ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶಂಕರ ಪೂಜಾರಿ(61), ತಂದೆ; ನಾಗ ಪೂಜಾರಿ, ವಾಸ;  ಬಗ್ವಾಡಿ ಚೂಯಿಮನೆ ಅಂಚೆ ನೂಜಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 06/01/2022 ರಂದು ಕೆಲಸದ ನಿಮಿತ್ತ ತನ್ನ KA-20-B-1077 ನೇ ನಂಬ್ರದ ಟಾಟಾ ಕಂಪೆನಿಯ ಲಾರಿಯಲ್ಲಿ ಕುಂದಾಪುರಕ್ಕೆ ಹೋಗಲು ಕೋಟದಿಂದ ಕುಂದಾಪುರ ರಾ ಹೆ 66 ರ ರಸ್ತೆಯಲ್ಲಿ ರಾತ್ರಿ 10:00 ಗಂಟೆಗೆ ಹೊರಟು ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮದ ಶ್ರೀ ಮಹಾಲಿಂಗೇಶ್ವರ ದೇವಾಸ್ಥಾನದ ಬಳಿ ರಸ್ತೆಯ ಪಶ್ಚಿಮ ಬದಿಯಲ್ಲಿ ನಿಲ್ಲಿಸಿ ಗಾಡಿಯಲ್ಲಿಯೇ ವಿಶ್ರಾಂತಿಯಲ್ಲಿದ್ದು,  ದಿನಾಂಕ 07/01/2022 ರಂದು ಬೆಳಿಗ್ಗೆ  5:00 ಗಂಟೆಗೆ ಪಿರ್ಯಾದಿದಾರರು ಗಾಡಿಯಲ್ಲಿರುವಾಗ  ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ರಾ ಹೆ 66 ರಲ್ಲಿ KA-63-8461 ನೇ ಟಾಟಾ ಕಂಪೆನಿಯ ಲಾರಿಯನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಭಾಗಕ್ಕೆ ಬಂದು ಪಿರ್ಯಾದಿದಾರರ ಲಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಮುಂದಕ್ಕೆ ಹೋಗಿ ನಿಲ್ಲಿಸಿದ್ದು, ಈ ಅಪಘಾತದಿಂದ ಫಿರ್ಯಾದಿದಾರರ ಲಾರಿಯ ಹಿಂಬದಿ ಸಂಪೂರ್ಣ ಜಖಂ ಗೊಂಡಿದ್ದು, ಆರೋಪಿತನ ಲಾರಿಯ ಹಿಂಭಾಗ ಮತ್ತು ಎಡಭಾಗ ಜಖಂ ಗೊಂಡಿದ್ದು, ಲಾರಿ ಚಾಲಕನ ಹೆಸರು ಶರಣಪ್ಪ ಎಂದು ತಿಳಿದು ಬಂದಿದ್ದು, ಈ ಅಪಘಾತದಿಂದ ಯಾರಿಗೂ ಗಾಯಗಳಾಗಿರುವುದಿಲ್ಲ . ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 02/2022  ಕಲಂ: 279 ಐಪಿಸಿಯಂತೆ ಪ್ರಕರಣ ದಾಖಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಯಶೋಧ ಆಚಾರ್ಯ, ಗಂಡ: ವಿಠಲ ಆಚಾರ್ಯ ವಾಸ: ಕಜೆ ಮನೆ, ಕರಿಯಕಲ್ಲು, ಬೋರ್ಕಟ್ಟೆ ಅಂಚೆ, ಮಿಯ್ಯಾರು ಗ್ರಾಮ ಕಾರ್ಕಳ ತಾಲೂಕು , ಉಡುಪಿ ಇವರು  ಹೈನುಗಾರಿಕೆ ಮಾಡಲು ದನಕರುಗಳನ್ನು ಸಾಕುತ್ತಿದ್ದು,  . ದಿನಾಂಕ 02/01/2022 ರಂದು ರಾತ್ರಿ 7:00  ಗಂಟೆಗೆ  ದನಗಳನ್ನು ಹಟ್ಟಿಯಲ್ಲಿ ಕಟ್ಟಿದ್ದು ದಿನಾಂಕ 03/01/2022 ರಂದು ಬೆಳಿಗ್ಗೆ 06:00 ಗಂಟೆಗೆ ಕಟ್ಟಿದ್ದ ಒಂದು ದನವನ್ನು  ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವು  ಮಾಡಿದ ದನವು  ಕಂದು ಬಣ್ಣದ ಮೈಯ,  ಬಿಳಿಯ ಕೆಚ್ಚಲಿನ ಗಿಡ್ಡ ಕೊಂಬುಗಳ ಸಾಧಾರಣದ ಎತ್ತರದ  ದೇಸಿ ತಳಿಯ ದನವಾಗಿದ್ದು  ಮೌಲ್ಯ 12,000/- ಆಗಿರುತ್ತದೆ.. ಹಾಗೂ ಪಿರ್ಯಾದಿದಾರರ ಪಕ್ಕದ ಮನೆಯ ಸುಧಾಕರ ಶೆಟ್ಟಿ ಎಂಬುವವರ ಹಾಲು ಕರೆಯುವ ದನವನ್ನು  ದಿನಾಂಕ 03/01/2022 ರಂದು ರಾತ್ರಿ ಕಟ್ಟಿದ ದನವನ್ನು ದಿನಾಂಕ 04/01/2022 ರಂದು ಬೆಳಿಗ್ಗೆ  06:00 ಗಂಟೆಗೆ ನೋಡಿದಾಗ ಹಾಲು ಕರಿಯುವ ಕಪ್ಪು ಬಣ್ಣದ ಉದ್ದ ಕೊಂಬುಗಳ ಜರ್ಸಿ ತಳಿಯ ದನವನ್ನು ಯಾರೋ ಕಳ್ಳರು ಕಳವು ಮಾಡಿದ್ದು  ದನದ ಮೌಲ್ಯ 12,000/- ರೂಪಾಯಿ ಆಗಿರುತ್ತದ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 04/2022  ಕಲಂ : 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ರಾಮ ದೇವಾಡಿಗ (65), ತಂದೆ: ಅಣ್ಣಪ್ಪ ದೇವಾಡಿಗ, ವಾಸ:ಹೊಳೆಬಾಗಿಲು ಮನೆ ಗ್ರಾಮ ಬೈಂದೂರು ತಾಲೂಕು ಇವರ ತಮ್ಮ ಕೃಷ್ಣ ದೇವಾಡಿಗ (53) ರವರು ಕೃಷಿ ಕೆಲಸ ಮಾಡಿಕೊಂಡು ಬೈಂದೂರು ತೊಂಡೆಮಕ್ಕಿಯಲ್ಲಿ ವಾಸಮಾಡಿಕೊಂಡಿದ್ದು, ಕಳೆದ 6 ತಿಂಗಳಿನಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಆಯುರ್ವೇದಿಕ್ ಔಷಧಿಯನ್ನು ಮಾಡಿದ್ದು ಇದೇ ವಿಚಾರದಲ್ಲಿ ಮನ ನೊಂದು ನನಗೆ ಖಾಯಿಲೆ ಗುಣವಾಗುವುದಿಲ್ಲ ಜೀವವೇ ಬೇಡವಾಗಿದೆ ಎಂದು ನೊಂದು ಹೇಳುತ್ತಿದ್ದು ದಿನಾಂಕ:29/12/2021 ರಂದು ಪಿರ್ಯಾದಿದಾರರ  ತಮ್ಮನ ಮಗ ಪ್ರವೀಣ ಎಂಬುವವರು ಪಿರ್ಯಾದಿದಾರರಿಗೆ ದೂರವಾಣಿ ಕರೆ ಮಾಡಿ ಕೃಷ್ಣ ದೇವಾಡಿಗರವರು ಮನೆಯ ಸ್ವಚ್ಚತೆಗೆ ತಂದಿರಿಸಿದ ಫಿನಾಯಿಲ್ ರಾತ್ರಿ 1:00 ಗಂಟೆಗೆ ಕುಡಿದು ಅಸ್ವಸ್ಥಗೊಂಡಿರುವುದಾಗಿ ಅವರನ್ನು ಚಿಕಿತ್ಸೆ ಬಗ್ಗೆ ಬೈಂದೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು  ನಂತರ  ಕೃಷ್ಣ ದೇವಾಡಿಗ ರವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆ, ಉಡುಪಿ ಸರಕಾರಿ ಆಸ್ಪತ್ರೆಗೆ ಬಳಿಕ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಿನಾಂಕ 04/01/2022 ರಂದು ಚಿಕಿತ್ಸೆಗೆ ದಾಖಲಿಸಿದ್ದು ಪಿನಾಯಿಲ್ ಸೇವಿಸಿ ಅಸ್ವಸ್ಥರಾದವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 07/01/2022 ರಂದು ಬೆಳಿಗ್ಗೆ  4:33 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 01/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 07-01-2022 05:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080