ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಶಾಹಿದಾ (42)  ತಂದೆ: ಹಂಝತ್ತ್ ವಾಸ: ಮಾರುಲ್ ಹುದಾ ಗುಂಡಿಬೈಲು ದೊಡ್ಡಣಗುಡ್ಡೆ, ಹಿರಿಯ ಪ್ರಾತಮಿಕ ಶಾಲೆಯ ಹತ್ತಿರ ಶಿವಳ್ಳಿ ಗ್ರಾಮ ಉಡುಪಿ ಇವರ ಮಗಳಾದ ಶೇಝಾ ಆಯೀಶಾ (10)ರವರು ಎಂಬವರು ದಿನಾಂಕ 04/01/2023 ರಂದು ಬೆಳಿಗ್ಗೆ ಸುಮಾರು 08:45 ಗಂಟೆ ಸಮಯಕ್ಕೆ ಶಾಲೆಗೆ ಹೋಗಲು ಶಿವಳ್ಳಿ ಗ್ರಾಮದ ಸಾಗ್ರಿ ವಾರ್ಡ್‌ ಚಕ್ರತೀರ್ಥ 4 ನೇ ಕ್ರಾಸ್‌ನ ರಸ್ತೆಯ ಎಡಬದಿಯಲ್ಲಿ ನಿಂತಿರುವಾಗ ಕೆಎ-20-ಪಿ-2822 ನೇದರ ಕಾರಿನ ಚಾಲಕ ಕೆ ಕೆ ಖಾರ್ವಿ ಎಂಬವರು ತನ್ನ ಕಾರನ್ನು ವೈಕುಂಟ ಬಾಳಿಗಾ ಲಾ ಕಾಲೇಜ್‌ ಕಡೆಯಿಂದ ದೊಡ್ಡಣಗುಡ್ಡೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರ ಎಡಬದಿಗೆ ಚಲಾಯಿಸಿಕೊಂಡು ಬಂದು ಶೇಝಾ ಆಯೀಶಾರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರಿಗೆ ಎರಡು ಕಾಲು ಮತ್ತು ಕೈಗೆ ಮುಖಕ್ಕೆ ರಕ್ತ ಗಾಯವಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 06/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಮಹಾಬಲೇಶ್ವರ ಕಾರಂತ(48) ತಂದೆ: ರಾಮದೇವ ಕಾರಂತ ವಾಸ:2-59 ಅಲಸೆಬೆಟ್ಟು, ಐರೋಡಿ ಗ್ರಾಮ ಸಾಸ್ತಾನ, ಬ್ರಹ್ಮಾವರ ತಾಲೂಕು ಉಡುಪಿ ಇವರ ಟಿಪ್ಪರ್ ಲಾರಿ ಸಂಖ್ಯೆ CG-28-C-0107 ನೇ ವಾಹನವನ್ನು ದಿನಾಂಕ 08/10/2022 ರಂದು ರಾತ್ರಿ ಸಮಯ ಸಾಸ್ತಾನ ಟೋಲ್ ಗೇಟಿನ ಹತ್ತಿರ ನಿಲ್ಲಿಸಿದ್ದೂ, ದಿನಾಂಕ 09/10/2022 ರಂದು ಬೆಳಿಗ್ಗೆ  ಪಿರ್ಯಾದಿದಾರರು ಸದ್ರಿ ಸ್ಥಳಕ್ಕೆ ಬಂದು ನೋಡಿದಾಗ ನಿಲ್ಲಿಸಿದ ಟಿಪ್ಪರ್ ಲಾರಿಯು ಸ್ಥಳದಿಂದ ಕಾಣೆಯಾಗಿರುತ್ತದೆ. ಸದ್ರಿ ಟಿಪ್ಪರ್ ಕಾಣೆಯಾಗುವಲ್ಲಿ ಆರೋಪಿತರಾದ ಹೇಮಂತ್ ಮತ್ತು ನವೀನ್ ಎಂಬುವವರು ಕಾರಣವಿರಬಹುದದಾಗಿದೆ. . ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 01/2023 ಕಲಂ: 379 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ನಾಗರಾಜ ಪೂಜಾರಿ (45), ತಂದೆ: ಮಹೇಶ್‌ ಪೂಜಾರಿ, ವಾಸ: ಸಾಮಗರ ಮನೆಯ ಹತ್ತಿರ, ಮಟಪಾಡಿ, ಮಟಪಾಡಿ ಗ್ರಾಮ,  ಬ್ರಹ್ಮಾವರ ಇವರ ಮಾವನಾದ ಅಣ್ಣಪ್ಪ ಪೂಜಾರಿ (45) ಎಂಬವರು ವಿಪರೀತ ಶರಾಬು ಕುಡಿದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದು. ಅದೇ ರೀತಿ ದಿನಾಂಕ 06/01/2023 ರಂದು ಇವರು ಮನೆಯಲ್ಲಿರುವಾಗ  ವಿಪರೀತ ಶರಾಬು ಕುಡಿದು ಮನೆಯಲ್ಲಿ ಗಲಾಟೆ ಮಾಡಿ ಮನೆಯಿಂದ ಹೊರಗೆ ಹೋದವರು ಮಧ್ಯಾಹ್ನ 4:30 ಗಂಟೆಯಿಂದ ಸಂಜೆ 5:00 ಗಂಟೆಯ  ಮಧ್ಯಾವಧಿಯಲ್ಲಿ ಶರಾಬು ಕುಡಿದ ಅಮಲಿನಲ್ಲಿ ಯಾವುದೋ ಕಾರಣಕ್ಕೆ  ಜೀವನದದಲ್ಲಿ  ಜಿಗುಪ್ಸೆ ಗೊಂಡು ಮನೆಯ ಹತ್ತಿರ ಇರುವ ಮೀನಾಕ್ಷಿಯವರ ತೋಟದಲ್ಲಿದ್ದ   ಮಾವಿನ ಮರದ ಕೊಂಬೆಗೆ ನೈಲಾನ್‌ ಹಗ್ಗ  ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಕೊಂಡು ಮೃತ ಪಟ್ಟಿರುತ್ತಾರೆ. ಅಣ್ಣಪ್ಪ ಪೂಜಾರಿ ಯವರ ಮರಣದಲ್ಲಿ ಬೇರೆಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 03/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಸುಧಾಕರ ಶೆಟ್ಟಿ, (60), ತಂದೆ: ಸಂಜೀವ ಶೆಟ್ಟಿ, ವಾಸ: ಕಡಂಬಾಕ್ಯಾರ್‌ ಮನೆ, ರೆಂಜಾಳ ಗ್ರಾಮ, ಕಾರ್ಕಳ ತಾಲೂಕು ಇವರು ಬೆಂಗಳೂರಿನಲ್ಲಿ ಬೇಕರಿ ವ್ಯವಹಾರ  ಮಾಡಿಕೊಂಡಿದ್ದು ದಿನಾಂಕ 04/01/2023 ರಂದು ಬೆಂಗಳೂರಿನಿಂದ  ಪೂಜಾ ಕಾರ್ಯಕ್ರಮದ ಬಗ್ಗೆ ಊರಿಗೆ ಬಂದು ವಾಪಾಸು ಬೆಂಗಳೂರಿಗೆ  ಹೋಗಲು ದಿನಾಂಕ 05/01/2022 ರಂದು ರಾತ್ರಿ  20:00 ಗಂಟೆಗೆ ರೆಂಜಾಳದ ಮನೆಯಿಂದ  ಹೊರಟು ವಿಶಾಲ್ ಬಸ್ ಕಛೇರಿಗೆ ಬಂದು ರಾತ್ರಿ 21:10 ಗಂಟೆಗೆ ಬೆಂಗಳೂರಿಗೆ ಬಸ್ಸು ಇರುವುದರಿಂದ ಪಕ್ಕದಲ್ಲಿರುವ  ಕಿಂಗ್ಸ್ ಬಾರಿಗೆ ಹೋಗಿ ಮದ್ಯಪಾನ ಮಾಡಿ  ರಾತ್ರಿ 21:45 ಗಂಟೆಗೆ ವಿಶಾಲ್  ಬಸ್  ಕಛೇರಿಗೆ  ಹೋಗುವ ಬದಲು ಕಾರ್ಕಳ  ಬಸ್  ಸ್ಟಾಂಡ್ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಇಬ್ಬರು ವ್ಯಕ್ತಿಗಳು  ಬಂದು ಎಲ್ಲಿಗೆ  ಹೋಗುತ್ತೀರಿ ಎಂದು ಕೇಳಿ ನಾವು ಬಸ್ ಸ್ಟಾಂಡ್‌ಗೆ  ಬಿಡುತ್ತೇವೆಂದು ಹೇಳಿ ಬೇರೆ  ಯಾರಾದರು ನೋಡಿದರೆ  ನಿಮ್ಮ  ಚಿನ್ನ  ಹಾಗೂ ಹಣವನ್ನು ತೆಗೆದುಕೊಳ್ಳುತ್ತಾರೆ ಅದನ್ನು ಜಾಗ್ರತೆಯಾಗಿ ಚೀಲದಲ್ಲಿ ಇಟ್ಟುಕೊಳ್ಳಿ ಎಂದು ತಿಳಿಸಿದ್ದು ಸ್ವಲ್ಪ ಸಮಯದ ಬಳಿಕ ಮದ್ಯದ  ನಶೆ ಇಳಿದ ಮೇಲೆ ನೋಡಿದಾಗ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ  ಮೆಂತೆ ಚೈನ್, ಉಂಗುರ-1 ಮತ್ತು ನವರತ್ನ ಉಂಗುರ ಮತ್ತು ಕಿಸೆಯಲ್ಲಿದ್ದ  ನಗದು ರೂಪಾಯಿ 1500/ ಹಾಗೂ  ಮೊಬೈಲ್-1  ನ್ನು  ನಂಬಿಸಿ  ತೆಗೆದುಕೊಂಡು ಹೋಗಿದ್ದು ಅಪಾದಿತರು ನಂಬಿಸಿ ತೆಗೆದುಕೊಂಡು ಹೋದ ನಗದು ಹಣ ಮತ್ತು ವಸ್ತುಗಳ ಒಟ್ಟು ಮೌಲ್ಯ 1,52,500/ ರೂಪಾಯಿ ಆಗಬಹುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 03/2023 ಕಲಂ: 420 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಗಂಗೊಳ್ಳಿ: ಪಿರ್ಯಾದಿದಾರರಾದ ಬಿ,ಬಿ ಸಾರಾ (34) ಗಂಡ: ಮಹ್ಮದ್‌ಸಲೀಂ, ವಾಸ: ಸುಲ್ತಾನ್‌ಕೇರಿ, ಗಂಗೊಳ್ಳಿ ಗ್ರಾಮ ಕುಂದಾಪುರ ರವರು ಆರೋಪಿ ಮಹಮ್ಮದ್‌ಸಲೀಂ ಎಂಬತನೊಂದಿಗೆ ದಿನಾಂಕ 22/05/2010 ರಂದು ಮದವೆಯಾಗಿರುತ್ತಾರೆ. ಮದುವೆ ನಂತರ ಪಿರ್ಯಾದಿದಾರರು ಗಂಡನ ಮನೆಯಾದ ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲೂಕು ಕಸ್ತೂರ್‌ಬಾ ನಗರದಲ್ಲಿರುವ ಆರೋಪಿಯ ಮನೆಯಲ್ಲಿ ವಾಸವಾಗಿದ್ದು, ಇವರಿಗೆ ಒಂದು ಗಂಡು ಮಗ ಮಹ್ಮದ್‌ ಯಾಕುಬ್‌(12) ಇರುವುದಾಗಿದೆ.  ಪಿರ್ಯಾದಿದಾರರು ಗಂಡನ ಮನೆಯಲ್ಲಿರುವಾಗ ಆರೋಪಿಯು ಪಿರ್ಯಾದಿದಾರರಿಗೆ ಮನೆಯಲ್ಲಿ ಕೂಡಿ ಹಾಕಿ ಹೊಡೆದು ಮೈಮೇಲೆ ಬಿಸಿನೀರು ಹಾಕಿ ಹಿಂಸೆ ನೀಡಿರುತ್ತಾನೆ. ಹಾಗೂ ಮಗ ಮಹ್ಮದ್‌ ಯಾಕುಬ್‌ರವರನ್ನು ಮನೆಯಲ್ಲಿ ಕೂಡಿ ಹಾಕಿ ಹೊಡೆದು ಹಿಂಸಿಸುತ್ತಿದ್ದು. ಬಿ.ಬಿ.ಸಾರಾ ರವರು ಆರೋಪಿಯ ಹಿಂಸೆ ತಾಳಲಾರದೇ ಮಗನೊಂದಿಗೆ 3 ವರ್ಷದ ಹಿಂದೆ  ತವರು ಮನೆಯಾದ ಗಂಗೊಳ್ಳಿಗೆ ಬಂದಿರುವುದಾಗಿದೆ. ನಂತರ ಆರೋಪಿಯು ಬಿ.ಬಿ.ಸಾರಾ ಇವರ ಮೇಲೆ ದಿನಾಂಕ 07/09/2019 ರಂದು ಗಂಗೊಳ್ಳಿಯ ಜಮಾತಿಗೆ ದೂರನ್ನು ನೀಡಿ ಎಲ್ಲರ ಸಮ್ಮುಖದಲ್ಲಿ ಮಾನಹಾನಿ ಮಾಡಿರುತ್ತಾರೆ.  ಅಲ್ಲದೇ ಜಮಾತ್‌ ಮೂಲಕ ಆರೋಪಿಯು ಇವರಿಗೆ ವಿವಾಹ ವಿಚ್ಚೇದನೆ  ನೀಡಲು ಪದೇ ಪದೇ ಪ್ರಚೋದನೆ ನೀಡಿರುತ್ತಾನೆ.  ಆರೋಪಿಯು ಬಿ.ಬಿ ಸಾರಾ ರವರಿಗೆ ಹಾಗೂ ಅವರ ಮಗನಿಗೆ ದೈಹಿಕ ಹಿಂಸೆ ಮಾಡಿದ್ದು ಅಲ್ಲದೇ ಜೀವಬೇದರಿಕೆ ಹಾಕಿರುವುದಾಗಿದೆ.  ಈ ಬಗ್ಗೆ ಗಂಗೋಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 01/2023 ಕಲಂ: 498A, 342, 509, 506 IPC & 75 JJ Act  ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-01-2023 10:09 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080