ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 05/11/2021 ರಂದು ಮಧ್ಯಾಹ್ನ 1:35 ಗಂಟೆಗೆ ಕಾರ್ಕಳ ತಾಲೂಕು, ನಲ್ಲೂರು  ಗ್ರಾಮದ ಅಮೃಪಾಳಿ ಹೋಟೇಲ್ ಎದುರು ನಾರಾಯಣ ಗುರು ಸಮುದಾಯ ಭವನದ ಕಡೆಗೆ ಹೋಗುವ ರಸ್ತೆಯಿಂದ ಕಾರ್ಕಳ ಬಜಗೋಳಿ ನಾರಾವಿ ಕಡೆಗೆ ಹೋಗುವ ಮುಖ್ಯರಸ್ತೆ ಕಡೆಗೆ KA-25-M-6283 ನೇ  ಕಾರು ಚಾಲಕ ಸಮೀರ್ ಅಹಮ್ಮದ್ ಎಂಬಾತನು ತನ್ನ ಕಾರನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಜಗೋಳಿ ಪೇಟೆ ಕಡೆಯಿಂದ  ಮಾಳ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA-20-EG-7731 ನೇ ದ್ವಿಚಕ್ರ ವಾಹನಕ್ಕೆ  ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಸವಾರ ವಸಂತ ಶೆಟ್ಟಿ ಎಂಬುಬವರು ವಾಹನ ಸಮೇತ ರಸ್ತೆಗೆ ಬಿದ್ದು, ಅವರ  ಗದ್ದಕ್ಕೆ ಬಲಕೈ, ಮೊಣಗಂಟಿನ ಮೇಲ್ಬಾಗ ರಕ್ತ ಗಾಯ ಮತ್ತು ಕೈ ಕಾಲುಗಳಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 129/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 03/11/2021 ರಂದು 19:30 ಗಂಟೆಗೆ  ಬ್ರಹ್ಮಾವರ ತಾಲೂಕು ಹಿಲಿಯಾಣ ಗ್ರಾಮದ  ಹೊಯಿಗೆ ಬೆಳಾರ್‌  ಹತ್ತಿರದ ಗೊಳಿಯಂಗಡಿ –ಹಾಲಾಡಿ ಸಾರ್ವಜನಿಕ ರಸ್ತೆಯಲ್ಲಿ KA-20-N-2348 ನೇ ನಂಬ್ರದ ಕಾರು ಚಾಲಕ ಆರೋಪಿತ ಪ್ರಕಾಶ್‌‌ ಪೂಜಾರಿ ಆರ್ಡಿ  ಎಂಬುವರು ತನ್ನ ಕಾರನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಹಾಲಾಡಿ ಕಡೆಯಿಂದ ಗೊಳಿಯಂಗಡಿ ಕಡೆಗೆ ಚಲಾಯಿಸಿಕೊಂಡು ಬಂದು  ಗೊಳಿಯಂಗಡಿ ಕಡೆಯಿಂದ ಹಾಲಾಡಿ ಕಡೆಗೆ ರಸ್ತೆಯ ಬಲ ಬದಿಯಲ್ಲಿ ನಡೆದುಕೊಂಡು ಹೋಗತ್ತಿದ್ದ ಪಿರ್ಯಾದಿದಾರರಾದ ಕುಶಾಲ  (45), ತಂದೆ: ದಿವಂಗತ ರಾಮ , ವಾಸ: 5 ಸೆಂಟ್ಸ್‌‌ ಹೊಯಿಗೆ ಬೆಳಾರ್‌‌ ಹಿಲಿಯಾಣ ಗ್ರಾಮ ಹೈಕಾಡಿ ಅಂಚೆ ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ  ಇವರ ಎದುರಿನಿಂದ ಡಿಕ್ಕಿ ಹೊಡೆದಿರುತ್ತಾರೆ.  ಈ ಅಪಘಾತದಿಂದ ಪಿರ್ಯಾದಿದಾರರ ಬಲ ದವಡಗೆ ಮೂಳೆ ಮುರಿತದ ಗಾಯವಾಗಿ ಎಡ ಕಾಲಿಗೆ ಗುದ್ದಿದ ಒಳ ನೋವು ಆಗಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 97/2021  ಕಲಂ: 279, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ರಾಕೇಶ (25),  ತಂದೆ : ರಾಘು ಕೆ. ಪೂಜಾರಿ,  ವಾಸ : ಶ್ರೀ ರಾಘವೇಂದ್ರ ಕೃಪಾ ಕಲ್ಯ ಊಳಿಯಾರಗೋಳಿ ಗ್ರಾಮ ಕಾಪು ಅಂಚೆ ಇವರು ತನ್ನ ಅಣ್ಣಂದಿರಾದ ರೋಹಿತ್‌ (28) ಮತ್ತು ರಾಹುಲ್‌ರವರೊಂದಿಗೆ ದಿನಾಂಕ 04/11/2021 ರಂದು ಸಂಜೆ 7:00 ಗಂಟೆಯ ಸಮಯಕ್ಕೆ ದೀಪಾವಳಿ ಹಬ್ಬದ ಪ್ರಯುಕ್ತ ಮನೆಯ ಅಂಗಳದಲ್ಲಿ ಗದ್ದೆಗೆ ದೀಪ ಇಡುವ ಸಂದರ್ಭದಲ್ಲಿ ಪಿರ್ಯಾದಿದಾರರ ಅಣ್ಣ ರೋಹಿತ್ ರವರಿಗೆ  ಬಲಕಾಲಿಗೆ ಯಾವುದೋ ವಿಷಜಂತು ಕಚ್ಚಿದ್ದಾಗಿ ತಿಳಿಸಿದಂತೆ ಅಲ್ಲೆ ಇದ್ದ ಪಿರ್ಯಾದಿದಾರರು ಮತ್ತು ಅವರ ಮನೆಯವರು ಸೇರಿ ಅವರನ್ನು ಚಿಕಿತ್ಸೆ ಬಗ್ಗೆ ಒಂದು ನಾಟಿ ವೈದ್ಯರ ಬಳಿ ಕರೆದುಕೊಂಡು ಹೋದಲ್ಲಿ ವೈದ್ಯರು ಔಷಧಿ ನೀಡಿದ್ದಂತೆ ಅವರು ಸ್ವಲ್ಪ ಗುಣಮುಖರಾದಂತೆ ಕಂಡು ಬಂದಿದ್ದು, ದಿನಾಂಕ 05/11/2021 ರಂದು ಸಂಜೆ 3:30 ಗಂಟೆಗೆ ರೋಹಿತ್‌ರವರ ಆರೋಗ್ಯದಲ್ಲಿ ಏರುಪೇರಾಗಿ ಪ್ರಜ್ಞಾಹೀನರಾದಲ್ಲಿ ಅವರನ್ನು  ಪಿರ್ಯಾದಿದಾರರು ನೆರೆಕೆರೆಯವರೊಂದಿಗೆ ಒಂದು ವಾಹನದಲ್ಲಿ ಮಣಿಪಾಲ ಕೆ.ಎಮ್.ಸಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಆಗ ಸಂಜೆ 4:23 ಗಂಟೆ ಆಗಿರುತ್ತದೆ. ನಂತರ ಸ್ವಲ್ಪ ಹೊತ್ತಿನಲ್ಲಿ ಸಂಜೆ  4:50 ಗಂಟೆಗೆ ವೈದ್ಯರು ಪಿರ್ಯಾದಿದಾರರ ಅಣ್ಣ ರೋಹಿತ್‌ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 40/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ದಿನಾಂಕ 05/11/2021 ರಂದು 13:00 ಗಂಟೆಗೆ  ಪಿರ್ಯಾದಿದಾರರಾದ ಮಂಜೇಶ (19), ತಂದೆ: ಲೋಕೇಶ, ವಾಸ: ಕೊಕೈಕಲ್, ಪಳ್ಳಿ ಗ್ರಾಮ ಮತ್ತು ಅಂಚೆ, ಕಾರ್ಕಳ ತಾಲೂಕು ಇವರು ತಂದೆ ತಾಯಿ ತಂಗಿ ಹಾಗೂ ಅಜ್ಜನೊಂದಿಗೆ ಮನೆಯಲ್ಲಿರುವಾಗ ಅಪಾದಿತರಾದ ಪವನ್ , ಕೀರ್ತನ ಮತ್ತು ಇತರರು ಸಮಾನ ಉದ್ದೇಶದಿಂದಅಕ್ರಮ ಕೂಟ ಸೇರಿಕೊಂಡು KA-20-AB-2124 ನೇ ನಂಬ್ರದ ರಿಕ್ಷಾ ಹಾಗೂ ಒಂದು ದ್ವಿಚಕ್ರ ವಾಹನದಲ್ಲಿ ಪಿರ್ಯಾದಿದಾರರ ಮನೆ ಅಂಗಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಪಿರ್ಯಾದಿದಾರರ ತಂದೆಯವರನ್ನು ಉದ್ದೇಶಿಸಿ ಅವಾಚ್ಯ ಶಬ್ದದಿಂದ ಬೈಯ್ಯತ್ತಿರುವುದನ್ನು ನೋಡಿ ಪಿರ್ಯಾದಿದಾರರು ಹೊರಗೆ ಹೋಗಿ ನೀವೆಲ್ಲಾ ಯಾಕೆ ಇಲ್ಲಿಗೆ ಬಂದು ಸುಮ್ಮನೆ ಗಲಾಟೆ ಮಾಡುತ್ತೀರಾ ಎಂದು ಅವರುಗಳಲ್ಲಿ ಕೇಳಿದಾಗ ಕುತ್ತಿಗೆಯನ್ನು ಹಿಡಿದು ದೂಡಿ ನೀನು ಒಳಗೆ ಓಡಿ ಹೋಗು ಇಲ್ಲವಾದರೇ ನಿನ್ನನ್ನು ಕೊಂದು ಹಾಕುತ್ತೇವೆ, ನೀವು ಹೊರಗಡೆ ಎಲ್ಲಿಯಾದರೂ ತಿರುಗಾಡಿದರೇ ನಿಮ್ಮನ್ನೆಲ್ಲಾ ಕೊಂದು ಹಾಕುತ್ತೇವೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 144/2021 ಕಲಂ: 143, 147, 447, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಅಮಾಸೆಬೈಲು: ದಿನಾಂಕ 04/11/2021 ರಂದು 22:30 ಗಂಟೆಗೆ ಪಿರ್ಯಾದಿದಾರರಾದ ಪ್ರಸಾದ್ (26), ತಂದೆ: ಮುನ್ನ ಸಮಗಾರ, ವಾಸ:ಕಪ್ಪೆಹೊಂಡ ಹೊಸಂಗಡಿ ಗ್ರಾಮ ಕುಂದಾಪುರ ತಾಲೂಕು ಇವರು ಕುಂದಾಪುರ ತಾಲೂಕು ಹೊಸಂಗಡಿ ಗ್ರಾಮದ ಕೆಪಿಸಿ ಕಾಲೋನಿಯ ಒಳಗಡೆ ಗ್ರೌಂಡ್ ಬಳಿ ಕುಳಿತು ಸ್ನೇಹಿತರಾದ ಶ್ರೀನಿವಾಸ, ಪ್ರವೀಣ ಮತ್ತು ಆರೋಪಿತ ಭಾಸ್ಕರ ಇವರ ಜೊತೆಯಲ್ಲಿ ಕುಳಿತುಕೊಂಡು ಮಾತನಾಡಿಕೊಂಡಿರುವಾಗ ಆರೋಪಿತ ಭಾಸ್ಕರ ಗೌಡ ಪಿರ್ಯಾದಿದಾರರಿಗೂ ಅವರ ಮನೆಯವರಿಗೂ ಜೋರಾಗಿ ಬೈಯ್ಯಲು ಪ್ರಾರಂಭಿಸಿದ್ದು ಪಿರ್ಯಾದಿದಾರರು ಯಾಕೆ ಬೈಯ್ಯುತ್ತಿಯಾ ಎಂದು ಕೇಳಿದುದಕ್ಕೆ ಆರೋಪಿತನು ಕೆಟ್ಟದಾಗಿ ಬೈದಿದ್ದು ಆಗ ಪಿರ್ಯಾದಿದಾರರು ಕೆಟ್ಟದಾಗಿ ಮಾತನಾಡುತ್ತಿಯಾ ಎಂದು ಆರೋಪಿಯನ್ನು ದೂಡಿದ್ದು ನಂತರ ಪ್ರವೀಣ ಹಾಗೂ ಶ್ರೀನಿವಾಸ ಜಗಳ ಬಿಡಿಸಿದ್ದು ಪಿರ್ಯಾದಿದಾರು ಮನೆಗೆ ಹೋಗಿ ಮಲಗಿದ್ದು ರಾತ್ರಿ 01:30 ಗಂಟೆಗೆ ಆರೋಪಿತನು ಪಿರ್ಯಾದಿದಾರರ ಮನೆಗೆ ಬಂದು ಪಿರ್ಯಾದಿದಾರರ ತಮ್ಮ ಭರತನಿಗೆ ಕರೆ ಮಾಡಿ ನಿನ್ನ ಅಣ್ಣನನ್ನು ಕೊಂದು ಮುಗಿಸುತ್ತೇನೆ ಎಂದು ಹೇಳಿ ಪಿರ್ಯಾದಿದಾರರ ಮನೆಯೊಳಗೆ ಅಕ್ರಮವಾಗಿ ಪ್ರವೇಶಿಸಿ ಕೈಯಲ್ಲಿದ್ದ ಗಾಜಿನ ಬಾಟಲಿಯನ್ನು ಪಿರ್ಯಾದಿದಾರರ ಮುಖಕ್ಕೆ ಎಸೆದ ಪರಿಣಾಮ ಗಾಜಿನ ಬಾಟಲಿ ಒಡೆದು ಪಿರ್ಯಾದಿದಾರರ ಹಣೆಗೆ ರಕ್ತಗಾಯವುಂಟಾಗಿದ್ದು ನಂತರ ಆರೋಪಿತನು ಪಿರ್ಯಾದಿದಾರರನ್ನು ಕೊಲ್ಲುವ ಉದ್ದೇಶದಿಂದ ಒಡೆದ ಬಾಟಲಿಯ ಚೂರನ್ನು ತೆಗೆದುಕೊಂಡು  ಪಿರ್ಯಾದಿದಾರರ ಬಲಭಾಗದ ಕುತ್ತಿಗೆಯ ಬಳಿ ತಿವಿದುದರ ಪರಿಣಾಮ ಬಲ ಕುತ್ತಿಗೆಯಲ್ಲಿ ಸೀಳಿದ ರಕ್ತ ಗಾಯವುಂಟು ಮಾಡಿದ್ದು ನಂತರ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದು, ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಹೋಗಿ ನಂತರ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಹೋಗಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2021 ಕಲಂ: 324,450, 307, 504, 506 ಐಪಿಸಿ 3(1) (r ) (s) 3(2) (5a) )  3(2) (5) Prevention of Sc/ST Act ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 06-11-2021 09:41 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080