ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ ರಕ್ಷಿತ್ ಇವರು ದಿನಾಂಕ: 30/09/2022 ರಂದು ತನ್ನ ಬಾಬ್ತು KA-2-ET-2194 ನೇ ಮೋಟಾರು ಸೈಕಲ್‌ನಲ್ಲಿ ಬೊಮ್ಮರಬೆಟ್ಟು ಗ್ರಾಮದ ಗುಡ್ಡೆಯಂಗಡಿ ಯಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವರೇ  ರಾ.ಹೆ 169 (ಎ)  ರಲ್ಲಿ ಹೋಗುತ್ತಿರುವಾಗ ಅತ್ರಾಡಿ ಜಂಕ್ಷನ್ ಬಳಿ ಸಮಯ ಸುಮಾರು ಸಂಜೆ 7:00 ಗಂಟೆಗೆ ತನ್ನ ಎದುರಿನಿಂದ ಅಂದರೆ ಮಣಿಪಾಲ ಕಡೆಯಿಂದ ಒರ್ವ ಮೋಟಾರು  ಸೈಕಲ್ ಸವಾರನು ತನ್ನ ಬಾಬ್ತು KA -20-EL-2762 ನೇದನ್ನು ಅತೀವೇ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ರಸ್ತೆಯ ತೀರಾ ಬಲಭಾಗಕ್ಕೆ ಬಂದು  ಪಿರ್ಯಾದುಯದಾರರ ಮೋಟಾರು ಸೈಕಲ್‌ಗೆ ಡಿಕ್ಕಿ ಹೊಡೆದನು, ಪರಿಣಾಮ ಪಿರ್ಯಾದುದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಎಡಕಾಲಿನ ಮೂಳೆ ಮುರಿತವಾಗಿರುತ್ತದೆ. ನಂತರ ಅಲ್ಲಿ ಸೇರಿವರು ಅವರನ್ನು ಒಂದು ಅಟೋರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಕೆಎಂಸಿ ಅಸ್ಪತ್ರೆಗೆ ದಾಖಲಿಸಿರುತ್ತಾರೆ. ಅಪಘಾತಗೊಳಿಸಿದ ಮೋಟಾರು ಸೈಕಲ್‌ ಸವಾರ  ನಿಲ್ಲಿಸದೆ ಪರಾರಿಯಾಗಿರುತ್ತಾನೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 59/2022 ಕಲಂ: 279, 338, 134(A)&(B) IMV ACT  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ  06.10.2022 ರಂದು   ಬೆಳಿಗ್ಗೆ ಸುಮಾರು  8;30  ಘಂಟೆಗೆ   ಕುಂದಾಪುರ ತಾಲೂಕಿನ 28 ಹಾಲಾಡಿ   ಗ್ರಾಮದ ಲಕ್ಷೀ ಟಿವಿಎಸ್  ಷೋ ರೂಂ  ಎದುರುಗಡೆ   ಹಾಲಾಡಿ ಕಡೆಗೆ  ಫಿರ್ಯಾದಿ ಸಂತೋಷ  ನಾಯ್ಕ ಇವರು  ಕೆಎ,20 ಎಬಿ.4579 ನೇ ನಂಬ್ರದ ಪಿಕಪ್  ವಾಹನವನ್ನು  ಚಲಾಯಿಸಿಕೊಂಡು  ಹೋಗುತ್ತಿರುವಾಗ ಆರೋಪಿಯು ಕೆಎ 20 ಎಎ. 9232  ನೇ ನಂಬ್ರದ  ಟಾಟಾ   ಗೂಡ್ಸ ವಾಹನವನ್ನು  ಹಾಲಾಡಿ ಕಡೆಯಿಂದ ಅತೀ  ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಪಿಕಪ್  ವಾಹನಕ್ಕೆ ಡಿಕ್ಕಿ ಹೊಡೆದಿರುತ್ತಾನೆ, ಇದರ  ಪರಿಣಾಮ  ಎರಡು   ವಾಹನಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 106/2022  ಕಲಂ: 279,   ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ ‌

  • ಬೈಂದೂರು: ಫಿರ್ಯಾದಿ ಚಂದ್ರ ಕೊರಗ ದಾರರ ತಮ್ಮ ನಾರಾಯಣ ಕೊರಗ ಪ್ರಾಯ:(37ವರ್ಷ) ಇವರು ಕೂಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ :05-10-2022 ರಂದು ಬೆಳಿಗ್ಗೆ 7:45 ಗಂಟೆಗೆ ಹೆಂಡತಿ ರೇಖಾಳ ಬಳಿ ಕೂಲಿ ಕೆಲಸಕ್ಕೆ ಹೇರೂರಿಗೆ ಹೋಗುವುದಾಗಿ ಹೇಳಿ ಹೋಗಿದ್ದು ಪಿರ್ಯಾದಿದಾರರು ನಾರಾಯಣ ಕೊರಗರವರು ಕೆಲಸಕ್ಕೆ ಹೋದ ಸ್ಥಳವಾದ ಹೇರೂರು ಸುತ್ತಮುತ್ತಲಿನ ಕಾಡುಗಳಲ್ಲಿ ಹುಡುಕಾಡಿದಲ್ಲಿ  ಪತ್ತೆಯಾಗಿರುವುದಿಲ್ಲ.ಸಂಜೆ 6:00 ಗಂಟೆ ಸಮಯಕ್ಕೆ ಕಾಲ್ತೋಡು ಗ್ರಾಮದ ಕೂರ್ಸಿ ಪಾರೆ ಬಳಿ ಪೊದೆಯಲ್ಲಿ ನಾರಾಯಣ ಕೊರಗರವರ ದೇಹ ಮೃತಪಟ್ಟಿದ ಸ್ಥಿತಿಯಲ್ಲಿ ದೊರೆತಿದ್ದು  ಬೈಂದೂರು ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಇರಿಸಿರುವುದಾಗಿದೆ.ಫಿರ್ಯಾದಿದಾರರ  ತಮ್ಮ ಮೃತ ನಾರಾಯಣ ಕೊರಗ ವಿಪರೀತ ಮಧ್ಯಪಾನ ಮಾಡುವ  ಚಟವುಳ್ಳವರಾಗಿದ್ದು, ಯಾವುದೋ ಕಾರಣಕ್ಕೆ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 05-10-2022 ರ ಬೆಳಿಗ್ಗೆ 7:45 ಗಂಟೆಯಿಂದ  ಸಂಜೆ 6:00 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯು.ಡಿ.ಆರ್ 53/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 06-10-2022 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080