ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ :

  • ಕಾಪು  ಪಿರ್ಯಾದಿ ರೋನಾಲ್ಡ್ ಪ್ರೀತಮ್(33) ತಂದೆ: ಎಡ್ವರ್ಡ ಜತ್ತನ್ ವಾಸ : ಸುಭಾಷನಗರ ಅಂಚೆ, ಕುರ್ಕಾಲು ಗ್ರಾಮ ಕಾಪು ತಾಲ್ಲೂಕು ಉಡುಪಿ ಜಿಲ್ಲೆ ಇವರು ಸಿವಿಲ್ ಇಂಜಿನಿಯರಿಂಗ್ ಕೆಲಸ ಮಾಡಿಕೊಂಡಿದ್ದು, ಅವರ ಜೊತೆ ಹಬಿಬುರ್ ಶೇಕ್ ಪ್ರಾಯ 39 ವರ್ಷ ಎಂಬವರು ಕೆಲಸ ಮಾಡಿಕೊಂಡಿರುತ್ತಾರೆ. ಹಬಿಬುರ್ ಶೇಕ್ ರವರು ದಿನಾಂಕ 06-11-2022 ರಂದು ತನ್ನ ಬಾಬ್ತು KA 20 EB 9709ನೇ ಮೋಟಾರು ಸೈಕಲ್‌ನ್ನು ಶಿರ್ವ ಕಟಪಾಡಿ ರಸ್ತೆಯಲ್ಲಿ ಕುರ್ಕಾಲುನಿಂದ ಕಟಪಾಡಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಬೆಳಗ್ಗೆ 09.30 ಗಂಟೆಗೆ  ಮೂಡಬೆಟ್ಟು ಗ್ರಾಮದ ಹೋಟೆಲ್ ಮುಖ್ಯ ಪ್ರಾಣ ಬಳಿ ತಲುಪುತ್ತಿದ್ದಂತೆ, ಅದೇ ರಸ್ತೆಯಲ್ಲಿ ಅರುಣರವರು KA 20 AA 5406 ನೇ ಗೂಡ್ಸ್ ಟೆಂಪೋ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಬಿಬುರ್ ಶೇಕ್ ರವರ ಮೋಟಾರ್ ಸೈಕಲ್‌ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಹಬಿಬುರ್ ಶೇಕ್ ರವರು ಮೋಟಾರು ಸೈಕಲ್‌ಸಮೇತ ರಸ್ತೆ ಬಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಗುಲಾಮ್ ರಸ್ ರವರು ಫೋನ್ ಮಾಡಿ ಪಿರ್ಯಾದಿದಾರರಿಗೆ ತಿಳಿಸಿದಂತೆ, ಪಿರ್ಯಾದಿದಾರರು ಅಪಘಾತವಾದ ಸ್ಥಳಕ್ಕೆ ಹೋಗಿ, ನಂತರ ಆಸ್ಪತ್ರೆಗೆ ಹೋಗಿ ವಿಚಾರಿಸಲಾಗಿ ಹಬಿಬುರ್ ಶೇಕ್ ಐಸಿಯುನಲ್ಲಿ ದಾಖಲು ಮಾಡಿದ್ದು, ನೋಡಲಾಗಿ ಬಲಕಾಲು ಜಖಂಗೊಂಡು, ತಲೆಗೆ ತೀವೃ ಗಾಯವಾಗಿದ್ದು, ಮಾತನಾಡುವ ಸ್ಥಿತಿಯಲ್ಲಿಲ್ಲ ಎಂಬುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 120/2022 ಕಲಂ. 279,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ: ದಿನಾಂಕ 05.11.2022 ರಂದು ಸುಮಾರು18;30 ಘಂಟೆಗೆ  ಫಿರ್ಯಾದು ನರಸಿಂಹ ನಾಯ್ಕ(42) ತಂದೆ, ರಾಮ ನಾಯ್ಕ ವಾಸ, ಕಾರೆಕೊಡ್ಲು ಹಿಲಿಯಾಣ ಗ್ರಾಮ  ಬ್ರಹ್ಮಾವರ ಇವರ ತಂದೆ: ರಾಮ ನಾಯ್ಕ ಪ್ರಾಯ 70 ವರ್ಷ ಇವರು  ಹೆಬ್ರಿ ತಾಲೂಕಿನ ಬೆಳ್ಬೆ ಗ್ರಾಮದ ಗೋಳಿಯಂಗಡಿ ಸುರಭಿ  ಹೊಟೇಲ್ ಬಳಿ ಮಣ್ಣು ರಸ್ತೆಯಲ್ಲಿ ನಿಂತುಕೊಂಡಿರುವಾಗ ಆರೋಪಿ ಚಂದ್ರ ನಾಯ್ಕ್‌ ಎಂಬವರು ತಮ್ಮ ಕೆಎ.20ಇಡಿ2176ನೇ ಮೋಟಾರ್ ಸೈಕಲ್‌‌ನ್ನು ಬೆಳ್ವೆ ಕಡೆಯಿಂದ  ಗೋಳಿಯಂಗಡಿ ಪೇಟೆ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಮ ನಾಯ್ಕ ಇವರಿಗೆ ಡಿಕ್ಕಿ ಹೊಡೆದಿರುತ್ತಾನೆ, ಇದರ ಪರಿಣಾಮ ರಾಮ ನಾಯ್ಕ  ಇವರು ರಸ್ತೆಯ ಮೇಲೆ ಬಿದ್ದು,ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿದ್ದು, ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ  ಬಗ್ಗೆ  ಮಣಿಪಾಲ ಕೆ,ಎಮ್‌,ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ದಾಖಲು  ಮಾಡಿದ್ದು, ಮಣಿಪಾಲ  ಕೆ,ಎಮ್,ಸಿ   ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಇರುವಾಗ  ರಾಮ ನಾಯ್ಕ ಇವರು  ರಾತ್ರಿ  1;00  ಘಂಟೆಗೆ ಚಿಕಿತ್ಸೆ  ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 120/2022  ಕಲಂ: 279,304(ಎ) ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹೆಂಗಸು ಕಾಣೆ :

  • ಕೊಲ್ಲೂರು : ಪಿರ್ಯಾದು ಚಂದ್ರ (36), ತಂದೆ: ಮಂಜ, ವಾಸ: ವಾಟೆಗುಂಡಿ ಮನೆ ಜಡ್ಕಲ್ ಗ್ರಾಮ ಬೈಂದೂರು ಇವರ ಹೆಂಡತಿ  ಶ್ರೀಮತಿ ವಿನುತಾ (29) ಎಂಬವಳು ದಿನಾಂಕ 05/11/2022 ರಂದು 19:00 ಗಂಟೆಗೆ ಬೈಂದೂರು ತಾಲೂಕು ಜಡ್ಕಲ್ ಗ್ರಾಮದ ವಾಟೆಗುಂಡಿ ಎಂಬಲ್ಲಿ ವಾಸವಾಗಿರುವ ಮನೆಯಿಂದ ಯಾರಿಗೂ ಹೇಳದೇ  ಹೋದವರು ಈ ತನಕ ಮನೆಗೆ ವಾಪಾಸ್ಸು ಬಾರದೇ ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ. ಕಾಣೆಯಾದವರ ಚಹರೆ  ಎತ್ತರ: 4.8 ಅಡಿ ಎತ್ತರ, ಬಿಳಿ ಮೈಬಣ್ಣ, ಕೋಲು ಮುಖ, ಸಾದಾರಣಾ ಶರೀರ, ಕಪ್ಪು ತಲೆ ಕೂದಲು, ನೀಲಿ& ಬಿಳಿ ಪಟ್ಟಿ ಇರುವ ಮುಕ್ಕಾಲು  ನೈಟ್ ಪ್ಯಾಂಟ್ ಹಾಗೂ ಬೂದಿ ಬಣ್ಣದ ಟಿ- ಶರ್ಟ್ ಧರಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ: 48/2022 ಕಲಂ: ಹೆಂಗಸುಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 06-11-2022 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080