 ರಂದು 18:00 ಗಂಟೆಯಿಂದ 18:30 ಗಂಟೆಯ ಮಧ್ಯೆ ಮನೆಯಲ್ಲಿ ಯಾರೂ ಇಲ್ಲದ ಸಮಯ ಬಚ್ಚಲು ಮನೆಯ ಮಾಡಿನ ಜಂತಿಗೆ  ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 11/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಕೊಲ್ಲೂರು: ಪಿರ್ಯಾದಿದಾರರಾದ ಪ್ರವೀಣ  ಜೋಗಿ (27), ತಂದೆ:ಕೊಲ್ಲೂರ್‌ ಬಳೆಗಾರ್‌, ವಾಸ: ಶ್ರೀ.ಮೂಕಾಂಬಿಕಾ  ನಿಲಯ ಹೆಗ್ಡೆಹಕ್ಲು  ಕೊಲ್ಲೂರು ಗ್ರಾಮ, ಬೈಂದೂರು ತಾಲೂಕು, ಉಡುಪಿ ಜಿಲ್ಲೆ ಇವರು ಕೊಲ್ಲೂರು ಘಟಕದ ವಿಶ್ವಹಿಂದೂ ಪರಿಷತ್‌, ಬಜರಂಗದಳ ಸಂಚಾಲಕರಾಗಿದ್ದು, ದಿನಾಂಕ 06/02/2023 ರಂದು ಬೆಳಗ್ಗಿನ ಜಾವ 01:30 ಗಂಟೆಗೆ  ಕೊಲ್ಲೂರು ಗ್ರಾಮದ  ಕೊಲ್ಲೂರು ಶ್ರೀ.ಮೂಕಾಂಬಿಕಾ ದೇವಸ್ಥಾನದ ಪಾರ್ಕಿಂಗ್‌ ಸ್ಥಳದಲ್ಲಿ ಮಲಗಿದ ಜಾನುವಾರುಗಳನ್ನು ಯಾರೋ ಕಳ್ಳರು ಕಳವು ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿ ಪಿರ್ಯಾದಿದಾರರು ವಿಶ್ವಹಿಂದೂ ಪರಿಷತ್‌, ಬಜರಂಗದಳ  ಸದಸ್ಯ ರಾದ ಜಗ್ಗ @ ಜಗದೀಶ, ಕಿರಣ ಜೋಗಿ, ವಿನೋದ್‌, ಸುಧಾಕರ, ಮಹೇಶ  ಹಾಗೂ ಇತರರೊಂದಿಗೆ  ಸ್ಥಳಕ್ಕೆ ಬಂದಾಗ  ಅಲ್ಲಿ ಒಂದು ಬಿಳಿ ಬಣ್ಣದ ರಿಡ್ಜ್‌ ಕಾರು ಇದ್ದು ಈ ಕಾರಿನಲ್ಲಿ ಬಂದ ವ್ಯಕ್ತಿಗಳು  ಪಾರ್ಕಿಂಗ್‌ ಸ್ಥಳದಲ್ಲಿ ಮಲಗಿದ ಜಾನುವಾರುಗಳನ್ನು ಕಳವು ಮಾಡಿ ಕೊಂಡು ಹೋಗಲು ಪ್ರಯತ್ನಿಸುತ್ತಿದಾಗ ಪಿರ್ಯಾದಿದಾರರು ಮತ್ತು ಇತರರನ್ನು ನೋಡಿ ಸ್ಥಳದಿಂದ ಕಾರು ಸಮೇತ ಪರಾರಿಯಾಗಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 05/2023 ಕಲಂ: 379, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ಪಿರ್ಯಾದಿದಾರರಾದ ಪ್ರಸಾದ (29) ಇವರು ಕೆದೂರು ಗ್ರಾಮ ಪಂಚಯತ್ ನಲ್ಲಿ ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿದ್ದು ಕೆದೂರು ಗ್ರಾಮದ ಗ್ರಾಮ ಪಂಚಾಯತ್ ನ ಅಧಿನದಲ್ಲಿರುವ ಅಂಗಡಿಯನ್ನು  ಮಹಜರು ನಡೆಸಿದ್ದು ಅಂಗಡಿಯಲ್ಲಿರುವ ಚರ ಸ್ವತ್ತುಗಳನ್ನು ದಿನಾಂಕ 04/02/2023 ರಂದು ಕೆದೂರು ಗ್ರಾಮ ಪಂಚಾಯತ್ ನಲ್ಲಿ ಬಹಿರಂಗ ಎಲಂ ನಡೆಸಲಾಗಿರುತ್ತದೆ. ಎಲಂನಲ್ಲಿ  ಸೀತಾರಾಮ ಶೆಟ್ಟಿ, ತಂದೆ: ಜಗನ್ನಾಥ ಶೆಟ್ಟಿ, ಬೇಳೂರು ಇವರಿಗೆ ರೂಪಾಯಿ 51,000/- ಕ್ಕೆ ಎಲಂ ಖಾಯಂ ಆಗಿರುತ್ತದೆ. ದಿನಾಂಕ 06/02/2023 ರಂದು ಪಿರ್ಯಾದಿದಾರರು ಪಂಚಾಯತ್ ಸಿಬ್ಬಂದಿಯವರಾದ ಮಾಧವ, ಸೀತಾರಾಮ ಮತ್ತು ಪಂಚಾಯತ್ ಸದಸ್ಯರೊಂದಿಗೆ ಸ್ವತ್ತುಗಳನ್ನು ಎಲಂ ಬಿಡ್ಡುದಾರರಿಗೆ ಹಸ್ತಾಂತರಿಸಲು ಮುಂದಾದಾಗ ಬೆಳಿಗ್ಗೆ 10:45 ಗಂಟೆಗೆ ಆರೋಪಿ ಸೀತಾರಾಮ ಶೆಟ್ಟಿ ಏಕಾಎಕಿ ಅಂಗಡಿ ಒಳಗೆ ನುಗ್ಗಿ ಪಿರ್ಯಾದಿದಾರರನ್ನು ದೂಡಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಎಕವಚನದಲ್ಲಿ ನೀನು ಏನು ಲಿಸ್ಟ ಮಾಡಿ ಕೊಡುವುದು ಎಂದು ಹೇಳಿ ಅವಾಚ್ಯ ಶಬ್ದದಿಂದ  ಪಿರ್ಯಾದಿದಾರರಿಗೆ ಬೈದಿದ್ದಲ್ಲದೇ ನಾನು ಎಲ್ಲಾ ಸ್ವತ್ತುಗಳನ್ನು ತೆಗೆದುಕೊಂಡು ಹೋಗುತ್ತೇನೆ, ನೀನು ಎನು ಮಾಡುತ್ತೀಯಾ ಎಂದು ಹೇಳಿ ದಾಂದಲೆ ಮಾಡಿ ಕೆಲವು ಸ್ವತ್ತುಗಳನ್ನು ಬಲಾತ್ಕಾರವಾಗಿ ತೆಗೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 18/2023  ಕಲಂ: 353, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 07-02-2023 09:51 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080