ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಎಸ್. ವಿ ಸೀತಾರಾಮ ಆಚಾರ್ಯ (63) ತಂದೆ: ವೆಂಕಪ್ಪ ಆಚಾರ್ಯ ವಾಸ: ಮನೆ ನಂಬ್ರ 1-41/3, ಪಂಚಮ ಮನೆ, ಬಡಹೋಬಳಿ, ಕಾರ್ಕಡ ಗ್ರಾಮ & ಅಂಚೆ ಸಾಲಿಗ್ರಾಮ ಇವರು ದಿನಾಂಕ 06/02/2021 ರಂದು ಉಡುಪಿಯಲ್ಲಿ ಸೆಂಟ್ರಿಂಗ್ ಕೆಲಸ ಮುಗಿಸಿ ತನ್ನ ಮನೆಯಾದ ಸಾಲಿಗ್ರಾಮದ ಕಡೆಗೆ ತನ್ನ ಸ್ಕೂಟರ್ KA-20-EQ-7399 ನ್ನು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ, ಸಮಯ ಸುಮಾರು ಮದ್ಯಾಹ್ನ 3:40 ಗಂಟೆಗೆ ಉಡುಪಿ ತಾಲೂಕಿನ ಪುತ್ತೂರು ಗ್ರಾಮ ಅಂಬಾಗಿಲು ಜಂಕ್ಷನ್ ಬಳಿ ತಲುಪುವಾಗ ಹಿಂದಿನಿಂದ KA-03-HH-6997 ನೇ ಮೋಟಾರು ಸೈಕಲ್ ಸವಾರ ಅನುಜ್ ಶೆಟ್ಟಿ ಎಂಬಾತ ತನ್ನ ಮೋಟಾರು ಸೈಕಲನ್ನು ಕರಾವಳಿ ಕಡೆಯಿಂದ ಸಂತೆಕಟ್ಟೆ ಕಡೆಗೆ ದುಡುಕುತನ ಮತ್ತು ನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಇವರ ಸ್ಕೂಟರಿನ ಹಿಂಬದಿ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು, ಎಡಕಾಲಿನ ಮೂಳೆ ಮುರಿತ ಹಾಗಾ ಕೈಗಳಿಗೆ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 11/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ದಿನಾಂಕ 06/02/2021 ರಂದು ಪಿರ್ಯಾಧಿದಾರರಾದ ರಾಘವೇಂದ್ರ ನಾಯಕ್(37), ತಂದೆ: ಪುತ್ತು ನಾಯಕ್, ವಾಸ: ಕೊಂಡಾಡಿ ಭಜನೆಕಟ್ಟೆ ಎದುರು, ಕೊಂಡಾಡಿ, ಬೊಮ್ಮ ರ ಬೆಟ್ಟು ಗ್ರಾಮ, ಉಡುಪಿ ಇವರ ವಾಸ್ತವ್ಯದ ಮನೆಯಾದ ಬೊಮ್ಮರಬೆಟ್ಟು ಗ್ರಾಮದ ಕೊಂಡಾಡಿ ಭನಜೆಕಟ್ಟೆಯ ಎದುರು ಮಧ್ಯಾಹ್ನ 12:25 ಗಂಟೆಗೆ ಕಾರು ನಂಬ್ರ: ಕೆಎ-20-ಎಮ್ ಬಿ-0661 ನ್ನು ಅದರ ಚಾಲಕ ಹರಿಣಾ ಶೆಟ್ಟಿ ಎಂಬುವವರು ಗುಡ್ಡೆಯಂಗಡಿ ಕಡೆಯಿಂದ ಉಡುಪಿ ಕಡೆಗೆ ಕಾರ್ಕಳ-ಉಡುಪಿ ಡಾಮಾರು ರಸ್ತೆಯಲ್ಲಿ ತನ್ನ ಕಾರನ್ನು ದುಡುಕುತನದಿಂದ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಕೊಂಡಾಡಿ ಭಜನೆಕಟ್ಟೆಯ ಎದುರು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ, ರಸ್ತೆಯಲ್ಲಿ ಕೇಬಲ್ ಕೆಲಸ ಮಾಡುತ್ತಿದ್ದ ಸುನಿಲ್ ಎಂಬುವವರಿಗೆ ರಕ್ತಗಾಯವನ್ನುಂಟು ಮಾಡಿ, ಬಳಿಕ ಕಾರು ರಸ್ತೆಯಿಂದ ರಾಘವೇಂದ್ರ ನಾಯಕ್ ಇವರ ಅಂಗಳಕ್ಕೆ ಜಿಗಿದು ಅಂಗಳದಲ್ಲಿರುವ ತುಳಸಿಕಟ್ಟೆ, ಮನೆಯ ಮೆಟ್ಟಿಲು, ಜಗುಲಿ, ಹೆಂಚಿನ ಮಾಡು ಗೋಡೆಗೆ ಅಪ್ಪಳಿಸಿ ನಷ್ಠವನ್ನುಂಟು ಮಾಡಿದ್ದಲದೇ, ಅಂಗಳದಲ್ಲಿ ಮಗುಚಿ ಬಿದ್ದಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 03/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 06/02/2021 ರಂದು ಮಧ್ಯಾಹ್ನ ಸುಮಾರು 01:00 ಗಂಟೆಗೆ, ಕುಂದಾಪುರ ತಾಲೂಕಿನ, ಕಸಬಾ ಗ್ರಾಮದ, KSRTC ಬಸ್‌ನಿಲ್ದಾಣದ ಬಳಿ, ಪೂರ್ವ ಬದಿಯ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ, ಆಪಾದಿತ ಹಲಸು ಡಿಸೋಜಾ ಎಂಬವರು KA-20-D-7124ನೇ ಟಾಟಾ ಎಸ್‌ಗೂಡ್ಸ್‌ ವಾಹನವನ್ನು ತಲ್ಲೂರು ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಈಶ್ವರ್‌ ಆಚಾರ್‌ಎಂಬವರು KA-20-EN-5613ನೇ ಮೋಟಾರ್‌ಸೈಕಲ್‌‌ನಲ್ಲಿ ಪಿರ್ಯಾದಿದಾರಳಾದ ಶ್ರೀಮತಿ ಪಾರ್ವತಿ ಆಚಾರ್‌ (40) ಗಂಡ ರಾಜು ಆಚಾರ್‌ವಾಸ: ಜನತಾ ಕಾಲೋನಿ, ಸರಕಾರಿ ಹೈಸ್ಕೂಲ್‌‌ ಬಳಿ, ಕೆದೂರು ಗ್ರಾಮ, ಕುಂದಾಪುರ ಎಂಬವರನ್ನು ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸದ್ರಿ ಮೋಟಾರ್‌‌ ಸೈಕಲ್‌‌‌ಗೆ ಹಿಂದಿನಿಂದ ಅಪಘಾತಪಡಿಸಿದ ಕಾರಣ ವಾಹನ ಸಮೇತ ರಸ್ತೆಗೆ ಬಿದ್ದ ಶ್ರೀಮತಿ ಪಾರ್ವತಿ ಆಚಾರ್‌ ರವರ ಬಲ ತೊಡೆಗೆ ಮೂಳೆ ಮುರಿತದ ಗಾಯ, ತಲೆಗೆ, ಬಲಕಣ್ಣಿನ ಹತ್ತಿರ, ಹಾಗೂ ಸೊಂಟಕ್ಕೆ ಗಾಯ ನೋವಾಗಿದ್ದು, ಈಶ್ವರ್‌ಆಚಾರ್‌ರವರ ಬಲಕೈ, ಬಲ ಕಾಲಿಗೆ ಹಾಗೂ ಎಡಕಾಲಿನ ಹೆಬ್ಬೆರಳಿಗೆ ಗಾಯ ನೋವಾಗಿ ಕುಂದಾಪುರ ಸರಕಾರಿ ಆಶ್ಪತ್ರೆಯಲ್ಲಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡು, ಬಳಿಕ ಶ್ರೀಮತಿ ಪಾರ್ವತಿ ಆಚಾರ್‌ ರವರು ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 18/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಕುಂದಾಪುರ: ದಿನಾಂಕ 06/02/2021 ರಂದು 16:30 ಗಂಟೆಗೆ ಕುಂದಾಪುರ ಠಾಣಾ ವಡೇರಹೋಬಳಿ ಗ್ರಾಮದ ಬೀಟ್ ಸಿಬ್ಬಂದಿ ರಾಘವೇಂದ್ರ ಮೊಗೇರ ರವರಿಗೆ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಶಾಸ್ತ್ರಿ ವೃತ್ತದ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಆಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಪ್ರಕರಣದ ಸದಾಶಿವ ಆರ್ ಗವರೋಜಿ ಪಿ.ಎಸ್.ಐ. ಕುಂದಾಪುರ ಪೊಲೀಸ್ ಠಾಣೆ ರವರು ಸಿಬ್ಬಂದಿಯವರೊಂದಿಗೆ ಸದ್ರಿ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದು ಸಿಬ್ಬಂದಿಗಳೊಂದಿಗೆ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಶಾಸ್ತ್ರಿ ವೃತ್ತದ ಬಳಿಯ ಸಾರ್ವಜನಿಕ ಸ್ಥಳದಲ್ಲಿ 17:20 ಗಂಟೆಗೆ ಹೋಗಿ, ಮರೆಯಲ್ಲಿ ನಿಂತು ನೋಡಲಾಗಿ ಆಪಾದಿತ ರಾಮಕೃಷ್ಣ ಹೆಬ್ಬಾರ್ ಎಂಬಾತನು ತನ್ನ ಸ್ವಂತ ಲಾಭಕ್ಕಾಗಿ ಸಾರ್ವಜನಿಕರನ್ನು ಸೇರಿಸಿಕೊಂಡು 00 ರಿಂದ 99 ರ ಒಳಗೆ ಯಾವುದೇ ನಂಬರ್ ಬಂದರೆ 1/-ರೂ ಗೆ 70/- ರೂಪಾಯಿ ಕೊಡುವುದಾಗಿ ಹೇಳಿಕೊಂಡು ಸಾರ್ವಜನಿಕರಿಂದ ಹಣವನ್ನು ಪಣವಾಗಿ ಸ್ವೀಕರಿಸಿ ಮಟ್ಕಾ-ಜುಗಾರಿ ಆಟ ನಡೆಸುತ್ತಿದ್ದುದನ್ನು ಖಚಿತಪಡಿಸಿಕೊಂಡು 17:30 ಗಂಟೆಗೆ ದಾಳಿ ನಡೆಸಿ, ಆರೋಪಿತನನ್ನು ದಸ್ತಗಿರಿ ಮಾಡಿ ಆತನ ವಶದಿಂದ ಮಟ್ಕಾ-ಜುಗಾರಿ ಆಟಕ್ಕೆ ಬಳಸುತ್ತಿದ್ದ ನಗದು ರೂಪಾಯಿ. 640/-, ಮಟ್ಕಾ ನಂಬರ್ ಬರೆದ ಚೀಟಿ-1 ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 08/2021 ಕಲಂ: 78 (i) (iii) ಕರ್ನಾಟಕ ಪೊಲೀಸ್‌ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಕೋಟ: ಪಿರ್ಯಾದಿದಾರರಾದ ಶ್ರೀಮತಿ ಶೋಭಾ (40) ಗಂಡ: ಸುರೇಶ ಕುಂದರ್ ವಾಸ: ಚಿನ್ಮಯಿ ನಿಲಯ ಗುಡ್ಡಿ ಮನೆ ಐರೋಡಿ ಗ್ರಾಮ ಸಾಸ್ತಾನ ಬ್ರಹ್ಮಾವರ ತಾಲೂಕು ಉಡುಪಿಇವರ ಮನೆಯ ಪಕ್ಕದಲ್ಲಿ ಇವರ ಸಂಬಂಧಿಯಾದ ವೀಣಾರವರ ಮನೆಯಿರುತ್ತದೆ. ಹಾಗೂ ಇವರಿಗೂ ಹಾಗೂ ವೀಣಾರವರಿಗೂ ಜಾಗದ ವಿಷಯದಲ್ಲಿ ತಕರಾರು ಇರುತ್ತದೆ. ದಿನಾಂಕ 05/02/2021 ರಂದು ಸಂಜೆ ಸಮಯ ಸುಮಾರು 06:30 ಗಂಟೆಯ ಸಮಯಕ್ಕೆ ಶ್ರೀಮತಿ ಶೋಭಾ ರವರ ಅಣ್ಣನಾದ ಅಶೋಕ ಹಾಗೂ ಅವರ ಹೆಂಡತಿ ಪದ್ಮಶ್ರೀ ರವರು ಅವರ ಕಾರಿನಲ್ಲಿ ಇವರ ಮನೆಯ ಬಳಿ ಬಂದಾಗ ತಕರಾರು ಇರುವ ಜಾಗದಲ್ಲಿ ವೀಣಾ ಮನೆಯವರು ಕಲ್ಲು ಹಾಕಿದ್ದರಿಂದ ಕಾರು ಮನೆಯ ಬಳಿ ಬರಲು ಅಗದೇ ಇದ್ದಾಗ, ಶ್ರೀಮತಿ ಶೋಭಾ ರವರು ಜಾಗದಲ್ಲಿದ್ದ ಕಲ್ಲನ್ನು ಎತ್ತಿ ಪಕ್ಕಕ್ಕೆ ಹಾಕುತ್ತಿರುವಾಗ ,ವೀಣಾ ಶ್ರೀಮತಿ ಶೋಭಾ ರವರ ಬಳಿ ಬಂದು ಅವಾಚ್ಯವಾಗಿ ಬೈದಿರುತ್ತಾಳೆ. ಆಗ ಶ್ರೀಮತಿ ಶೋಭಾ ರವರು ನನ್ನ ವಿಚಾರಕ್ಕೆ ಬಂದರೆ ಬಿಡುವುದಿಲ್ಲ ಎಂದು ಹೇಳಿದಾಗ ವೀಣಾ ಳು ಅವಳ ಸಂಬಂದಿಯಾದ ಜಗನ್ನಾಥ ,ಪೂರ್ಣೀಮಾ.ಶೋಭಾ ಹಾಗೂ ಕಮಲ ರನ್ನು ಕರೆಯಿಸಿ ವೀಣಾಳು ಶ್ರೀಮತಿ ಶೋಭಾ ರವರ ಕೈಯನ್ನು ಹಿಡಿದು ಹೊಟ್ಟೆಗೆ ಬಲ ವಾಗಿ ಕೈನಿಂದ ಹೊಡೆದು ತಲೆಯ ಕೂದಲನ್ನು ಎಳೆದಿರುತ್ತಾಳೆ. ಜಗನ್ನಾಥನು ಶ್ರೀಮತಿ ಶೋಭಾ ಇವರ ಕೈಯನ್ನು ಹಿಡಿದು ಎಳೆದಿರುತ್ತಾನೆ. ಉಳಿದ ಆರೋಪಿಗಳು ಅವಾಚ್ಯವಾಗಿ ಬೈದಿರುವುದಲ್ಲದೇ ನಮ್ಮ ಸುದ್ದಿಗೆ ಬಂದರೆ ಕೊಲ್ಲದೇ ಬಿಡುವುದಿಲ್ಲಾ ವಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 23/2021 ಕಲಂ: 354,323,504,506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ವೀಣಾ 36) ತಂದೆ:ದೇಜು ಮರಕಾಲ ವಾಸ: ಕಮಲ ನಿಲಯ ಐರೋಡಿ ಗುಡ್ಡಮನೆ ಐರೋಡಿ ಗ್ರಾಮ ಬ್ರಹ್ಮಾವರ ತಾಲೂಕು ಉಡುಪಿ ಇವರು ದಿನಾಂಕ 05/02/2021 ರಂದು ರಾತ್ರಿ ಸಮಯ ಸುಮಾರು 09:30 ಗಂಟೆಯ ಸಮಯಕ್ಕೆ ಮನೆಯಲ್ಲಿರುವಾಗ ಮನೆಯ ಪಕ್ಕದಲ್ಲಿ ವಾಸವಾಗಿರುವ ಅವರ ಸಂಬಂಧಿಯಾದ ಸುರೇಶ ಕುಂದರ್ ಎಂಬವರು ಇವರ ಜಾಗದಲ್ಲಿರುವ ಶಿಲೆಕಲ್ಲನ್ನು ತೆಗೆದು ಅಲ್ಲಿಯೇ ಪಕ್ಕದಲ್ಲಿದ್ದ ಬೇರೆ ಜಾಗಕ್ಕೆ ಹಾಕುತ್ತಿದ್ದಾಗ, ವೀಣಾ ರವರ ಆತನ ಬಳಿ ಹೋಗಿ ನಮ್ಮ ಜಾಗದಲ್ಲಿರುವ ಶಿಲೆಕಲ್ಲನ್ನು ಯಾಕೆ ಬೇರೆ ಹಾಕುತ್ತೀಯಾ ಎಂದು ಕೇಳಿದಾಗ ಆತನು ವೀಣಾ ರವರಿಗೆ ಅವಾಚ್ಯ ಶಬ್ದಗಳಿಂದ ಬೈದಿದಲ್ಲದೇ ಕೆನ್ನೆಗೆ ಕೈಯಿಂದ ಹೊಡೆದು ದೂಡಿದ ಪರಿಣಾಮ ಇವರು ಕಲ್ಲಿನ ರಾಶಿಯ ಮೇಲೆ ಬಿದ್ದಿರುತ್ತಾರೆ. ಜೋರಾಗಿ ಕೂಗಿ ಕೊಂಡಾಗ ಅಲ್ಲಿಯೇ ಪಕ್ಕದಲ್ಲಿ ವಾಸವಾಗಿದ್ದ ವೀಣಾ ರವರ ಅಕ್ಕ ಪೂರ್ಣೀಮಾ ಹಾಗೂ ಭಾವ ರಮೇಶ ಬರುವುದನ್ನು ನೋಡಿ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಅಲ್ಲಿಂದ ಹೋಗಿರುತ್ತಾನೆ. ವೀಣಾ ರವರಿಗೂ ಹಾಗೂ ಸುರೇಶ ಕುಂದರ್ ರವರಿಗೂ ಇರುವ ಜಾಗದ ವಿಚಾರದಲ್ಲಿನ ತಕರಾರೇ ಈ ಕೃತ್ಯಕ್ಕೆ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 22/2021 ಕಲಂ: 354,323,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-02-2021 09:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080