ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಬೆರದೊಟ್ಟು, ಕೊಟ್ನೊಟ್ಟು ನಿವಾಸಿ, ರತ್ನಾಕರ ಪ್ರಭು (73) ರವರು ಒಬ್ಬಂಟಿಯಾಗಿ ವಾಸವಿದ್ದು, ಅಸೌಖ್ಯದಿಂದ ಬಳಲುತ್ತಿದ್ದವರು, ತಮಗಿರುವ ಅಸೌಖ್ಯದಿಂದ ನೊಂದು ದಿನಾಂಕ 04/01/2022 ರಂದು ಬೆಳಗ್ಗೆ 9:45 ಗಂಟೆಯಿಂದ ದಿನಾಂಕ 06/01/2022 ರಂದು ಮಧ್ಯಾಹ್ನ 2:00 ಗಂಟೆಯ ಮಧ್ಯೆ ತಾನು ವಾಸವಿರುವ ಮನೆಯ ಹತ್ತಿರದಲ್ಲಿರುವ ಪಿರ್ಯಾದಿದಾರರಾದ  ಜೋಸ್ಪಿನ್ ವಾಯ್ಲೆಟ್ ಮೆಂಡೋನ್ಸಾ (35), ಗಂಡ: ದಿ. ವಲೇರಿಯನ್ ಮೆಂಡೋನ್ಸಾ, ವಾಸ: ಕೊಟ್ನೊಟ್ಟು, ಬೆರಂದೊಟ್ಟು ಗರಡಿ ಬಳಿ, ಬೈದಲ್ ರಸ್ತೆ, ದೂಪದಕಟ್ಟೆ ಅಂಚೆ, ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಇವರ ತೋಟದಲ್ಲಿರುವ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 02/ 2022 ಕಲಂ: 174 ಸಿ,ಆರ್,ಪಿ,ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸ್ವಾತಿ, ತಂದೆ:ಸುರೇಶ್ ಕೋಟ್ಯಾನ್, ಗಂಡ:ಜಗದೀಶ, ವಾಸ:1-97(1) “ಜಯಕೃಷ್ಣ” ಪಂದುಬೆಟ್ಟು,ಅಂಬಲ್ಪಾಡಿ ಪೋಸ್ಟ್, ಉಡುಪಿ ಇವರು ದಿನಾಂಕ 08/10/2021 ರಂದು ಆಪಾದಿತ ಜಗದೀಶ ಉಡುಪಿ ಎಂಬಾತನನ್ನು ಗುರುಹಿರಿಯರು ನಿಶ್ಚಯಿಸಿದಂತೆ  ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೈಲೂರು ಇಲ್ಲಿ ವಿವಾಹವಾಗಿರುತ್ತಾರೆ. ವಿವಾಹದ ನಂತರ ಅವರ ಗಂಡನ ಮನೆಯಾದ ಅಲೆವೂರುಗೆ ಹೊಗಿ ವೈವಾಹಿಕ ಜೀವನವನ್ನು ಪ್ರಾರಂಭಿಸಿರುತ್ತಾರೆ. ವಿವಾಹದ ನಂತರ ಆಪಾದಿತನು ಪಿರ್ಯಾದಿದಾರರನ್ನು ಕೆಲಸಕ್ಕೆ ಹೋಗಲು  ಬಿಡದೇ ಇರುವುರಿಂದ ಪಿರ್ಯಾದಿದಾರರು ಅನಿವಾರ್ಯವಾಗಿ ಕೆಲಸವನ್ನು ಬಿಟ್ಟಿರುತ್ತಾರೆ. ಪಿರ್ಯಾದಿದಾರರು ಮದುವೆಯ ಸಂದರ್ಭದಲ್ಲಿ  ತವರು ಮನೆಯವರು ಹಾಕಿದ್ದ 13 ಪವನ್ ಚಿನ್ನಾಭರಣವನ್ನು ಗಂಡನ  ಮನೆಗೆ ತೆಗೆದುಕೊಂಡು ಹೋಗಿ ಆಪಾದಿತನ  ಕೈಯಲ್ಲಿ  ನೀಡಿರುತ್ತಾರೆ.  ಮದುವೆಯಾದ ಒಂದು ವಾರದಲ್ಲಿ  ಗಂಡನಿಗೆ ಅವರ  ತಂದೆ ತಾಯಿಯವರ ಜೊತೆ  ಜಗಳ ಆಗಿದ್ದು, ಅತ್ತೆ ಮಾವ  ಪಿರ್ಯಾದಿದಾರರ ಗಂಡನನ್ನು ಮನೆ ಬಿಟ್ಟು ಹೋಗುವಂತೆ  ತಿಳಿಸಿದಂತೆ ಪಿರ್ಯಾದಿದಾರರು ಗಂಡನೊಂದಿಗೆ ದಿನಾಂಕ 23/10/2021 ರಂದು  ಉದ್ಯಾವರ ಶಂಭುಕಲ್ಲು ಎಂಬಲ್ಲಿ ಬಾಡಿಗೆ ಮನೆಗೆ ಹೋಗಿ ಸಾಂಸಾರಿಕ ಜೀವನವನ್ನು ನಡೆಸಿಕೊಂಡಿರುತ್ತಾರೆ. ಆಪಾದಿತನು ಬಾಡಿಗೆ ಮನೆಗೆ ಹೋದ ನಂತರ ಪಿರ್ಯಾದಿದಾರರನ್ನು ಪ್ರೀತಿ  ವಿಶ್ವಾಸದಿಂದ ನೋಡಿಕೊಳ್ಳದೇ ಅವಾಚ್ಯ ಶಬ್ದಗಳಿಂದ ಬೈದು, ದೂಡಿ , ಕೈಯಿಂದ ಹೊಡೆದು ಜುಟ್ಟು ಹಿಡಿದು ಎಳೆದಾಡಿ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿ ಪಿರ್ಯಾದಿದಾರರು ತವರು ಮನೆಯಿಂದ ವರದಕ್ಷಿಣೆ ಹಣವನ್ನು  ತೆಗೆದುಕೊಂಡು ಬಂದಿಲ್ಲ ಎಂದು ಹೇಳಿ ಕೈಯಿಂದ ಹೊಡೆಯುತ್ತಿದ್ದು, ಈ ವಿಚಾರವನ್ನು ಪಿರ್ಯಾದಿದಾರರು ಅವರ ಮಾವ ಸುರೇಶ್ ಪೂಜಾರಿ ರವರಿಗೆ ತಿಳಿಸಿದ್ದು ಅವರು ಪಿರ್ಯಾದಿದಾರರ ಕಷ್ಟವನ್ನು ನೋಡಲಾರದೇ ಅವರ ಸಂಸಾರ ಒಳ್ಳೆದಿರಲಿ ಎಂಬ ಉದ್ದೇಶದಿಂದ ಆಪಾದಿತನಿಗೆ 1,00,000/- ರೂಪಾಯಿ ವರದಕ್ಷಿಣೆ ರೂಪದಲ್ಲಿ ಕೊಟ್ಟಿರುತ್ತಾರೆ. ದಿನಾಂಕ 23/11/2021 ರಂದು ಅಪಾದಿತನು ಪಿರ್ಯಾದಿದಾರರ ತವರು ಮನೆಗೆ ಕರೆದುಕೊಂಡು ಬಂದು ಬಿಟ್ಟು ಪಿರ್ಯಾಧಿದಾರರು ಆತನೊಂದಿಗೆ ಸಾಂಸಾರಿಕ ಜೀವನವನ್ನು ನಡೆಸಬೇಕಾದರೆ ಇನ್ನೂ 1,00,000/- ಹಣವನ್ನು ಕೊಡಬೇಕೆಂದು ವರದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟು ಹೋಗಿದ್ದು ನಂತರ ಪಿರ್ಯಾದಿದಾರರನ್ನು ಕರೆದುಕೊಂಡು ಹೋಗಲು ಬಂದಿರುವುದಿಲ್ಲ ಹಾಗೂ ಪಿರ್ಯಾದಿದಾರರ ಚಿನ್ನಾಭರಣವನ್ನು ವಾಪಾಸು ನೀಡದೇ ಮಾನಸಿಕ, ದೈಹಿಕ ಹಿಂಸೆ ನೀಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 03/2022 ಕಲಂ:498(ಎ), 323, 504 ಐ.ಪಿ.ಸಿ ಮತ್ತು 3,4 ಡಿಪಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶಿವಾನಂದ ಕಾಂಚನ್‌ (31), ತಂದೆ: ಆನಂದ ಕಾಂಚನ್‌, ವಾಸ: 1-84, ಕನಕ ಹೌಸ್‌, ರಾಮೇರ್‌ ತೋಟ, ಮಣಿಪುರ, ಕಾಪು ತಾಲೂಕು ಇವರು ಉಡುಪಿಯಲ್ಲಿ  ಖಾಸಗಿ ಬಸ್‌ ಟೈಂ ಕೀಪರ್‌ಆಗಿ ಕೆಲಸ ಮಾಡಿಕೊಂಡಿದ್ದು, ಬಸ್ಸಿನ ಟೈಮಿಂಗ್‌ ವಿಚಾರದಲ್ಲಿ ಶ್ರೀಚಕ್ರ ಬಸ್ಸಿನ ನಿರ್ವಾಹಕ ಶಿವ ಎಂಬಾತನು ಇನ್ನೊಬ್ಬ ವ್ಯಕ್ತಿಯೊಂದಿಗೆ ಸೇರಿಕೊಂಡು ದಿನಾಂಕ 05/01/2022 ರಂದು ಬೆಳಿಗ್ಗೆ 11:00 ಗಂಟೆಗೆ ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ ಬಿಗ್‌ ಬಜಾರ್‌ ಬಸ್‌ ನಿಲ್ದಾಣದಲ್ಲಿ ಪಿರ್ಯಾದಿದಾರರಿಗೆ ಕೈಗಳಿಂದ  ಹೊಡೆದು ಹಲ್ಲೆ ಮಾಡಿದ್ದಲ್ಲದೇ, 1ನೇ ಆರೋಪಿ ಫೈಬರ್‌ ಕುರ್ಚಿಯಿಂದ ಪಿರ್ಯಾದಿದಾರರ ತಲೆಗೆ ಹೊಡೆದಿದ್ದು, ಇನ್ನೊಬ್ಬ ಕೈಯಲ್ಲಿದ್ದ ಸ್ಟೀಲ್‌ ಕಡಗದಿಂದ ಪಿರ್ಯಾದಿದಾರರ ಎಡಕಣ್ಣಿನ ಬಳಿ ಮತ್ತು ಎಡಕುತ್ತಿಗೆಗೆ ಗುದ್ದಿ ನೋವುಂಟು ಮಾಡಿದ್ದಲ್ಲದೇ   ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 04/2022, ಕಲಂ: 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 07-01-2022 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080