ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಉಡುಪಿ: ದಿನಾಂಕ 02/12/2021 ರಂದು ಪಿರ್ಯಾದಿದಾರರಾದ ಪಾಂಡುರಂಗ ಮಾದೇವ ಮೊಗೇರ (26), ತಂದೆ: ಮಾದೇವ, ವಾಸ: ಚಕ್ರಿಮನೆ, ಗೊರಟೆ ಅಂಚೆ ಮತ್ತು ಗ್ರಾಮ ಭಟ್ಕಳ ತಾಲೂಕು ಇವರು ಉತ್ತರಕನ್ನಡ ಮಲ್ಪೆಯಲ್ಲಿ ಮೀನುಗಾರಿಕೆ ಕೆಲಸ ಮುಗಿಸಿ ಮನೆ ಕಡೆಗೆ ತನ್ನ ಮೋಟಾರು ಸೈಕಲ್ ನಂಬ್ರ KA-47-S-0107 ರಲ್ಲಿ ಸವಾರಿ ಮಾಡಿಕೊಂಡು ಮಲ್ಪೆ ಕಡೆಯಿಂದ ಕರಾವಳಿ ಜಂಕ್ಷನ್ ಕಡೆಗೆ ರಾಷ್ಟ್ರೀಯ ಹೆದ್ದಾರಿ 169ಎ ರಲ್ಲಿ ಸವಾರಿ ಮಾಡಿಕೊಂಡು ಬರುತ್ತಿರುವಾಗ ರಾತ್ರಿ 11:00 ಗಂಟೆಗೆ ಅಂಬಲಪಾಡಿ ಗ್ರಾಮದ ಆದಿ ಉಡುಪಿಯ ಪಂದುಬೆಟ್ಟು ಬಳಿ ತಲುಪುವಾಗ ಎದುರಿನಿಂದ ಕರಾವಳಿ ಕಡೆಯಿಂದ ಮಲ್ಪೆ ಕಡೆಗೆ KA-20-AA-8547 ನೇ ರಿಕ್ಷಾ ಚಾಲಕ ಡೇವಿಡ್ ಫೆರ್ನಾಂಡಿಸ್ ತನ್ನ ರಿಕ್ಷಾವನ್ನು ದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದು ನಂತರ ಅಲ್ಲಿಯೇ ಎಡ ಬದಿಯಲ್ಲಿ ಇದ್ದ ಪಾಗರಕ್ಕೆ ಡಿಕ್ಕಿಹೊಡೆದಿರುವುದಾಗಿದೆ. ಈ ಅಫಘಾತದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡಕಾಲು, ಬಲಕಾಲು ಮತ್ತು ಬಲಕೈಗೆ ರಕ್ತಗಾಯವಾಗಿರುತ್ತದೆ. ರಿಕ್ಷಾ ಚಾಲಕನಿಗೂ ಸಹ  ಗಾಯವಾಗಿರುತ್ತದೆ . ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 80/2021 ಕಲಂ:  279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ದಿನಾಂಕ 03/12/2021 ರಂದು ಪಿರ್ಯಾದಿದಾರರಾದ ಸುಶಾಂತ್ (24), ತಂದೆ: ದಿ. ಸದಾಶಿವ, ವಾಸ: ಕೋಲ್ ಪಲ್ಕೆ ಮನೆ, ಶಬರಿ ಆಶ್ರಮ, ತೆಳ್ಳಾರ್ ರಸ್ತೆ, ಕಸಬಾ ಗ್ರಾಮ, ಕಾರ್ಕಳ ತಾಲೂಕು ಇವರ ತಮ್ಮ ನಿಶಾಂತ್‌ರವರು  ಶಾಶ್ವತ್ ಎಂಬುವವರ KA-19-ET-1383  ನೇ ಮೋಟಾರ್ ಸೈಕಲ್  ನಲ್ಲಿ ಸಹಸವಾರರಾಗಿ ಕುಳಿತುಕೊಂಡು ಪಡುಬಿದ್ರೆಯಿಂದ ಕಾರ್ಕಳಕ್ಕೆ  ಬರುತ್ತಾ ಸಂಜೆ 05:00 ಗಂಟೆಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಪರ್ಪಲೆ ತಿರುವಿನ ಬಳಿ ತಲುಪುವಾಗ ಶಾಶ್ವತ್ ರವರು ಮೋಟಾರ್‌ ಸೈಕಲನ್ನು ಅತಿ ವೇಗ ಹಾಗೂ ನಿರ್ಲಕ್ಷತನದಿಂದ  ಸವಾರಿ ಮಾಡಿದ್ದರಿಂದ ಮೋಟಾರ್ ಸೈಕಲ್ ಸ್ಕಿಡ್ ಆಗಿ ಸಾರ್ವಜನಿಕ ರಸ್ತೆಗೆ ಬಿದ್ದ ಪರಿಣಾಮ ನಿಶಾಂತನ ತಲೆಯ ಹಿಂಬದಿಗೆ ತೀವ್ರ ತರಹದ ಗಾಯ ಬಲಗಾಲಿಗೆ ತರಚಿದ ಗಾಯವಾಗಿದ್ದಲ್ಲದೆ ಮಾತನಾಡುತ್ತಿರಲಿಲ್ಲ ಹಾಗೂ ಮೋಟಾರ್‌ ಸೈಕಲ್‌ ಸವಾರ ಶಾಶ್ವತ್ ನಿಗೆ ಬಲಗಾಲಿಗೆ, ಎಡಕೈಗೆ ತರಚಿದ ಗಾಯವಾಗಿರುತ್ತದೆ. ಅವರಿಬ್ಬರು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 157/2021 ಕಲಂ: 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಭವ್ಯಶ್ರೀ (17), ತಂದೆ:ವೆಂಕಟರಮಣ ಆಚಾರ್ಯ , ವಾಸ: ಭಟ್ರಾಡಿ ಕುಕ್ಕುಂಜೆ ಅಂಚೆ, ನೇರಳಕಟ್ಟೆ ಗ್ರಾಮ,ಕುಂದಾಪುರ ತಾಲೂಕು, ಉಡುಪಿ  ಇವರು  ದಿನಾಂಕ 05/12/2021 ರಂದು ಬೆಳಿಗ್ಗೆ ಅವರ ತಂದೆ ವೆಂಕಟರಮಣ ಅಚಾರ್ಯ (55) ರವರ KA-20-EP-8768 ನೇ ಟಿ.ವಿ.ಎಸ್‌‌ಜುಪಿಟರ್‌ ವಾಹನದಲ್ಲಿ ಹಿಂಬದಿ ಸವಾರಳಾಗಿ ಕುಳಿತುಕೊಂಡು ಕುಂದಾಪುರದಿಂದ ರಾಷ್ಟ್ರೀಯ ಹೆದ್ದಾರಿ 66 ರ ಬ್ರಹ್ಮಾವರ ಉಡುಪಿ ಹೆದ್ದಾರಿಯಲ್ಲಿ ಹೋಗುತ್ತಿರುವಾಗ ಬೆಳಿಗ್ಗೆ  9:15 ಗಂಟೆಗೆ ಸಂತೆಕಟ್ಟೆ ಸೇತುವೆ ಮಧ್ಯ ಭಾಗದಲ್ಲಿ ತಲುಪುವಾಗ ಪಿರ್ಯಾದಿದಾರರ ತಂದೆ  ಅವರು ಸವಾರಿ ಮಾಡಿಕೊಂಡು  ಹೋಗುತ್ತಿದ್ದ  ದ್ವಿಚಕ್ರವಾಹನವನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಸವಾರಿಮಾಡಿಕೊಂಡು ಎದುರಿನಲ್ಲಿ ಹೋಗುತ್ತಿದ್ದ ಹಳದಿ ಬಣ್ಣದ  ರೋಡ್‌ರೋಲರನ ಎಡ ಬದಿಗೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸಮೇತ  ರಸ್ತೆಗೆ ಬಿದ್ದು ಪಿರ್ಯಾದಿದಾರರ ತಂದೆಯ ತಲೆಯಲ್ಲಿದ್ದ  ಹೆಲ್ಮೇಟ್‌‌ ಕಳಚಿ ಹೋಗಿ ತಲೆ ರಸ್ತೆಗೆ  ಬಡಿದು ತಲೆಗೆ ತೀವೃ ಸ್ವರೂಪದ  ರಕ್ತಗಾಯ ವಾಗಿರುತ್ತದೆ ಹಾಗೂ ಪಿರ್ಯಾದಿದಾರರಿಗೆ ಎಡ ಬದಿಯ ಹಣೆ  ಹಾಗೂ ಬಲ ಕೈ ಮೊಣಗಂಟೆನ ಬಳಿ ತರಚಿದ ರಕ್ತಗಾಯವಾಗಿರುತ್ತದೆ. ಕೂಡಲೇ ಸಾರ್ವಜನಿಕರು ಒಂದು ಆಟೋ  ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ  ಉಡುಪಿ ಹೈಟಿಕ್‌ ‌ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪಿರ್ಯಾದಿದಾರರ ತಂದೆಗೆ ತಲೆಗೆ ಆದ ಗಾಯದಿಂದ ಮೃತಪಟ್ಟಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 199 /2021 ಕಲಂ: 279, 287, 337, 304(A) ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ರಾಜು ಮರಕಾಲ (60), ತಂದೆ:ದಿವಂಗತ ಸಂಜೀವ ಮರಕಾಲ, ವಾಸ: ಶ್ರೀಮಾತಾ, ಮಧುವನ , ಅಚ್ಲಾಡಿ  ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 05/12/2021 ರಂದು ಬೆಳಿಗ್ಗೆ  ಮಲ್ಪೆ ಬಂದರಿನಿಂದ  ಪಿರ್ಯಾದಿದಾರರ  KA-20-AA-5052 ನೇ ನೊಂದಣಿ ನಂಬ್ರದ ಬಜಾಜ್‌ ‌ತ್ರಿಚಕ್ರ ರಿಕ್ಷಾದಲ್ಲಿ ಹಸಿ ಮೀನು ಲೋಡ್‌ ಮಾಡಿಕೊಂಡು ಪಿರ್ಯಾದಿದಾರರು ರಿಕ್ಷಾವನ್ನು ಚಲಾಯಿಸುತ್ತಾ  ಪಕ್ಕದಲ್ಲಿ ಸಂಬಂಧಿ ಸುರೇಶ ಮರಕಾಲರವರನ್ನು ಕುಳ್ಳಿರಿಸಿಕೊಂಡು ಮಧುವನ  ಅಚ್ಲಾಡಿ  ಕಡೆಗೆ ಹೊರಟು ಬ್ರಹ್ಮಾವರ – ಸಾಯಿಬರ ಕಟ್ಟೆ ಮುಖ್ಯ ರಸ್ತೆಯಲ್ಲಿ  ಹೋಗುತ್ತಾ ಯಡ್ತಾಡಿ ಮಲಸಾವರಿ  ದೈವಸ್ಧಾನದ  ಬಳಿ ತಲುಪುವಾಗ ಬೆಳಿಗ್ಗೆ 9:00 ಗಂಟೆಗೆ ಎದುರು ಗಡೆಯಿಂದ ಅಂದರೆ ಸಾಯಿಬ್ರಕಟ್ಟೆ ಕಡೆಯಿಂದ KA-20-MB-3664 ನೇ ಕಾರಿನ ಚಾಲಕ  ಸಿದ್ಧಿತ್‌‌ ಎಸ್‌ ಶೆಟ್ಟಿ  ಕಾರನ್ನು ಇಳಿಜಾರು ಹಾಗೂ ತಿರುವಿನ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಆತನ ಮುಂಭಾಗದಲ್ಲಿ ಹೋಗುತ್ತಿದ್ದ ವಾಹನವನ್ನ  ಹಿಂದಿಕ್ಕಲು  ತೀರಾ ಬಲ ಭಾಗಕ್ಕೆ  ಕಾರನ್ನು ಚಲಾಯಿಸಿ  ಪಿರ್ಯಾದಿದಾರರ ಮುಂಭಾಗದಲ್ಲಿ ಹೋಗುತ್ತಿದ್ದ  KA-20-K-1772 ನೇ ಹೀರೋ ಹೊಂಡಾ  ಸ್ಲ್ಪೆಂಡರ್‌‌ಗೆ ಡಿಕ್ಕಿ ಹೊಡೆದು  ಬಳಿಕ ಪಿರ್ಯಾದಿದಾರರ ರಿಕ್ಷಾಕ್ಕೆ  ಡಿಕ್ಕಿ ಹೊಡೆದ  ರಭಸಕ್ಕೆ  ರಿಕ್ಷಾದ ಮುಂಭಾಗ ಸಂಪೂರ್ಣ ಜಖಂ ಗೊಂಡು ರಿಕ್ಷಾದ ಒಳಗೆ ಸಿಕ್ಕಿ ಹಾಕಿ ಕೊಂಡಿರುವುದಾಗಿದೆ.  ಇದರ ಪರಿಣಾಮ ಪಿರ್ಯಾದಿದಾರರ ಮುಖಕ್ಕೆ, ಎರಡು ಕೈಗಳಿಗೆ,  ಎಡ ಕಾಲಿಗೆ ರಕ್ತಗಾಯ ಉಂಟಾಗಿದ್ದು  ಜೊತೆಯಲ್ಲಿದ್ದ  ಸುರೇಶ  ಮರಕಾಲರವರಿಗೆ ತಲೆಗೆ, ಮುಖಕ್ಕೆ, ಕಾಲಿಗೆ, ಕೈಗೆ ತೀವ್ರ ರಕ್ತ ಗಾಯವಾಗಿರುತ್ತದೆ. ಕೂಡಲೇ ಅಲ್ಲಿ ಇದ್ದ ಸಾರ್ವಜನಿಕರು  ಸೇರಿ  ನಮ್ಮನ್ನು ಉಪಚರಿಸಿದ್ದು  ಈ  ಅಪಘಾತದಿಂದ  KA-20-K-1772 ನೇ ಹೀರೋ ಹೊಂಡಾ  ಸ್ಲ್ಪೆಂಡರ್‌‌ ಸವಾರ  ಸುಬ್ರಹ್ಮಣ್ಯ ರವರಿಗೆ ಬಲ ಕಾಲಿಗೆ ಮೂಳೆ ಮುರಿತ , ಹಾಗೂ  ಕಾರಿನಲ್ಲಿ ಇದ್ದ ಸೃಜನ ಶೆಟ್ಟಿ  ಯವರಿನಿಗೆ  ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರನ್ನು ಹಾಗೂ ಇತರೇ ಗಾಯಾಳುವನ್ನು ಕೆ.ಎಂ.ಸಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದು ಪಿರ್ಯಾದಿದಾರರ ಜೊತೆ ಇದ್ದ ಸುರೇಶ ಮರಕಾಲನನ್ನು ಚಿಕಿತ್ಸೆಯ ಬಗ್ಗೆ ಮಹೇಶ ಆಸ್ಪತ್ರೆಗೆ ಕರೆದು ಕೊಂಡು ಹೋದಾಗ ಅಲ್ಲಿನ  ವೈದ್ಯರು  ಪರೀಕ್ಷಿಸಿ  ಬೆಳಿಗ್ಗೆ 10:45 ಗಂಟೆಗೆ  ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 200 /2021 ಕಲಂ: 279, 338, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 05/12/2021 ರಂದು ರಾತ್ರಿ 8:15 ಗಂಟೆಗೆ, ಕುಂದಾಪುರ ತಾಲೂಕು, ವಡೇರಹೋಬಳಿ ಗ್ರಾಮದ ಗಾಂಧಿ ಮೈದಾನದ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ ಆಪಾದಿತ ಗಿರೀಶ್‌ KA-20-MD-2149 ಕಾರನ್ನು ಉಡುಪಿ ಕಡೆಯಿಂದ ಬೈಂದೂರು ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು  ಬಂದು ರಸ್ತೆ ದಾಟುತ್ತಿದ್ದ ಅನಿಲ್‌‌ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅನಿಲ್‌‌ ರವರು ರಸ್ತೆಗೆ ಬಿದ್ದು ಅವರ  ತಲೆಗೆ, ಹೊಟ್ಟೆಗೆ ಹಾಗೂ ದೇಹದ  ಇತರೆ ಅಂಗಾಂಗಗಳಿಗೆ  ಗಂಭೀರ ರಕ್ತಗಾಯ ಹಾಗೂ ಒಳಪೆಟ್ಟಾಗಿ  ಸ್ಥಳದಲ್ಲಿಯೇ ಮೃತಪಟ್ಟಿರುವುದು ಹಾಗೂ ಕಾರಿನಲ್ಲಿ  ಪ್ರಯಾಣಿಸುತ್ತಿದ್ದ ದಿವಾಕರ ಆಚಾರ್ಯ ರವರು ಈ ಅಪಘಾತದಿಂದ ಗಾಯಗೊಂಡು ಕುಂದಾಪುರ  ಆದರ್ಶ ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101/2021 ಕಲಂ: 279, 337, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಕಳವು ಪ್ರಕರಣ

  • ಗಂಗೊಳ್ಳಿ : ಪಿರ್ಯಾದಿದಾರರಾದ ಜಯಂತಿ ಮೊಗವೀರ (42), ಗಂಡ: ರಾಜು ಮೊಗವೀರ, ವಾಸ: ಕಳಿನಮನೆ, ಮಾರಸ್ವಾಮಿ ದೇವಸ್ಥಾನದ ಬಳಿ ಪಡುಕೋಣೆ ಹಡವು ಗ್ರಾಮ, ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕು ಹಡವು ಗ್ರಾಮದ ಪಡುಕೋಣೆ ಮಾರಸ್ವಾಮಿ ದೇವಸ್ಥಾನದ ಬಳಿ ಕಳಿನಮನೆ ಎಂಬಲ್ಲಿರುವ ತನ್ನ ತಾಯಿ ಮನೆಯಲ್ಲಿ ವಾಸ ಮಾಡಿಕೊಂಡಿದ್ದು  ಆಗಾಗ ತನ್ನ ಗಂಡನ ಮನೆಯಾದ ಕೋಟ ಮಣೂರಿಗೆ ಹೋಗುತ್ತಿರುವುದಾಗಿದೆ. ಪಿರ್ಯಾದಿದಾರರು ಗಂಡನ ಮನೆಯಲ್ಲಿರುವಾಗ ದಿನಾಂಕ 28/11/2021 ರಂದು ಬೆಳಿಗ್ಗೆ 10:00 ಗಂಟೆಗೆ ಪಿರ್ಯಾದಿದಾರರ ತಂದೆ ತಾಯಿ ವ್ಯವಹಾರದ ಬಗ್ಗೆ 50,000/- ಹಣವನ್ನು ಗಾದ್ರೇಜ್ ಕಪಾಟಿನಲ್ಲಿ ಹಾಗೂ 35,00/- ಗಣವನ್ನು ಪೆಟ್ಟಿಗೆಯಲ್ಲಿ ಇಟ್ಟು ಮನೆಗೆ ಬೀಗ ಹಾಕಿ ಮಗಳ ಮನೆಯಾದ ಕೋಟ ಮಣೂರಿಗೆ ಹೋಗಿದ್ದು ದಿನಾಂಕ 03/12/2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರು ತನ್ನ ತಂದೆ ತಾಯಿ ಜೊತೆ ಪಡುಕೋಣೆಯಲ್ಲಿರುವ ಮನೆಗೆ ಬಂದು ನೋಡಿದಾಗ  ಯಾರೋ ಕಳ್ಳರು ಮನೆಯ ಎದುರಿನ ಬಾಗಿಲಿಗೆ ಹಾಕಿದ ಬೀಗವನ್ನು ಮುರಿದು ಮನೆಯ ಒಳಗೆ ಇದ್ದ ಗಾದ್ರೇಜ್ ಕಪಾಟು ಹಾಗೂ ಕಬ್ಬಿಣದ ಪೆಟ್ಟಿಗೆಯ ಬೀಗ ಒಡೆದು ಅದರಲ್ಲಿದ್ದ  ಒಟ್ಟು 85,000/- ರೂಪಾಯಿ ಹಣವನ್ನು ಕಳವು ಮಾಡಿದ್ದಲ್ಲದೇ ದೇವರ ಹುಂಡಿ, ಹಾಗೂ ಬಟ್ಟೆ ಬರೆಗಳು ಚಲ್ಲಾಪಿಲ್ಲಿಯಾಗಿರುತ್ತದೆ. ದಿನಾಂಕ 28/11/2021 ರಂದು ಬೆಳಿಗ್ಗೆ 10:00 ಗಂಟೆಯಿಂದ ದಿನಾಂಕ 03/12/2021ರಂದು ಬೆಳಿಗ್ಗೆ 11:00 ಗಂಟೆ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ಮನೆ ಬಾಗಿಲಿನ ಬೀಗ ಮುರಿದು ಕಪಾಟು ಹಾಗೂ ಪೆಟ್ಟಿಗೆಯಲ್ಲಿ ಇಟ್ಟಿದ್ದ 85,000/- ರೂಪಾಯಿ ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 113/2021  ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
     

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಪ್ರಶಾಂತ್ ಮೊಯ್ಲಿ(28), ತಂದೆ: ನರಸಿಂಹ, ವಾಸ: ದುರ್ಗಿ ಮನೆ , ಬಂಕೇಶ್ವರ ಬೈಂದೂರು ಗ್ರಾಮ ಇವರು ದಿನಾಂಕ 05/12/2021 ರಂದು ಮಧ್ಯಾಹ್ನ 12:00 ಗಂಟೆಗೆ ಭಟ್ಕಳದಿಂದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬರುವಾಗ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕು ಬೆಳ್ಕೆ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಆರೋಪಿತರಾದ 1) ಪ್ರಪುಲ್ಲ ಕಾಕಡೆ  ಐ ಆರ್ ಬಿ ಅಧಿಕಾರಿ, 2)  ಐ ಆರ್ ಬಿ ಸಿಬ್ಬಂದಿಗಳು  ಅಪಘಾತದಲ್ಲಿ ಗಾಯಗೊಂಡ 2 ಗೋವುಗಳ ಕಾಲುಗಳನ್ನು ಹಗ್ಗದಿಂದ ಅಮಾನುಷವಾಗಿ ಕಟ್ಟಿ ಹಗ್ಗವನ್ನು ಐ.ಆರ್.ಬಿ ಕಂಪೆನಿಗೆ ಸೇರಿದ KA-47-A-1370 ಬೊಲೆರೋ ಪಿಕಪ್ ವಾಹನಕ್ಕೆ ಕಟ್ಟಿಕೊಂಡು ಹಿಂಸಾತ್ಮಕವಾಗಿ ಅಮಾನುಷವಾಗಿ ರಸ್ತೆಯಲ್ಲಿ ಎಳೆದುಕೊಂಡು ಹೋಗಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 195/2021 ಕಲಂ: 429 ಐಪಿಸಿ ಮತ್ತು  11(1) (ಡಿ) ಪ್ರಾಣಿಹಿಂಸೆ ನಿಷೇಧ ಕಾಯಿದೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 06-12-2021 06:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080