ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಹರಿಶ್ಚಂದ್ರ ಆಚಾರ್ಯ (55)  ತಂದೆ : ದಿ. ಅನಂತಯ್ಯ ಆಚಾರ್ಯ  ವಾಸ : ಹೊಸ ಮಾರಿಗುಡಿ ಹಿಂಭಾಗ ದೇವರ ತೋಟ, ಪಡು ಗ್ರಾಮ, ಕಾಪು ತಾಲ್ಲೂಕು ಉಡುಪಿ ಇವರು ದಿನಾಂಕ 06/01/2023 ರಂದು 08.30 ಗಂಟೆಗೆ ಪಡು ಗ್ರಾಮದ ಕೊಪ್ಪಲಂಗಡಿಯ ಬಿಸ್ಲೇರಿ ನೀರಿನ ಫ್ಯಾಕ್ಟರಿ ಬಳಿ ರಾ ಹೆ 66 ರ ಉಡುಪಿ ಮಂಗಳೂರು ರಸ್ತೆಯನ್ನು ದಾಟಿ, ಮಂಗಳೂರು ಉಡುಪಿ ರಸ್ತೆಯನ್ನು ದಾಟುತ್ತಾ ರಸ್ತೆ ಪೂರ್ವ ಬದಿಯ ಅಂಚಿನಲ್ಲಿರುವಾಗ, ಅದೇ ರಸ್ತೆಯಲ್ಲಿ ಅನಿಲ ರವರು ತನ್ನ ಕೆಎ- 20 ಇಯು-5746 ನೇ ಸ್ಕೂಟರ್‌ನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹರಿಶ್ಚಂದ್ರ ಆಚಾರ್ಯ ರವರಿಗೆ ಢಿಕ್ಕಿ ಹೊಡೆದಿದ್ದು  ಪರಿಣಾಮ ಇವರು ರಸ್ತೆಗೆ ಬಿದ್ದಿದ್ದು, ಹಾಗೂ ಸ್ಪಲ್ಪ ಮುಂದಕ್ಕೆ ಹೋಗಿ ಅನಿಲ ಸ್ಕೂಟರ್‌‌ಸಮೇತ ರಸ್ತೆಗೆ ಬಿದ್ದಿದ್ದು,  ಇವರಿಗೆ ತಲೆಗೆ, ಎಡಭುಜಕ್ಕೆ, ಎಡ ಬದಿಯ ಸೊಂಟಕ್ಕೆ ಗುದ್ದಿದ ಒಳನೋವು ಉಂಟಾಗಿದ್ದು, ಅನಿಲ ರವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇಬ್ಬರನ್ನೂ ಅನಿಲ ಮತ್ತು ವಿಶ್ವನಾಥ ಎಂಬವರು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಇಬ್ಬರನ್ನೂ ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 04/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಡಾ. ಚಂದ್ರಶೇಖರ ರಾವ್‌.ಹೆಚ್ (38) ತಂದೆ: ಹೆಚ್‌. ವಿಜಯ್‌ ಕುಮಾರ್‌ ವಾಸ: ಶ್ರೀ ಕೃಷ್ಣ ಸೌರಭ, ಚರ್ಚ್‌ ಎದುರು, ಕೆ.ಎಂ ಮಾರ್ಗ, ಉಡುಪಿ ಇವರು ಆಯುರ್ವೇದ ವೈದ್ಯರಾಗಿದ್ದು, ಉಡುಪಿ ನಗರದ ಕೆ.ಎಂ ಮಾರ್ಗದಲ್ಲಿರುವ ಮದರ್‌ ಆಫ್‌ ಸಾರೋಸ್‌ ಚರ್ಚ್‌ ಎದುರು ಇರುವ ಉಡುಪಿ ಆಯುರ್ವೇದ ಸ್ಟೋರ್ಸ್‌ ಅಂಗಡಿಯನ್ನು ಹೊಂದಿದ್ದು, ದಿನಾಂಕ 06/01/2023 ರಂದು 22:15 ಗಂಟೆಯಿಂದ ದಿನಾಂಕ 07/01/2023 ರಂದು ಬೆಳಿಗ್ಗೆ 09:40 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಡಾ. ಚಂದ್ರಶೇಖರ ರಾವ್‌.ಹೆಚ್ ರವರ ಅಂಗಡಿಯ ಶೆಟರ್‌ ನ್ನು ಎಳೆದು ಒಳಪ್ರವೇಶಿಸಿ, ಕ್ಯಾಶ್‌ ಕೌಂಟರ್‌ ನ ಬೀಗ ಮುರಿದು ಅದರಲ್ಲಿದ್ದ ನಗದು ರೂಪಾಯಿ 7300/-, ರೂ. 9,000 ಮೌಲ್ಯದ 5 ರೂಪಾಯಿ ನಾಣ್ಯಗಳು, Honor 8x ಕಂಪೆನಿಯ ಮೊಬೈಲ್‌-1 ಹಾಗೂ ಕೆಲವು ಡ್ರೈಪ್ರೂಟ್ಸ್‌ ಪ್ಯಾಕೇಟ್‌ ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ ರೂಪಾಯಿ 20,000/- ಆಗಬಹುದುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 02/2023 ಕಲಂ:  454 457 380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ರಾಘವೇಂದ್ರ (40) ತಂದೆ: ದಿ|| ರಾಮಚಂದ್ರ ವಾಸ: ಚಂದ್ರ ಶೇಖರ ನಿಲಯ , ಹತ್ರಬೈಲು ಪೆರ್ಡೂರು ಗ್ರಾಮ  ಉಡುಪಿ ಇವರ ಹೆಂಡತಿ ರಾಧಿಕಾ (39) ಎಂಬವರಿಗೆ ಕಳೆದ ಒಂದು ವರ್ಷಗಳಿಂದ ಕರುಳು ಸಂಬಂದಿ ಕಾಯಿಲೆ ಇದ್ದು,  ಈ ಬಗ್ಗೆ  ಚಿಕಿತ್ಸೆ ನಡೆಸಿದರು ಸಂಪೂರ್ಣವಾಗಿ ಗುಣಮುಖವಾಗದೆ ಇದ್ದು ಈ ಬಗ್ಗೆ ಚಿಂತಾಕ್ರಾಂತರಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 07/01/2023 ರಂದು ಬೆಳಿಗ್ಗೆ7:45 ಗಂಟೆಯಿಂದ ಮಧ್ಯಾಹ್ನ 12:30  ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಹಿಂಬದಿಯ ರವಿರಾಜ ಶೆಟ್ಟಿಯವರ  ಹಾಡಿಯಲ್ಲಿ ಚಾರ ಮರದ ಕೊಂಬೆಗೆ  ಚೂಡಿದಾರದ ಶಾಲಿನಿಂದ ಕುತ್ತಿಗೆಗೆ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 02/2023 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ದಿನಾಂಕ 25/12/2022 ರಂದು ಪಿರ್ಯಾದಿದಾರರಾದ ಚಿತ್ರಾಂಗ್ ಜುನಿವಾಲ್, (21) ತಂದೆ: ಜಗದೀಶ್ ಚಂದ್ರ ಜುನಿವಾಲ್, ವಾಸ: ಕೆ.ಎಂ.ಸಿ. ಮಣಿಪಾಲ ಹಾಸ್ಟೆಲ್ ಇವರ ಮೊಬೈಲ್ ಸಂಖ್ಯೆಗೆ ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್ ರಿಂದ ಕರೆ ಮಾಡಿ, ತಾನು ನಿಮ್ಮ ಅಂಕಲ್ ನಿನ್ನ ತಂದೆ ನಂಬ್ರ ಕೊಟ್ಟಿರುವುದಾಗಿ ಹೇಳಿ, ನಿಮ್ಮ ಖಾತೆಗೆ ತಪ್ಪಾಗಿ ರೂಪಾಯಿ 25,000/- ಹಣ ಡೆಪೋಸಿಟ್ ಆಗಿದೆ ಅದನ್ನು ಕೂಡಲೇ ಪೇಟಿಎಂ ಮೂಲಕ ಹಿಂತಿರುಗಿಸುವಂತೆ ತಿಳಿಸಿದ್ದು, ಚಿತ್ರಾಂಗ್ ಜುನಿವಾಲ್ ರವರು ಆತನ ಮಾತನ್ನು ನಂಬಿ, ತಂದೆಯ ಸ್ನೇಹಿತರೆಂದು ತಿಳಿದು, ಆತನು ಸೂಚಿಸಿರುವ ನಂಬ್ರಕ್ಕೆ ಪೇಟಿಂ ಮೂಲಕ ರೂ. 24,500/- ಹಣ ವರ್ಗಾವಣೆ ಮಾಡಿರುತ್ತಾರೆ. ಆದರೆ, ಸದ್ರಿ ಹಣ ಖಾತೆಗೆ ಜಮೆ ಆಗಿಲ್ಲವೇಂದು ಅಪರಿಚಿತ ವ್ಯಕ್ತಿ ಚಿತ್ರಾಂಗ್ ಜುನಿವಾಲ್ ರವರಿಗೆ ಪದೇ ಪದೇ ಕರೆ ಮಾಡಿ, ದಿನಾಂಕ 25/12/2022 ರಿಂದ ದಿನಾಂಕ 27/12/2022 ರ ಮಧ್ಯಾವದಿಯಲ್ಲಿ ಒಟ್ಟು ರೂಪಾಯಿ 2,13,999/- ಹಣವನ್ನು ವರ್ಗಾವಣೆ ಮಾಡಿಸಿಕೊಂಡು, ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 01/2023 ಕಲಂ: 66(D)ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-01-2023 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080