ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಮಣಿಪಾಲ: ದಿನಾಂಕ 04/10/2021 ರಂದು 19:30 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲ ಮಾಧವ ಕೃಪಾ ಶಾಲೆಯ ಎದುರು ರಾಷ್ಟ್ರೀಯ ಹೆದ್ದಾರಿ 169(ಎ) ನಲ್ಲಿ ಸಂಗಮೇಶ (23) ಇವರಿಗೆ ಯಾವುದೋ ವಾಹನ ಚಾಲಕನು ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ವಾಹನ ಸಮೇತ ಪರಾರಿಯಾಗಿದ್ದು, ಸಂಗಮೇಶ ರವರಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆ ಪಡೆಯುತ್ತಿರುವಾಗ ದಿನಾಂಕ 04/10/2021 ರಂದು 23:30 ಗಂಟೆಗೆ ಮಂಗಳೂರು ವೆನ್ಲಾಕ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 127/2021 ಕಲಂ: 279, 304(ಎ) ಮತ್ತು 134(ಎ)(ಬಿ)  ಜೊತೆಗೆ 187 ಐಎಂವಿ ಕಾಯಿದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 05/10/2021 ರಂದು ಬೆಳಿಗ್ಗೆ 11:00 ಗಂಟೆಗೆ ಪಿರ್ಯಾದಿದಾರರಾದ ಮಂಜುಳಾ ಎಂ (38), ಗಂಡ: ಅರುಣ ಶೆಟ್ಟಿ, ವಾಸ: ಮೈಪಾಡಿ ಹೌಸ್‌‌‌, ಮೈಪಾಡಿ ಕುಡ್ಲು ಅಂಚೆ, ಸಿರಿ ಬಾಗಿಲು  ಗ್ರಾಮ ಕಾಸರಗೋಡು ತಾಲೂಕು ಮತ್ತು ಜಿಲ್ಲೆ, ಕೇರಳ ರಾಜ್ಯ ಇವರು ಸಂಬಂಧಿಕರ KL-14-U-7156ನೇ ಬೆಲೇನೋ ಕಾರಿನಲ್ಲಿ  ರವಿಚಂದ್ರ ಎಂಬುವವರನ್ನು ಕುಳ್ಳಿರಿಸಿಕೊಂಡು ಹೊನ್ನಾವರಕ್ಕೆ ವ್ಯವಹಾರ ಸಂಬಂಧ ಮನೆಯಿಂದ ಹೊರಟು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಉಡುಪಿ ಯಿಂದ ಕುಂದಾಪುರ ಕಡೆಗೆ ಹೋಗುತ್ತಾ  ಬ್ರಹ್ಮಾವರ ವಾರಂಬಳ್ಳಿ ಗ್ರಾಮದ ಹೊಂಡಾ ದ್ವಿಚಕ್ರ ವಾಹನ ಶೋ ರೋಂನ ಎದುರು ತಲುಪುವಾಗ ಪಿರ್ಯಾದಿದಾರರ ಕಾರಿನ ಹಿಂದುಗಡೆ ಉಡುಪಿ ಯಿಂದ ಕುಂದಾಪುರ ಕಡೆಗೆ KA-20-AB-1931 ನೇ ನೊಂದಾಣಿ ನಂಬ್ರದ TATA YODHA ಗೂಡ್ಸ್‌‌‌‌ ವಾಹನದ ಚಾಲಕ ಕಿಶೋರ್‌ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಸ್ವಲ್ಪ ಮುಂದೆ  ಹೋಗಿ ರಾಷ್ಟ್ರೀಯ ಹೆದ್ದಾರಿ 66ರ  ಎಡ ಭಾಗದಲ್ಲಿ ನಿಂತಿದ್ದು,. ಈ ಅಪಘಾತದಿಂದ ಪಿರ್ಯಾದಿದಾರರ ತಲೆಯ ಹಿಂಭಾಗದ ಎಡಬದಿ, ಬಲ ತೊಡೆಗೆ ಬಲ ಪಕ್ಕೆಲುಬಿಗೆ ಒಳ ಜಖಂ ಆಗಿದ್ದು ತಲೆಯಲ್ಲಿ ರಕ್ತಗಾಯವಾಗಿರುತ್ತದೆ.  ಕಾರಿನಲ್ಲಿದ್ದ ರವಿಚಂದ್ರ ರವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಕೂಡಲೇ ಒಂದು ರಿಕ್ಷಾದಲ್ಲಿ ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಕಾರಿನ ಹಿಂಭಾಗ ಸಂಪೂರ್ಣ ಜಖಂಗೊಂಡಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 176/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಖಾಝಿ (23), ತಂದೆ: ರಿಯಾಜ್, ವಾಸ: 6 ನೇ ಕ್ರಾಸ್ ಪಿಹೆಚ್  ಕಾಲೋನಿ ತುಮಕೂರು ಜಿಲ್ಲೆ ಇವರು ಸ್ನೇಹಿತರಾದ  ಸಲ್ಮಾನ್, ಇಲಿಯಾಜ್, ಸಾಧಿಕ್, ಸಲೀಂ, ಅರ್ಬಾಸ್, ಅತ್ತರ್ (23), ಸುಹೇಲ್ ಇವರೊಂದಿಗೆ ಪ್ರವಾಸದ ಬಗ್ಗೆ ದಿನಾಂಕ 03/10/2021 ರಂದು  ರಾತ್ರಿ 10:00 ಗಂಟೆಗೆ ತಮಕೂರಿನಿಂದ ಕಾರಿನಲ್ಲಿ ಹೊರಟು 04/10/2021 ರಂದು ಬೆಳಿಗ್ಗೆ 09:00 ಗಂಟೆಗೆ  ಮಂಗಳೂರಿಗೆ ಬಂದು ಮಂಗಳೂರಿನಲ್ಲಿ ಉಳಿದುಕೊಂಡು ನಂತರ ದಿನಾಂಕ 05/10/2021 ಮಧ್ಯಾಹ್ನ 12:00 ಗಂಟೆಗೆ ಮಲ್ಪೆ ಬೀಚ್ ಗೆ ಬಂದು ಮಧ್ಯಾಹ್ನ 2:00 ಗಂಟೆಗೆ ಸಲೀಂ, ಸಲ್ಮಾನ್, ಇಲಿಯಾಸ್, ಅರ್ಬಾಸ್, ಅತ್ತರ್, ಸುಹೇಲ್ ಇವರು ಸಮುದ್ರ ನೀರಿನಲ್ಲಿ  ಆಟ ಆಟಲು  ಸಮುದ್ರಕ್ಕೆ ಇಳಿದಿದ್ದು ಸಮುದ್ರದ ಅಲೆಗಳ ಅಬ್ಬರಕ್ಕೆ ಸಲ್ಮಾನ್, ಅರ್ಬಾಸ್, ಅತ್ತರ್ ನೀರಿನಲ್ಲಿ ಮುಳುಗಿದ್ದು, ಆ ಪೈಕಿ ಸಲ್ಮಾನ್ ಮತ್ತು ಅರ್ಬಾಸ್ ನನ್ನು ಮಲ್ಪೆ ಬೀಚ್ ನ ಟೂರಿಸ್ಟ್ ಬೋಟ್ ನವರು ರಕ್ಷಣೆ ಮಾಡಿದ್ದು ಅತ್ತರ್ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು, ಮಧ್ಯಾಹ್ನ 3:00 ಗಂಟೆಗೆ ಅತ್ತರ್ ಮೃತದೇಹ ನೀರಿನಲ್ಲಿ ದೊರಕಿರುತ್ತದೆ. ಅತ್ತರ್ ಮಲ್ಪೆ ಬೀಚ್ ನಲ್ಲಿ ಸಮುದ್ರದ ನೀರಿನಲ್ಲಿ ಆಟವಾಡುತ್ತಿರುವಾಗ ನೀರಿನ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 42/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-10-2021 10:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080