ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು:

  • ಮಣಿಪಾಲ: ,ದಿನಾಂಕ 04/09/2022 ರಂದು ಪಿರ್ಯಾಧಿ ಚಂದ್ರಕಾಂತ  ( 27)   ತಂದೆ ; ರಾಜಣ್ಣ ವಾಸ-  ಸಪ್ತಗಿರಿ  ನಗರ ಸಾಹಿತ್ಯ ಅಪಾರ್ಟಮೆಂಟ್‌  ರೂಂ ನಂಬರ್‌ 203, 80 ಬಡಗುಬೆಟ್ಟು ಗ್ರಾಮ ಇವರ  ಚಿಕ್ಕಪ್ಪನ ಮಗ ಸುರೇಶ್‌  ಎಂಬುವರು ತನ್ನ   ಬಜಾಜ್ ಪಲ್ಸರ್  ಮೋಟಾರು ಸೈಕಲ್ ನಂಬ್ರ KA 21 V 9067 ನ್ನು ಮಣಿಪಾಲ ಕಡೆಯಿಂದ ಸಪ್ತಗಿರಿ  ನಗರ  ಕಡೆಗೆ  ಮಣಿಪಾಲ –ಅಲೆವೂರು ರಸ್ತೆಯಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿ  ಸಮಯ ಬೆಳಿಗ್ಗೆ 08:00 ಗಂಟೆಗೆ  ಆದರ್ಶ ನಗರ  ಸಿಗ್ಮಾ ಬಾರ್‌ ಬಳಿ ಹತೋಟಿ ತಪ್ಪಿ  ಮೋಟಾರು ಸೈಕಲ್‌  ಸಮೇತ ರಸ್ತೆಗೆ  ಬಿದ್ದು, ತಲೆಗೆ ತ್ರೀವತರದ ಗಾಯ ಉಂಟಾಗಿದ್ದು,  ಚಿಕಿತ್ಸೆ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ  ದಾಖಲಿಸಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ,  ಅಪರಾಧ,ಕ್ರಮಾಂಕ 125/2022 ಕಲಂ: 279, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ದಿನಾಂಕ: 04/09/2022  ರಂದು ಪಿರ್ಯಾದಿ ಸತೀಶ್ ಪೂಜಾರಿ (41) ತಂದೆ: ಗಿರಿಯಪ್ಪ ಪೂಜಾರಿ ವಾಸ: ಪುಂಡಗೊಳಿ ಮನೆ , ವಂಜಾರಕಟ್ಟೆ ಬೋಳ ಗ್ರಾಮ ಇವರು ಅವರ KA 20 ET 3836 ನೇ ಮೋಟಾರ್ ಸೈಕಲ್ ನಲ್ಲಿ ಹೆಂಡತಿ ಶುಭ ಹಾಗೂ ಒಂದುವರೆ ವರ್ಷದ ಮಗ ಅವಿಷ್ ನೊಂದಿಗೆ ಕಟಿಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ವಾಪಾಸು ಮನೆಕಡೆಗೆ ಸಂಕಲಕರಿಯದಿಂದ ಬೆಳ್ಮಣ್ ಕಡೆಗೆ  ಬರುವ ರಸ್ತೆಯಲ್ಲಿ ಸವಾರಿಮಾಡಿಕೊಂಡು ಬರುತ್ತಿವಾಗ ಸಂಜೆ ಸುಮಾರು 04:00 ಘಂಟೆಗೆ ಮುಂಡ್ಕೂರು ಗ್ರಾಮದ ನಾನಿಲ್ತಾರ್ ಎಂಬಲ್ಲಿಗೆ ತಳುಪಿತ್ತಿದಂತೆ ಬೆಳ್ಮಣ್ ಕಡೆಯಿಂದ ಸಂಕಲಕರಿಯ ಕಡೆಗೆ KA 19 MF 9241 ನೇ ಕಾರಿನ ಚಾಲಕನು ಕಾರನ್ನು ತೀರ ಬಲಬಾಗಕ್ಕೆ ಅತೀವೆಗವಾಗಿ ಚಲಾಯಿಸಿ ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ದ್ವಿಚಕ್ರವಾಹನಕ್ಕೆ ಡಿಕ್ಕಿಹೊಡೆದ ಪರಿಣಾಮ ಪಿರ್ಯಾದಿದಾರರು ಪಿರ್ಯಾದಿದಾರರ ಹೆಂಡತಿ ಮಗುವಿನೊಂದಿಗೆ ವಾಹನ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದುದಾರರ ಹೆಂಡತಿ ಶುಭಾಳ ಬಲಕಾಲಿನ ಮಣಗಂಟಿಗೆ ಗುದ್ದಿದ ಗಾಯವಾಗಿ ಕಾರ್ಕಳದ ನಿಟ್ಟೆ ಗಾಜ್ರಿಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ. 115/2022 ಕಲಂ 279,337 ಐಪಿಸಿ  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ: ಪಿರ್ಯಾದಿ ಸುರೇಶ್ ಆಚಾರ್ ಪ್ರಾಯ 49 ವರ್ಷ ತಂದೆ: ಚಂದ್ರಯ್ಯ ಆಚಾರ್ಯ ವಾಸ: 1-58 ಕಲ್ಲಾಡಿ ರಸ್ತೆ  ಕೋಟ ತಟ್ಟು ಗ್ರಾಮ ಇವರು ದಿನಾಂಕ 05/09/2022 ರಂದು ಬಾರ್ಕೂರಿನಲ್ಲಿ ಸೆಂಟ್ರೀಂಗ್  ಕೆಲಸ ಮಾಡಿಕೊಂಡಿದ್ದು,  ಸಂಜೆ ತನ್ನ ತಮ್ಮನಾದ  ಸುರೇಂದ್ರರವರ  KA20EW9208 ನೇ TVS ಮೋಟಾರ್ ಸೈಕಲ್ ನಲ್ಲಿ ಹಿಂಬದಿ ಸವಾರನಾಗಿ ಕುಳಿತು ಬಾರ್ಕೂರಿನಿಂದ  ಸಾಸ್ತಾನ  ಕೋಟಕ್ಕೆ ಬರುತ್ತಿರುವಾಗ ಸಂಜೆ ಸುಮಾರು 05.00 ಗಂಟೆಯ ಸಮಯಕ್ಕೆ ಸಾಸ್ತಾನ ಪಾಂಡೇಶ್ವರ ತೋಟದ ಮನೆ ಕ್ರಾಸ್ ತಲುಪಿದಾಗ  ಸುರೇಂದ್ರವರು ಬೈಕನ್ನು  ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ  ಬೈಕ್ ಸ್ಕಿಡ್ ಆಗಿ  ಕೆಳಗೆ ಬಿದ್ದು ಪಿರ್ಯಾದಿದಾರರಿಗೆ  ಮೊಣ ಗಂಟು ಜಖಂ ಗೊಂಡಿರುತ್ತದೆ.  ಎಡ ಬದಿಯ ಕೈಯ ಮೊಣಗಂಟು ತರಚಿದ ಗಾಯ ಹಾಗೂ ಎದೆಯಲ್ಲಿ ನೋವುಂಟಾಗಿರುತ್ತದೆ.  ಬೈಕ್ ಚಲಾಯಿಸುತ್ತಿದ್ದ ಸುರೇಂದ್ರರವರಿಗೆ  ನೋವಿನ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ  140/2022 ಕಲಂ: 279.338  ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.


ಇತರ ಪ್ರಕರಣಗಳು:

  • ಹಿರಿಯಡ್ಕ: ದಿನಾಂಕ: 05/09/2022 ರಂದು ಅರೋಪಿಗಳಾದ ರತ್ನಾ ಕರ ಶೆಟ್ಟಿ, ಚಂದ್ರಹಾಸ ಶೆಟ್ಟಿಮತ್ತು ಸಂತೋಷ್ ಪೂಜಾರಿಯವರು ಪಿರ್ಯಾದಿ ಆರತಿ ಸುರೇಶ್ ಶೆಟ್ಟಿ (45) ಗಂಡ: ಸುರೇಶ್ ಶೆಟ್ಟಿ ವಾಸ: 166-ಜೆ,  ಪರೀಕಾ , ಅತ್ರಾಡಿ ಗ್ರಾಮ ಇವರ ಮನೆಯ ಮುಂಭಾಗದಲ್ಲಿ ಅತ್ರಾಡಿ ಗ್ರಾಮಪಂಚಾಯಿತಿ ವತಿಯಿಂದ ಕಾಂಕ್ರೀಟ್ ರಸ್ತೆಯನ್ನು  ಮಾಡುವ ಸಲುವಾಗಿ ಮನೆಯ ಅಂಗಳಕ್ಕೆ ಅಕ್ರಮವಾಗಿ ಪ್ರವೇಶಿಸಿರುತ್ತಾರೆ. ಸಂಜೆ 4:30 ಗಂಟೆ ಸಮಯಕ್ಕೆ ಪಿರ್ಯಾದುದಾರರು ಸ್ಥಳಕ್ಕೆ  ಹೋಗಿ ಜಾಗದ ದಾಖಲಾತಿಯನ್ನು ಸರಿಮಾಡಿ ರಸ್ತೆ ನಿರ್ಮಾಣ ಕೆಲಸ ಮುಂದುವರೆಸುವಂತೆ ಆರೋಪಿಗಳಿಗೆ ತಿಳಿಸಿದಾಗ ಆರೋಪಿಗಳು ಪಿರ್ಯಾದುದಾರರನ್ನುಉದ್ದೇಶಿಸಿ ಅವಾಚ್ಯ  ಶಬ್ದಗಳಿಂದ ಬೈದಿರುತ್ತಾರೆ.   ಆಗ ಪಿರ್ಯಾದುದರರು ಪ್ರತಿಭಟಿಸಲು ಹೋದಾಗ   ಸದ್ರಿ ಅರೋಪಿಗಳು ಪಿರ್ಯಾದುದಾರರನ್ನು ತಡೆದು ನಿಲ್ಲಿಸಿ ಎಳೆದಾಡಿರುತ್ತಾರೆ. ಆರೋಪಿ ರತ್ಮಾಕರ ಶೆಟ್ಟಿ ಕೈಯಲ್ಲಿದ್ದ ಕೊಡೆಯಿಂದ ಹೊಡೆದಿರುತ್ತಾನೆ. ಹಾಗೂ ಮೂರೂ ಜನ  ಸೇರಿಕೊಂಡು ಪಿರ್ಯಾದುದಾರನ್ನುನೆಲಕ್ಕೆ ತಳ್ಳಿರುತ್ತಾರೆ ಪರಿಣಾಮ ಪಿರ್ಯಾದುದಾರರ ಹಣೆ ಕಲ್ಲಿಗೆ ತಾಗಿ  ಗಾಯ ಉಂಟಾಗಿರುತ್ತದೆ. ಹಾಗೂ ಆರೋಪಿಗಳು ಪಿರ್ಯಾದುದರರ ಎಡಕೈಯನ್ನು ಬಲವಾಗಿ ಎಳೆದಾಡಿದ ಕಾರಣ ಎಡಕೈಯ ಮೂಳೆಮುರಿತ ಉಂಟಾಗಿ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2022    ಕಲಂ:  447,504,341,324,325, ಸಹಿತ 34 ಐಪಿಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಹಿರಿಯಡ್ಕ:  ಪಿರ್ಯಾದಿ ಚಂದ್ರಹಾಸ ಶೆಟ್ಟಿ(53) ತಂದೆ: ದಿ|| ತ್ಯಾಂಪಣ್ಣ ವಾಸ: ಅತ್ರಾಡಿ, ಪರೀಕಾ ಇವರು ಹಾಗೂ  ನೆರೆಮನೆಯವರು ತಮ್ಮ  ಮನೆಯ ಮುಂಭಾಗದಲ್ಲಿ ರಸ್ತೆಯನ್ನು ನಿರ್ಮಾಣ ಮಾಡುವ ಸಲುವಾಗಿ ಗ್ರಾಮ ಪಂಚಾಯಿಗೆ ಅರ್ಜಿಯನ್ನು ಸಲ್ಲಿಸಿ ರಸ್ತೆಗೆ ಜಾಗವನ್ನು ನೀಡುವ ಬಗ್ಗೆ ಒಪ್ಪಿಗೆ ಪತ್ರವನ್ನು ನೀಡಿದ್ದು . ಸದರಿ ರಸ್ತೆಗೆ  ಗ್ರಾಮ ಪಂಚಾಯಿತಿಯಿಂದ ಅನುದಾನ ಮಂಜೂರಾಗಿರುತ್ತದೆ.  ದಿನಾಂಕ: 05/09/2022 ರಂದು ಬೆಳಿಗ್ಗೆ, ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ  ನಿರ್ಮಾಣ ಕೆಲಸ ಪ್ರಾರಂಭವಾಗಿದ್ದುಸಂಜೆ 4:30 ಗಂಟೆ ಸಮಯಕ್ಕೆ ಪಿರ್ಯಾದುದಾರರ ನೆರೆಮನೆಯ  ಆರತಿಯು ಆಕೆಯ ಗಂಡ ಹಾಗೂ ತಮ್ಮ ಆಶೋಕ್ ಜೊತೆಗೆ ಸ್ಥಳಕ್ಕೆ ಬಂದು,  ಆರೋಪಿಯು ಪಿರ್ಯಾದುದಾರರು ಹಾಗೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕರ ಜೊತೆ ಜಗಳ ಮಾಡಿ ,ಕೋಪದಿಂದ ಪಿರ್ಯಾದಿ ಮತ್ತು ಗ್ರಾಮ ಪಂಚಾಯಿತಿ ಉಪಾಧ್ಯಕರಾದ ರತ್ನಾಕರ ಶೆಟ್ಟಿರವರಿಗೆ ಕೈಯಿಂದ ಹೊಡೆದು ಹಲ್ಲೆ ಮಾಡಿರುತ್ತಾರೆ. ಪಿರ್ಯಾದುದಾರರು ಮತ್ತು ರತ್ನಾಕರ ಶೆಟ್ಟಿಯವರು ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಸರಕಾರಿ ಅಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2022  ಕಲಂ: 323, 324 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 06-09-2022 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080