ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ 05/12/2021 ರಂದು ರಾತ್ರಿ ಸುಮಾರು 8:15 ಗಂಟೆಗೆ ಕುಂದಾಪುರ ತಾಲೂಕು, ವಡೇರಹೋಬಳಿ ಗ್ರಾಮದ ಗಾಂಧಿ ಮೈದಾನದ ಎದುರುಗಡೆಯ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯಲ್ಲಿ, ಆಪಾದಿತ ಗಿರೀಶ್‌ ಎಂಬವರು KA-20 MD-2149 ಕಾರನ್ನು ಉಡುಪಿ ಕಡೆಯಿಂದ ಬೈಂದೂರು ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ರಸ್ತೆ ದಾಟುತ್ತಿದ್ದ ನವೀನ್‌ರವರಿಗೆ ಡಿಕ್ಕಿ ಹೊಡೆದ ಪರಿಣಾಮ ನವೀನ್‌ರವರು ರಸ್ತೆಗೆ ಬಿದ್ದು ಅವರ ತಲೆಗೆ, ಹೊಟ್ಟೆಗೆ ಹಾಗೂ ದೇಹದ ಇತರೆ ಅಂಗಾಂಗಗಳಿಗೆ ಗಂಭೀರ ರಕ್ತಗಾಯ ಹಾಗೂ ಒಳಪೆಟ್ಟಾಗಿ ಸ್ಥಳದಲ್ಲಿಯೇ ಮೃತಪಟ್ಟಿರುವುದು ಹಾಗೂ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಿವಾಕರ ಆಚಾರ್ಯ ರವರು ಈ ಅಪಘಾತದಿಂದ ಗಾಯಗೊಂಡು ಕುಂದಾಪುರ  ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವುದಾಗಿದೆ, ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 101/2021 ಕಲಂ: 279, 337, 304 (ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
 • ಕುಂದಾಫುರ: ದಿನಾಂಕ 06/12/2021 ರಂದು ಬೆಳಿಗ್ಗೆ  ಸುಮಾರು 07:15  ಗಂಟೆಗೆ, ಕುಂದಾಪುರ  ತಾಲೂಕಿನ, ವಡೇರಹೋಬಳಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ರಸ್ತೆ ಪ್ಲೇ ಓವರ್ ಅಂಡರಪಾಸ್ ನ ಒಳಗೆ ರಸ್ತೆಯಲ್ಲಿ, ಆಪಾದಿತ ಲೋಕೇಶ ಎಂಬವರು KA-51 AB-1956 ನೇ ಬಸ್ಸನ್ನು ಕೋಟೇಶ್ವರ ಕಡೆಯಿಂದ ಪಶ್ಚಿಮ ಬದಿಯ ಸರ್ವಿಸ್ ರಸ್ತೆಯಿಂದ ಪ್ಲೇ ಓವರ ನ ಅಂಡರಪಾಸ್ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಪಿರ್ಯಾದುದಾರರಾಧ ರಘು ಜಿ (59) ತಂದೆ:  ಕರಿಯಪ್ಪ ಪೂಜಾರಿ ವಾಸ:  ಮೆಜೆಸ್ಟಿಕ್ ಹಾಲ್ ಎದುರುಗಡೆ,ಕುದ್ರುಕೆರೆ ಬೆಟ್ಟು ರಸ್ತೆ ಕೋಟೇಶ್ವರ ಗ್ರಾಮ ಕುಂದಾಪುರ ಎಂಬುವರು ಪ್ಲೇ ಓವರ ನ ಅಂಡರಪಾಸ್ ನ ಒಳಗೆ ಪೂರ್ವ ಬದಿಯ ಸರ್ವಿಸ್ ರಸ್ತೆಯಿಂದ ಪಶ್ಚಿಮ ಬದಿಯ ಸರ್ವಿಸ್  ರಸ್ತೆಗೆ  ಸವಾರಿ  ಮಾಡಿಕೊಂಡು ಬರುತ್ತಿದ್ದ KA-21 EB-5686 ನೇ ಟಿವಿಎಸ್ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ  ರಘು ಜೀ ಇವರು ಬೈಕ ಸಮೇತ ರಸ್ತೆಗೆ ಬಿದ್ದ ಪರಿಣಾಮ ಅವರ ಎಡಭುಜ,ಎಡ ತೊಡೆ,ಎಡ ಮುಂಗಾಲು ಗಂಟಿಗೆ ಒಳನೋವು ಹಾಗೂ ತಲೆಗೆ ತರಚಿದ ರಕ್ತಗಾಯವಾಗಿದ್ದು ಕುಂದಾಪುರ ಚಿನ್ಮಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 102/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಹೆಬ್ರಿ: ದಿನಾಂಕ 06/12/2021 ರಂದು ಮುಂಜಾನೆ ಸಮಯ ಸುಮಾರು 12:30 ಗಂಟೆಯಿಂದ 01:30 ಗಂಟೆಯ ಮಧ್ಯಾವಧಿಯಲ್ಲಿ ಫಿರ್ಯಾದಿದಾರರಾದ ರಾಘವೇಂದ್ರ ನಾಯ್ಕ (52) ತಂದೆ: ಸೋಮ ನಾಯ್ಕ ವಾಸ: ಗದ್ದುಗೆ ಮನೆ ಬ್ಯಾಣ ಶಿವಪುರ ಗ್ರಾಮ ಹೆಬ್ರಿ ಇವರ ತಮ್ಮ ಪ್ರಕಾಶ ರವರು ಕೊಳಗುಡ್ಡೆ ಕಡೆಯಿಂದ ಶಿವಪುರ ಕಡೆಗೆ ಗದ್ದುಗೆ ಅಮ್ಮನವರ ದೇವಸ್ಥಾನದ ಸಮೀಪ ರಸ್ತೆಯ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಅವರಿಗೆ ಯಾವುದೋ ವಾಹನವು ಅಪಘಾತ ಪಡಿಸಿ ವಾಹನವನ್ನು ನಿಲ್ಲಿಸದೇ ಹೋದ ಪರಿಣಾಮ ಪ್ರಕಾಶರವರು ರಸ್ತೆಗೆ ಬಿದ್ದು ಅವರ ತಲೆಯಲ್ಲಿ ರಕ್ತ ಗಾಯವಾಗಿ ,ವಿಪರೀತ ರಕ್ತ ಸ್ರಾವವಾಗಿ  ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ, ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2021 ಕಲಂ: 279, 304(A) IPC ಕಲಂ: 134(A)(B) IMV Act ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಕೋಟ: ಪಿರ್ಯಾದಿದಾರರಾದ ಜಯ (50) ಗಂಡ; ರಾಜು ಮರಕಾಲ  ವಾಸ; ಒಳಮಾಡು ಕೋಟತಟ್ಟು ಗ್ರಾಮ, ಬ್ರಹ್ಮಾವರ ತಾಲೂಕು, ಇವರ ಮಗ ಗಣೇಶ (25) ಎಂಬವನು ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದು, ಸುಮಾರು 8 ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ಈಗ ಸುಮಾರು 10 ದಿನಗಳಿಂದ ಗಣೇಶನು ಮನೆಯಲ್ಲಿ ಮಾನಸಿಕ ಖಿನ್ನತೆಯಿಂದ ರಾತ್ರಿ ವೇಳೆ ಕೂಗಾಡುವುದು ಮಾಡುತ್ತಿದ್ದವನು, ದಿನಾಂಕ 06/12/2021 ರಂದು ಬೆಳಿಗ್ಗೆ ಸುಮಾರು 7:00 ಗಂಟೆಗೆ ಜಯ ರವರು ಎದ್ದು ನೋಡುವಾಗ ಗಣೇಶನು ತನ್ನ ಕೋಣೆಯಲ್ಲಿ ಮಲಗಿದ್ದು, ನಂತರ ಇವರು ಮನೆಯ ಹೊರಗೆ ಪಾತ್ರೆ ತೊಳೆದು ವಾಪಾಸು ಮನೆಯ ಒಳಗೆ ಹೋಗುವಾಗ ಮನೆಯ ಎದುರಿನ ಬಾಗಿಲು ಒಳಗಿನಿಂದ ಚಿಲಕ ಹಾಕಿಕೊಂಡಿದ್ದು ಆಗ ಸಮಯ 08:15 ಗಂಟೆ ಅಗಿದ್ದು, ಜಯ ರವರು ಕಿಟಕಿಯಿಂದ ನೋಡಲಾಗಿ ಗಣೇಶನು ತನ್ನ ಕೋಣೆಯ ಮಾಡಿನ ಜಂತಿಗೆ ಸೀರೆ ಕಟ್ಟಿ ಅದರಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಕಂಡು ಬಂದಿದ್ದು, ಇವರ ಬೊಬ್ಬೆ ಕೇಳಿ ನೆರೆಮನೆಯ ಹೇಮಂತ ರವರು ಬಂದು ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡುವಾಗ ಗಣೇಶನು ಅದಾಗಲೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 47/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಪಾರ್ವತಿ (50) ಗಂಡ: ವಿರುಪಾಕ್ಷಪ್ಪ, ವಾಸ: ಕೇರ್ ಆಫ್ ಪ್ರೇಮ ಭಂಡಾರಿ, ಪದ್ಮನಾಭ ನಗರ, ಸಾಣೂರು ಗ್ರಾಮ, ಕಾರ್ಕಳ ಇವರ ತಮ್ಮ ಸೋಮರಾಜ್ (45) ರವರು ಇವರೊಂದಿಗೆ ವಾಸವಿದ್ದವರು ಬೆಳುವಾಯಿಯ ತರಕಾರಿ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದವರು ವಿಪರೀತ ಮದ್ಯಪಾನ ಮಾಡುವ  ಅಬ್ಯಾಸ ಹೊಂದಿದ್ದು ಅನಾರೋಗ್ಯದ ಕಾರಣ ಶ್ರೀಮತಿ ಪಾರ್ವತಿ ರವರು ದಿನಾಂಕ 02/12/2021 ರಂದು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಿಸಿದ್ದು, ದಿನಾಂಕ 05/12/2021 ರಂದು ಮದ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮನೆಗೆ ಹೋಗಲು ಕಾರ್ಕಳ ಬಸ್ ನಿಲ್ದಾಣದಲ್ಲಿ ಕುಳಿತವರು ಶ್ರೀಮತಿ ಪಾರ್ವತಿ ರವರು ಶೌಚಾಲಯಕ್ಕೆ ಹೋದ ಸಮಯ ಎಲ್ಲೊ ಹೋಗಿದ್ದು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದೆ ಇದ್ದು ದಿನಾಂಕ 06/12/2021ರಂದು ಬೆಳಿಗ್ಗೆ 08:00 ಗಂಟೆಗೆ ಮುರತ್ತಂಗಡಿ ಬಸ್ ನಿಲ್ದಾಣದ ಬಳಿಯ ಕೃಷ್ಣ ಜನರಲ್ ಸ್ಟೋರ್ ಎದುರು ಮಲಗಿದಲ್ಲಿಯೇ ಮೃತ ಪಟ್ಟ ಸ್ಥಿತಿಯಲ್ಲಿದ್ದು, ದಿನಾಂಕ 05/12/2021  ರಂದು ರಾತ್ರಿ 08:00 ಗಂಟೆಯಿಂದ ದಿನಾಂಕ 06/12/2021 ರಂದು ಬೆಳಿಗ್ಗೆ 08:00 ಗಂಟೆಯ ಮದ್ಯಾವದಿಯಲ್ಲಿ ಅಂಗಡಿ ಬಳಿ ಮಲಗಿದಲ್ಲಿಯೇ ಮೃತಪಟ್ಟಿದ್ದು ಅವರ ಸಾವಿನಲ್ಲಿ ಸಂಶಯವಿರುವುದಿಲ್ಲವಾಗಿದೆ, ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 45/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿದಾರರಾದ ತೇಜ್‌ಬಾನ್ ಸಿಂಗ್, (26), ತಂದೆ: ಗಲ್ವಲ್ ಸಿಂಗ್, ವಾಸ: ವಾರ್ಡ್‌ನಂಬ್ರ 12, ವದಾವ್  ಗ್ರಾಮ, ಮೈಹಾರ್ ಅಂಚೆ, ಸತ್ನಾ ಜಿಲ್ಲೆ, ಮಧ್ಯಪ್ರದೇಶ ರಾಜ್ಯ, ಇವರು ದೊಡ್ಡಪ್ಪನ ಮಗ ಪೂರನ್ ಸಿಂಗ್(33) ಎಂಬುವರೊಂದಿಗೆ ಸುಮಾರು 3 ತಿಂಗಳಿನಿಂದ ಕಾಪ ತಾಲೂಕು ನಂದಿಕೂರು ಗ್ರಾಮದಲ್ಲಿನ ಶ್ರೀಚಕ್ರ ಕಂಪನಿಯ ನ್ಯೂ ಪ್ರಾಜೆಕ್ಟ್‌‌ನ ಕಟ್ಟಡದ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು, ಕಂಪನಿಯ ರೂಮಿನಲ್ಲಿಯೇ ವಾಸವಾಗಿರುತ್ತಾರೆ. ಸದ್ರಿ ಪೂರನ್ ಸಿಂಗ್‌ರವರು ಬಿ.ಪಿ, ಶುಗರ್ ಖಾಯಿಲೆಯಿಂದ ಬಳಲುತ್ತಿದ್ದು, ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದವರಾಗಿರುತ್ತಾರೆ. ದಿನಾಂಕ 05/12/2021 ರಂದು ಕೆಲಸಕ್ಕೆ ರಜೆ ಇದ್ದು, ರೂಮಿನಲ್ಲಿರುವ ವೇಳೆ ರಾತ್ರಿ 21:30 ಗಂಟೆಗೆ ಪೂರನ್ ಸಿಂಗ್ ಒಮ್ಮೆಲೇ ಕುಸಿದು ಬಿದ್ದವನನ್ನು, ಉಪಚರಿಸಿ ಚಿಕಿತ್ಸೆಯ ಬಗ್ಗೆ ಮುಲ್ಕಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ, ಪೂರನ್ ಸಿಂಗ್ ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಸದ್ರಿಯವರು ಹೃದಯ ಸಂಬಂಧಿ ಅಥವಾ ಇನ್ನಾವುದೋ ಖಾಯಿಲೆಯಿಂದ ಮೃತಪಟ್ಟಿದ್ದು, ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 25/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಹಿರಿಯಡ್ಕ: ದಿನಾಂಕ 05/12/2021 ರಂದು ಪಿರ್ಯಾದಿದಾರರಾಧ ಸುರೇಖಾ ಶೆಟ್ಟಿ (40) ಗಂಡ: ಉಮೇಶ ಶೆಟ್ಟಿ ವಾಸ: ವಾಂಟ್ಯಾಳ ಮೇಲ್ಮನೆ, ಪೆರ್ಡೂರು ಗ್ರಾಮ  ಹಿರಿಯಡ್ಕ ಉಡುಪಿ ಇವರು ಹಾಗೂ ಅವರ ಮಗಳು ನಿಕ್ಷ (5) ರವರು ವಾಸ್ತವ್ಯದ ಮನೆಯ ಎದುರಿನ ರಸ್ತೆ ಬದಿಯಲ್ಲಿ ಕಟ್ಟಿಗೆ ಜೋಡಿಸುತ್ತಿರುವಾಗ ಪಕ್ಕದ ಮನೆಯ ಆರೋಪಿತ 1. ರಮಾನಂದ ಶೆಟ್ಟಿ 2.ರಾಘವ ಶೆಟ್ಟಿ 3.ಶೀಲಾವತಿ ಶೆಟ್ಟಿ 4. ಜ್ಯೋತಿ ಇವರು ಬೆಳಿಗ್ಗೆ 8:45 ಗಂಟೆಗೆ ಬಂದು ಏಕಾಎಕಿ ಅವಾಚ್ಯ ಶಬ್ದಗಳಿಂದ ಬಯ್ಯುತ್ತ ಸುರೇಖಾ ಶೆಟ್ಟಿ ಇವರು ಹಾಗೂ ಅವರ ಮಗಳನ್ನು ಹಿಡಿದೆಳೆದು ಕೆಳಗೆ ದೂಡಿ, ರಾಘವ ಶೆಟ್ಟಿಯು “ನಿಮ್ಮ ಮನೆಯವರನೆಲ್ಲಾ ಜೀವ ಸಹಿತ ಇರಲು ಬಿಡುವುದಿಲ್ಲ.  ನಮ್ಮ ದಾರಿ ಕಟ್ಟುತ್ತೀರಾ ಎಂದು ನಿಂದಿಸಿ ಕಲ್ಲಿನಿಂದ ಸುರೇಖಾ ಶೆಟ್ಟಿ ರವರಿಗೆ ಹಾಗೂ ಮಗುವಿಗೆ ಗಾಯ ಪಡಿಸಿರುತ್ತಾರೆ. ರಾಘವ ಶೆಟ್ಟಿಯು ಸುರೇಖಾ ಶೆಟ್ಟಿ ರವರನ್ನು ಉದ್ದೇಶಿಸಿ “ ನಿನ್ನ ಅಪ್ಪ ಎಲ್ಲಿದ್ದಾನೆ, ಅವನನ್ನು ಮನೆಯಿಂದ ಹೊರಗೆ ಬರಲಿಕ್ಕೆ ಹೇಳು ಅವನನ್ನು ಕೊಲ್ಲುತ್ತೇನೆ” ಎಂದು ಹೆದರಿಸಿ ಕೆನ್ನೆಗೆ ಹೊಡೆದಿದ್ದು, ಈ ಹಲ್ಲೆಯಿಂದಾಗಿ ಸುರೇಖಾ ಶೆಟ್ಟಿ ಇವರಿಗೆ ಹಾಗೂ ಅವರ ಮಗುವಿಗೆ ಹಣೆ, ಕೈ ಹಾಗೂ ಕಾಲಿಗೆ ಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಅಜ್ಜರ ಕಾಡು ಜಿಲ್ಲಾಸ್ಪತ್ರೆಗೆ ಹೋಗಿದ್ದು, ವೈದ್ಯರು ಪರೀಕ್ಷಿಸಿದ್ದು, ಹೊರರೋಗಿಯಾಗಿ ಚಿಕಿತ್ಸೆ ನೀಡಿರುತ್ತಾರೆ ನಂತರ ಸಂಜೆ 5:00 ಗಂಟೆ ವೇಳೆಗೆ ಮನೆಗೆ ಬಂದಿದ್ದು, ವಾಹನದ ವ್ಯವಸ್ಥೆ ಇಲ್ಲದಿದ್ದುದರಿಂದ ಈ ದಿನ ಠಾಣೆಗೆ ಬಂದು ದೂರು ನೀಡಿರುವುದಾಗಿದೆ, ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 65/2021 ಕಲಂ: 323, 324, 504, 506, 447, 354 ಜತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 06-12-2021 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080