ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ದಿನಾಂಕ 05/10/2022 ರಂದು ಸಂಜೆ ಸುದರ್ಶನ್ (28) ತನ್ನ KA-19-V-6457 ನೇ ಮೋಟಾರ್ ಸೈಕಲ್ ನ್ನು ಚಲಾಯಿಸಿಕೊಂಡು ನಂಚಾರು ಕಡೆಯಿಂದ ಮುದ್ದೂರು ಕಡೆಗೆ ಹೋಗುತ್ತಿದ್ದು, ಸಂಜೆ 4:00 ಗಂಟೆಗೆ ನಾಲ್ಕೂರು ಗ್ರಾಮದ ಮಿಯ್ಯಾರು ಬಿಕ್ರಿಜಡ್ಡು ಎಂಬಲ್ಲಿನ ತಿರುವಿನ ಬಳಿ ತಲುಪಿದಾಗ ಅವರ ಎದುರುಗಡೆಯಿಂದ ಮುದ್ದೂರು ಕಡೆಯಿಂದ KA-19-AB-8175 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಬೋಜು ಇವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ಬಲಬದಿಗೆ ಬಂದು ಸುದರ್ಶನ್ ಇವರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್ ಡಿಕ್ಕಿ ಹೊಡೆದು ಅತನನ್ನು ಮೋಟಾರ್ ಸೈಕಲ್ ಸಮೇತ ಸುಮಾರು 15 ಅಡಿಯವರೆಗೆ ರಸ್ತೆಯಲ್ಲಿ ಎಳೆದುಕೊಂಡು ಹೋಗಿ ರಸ್ತೆಯ ಬಲಬದಿಯಲ್ಲಿರುವ ಕಚ್ಚಾ ರಸ್ತೆಯಲ್ಲಿ ಬಿದಿದ್ದು. ಅವರಿಗೆ ಎಡಕಾಲಿನ ಬಳಿ ತೀವ್ರ ಸ್ವರೂಪದ ಗಾಯವಾಗಿ ರಕ್ತವು ಸುರಿಯುತ್ತಿದ್ದು. ಅತನ ದೇಹದ ಒಳಭಾಗಕ್ಕೆ ತೀವ್ರ ಸ್ವರೂಪದ ಗುದ್ದಿದ ನೋವಾದ ಕಾರಣ ಅತನು ಮಾತನಾಡುತ್ತಿರಲಿಲ್ಲ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಸಂಜೆ 6:15 ಗಂಟೆಗೆ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿದಲ್ಲಿ ವೈದ್ಯರು ಪರೀಕ್ಷಿಸಿ ಅತನು ದಾರಿ ಮದ್ಯೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 49/2022 ಕಲಂ: 279, 304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಅಶ್ವಿನ್  (28),  ತಂದೆ : ಚಲುವರಾಜು,  ವಾಸ: ಮನೆ ನಂಬ್ರ 3-5  ಇಲಿಂಗೋಸ್ಟಿ  ಸ್ಟೀಟ್  ಕೊಡಂನೂರ್ ಮನೆ  ಎಮ್.ಕೆ. ಪಿ ನಗರ  ಇ ಬಿ ತಾಲೂಕು  ಚೆನೈ ತಮಿಳುನಾಡು ರಾಜ್ಯ ಇವರು ದಿನಾಂಕ 03/10/2022 ರಂದು ಚೆನೈಯಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಪಿರ್ಯಾದಿದಾರರು ಹಾಗೂ  ಅವರ ಸಂಬಂಧಿ ಮುರುಗನ್ ರವರು TN-05-CJ- 8888 ನೇ  scorpio ಕಾರು ಚಾಲಕ   ಅಂಟೋ ರಾಜ್ ಕುಮಾರ್ ರೊಂದಿಗೆ  ಹೊರಟು ದಿನಾಂಕ 04/10/2022 ರಂದು  20:00 ಗಂಟೆಗೆ ಕೊಲ್ಲೂರಿಗೆ ಬಂದು ವಾಸ್ತವ್ಯ ಮಾಡಿಕೊಂಡಿದ್ದು ಅದೇ ಸ್ವಲ್ಪ ಸಮಯದಲ್ಲಿ  ಪಿರ್ಯಾದಿದಾರರ ಅಣ್ಣ  ಕರೆ ಮಾಡಿ ವ್ಯವಹಾರ ವಿಷಯದಲ್ಲಿ ಕೂಡಲೇ ಚೆನೈಗೆ ಬರುವಂತೆ ತಿಳಿಸಿದ್ದು ಪಿರ್ಯಾದಿದಾರರು  ಹಾಗೂ  ಮುರುಗನ್ ಹಾಗೂ  ಆರೋಪಿ ಕಾರು ಚಾಲಕ ದೇವರ ದರ್ಶನ ಪಡೆದು ಶಿವಮೊಗ್ಗ ಮಾರ್ಗವಾಗಿ  ಚೆನೈ ಗೆ ಹೊರಟಿರುತ್ತಾರೆ. ಕೊಲ್ಲೂರು ಗ್ರಾಮದ ಹೆಗ್ಡೆಹಕ್ಲು ಎಂಬಲ್ಲಿ ಹೋಗುವಾಗ  ಸಮಯ 23:00 ಗಂಟೆಗೆ  ಆರೋಪಿಯು  ಅತೀ ವೇಗ ಹಾಗೂ  ಅಜಾಗರೂಕತೆಯಿಂದ ವಾಹನವನ್ನು ಚಲಾಯಿಸಿ ನಿದ್ರೆ ಮಂಪರ್ ನಲ್ಲಿ  ರಸ್ತೆ ತೀರ ಬಲಬದಿಗೆ ಚಲಾಯಿಸಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ  ಬಲ ಮೊಣಗಂಟಿಗೆ  ಮೂಳೆ ಮುರಿತ ಉಂಟಾಗಿದ್ದು. ಹಾಗೂ  ಆರೋಪಿ ಗೂ ತಲೆಗೆ , ಕೈಗೆ , ಕಾಲಿಗೆ ಗಾಯ ಉಂಟಾಗಿರುತ್ತದೆ.  ಆಗ ಅಕ್ಕಪಕ್ಕದ ಮನೆಯವರು  ಉಪಚರಿಸಿ  ಅಂಬ್ಯುಲೆನ್ಸ್  ನಲ್ಲಿ  ಚಿಕಿತ್ಸೆ ಬಗ್ಗೆ  ಕುಂದಾಪುರ  ಸರ್ಕಾರಿ  ಆಸ್ಪತ್ರೆಗೆ  ಕರೆತಂದಿದ್ದು  ಪರೀಕ್ಷಿಸಿದ ವೈದ್ಯರು  ಪ್ರಾಥಮಿಕ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆ ಬಗ್ಗೆ ತಿಳಿಸಿದ್ದು  ಪಿರ್ಯಾದಿದಾರರು ಹಾಗೂ ಆರೋಪಿ ಮಣಿಪಾಲ ಕೆ ಎಮ್ ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 45/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಹಿರಿಯಡ್ಕ: ಪಿರ್ಯಾದಿದಾರರಾದ ಪ್ರವೀಣ್ (24), ತಂದೆ: ಪ್ರಕಾಶ್ ಕುಲಾಲ್, ವಾಸ:ಚೋಳಬೆಟ್ಟು ಮನೆ, ಕುಕ್ಕೆಹಳ್ಳಿಗವ್ರಾಮ ಮತ್ತು ಅಂಚೆ ಉಡುಪಿ ತಾಲೂಕು ಇವರು  ದಿನಾಂಕ  04/10/2022 ರಂದು  ತನ್ನ KA-20-EL-3482 ನೇ ಮೋಟಾರು ಸೈಕಲ್‌ನಲ್ಲಿ  ಕುಕ್ಕಿಕಟ್ಟೆಗೆ ಹೋಗಿ ಮೊಬೈಲ್ ರಿಪೇರಿ ಮಾಡಿಸಿಕೊಂಡು ವಾಪಾಸು ಬರುತ್ತಿರುವಾಗ ಕುಕ್ಕೆಹಳ್ಳಿ – ಕೆ ಜಿ ರಸ್ತೆಯಲ್ಲಿ ಬರುತ್ತಾ ರಾತ್ರಿ  7:30 ಗಂಟೆಗೆ ಬೆಳ್ಳಂಪಳ್ಳಿ ಗ್ರಾಮದ ಕುಕ್ಕಿಕಟ್ಟೆ ಶಿವನಿಧಿ ಹಾರ್ಡ್ ವೇರ್  ಬಳಿ ಹಾರ್ಡ್‌ ವೇರ್‌ ಕಡೆಯಿಂದ  KA-01-AE-0306  ನೇ ಲಾರಿಯನ್ನು ಅದರ ಚಾಲಕ  ಅನ್ವರ್‌‌‌ ಜಿ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಯಾವುದೇ ಸೂಚನೆಯನ್ನು ನೀಡದೆ ಏಕಾಎಕಿ ಹಿಮ್ಮುಖವಾಗಿ ಚಲಾಯಿಸಿದ್ದು ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಮುಖಕ್ಕೆ, ಬಲಕೈ,ಕುತ್ತಿಗೆ, ದವಡೆಗೆ ತಲೆಗೆ, ರಕ್ತಗಾಯವಾಗಿದ್ದು ಹಲ್ಲುಗಳು ಜಖಂಗೊಂಡಿರುತ್ತದೆ. ಅಲ್ಲಿ ಸೇರಿವರು ಚಿಕಿತ್ಸೆಯ ಬಗ್ಗೆ  ಅಜ್ಜರಕಾಡು ಜಿಲ್ಲಾ ಅಸ್ಪತ್ರಗೆ ದಾಖಲಿಸುರತ್ತಾರೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬೈಂದೂರು: ಪಿರ್ಯಾದಿದಾರರಾದ ಸಂದೀಪ ಆಚಾರಿ (31), ತಂದೆ: ರಾಮಚಂದ್ರ ಆಚಾರಿ ,ವಾಸ: ಹೊಸೂರು ಮನೆ ಉಪ್ಪುಂದ ಗ್ರಾಮ ಬೈಂದೂರು ತಾಲೂಕು ಇವರ ಬಾವ ಸತೀಶ ಆಚಾರಿಯವರು ದಿನಾಂಕ 04/10/2022 ರಂದು ಫರ್ನಿಚರ್ ಕೆಲಸ ಮಾಡಲು ಪಿರ್ಯಾದಿದಾರರ ಮನೆಗೆ ಬಂದಿದ್ದು, ಸತೀಶ ಆಚಾರಿಯವರ ಮನೆಯಲ್ಲಿ ನವರಾತ್ರಿ ಪೂಜೆ ಇದ್ದುದ್ದರಿಂದ ಪಿರ್ಯಾದಿದಾರರಿಗೆ ನವರಾತ್ರಿ ಪೂಜೆಗೆ ಬರುವಂತೆ ತಿಳಿಸಿದ ಮೇರೆಗೆ ಅವರು ಸಂಜೆ ಅವರ ಮೋಟಾರ್ ಸೈಕಲ್ ನಲ್ಲಿ ಅವರ ಬಾವ ಸತೀಶ ಆಚಾರಿಯವರ ಮನೆಗೆ ಹೋಗಲು ಹೊರಟಿದ್ದು ಸತೀಶ ಆಚಾರಿಯವರು ಅವರ ಮೆಸ್ಟ್ರೋ ಮೋಟಾರ್ ಸೈಕಲ್ ನಂಬ್ರ KA-20-EM-6215ನೇದರಲ್ಲಿ ಉಪ್ಪುಂದದಿಂದ ಹಕ್ಲಾಡಿಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಹೊರಟಿದ್ದು, ಸಂಜೆ 5:00 ಗಂಟೆಗೆ ಕಿರಿಮಂಜೇಶ್ವರ ಗ್ರಾಮದ ನಾಗೂರು ಮಸೀದಿ ಬಳಿ ತಲುಪುವಾಗ ಹಿಂದಿನಿಂದ  ಉಪ್ಪುಂದ ಕಡೆಯಿಂದ ತ್ರಾಸಿ ಕಡೆಗೆ ಗೋವಿಂದ ದೇವಾಡಿಗರವರು ಅವರ ಟಿವಿಎಸ್ ಮೋಟಾರ್ ಸೈಕಲ್ ನಂಬ್ರ KA-20-EU-8162ನೇದನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಸತೀಶ ಆಚಾರಿಯವರ ಮೋಟಾರ್ ಸೈಕಲ್ ನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಮಗುಚಿ ಬಿದಿದ್ದು, ಸತೀಶ ಆಚಾರಿಯವರಿಗೆ ಎರಡೂ ಕೈಗಳಿಗೆ ಮೂಳೆ ಮುರಿತದ ಗಾಯ, ಕಾಲಿನ ಪಾದಕ್ಕೆ ತರಚಿದ ಗಾಯವಾಗಿರುತ್ತದೆ. ಗೋವಿಂದ ದೇವಾಡಿಗರವರಿಗೆ ಕಾಲಿಗೆ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಸತೀಶ ಆಚಾರಿಯವರನ್ನು ಪಿರ್ಯಾದಿದಾರರು 108  ಅಂಬುಲೆನ್ಸ್ ವಾಹನದಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದು ಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 200/2022 ಕಲಂ: 279 , 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಬ್ರಹ್ಮಾವರ: ಪಿರ್ಯಾದಿದಾರರಾದ ಸ್ಪಂದನಾ (17), ತಂದೆ: ಲಕ್ಷ್ಮಣ ಪೂಜಾರಿ, ವಾಸ: ನರ್ನಾಡು ಗುಡ್ಡೆ, ಕೊಳಲಗಿರಿ ಅಂಚೆ, ಉಪ್ಪೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ ತಂದೆ ಲಕ್ಷ್ಮಣ ಪೂಜಾರಿಯವರು ಸವಾರಿ ಮಾಡುತ್ತಿದ್ದ KA-20-EV-9270 ನೇ ಸ್ಕೂಟರ್‌ನಲ್ಲಿ ಸಹಸವಾರಿಣಿ ಆಗಿ ಕುಳಿತು ಮನೆಯಿಂದ ಬ್ರಹ್ಮಾವರಕ್ಕೆ ಹೋಗುಗಲು ಉಡುಪಿ–ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೋಗುತ್ತಾ 52 ನೇ ಹೇರೂರು ಗ್ರಾಮದ, ಮಾನಸ ಹೊಟೇಲ್‌ ಎದುರು ರಾತ್ರಿ 7:30 ಗಂಟೆಗೆ ತಲುಪುವಾಗ ಅವರ ಎದುರಿನಿಂದ  ಬ್ರಹ್ಮಾವರ ಕಡೆಯಿಂದ ಆರೋಪಿ ಪ್ರಮೋದ್‌ KA-20-R-4546 ನೇ ಮೋಟಾರ್‌ ಸೈಕಲ್‌ ನಲ್ಲಿ ಮೊಹಮ್ಮದ್‌ ಅಶ್ರಫ್‌  ರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರು ಕುಳಿತಿದ್ದ ಸ್ಕೂಟರ್‌ಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಎರಡೂ ವಾಹನಗಳ ಸಮೇತ ಅದರಲ್ಲಿದ್ದವರು ರಸ್ತೆಗೆ ಬಿದ್ದಿರುತ್ತಾರೆ. ಈ ಅಪಘಾತದಿಂದ ಪಿರ್ಯಾದಿದಾರರಿಗೆ ತರಚಿದ ಗಾಯವಾಗಿದ್ದು, ಅವರ  ತಂದೆ ಲಕ್ಷ್ಮಣ ಪೂಜಾರಿಯವರ ಹಣೆಗೆ ತೀವ್ರ ಹಾಗೂ ಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಅಲ್ಲದೇ ಆರೋಪಿ ಹಾಗೂ ಸಹಸವಾರ ಮೊಹಮ್ಮದ್‌  ಅಶ್ರಫ್‌ ರವರಿಗೂ ಗಾಯಗಳಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 162/2022 ಕಲಂ : 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾರ್ಕಳ: ದಿನಾಂಕ 05/10/2022 ರಂದು ಪಿರ್ಯಾದಿದಾರರಾದ ಸಿಂಥಿಯಾ ಲೋಬೊ(53), ಗಂಡ: ಲಿಯೋ ಲೋಬೊ, ವಾಸ:ಫ್ಲಾಟ್ ನಂಬ್ರ 202, ILM FLASH COMPLEX, ಕಲ್ಪನೆ, ಕುಲಶೇಖರ, ಮಂಗಳೂರು, ದ.ಕ ಜಿಲ್ಲೆ ಮತ್ತು ಅವರ ಗಂಡ ಲಿಯೋ ಲೋಬೊ ರವರು ಮಂಗಳೂರಿನ ತಮ್ಮ ಮನೆಯಿಂದ ಕರ್ತವ್ಯದ ನಿಮಿತ್ತ ಬಾಳೆಹೊನ್ನುರಿಗೆ ಹೋಗಲು KA-20-MA-1950 ನೇ ಮಹೆಂದ್ರ ತಾರ್ ಜೀಪಿನಲ್ಲಿ 03:00 ಗಂಟೆಗೆ ಹೊರಟು ನಂತರ ಗಂಟಲಕಟ್ಟೆಯಲ್ಲಿರುವ ಪಿರ್ಯಾದಿದಾರರ ಜಾಗಕ್ಕೆ ಬೇಟಿ ನೀಡಿ ಅಲ್ಲಿಂದ ಹೊರಟು ಕಾರ್ಕಳದಿಂದ ಎಸ್ ಕೆ ಬಾರ್ಡರ್ ರಾಜ್ಯ ಹೆದ್ದಾರಿಯಲ್ಲಿ ಹೊಗುತ್ತಿದ್ದು ಪಿರ್ಯಾದಿದಾರರ ಗಂಡ ಲಿಯೋ ಲೋಬೊ ರವರು  ಜೀಪನ್ನು ಚಲಾಯಿಸುತ್ತಿದ್ದು ಮಾಳಾ ಗ್ರಾಮದ ಮುಳ್ಳೂರು ಗೇಟ್ ನಿಂದ 02.5 ಕಿ ಮೀ  ತಲುಪಿದಾಗ ಎದುರಿನಿಂದ ಎಸ್.ಕೆ ಬಾರ್ಡರ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ KA-03-ME-8219 ನೇ ನಂಬ್ರದ ಆಲ್ಟೋ  ಕಾರಿನ ಚಾಲಕನು ಕಾರನ್ನು ತೀರ ಬಲಬಾಗಕ್ಕೆ ಅತೀವೆಗವಾಗಿ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ಗಂಡ ಚಲಾಯಿಸುತ್ತಿದ್ದ ಮಹೇಂದ್ರ ತಾರ್ ಜೀಪಿನ ಎಡ ಬಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಆಲ್ಟೋ ಕಾರಿನಲ್ಲಿದ್ದ 03 ಜನರ ಕೈಕಾಲುಗಳಿಗೆ ಪೆಟ್ಟಾಗಿ ರಕ್ತಗಾಯವಾಗಿರುತ್ತದೆ. ಈ ಘಟನೆ ನಡೆಯುವಾಗ ಸಂಜೆ 04:30 ಗಂಟೆಗೆ ಆಗಬಹುದು,  ಕೂಡಲೆ ಗಾಯಾಳುಗಳನ್ನು ಪಿರ್ಯಾದಿದಾರರು ಅವರ ಗಂಡ ಹಾಗೂ ಅಲ್ಲಿ ಸೆರಿದ್ದ ಜನರು ಸೇರಿ ಉಪಚರಿಸಿ ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ಕಳುಹಿಸಲಾಗಿರುತ್ತದೆ. ಈ ಅಪಘಾತದಿಂದ ಪಿರ್ಯಾದಿದಾರರ ಗಂಡ ಚಲಾಯಿಸುತ್ತಿದ್ದ ಜೀಪಿನ ಎಡ ಭಾಗದ ಬಂಪರ್ ಹಾಗೂ ಗಾರ್ಡ ಜಖಂಗೊಂಡಿದ್ದು ಅಲ್ಲದೆ ಆಲ್ಟೋ ಕಾರು ಕೂಡ ಎದುರಿನಿಂದ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 124/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಭಾರತಿ (46), ತಂದೆ: ರತ್ನಾಕರ ಮೆಂಡನ್,  ವಾಸ: ಗಿರಿಜಾ ನಿಲಯ, ಅರಸರಬೆಟ್ಟು, ಬೀಜಾಡಿ  ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಇವರ ಅಣ್ಣನಾದ ದಿನೇಶ ಮೊಗವೀರ (57) ಇವರು ಸಿ ಆರ್ ಪಿ ಎಫ್ ಸೇನೆಯಲ್ಲಿ ಕರ್ತವ್ಯ ಮಾಡಿಕೊಂಡಿದ್ದು, 12 ವರ್ಷಗಳ ಹಿಂದೆ ಸೇವೆಯಿಂದ ನಿವೃತ್ತಿಗೊಂಡು ತನ್ನ ಹೆಂಡತಿ ಮಕ್ಕಳೊಂದಿಗೆ ವಾಸವಿರದೇ ಊರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡು ಒಬ್ಬರೇ ವಾಸಿಸುತ್ತಿದ್ದು ಅವರು 6 ತಿಂಗಳಿನಿಂದ ಮಾನಸಿಕ ಖಾಯಿಲೆ ಹಾಗೂ ಫಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು ಮಂಗಳೂರಿನ ಕಂಕನಾಡಿ ಆಸ್ಪತ್ರೆಯಲ್ಲಿ ಮಾನಸಿಕ ಖಾಯಿಲೆಗೆ ಚಿಕಿತ್ಸೆ ಪಡೆದು  ಸುಮಾರು 5 ದಿನಗಳ ಹಿಂದೆ ಕೋಟೇಶ್ವರ ಗ್ರಾಮದ ಖಾಗೇರಿಯ ನಂದಿಕೇಶ್ವರ ಕಾಂಪ್ಲೆಕ್ಸನ  ಮೊದಲನೇ ಮಹಡಿಯ ರೂಮಿನಲ್ಲಿ ವಾಸುಸುತ್ತಿದ್ದವರು ದಿನಾಂಕ 05/10/2022 ರಂದು ಬೆಳಿಗ್ಗೆ 10:00 ಗಂಟೆಗೆ ಅವರ ಚಿಕ್ಕಮ್ಮನ ಮಗನಾದ ಸಂತೋಷ ಎಂಬುವವರು ದಿನೇಶರವರನ್ನು ವಿಚಾರಿಸಲು  ಹೋದಾಗ  ದಿನೇಶರವರು ಅದೇ ರೂಮಿನ ಟಾಯ್ಲೆಟಿನಲ್ಲಿ ಕವುಚಿ ಬಿದ್ದು ಮೃತಪಟ್ಟಿರುತ್ತಾರೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 35/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ . 

ಇತ್ತೀಚಿನ ನವೀಕರಣ​ : 06-10-2022 09:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080