ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾಧ ಧೀರಜ್ (21) ತಂದೆ: ದಿನೇಶ್ ಸುವರ್ಣ ,ವಾಸ: ನಡಿಬೆಟ್ಟು, ಯರ್ಲಪಾಡಿ,ಕಾರ್ಕಳ ಇವರು ಕಲ್ಮಾಡಿಯಲ್ಲಿ ಫ್ಯಾಬ್ರಿಕೇಶನ್ ವರ್ಕ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 28/08/2022 ರಂದು ಸಂಜೆ ಕೆಲಸ ಮುಗಿಸಿ ಸಂದೀಪ್ ರವರ KA-20-EN-7310 ನೇ ACTIVE HONDA ಸ್ಕೂಟರ್ ನಲ್ಲಿ ಸಹ ಸವಾರ ರಾಗಿ ಮಲ್ಪೆ ಕಡೆಗೆ ಹೊರಟು ಸಂಚರಿಸುತ್ತಾ  ಸಮಯ ಸುಮಾರು ಸಂಜೆ 06:00 ಗಂಟೆ ಸಮಯಕ್ಕೆ ಸಂದೀಪ್ ತನ್ನ ಸ್ಕೂಟರ್ ನ್ನು ಅತೀ ವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಮಲ್ಪೆ ಫಿಶರಿಸ್ ಶಾಲೆ ಎದುರು ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಸ್ಕೂಟರ್ ನ ಚಾಲಕ ಸಂದೀಪ್ ಹಾಗೂ ಪಿರ್ಯಾದಿದಾರರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಧೀರಜ್ ರವರ ಬಲಗೈ ಕಂಕುಳದ ಕೆಳಗೆ ಮಾಂಸ ಕಿತ್ತು ಹೋಗಿ  ರಕ್ತ ಗಾಯ ಹಾಗೂ ತಲೆಯ ಮದ್ಯದಲ್ಲಿ ರಕ್ತ ಗಾಯ ವಾಗಿರುತ್ತದೆ, ಅಲ್ಲದೇ ಸ್ಕೂಟರ್ ಚಾಲಕ ಸಂದೀಪ್ ನಿಗೆ ಬಲಕಾಲಿನ ಮೊಣಗಂಟಿನಲ್ಲಿ ತೆರಚಿದ ಗಾಯವಾಗಿದ್ದು ಧೀರಜ್ ರವರು ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಗ್ಗೆ ದಾಖಲಾಗಿರುವುದಾಗಿದೆ.  ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ವಿವಿಟಾ ಡಿಸೋಜಾ (29) ಗಂಡ: ಜೊಯ್ಸನ್ ಮನೋಜ್ ಪಿಂಟೋ ವಾಸ: ಸಚ್ಚರಿಪೇಟೆ ಪೊಸ್ರಾಲ್, ಮುಂಡ್ಕೂರು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರು ದಿನಾಂಕ 30/08/2021 ರಂದು ಕಾರ್ಕಳ ತಾಲೂಕು  ಮುಂಡ್ಕೂರು ಗ್ರಾಮದ ಸಚ್ಚರಿಪೇಟೆ ಪೊಸ್ರಾಲ್ ಎಂಬಲ್ಲಿ ಇರುವ ತನ್ನ ಗಂಡನ ಮನೆಯಾದ ಅನಿತ ನಿವಾಸದಲ್ಲಿನ ಬೆಡ್ ರೂಮ್ ನ ಕಪಾಟಿನಲ್ಲಿನ ಲಾಕರ್ ನಲ್ಲಿ ಅಂದಾಜು ಸುಮಾರು 6 ಲಕ್ಷ ರೂ ಮೌಲ್ಯದ ಸುಮಾರು 154 ಗ್ರಾಮ್ ತೂಕದ ಚಿನ್ನದ ಒಡವೆಗಳನ್ನು ಇಟ್ಟು ಲಾಕ್ ಮಾಡಿ ಹೋಗಿದ್ದು ದಿನಾಂಕ 30/08/2021 ರಿಂದ ದಿನಾಂಕ 05/09/2022 ರಂದು ಬೆಳಿಗ್ಗೆ 11:00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ಕಳ್ಳರು ಯಾವುದೋ ರೀತಿಯಲ್ಲಿ ವಿವಿಟಾ ಡಿಸೋಜಾ ರವರ ಮನೆಯೊಳಗೆ ಬಂದು ಯಾವುದೋ ಕೀಯಿಂದ ಕಪಾಟಿನ ಬಾಗಿಲನ್ನು ತೆರೆದು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 114/2022 ಕಲಂ: 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾಧ ದೀಕ್ಷಿತ್ (20) ತಂದೆ: ರಾಮಚಂದ್ರ ಶೆಟ್ಟಿ ವಾಸ: ರಮ್ಯ ನಿವಾಸ ಸಂತೋಷನಗರ ಹಾಳೆಕಟ್ಟೆ ಅಂಚೆ ಕಲ್ಯಾ ಗ್ರಾಮ ಕಾರ್ಕಳ ತಾಲೂಕು   ಇವರ ತಾಯಿ ಪ್ರಮೀಳಾ (43) ಅವರು ಸುಮಾರು ಒಂದು ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು,ಈ ಬಗ್ಗೆ ಶಿವಮೊಗ್ಗ ಹಾಗೂ ನಿಟ್ಟೆ ಆರೋಗ್ಯ ಕೆಂದ್ರದ ವೈದ್ಯರಿಂದ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಅವರ ಕಾಯಿಲೆಯು ಗುಣಮುಖವಾಗಿಲ್ಲವೆಂದು ಮಾನಸಿಕವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 05/09/2022 ರ ಬೆಳಿಗ್ಗೆ 08:00 ಗಂಟೆಯಿಂದ 13:30 ಗಂಟೆ ಮಧ್ಯ ಅವಧಿಯಲ್ಲಿ ತನ್ನ ಮನೆಗೆ ಹೊಂದಿಕೊಂಡು ಇರುವ ಕಟ್ಟಿಗೆ ಹಾಕುವ ಶೆಡ್ ನ ಸಿಮೆಂಟ್ ಶೀಟ್ ಹೊದಿಕೆಯ ಅಡ್ಡಕ್ಕೆ ಹಾಕಲಾದ ಕಬ್ಬಿಣದ ಪೈಪ್ ಗೆ ಚೂಡಿದಾರದ ಶಾಲ್ ನಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 28/2022 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಫುರ: ಪಿರ್ಯಾಧಿದಾರರಾದ ನವೀನ್‌ ಶೆಟ್ಟಿ (53) ತಂದೆ:ದಿ. ಅನಂತ ಶೆಟ್ಟಿ ವಾಸ: “ಶ್ರೀ ಸಿದ್ದಿ”, ಹಾರ್ಯಾಡಿ, ಕೆರೆಮನೆ, ಹೆಸ್ಕತ್ತೂರು ಗ್ರಾಮ, ಕುಂದಾಪುರ ಇವರ ದೊಡ್ಡಮ್ಮ ಜಲಜಮ್ಮ ಶೆಡ್ತಿ ರವರ ಮೊಮ್ಮಕ್ಕಳು ವಿದೇಶದಲ್ಲಿ ನೆಲೆಸಿರುವುದರಿಂದ ಜಲಜಮ್ಮ ಶೆಡ್ತಿ ರವರು ಒಬ್ಬಂಟಿಯಾಗಿ ವಾಸವಿರುವುದರಿಂದ  ನವೀನ್‌ ಶೆಟ್ಟಿ ರವರ ಮನೆಯವರು ಜಲಜಮ್ಮ ಶೆಡ್ತಿ ರವರ ಮನೆಗೆ ಆಗಾಗ್ಗೆ ಹೋಗಿ ಬರುತ್ತಿರುತ್ತಾರೆ. ಜಲಜಮ್ಮ ಶೆಡ್ತಿರವರ ಪ್ರಾಯಸ್ಥಳಾಗಿರುವುದರಿಂದ ಮನೆ ಕೆಲಸಕ್ಕೆ ಮಂಗಳೂರಿನ ದಾಸ್‌ ಏಜೆನ್ಸಿ ಮುಖಾಂತರ ಈ ವರ್ಷದ ಮೇ ತಿಂಗಳ 23 ನೇ ತಾರೀಖಿನಂದು ಸುಮಿತ್ರಾ ಎಂಬವರನ್ನು ಮನೆ ಕೆಲಸದ ಬಗ್ಗೆ ಮನೆಯಲ್ಲಿ ಇರಿಸಿಕೊಂಡಿದ್ದು, ಆದರೆ ಅಕೆಯು ಸಂಸಾರದ ತಾಪತ್ರೆ ಇರುವುದರಿಂದ ಅಗಸ್ಟ್‌ 1 ನೇ ತಾರೀಖಿನಂದು ಕೆಲಸ ಬಿಟ್ಟು ವಾಪಾಸು ಹೋಗಿದ್ದು, ಆ ಸಮಯ ಅದೇ ಮಂಗಳೂರಿನ ದಾಸ್‌ ಏಜೆನ್ಸಿ ಮುಖಾಂತರ ಸುಶ್ಮಿತಾ ಎಂಬುವಳು ಮನೆ ಕೆಲಸಕ್ಕೆ ಬಂದಿದ್ದು ಅವಳು ದಿನಾಂಕ 08/08/2022 ರ ವರೆಗೆ ಜಲಜಮ್ಮ ಶೆಡ್ತಿರವರ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದವಳು ಪುನಃ ವಾಪಾಸು ಮಂಗಳೂರಿಗೆ ಹೋಗಿರುತ್ತಾಳೆ. ಆಗ ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಸುಮಿತ್ರಾಳು ವಾಪಾಸು ಕೆಲಸಕ್ಕೆ ಬಂದಿರುತ್ತಾಳೆ.  ನವೀನ್‌ ಶೆಟ್ಟಿ ರವರು ದಿನಾಂಕ 30/08/2022 ರಂದು ಮನೆಯಲ್ಲಿ ಗೌರಿ ಹಬ್ಬದ ಪೂಜೆ ಇದ್ದುದರಿಂದ ಪ್ರತಿ ವರ್ಷವು ನವೀನ್‌ ಶೆಟ್ಟಿ ರವರ ಮನೆಯ ಮತ್ತು ಜಲಜಮ್ಮ ಶೆಡ್ತಿ ರವರ ಚಿನ್ನವನ್ನು ದೇವರ ಪೂಜೆಗೆ ಇಟ್ಟು ಪೂಜೆಯನ್ನು ಮಾಡುತ್ತಿದ್ದು ಅದರಂತೆ ಬೆಳಿಗ್ಗೆ 09:30 ಗಂಟೆ ಸಮಯಕ್ಕೆ ಜಲಜಮ್ಮ ಶೆಡ್ತಿರವರ ಮನೆಗೆ ಹೋಗಿ ಚಿನ್ನವನ್ನು ಪೂಜೆಗೆ ಇಡಲು ಕೇಳಿದಾಗ ಅವರು ಮನೆಯ ಕಪಾಟಿನಲ್ಲಿ ಇರಿಸಿದ ಚಿನ್ನದ ಬಳೆಯನ್ನು ತೆಗೆಯಲು ಹೋದಾಗ ಕಪಾಟಿನಲ್ಲಿ ಬಳೆ ಕಂಡು ಬರಲಿಲ್ಲ ಹಾಗೂ ಅದರ ಜೊತೆಯಲ್ಲಿ ಇಟ್ಟಿದ್ದ ATM ಕಾರ್ಡ್‌ ಕೂಡಾ ಇದ್ದಿರಲಿಲ್ಲ. ನಂತರ ಮನೆಯ ಎಲ್ಲಾ ಕಡೆ ಹುಡುಕಾಡಿದಾಗ ಎಲ್ಲೂ ಚಿನ್ನದ ಬಳೆ ಮತ್ತು ATM ಕಾರ್ಡ್‌ ಕಂಡು ಬರಲಿಲ್ಲ. ನಂತರ ಮನೆ ಕೆಲಸದ ಸುಮಿತ್ರಾಳಲ್ಲಿ ವಿಚಾರಿಸಿದಾಗ ತಾನು ತೆಗೆದಿರುವುದಿಲ್ಲವೆಂದು ಹೇಳಿದ್ದು, ಆಗ ಈ ಹಿಂದೆ ಕೇವಲ 1 ವಾರದ ಮಟ್ಟಿಗೆ ಕೆಲಸಕ್ಕೆ ಬಂದಿದ್ದ ಸುಶ್ಮಿತಾಳನ್ನು ವಿಚಾರಿಸಲು ಆಕೆಯ ಮೊಬೈಲ್‌ಗೆ ಎಷ್ಟೇ ಬಾರಿ ಪೋನ್‌ ಕರೆ ಮಾಡಿದರೂ ಕೂಡಾ ಅವಳು ಪೋನ್‌ ರಿಸೀವ್‌ ಮಾಡಿರುವುದಿಲ್ಲ. ಅಲ್ಲದೇ ಈ ಬಗ್ಗೆ ಮನೆ ಕೆಲಸಕ್ಕೆ ಕಳುಹಿಸಿದ ಮಂಗಳೂರಿನ ದಾಸ್‌ ಏಜೆನ್ಸಿ ರವರಿಗೆ ಸುಶ್ಮಿತಾಳು ಮನೆಯಲ್ಲಿದ್ದ ಚಿನ್ನದ ಬಳೆಯನ್ನು ಮತ್ತು ATM ಕಾರ್ಡ್‌ನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ವಿಚಾರಿಸಿದಲ್ಲಿ ಏಜೆನ್ಸಿಯವರು ಸರಿಯಾಗಿ ಪ್ರತಿಕ್ರಿಯಿಸಿರುವುದಿಲ್ಲ. ಹಾಗಾಗಿ ಠಾಣೆಗೆ ಬಂದು ದೂರು ನೀಡಲು ವಿಳಂಬವಾಗಿರುತ್ತದೆ. ಆದುದರಿಂದ ಪಿರ್ಯಾಧಿದಾರರ ದೊಡ್ಡಮ್ಮ ಜಲಜಮ್ಮಶೆಡ್ತಿರವರ ಮನೆಯ ಕಪಾಟಿನಿಲ್ಲಿಟ್ಟಿದ್ದ ಸುಮಾರು 2 ಪವನ್‌ ತೂಕದ ಸುಮಾರು 1,10,000/- ಮೌಲ್ಯದ ಒಂದು ಚಿನ್ನದ ಬಳೆ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಬ್ಯಾಂಕ್‌ನ ATM ಕಾರ್ಡ್‌ನ್ನು ಈ ಹಿಂದೆ ಕೆಲಸ ಮಾಡಿಕೊಂಡಿದ್ದ ಸುಶ್ಮಿತಾಳು ದಿನಾಂಕ 01/08/2022 ರಿಂದ ದಿನಾಂಕ 08/08/2022 ರ ನಡುವಿನ ಅವಧಿಯಲ್ಲಿ ಕಳವು ಮಾಡಿಕೊಂಡು ಹೋಗಿರುವ ಅನುಮಾನವಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 43/2022 ಕಲಂ: 381  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಬೈಂದೂರು: ದಿನಾಂಕ 04/09/2022 ರಂದು ಫಿರ್ಯಾದಿದಾರರಾದ ಲಕ್ಷ್ಮಣ್ ದೇವಾಡಿಗ (58) ತಂದೆ: ಗೋವಿಂದ ದೇವಾಡಿಗ ವಾಸ: ಕುಂದಾಪುರ ಚಂದು ಮನೆ ನಾಗೂರು ಕಿರಿಮಂಜೇಶ್ವರ ಗ್ರಾಮ ಬೈಂದೂರು ಇವರ ಮನೆಗೆ  ದಾವಣಗೆರೆಯ ಹೊನ್ನಾಳ್ಳಿಯ ನಿವಾಸಿಯಾದ ಮಂಜುನಾಥ ರವರು ಹೈನುಗಾರಿಕೆಗೆ  2 ದನಗಳನ್ನು ಖರೀಧಿ ಮಾಡಲು ಬಂದು  60,000 ರೂಪಾಯಿಗೆ 2 ದನಗಳನ್ನು ಖರೀಧಿ ಮಾಡುವ ಬಗ್ಗೆ ಮಾತನಾಡಿ   ಹೋಗಿದ್ದು , ದಿನಾಂಕ 05/09/2022 ರಂದು ಬೆಳಿಗ್ಗೆ 11:30 ಗಂಟೆಗೆ ಹೊನ್ನಾಳ್ಳಿಯ ಮಂಜುನಾಥ ರವರು ಪಿಕಪ್ ವಾಹನದಲ್ಲಿ ಚಾಲಕನೊಂದಿಗೆ ಲಕ್ಷ್ಮಣ್ ದೇವಾಡಿಗ ರವರ ಮನೆಗೆ ಬಂದು ದನಗಳನ್ನು ಸಾಗಾಟ ಮಾಡುವ ಬಗ್ಗೆ ಸಂಬಂದಪಟ್ಟ ಪ್ರಾಧಿಕಾರದಿಂದ ಅನುಮತಿ ಪಡೆದುಕೊಂಡು ಪಿಕಪ್ ವಾಹನದಲ್ಲಿ 2 ದನಗಳನ್ನು  ತುಂಬಿಸಿಕೊಂಡು ಲಕ್ಷ್ಮಣ್ ದೇವಾಡಿಗ ರವರ ಮನೆಯಿಂದ ಸ್ವಲ್ಪ ದೂರದಲ್ಲಿ ಹೋಗುತ್ತಿದ್ದಾಗ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ 4 ಜನ ಅಪರಿಚಿತ ವ್ಯಕ್ತಿಗಳು ಮಂಜುನಾಥ ರವರು ದನಗಳನ್ನು ಸಾಗಿಸುತ್ತಿದ್ದ ಪಿಕಪ್ ವಾಹನವನ್ನು ತಡೆದು ನಿಲ್ಲಿಸಿ , ಮಂಜುನಾಥರವರನ್ನು ವಿಚಾರಿಸಿ ನಂತರ ಆರೋಪಿತರು ಲಕ್ಷ್ಮಣ್ ದೇವಾಡಿಗ ರವರ ಬಳಿ ಬಂದು ಇವರನ್ನು ಉದ್ದೇಶಿಸಿ   ದನಗಳನ್ನು  ಕಡಿಯಲಿಕ್ಕೆ ಮಾರಾಟ ಮಾಡುತ್ತಿದ್ದಿಯಾ, ದನಗಳನ್ನು ಮಾರಾಟ ಮಾಡಿದರೇ ನಿನ್ನ ಕೈ ಕಾಲು ಮುರಿದು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 178/2022 ಕಲಂ : 341, 504, 506, ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 06-09-2022 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080