ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 04/11/2022 ರಂದು ಪಿರ್ಯಾದಿದಾರರಾದ ಶ್ರೀಧರ್‌ ಭಟ್‌ ಯು (65), ತಂದೆ: ಶಿವರಾಮ್‌ ಭಟ್‌, ವಾಸ: ಶ್ರೀರಸ್ತು, ಕೆಳಕುದ್ರು, ತೆಂಕಬೆಟ್ಟು ಅಂಚೆ, ಉಪ್ಪೂರು ಗ್ರಾಮ, ಬ್ರಹ್ಮಾವರ ರವರು ಉಡುಪಿಯಿಂದ  ಬಸ್ಸ್‌ನಲ್ಲಿ ಹೊರಟು ಉಪ್ಪೂರು ಕೆಜಿ ರೋಡ್‌ ಬಳಿ ಬಸ್ಸಿನಿಂದ   ಇಳಿದು ಮನೆಗೆ ಹೋಗುವರೇ ಉಡುಪಿ – ಕುಂದಾಪುರ ರಾಹೆ 66 ರನ್ನು ದಾಟಿ ಕೆಜಿ ರೋಡ್‌ ಜಂಕ್ಷನ್‌ ನಲ್ಲಿ ಹೋಗುವಾಗ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಆರೋಪಿ ಆದರ್ಶ ಎಂಬವರು ಅವರ KA-20 Y-1068 ನೇ ಮೋಟಾರ್‌ ಸೈಕಲನ್ನು ಅತೀ ವೇಗ ಹಾಗೂ ಅಜಾಗರೂಕತೆ ಸವಾರಿ ಮಾಡಿಕೊಂಡು ಬಂದು ಮಧ್ಯಾಹ್ನ 4:00 ಗಂಟೆಯ ಸುಮಾರಿಗೆ ರಸ್ತೆಯ ಎಡಬದಿಯಲ್ಲಿ ರಸ್ತೆ ದಾಟುತ್ತಿದ್ದ ಶ್ರೀಧರ್‌ ಭಟ್‌ ಯು ರವರಿಗೆ ಡಿಕ್ಕಿ ಹೊಡೆದು ಮೋಟಾರ್ ಸೈಕಲ್‌ ಸಮೇತ ರಸ್ತೆಗೆ ಬಿದ್ದಿರುವುದಾಗಿದೆ. ಈ ಅಪಘಾತದಿಂದ ಶ್ರೀಧರ್‌ ಭಟ್‌ ಯು ರವರು ರಸ್ತೆಯ ಮೇಲೆ ಬಿದ್ದು ಅವರ ಎಡಕಾಲಿಗೆ ಮೂಳೆ ಮುರಿತದ ಗಾಯ ಹಾಗೂ ತಲೆಯ ಹಣೆಯ ಎಡಭಾಗದಲ್ಲಿ ಮತ್ತು ಬಲಕಣ್ಣಿಗೆ ತೀವ್ರ ತರಹದ ಗಾಯವಾಗಿರುತ್ತದೆ. ಈ ಬಗ್ಗೆ ಶ್ರೀಧರ್‌ ಭಟ್‌ ಯು ರವರು ಉಡುಪಿ ಹೈಟೆಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ,ಅಪರಾಧ ಕ್ರಮಾಂಕ 186/2022 ಕಲಂ:  279, 337, 338 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಲಾಲಿ ವೆಲ್ಸಿತಾ (54), ಗಂಡ: ಕೆ.ಜೆ ಥೋಮಸ್‌, ವಾಸ: ತ್ಯಾಗರ್ತಿ ಅಂಚೆ, ಇಡುವಳ್ಳಿ ಗ್ರಾಮ, ಸಾಗರ ತಾಲೂಕು. ಶಿವಮೊಗ್ಗೆ ಇವರು ತನ್ನ ಮಗಳಾದ ಬಿನ್ಸಿ ರವರನ್ನು ದಿನಾಂಕ 16/05/2016 ರಂದು ಹಂದಾಡಿ ಗ್ರಾಮದ ಬೇಳೂರುಜೆಡ್ಡು ನಿವಾಸಿಯಾದ ಶೈಜು ಥೋಮಸ್‌ ಎಂಬವರ ಜೋತೆ ಮದುವೆ ಮಾಡಿಸಿಕೊಟ್ಟಿದ್ದು, ಅವರಿಗೆ ಒಬ್ಬಳು ಮಗಳಿರುತ್ತಾಳೆ. ಬಿನ್ಸಿ ಮದುವೆಯಾದ ನಂತ್ರ ತನ್ನ ಹೆಸರನ್ನು ಬಿನ್ಸಿ ಶೈಜು ಥೋಮಸ್‌ ಎಂಬುವುದಾಗಿ ಇಟ್ಟುಕೊಂಡಿದ್ದು, ಅವಳಿಗೆ ಈಗ 30 ವರ್ಷ ವಯಸ್ಸು ಆಗಿರುತ್ತದೆ. ಅವಳ ಗಂಡ ಉದ್ಯೋಗದ ಬಗ್ಗೆ ದುಬೈಯಲ್ಲಿದ್ದು, ಅವಳು ಮಗಳೊಂದಿಗೆ ಗಂಡನ ಮನೆಯ 1 ನೇ ಮಹಡಿಯಲ್ಲಿ ಹಾಗೂ ಅವಳ ಅತ್ತೆ, ಮಾವ ಮನೆಯ ಕೆಳ ಅಂತಸ್ತಿನಲ್ಲಿ ವಾಸವಾಗಿರುವುದಾಗಿದೆ. ಬಿನ್ಸಿ ಶೈಜು ಥೋಮಸ್‌  ದಿನಾಂಕ 26/10/2022 ರಂದು ರಾತ್ರಿ 10:00 ಗಂಟೆ ಸುಮಾರಿಗೆ ಇಲಿಪಾಷಣ ವಿಷವನ್ನು ಸೇವಿಸಿ ಡೆತ್‌ ನೋಟ್‌ ಬರೆದಿಟ್ಟು ಯಾರಿಗೂ ಹೇಳದೆ ಮನೆಯಲ್ಲಿದ್ದು, ದಿನಾಂಕ 31/10/2022 ರಂದು ತೀವ್ರ ವಾಂತಿ ಭೇದಿಯಿಂದ ಅಸ್ವಸ್ಥಗೊಂಡು ಬಳಲುತ್ತಿದ್ದವಳನ್ನು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಜೀವನ ಜ್ಯೋತಿ ಆಸ್ಪತ್ರೆಗೆ ದಾಖಲು ಮಾಡಿದ್ದು. ನಂತರ ಅವಳ ಆರೋಗ್ಯ ಕ್ಷೀಣಿಸುತ್ತಾ ಬಂದಿದ್ದು ದಿನಾಂಕ 03/11/2022 ರಂದು ವೈಧ್ಯರ ಸಲಹೆ ಮೇರೆಗೆ ಅವಳನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ.  ಬಿನ್ಸಿ ಶೈಜು ಥೋಮಸ್‌  ಚಿಕಿತ್ಸೆಯಲ್ಲಿರುತ್ತಾ, ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ 05/11/2022 ರಂದು ಬೆಳಿಗ್ಗೆ 11:20 ಗಂಟೆಗೆ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾಳೆ. ಬಿನ್ಸಿ ಶೈಜು ಥೋಮಸ್‌ಳ  ಗಂಡ ವಿದೇಶದಲ್ಲಿದ್ದು, ಗಂಡನ ಮನೆಯ ಮೇಲಂತಸ್ತಿನಲ್ಲಿ ತಾನು ಒಬ್ಬಳೇ ಮಗುವಿನೊಂದಿಗೆ ಒಂಟಿಯಾಗಿ ವಾಸವಾಗಿರುವ ಕೊರಗಿನಲ್ಲಿ ಇಲಿ ಪಾಷಣ ಸೇವಿಸಿ ವಿಷಯವನ್ನು ಯಾರಿಗೂ ಹೇಳದೇ ಆರೋಗ್ಯ ತೀರಾ ಹದಗೆಟ್ಟು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿದೆ. ಅವಳ ಮರಣದಲ್ಲಿ  ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್‌ 54/2022  ಕಲಂ 174  ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   

ಕಾಣೆ ಪ್ರಕರಣ

  • ಉಡುಪಿ: 15 ವರ್ಷ ಪ್ರಾಯದ ಬಾಲಕ ಜಹಿದ್‌ ಈತನು ದಿನಾಂಕ 03/11/2022 ರಂದು ಸಂಜೆ 5:00 ಗಂಟೆ ಸಮಯಕ್ಕೆ ಉಡುಪಿ ಜಿಲ್ಲೆಯ ಇಂದ್ರಾಳಿ ರೈಲ್ವೆ ನಿಲ್ದಾಣದಲ್ಲಿ ಪತ್ತೆಯಾಗಿದ್ದು ಉಡುಪಿ ಚೈಲ್ಡ್ ಹೆಲ್ಪ್ ಲೈನ್‌ ನವರು ಬಾಲಕನನ್ನು ಉಡುಪಿ ಮಿಷನ್‌ ಕಂಪೌಂಡ್‌ನಲ್ಲಿರುವ  ಸಿ.ಎಸ್‌.ಐ ಬಾಯ್ಸ್ ಬೋರ್ಡಿಂಗ್‌ ಗೆ ಸಂಜೆ 05:40 ಗಂಟೆಗೆ ಪುನರ್‌ ವಸತಿಗೆ ಬಿಟ್ಟಿದ್ದು ಸಿ.ಎಸ್‌.ಐ ಬಾಯ್ಸ್ ಬೋರ್ಡಿಂಗ್‌ ಹೋಮ್‌ನಲ್ಲಿ ಪುನರ್‌ ವಸತಿಯಲ್ಲಿದ್ದ ಬಾಲಕ ಅದೇ ದಿನ ಸಂಜೆ 07:00 ಗಂಟೆ ಸಮಯಕ್ಕೆ ಸ್ನಾನ ಮಾಡಿಕೊಂಡು ಬರುತ್ತೇನೆಂದು ಹೋದವನು ನಾಪತ್ತೆಯಾಗಿರುವ ಬಗ್ಗೆ ಪಿರ್ಯಾದಿದಾರರಾಧ ಜೋಯಲ್‌ ಸುಹಾಸ್‌ (28)  ತಂದೆ: ವಿಲಿಯಂ ವಿಲ್ಸನ್‌ ಸಹಾಯಕ ವಾರ್ಡನ್‌ ಸಿ.ಎಸ್‌.ಐ ಬಾಯ್ಸ್ ಬೋರ್ಡಿಂಗ್ ಹೋಮ್‌ ಮಿಷನ್‌ ಕಂಪೌಂಡ್‌ ಉಡುಪಿ ಇವರು ದೂರು ನೀಡಿರುವುದಾಗಿದೆ. , ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 70/2022  ಕಲಂ: 363 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.   

ಇತ್ತೀಚಿನ ನವೀಕರಣ​ : 06-11-2022 10:17 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080