ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಪಡುಬಿದ್ರಿ: ದಿನಾಂಕ:05.09.2021 ರಂದು ಪಿರ್ಯಾದಿ ಅಲ್ವಿಸ್ ಮಿನೇಜಸ್, ಇವರು ಅವರ ತಂಗಿಯ ಬಾಬ್ತು KA-19-MJ-8483 ನೇ ನಂಬ್ರದ ಕಾರಿನಲ್ಲಿ ಕಾರ್ಕಳದಿಂದ ಮಂಗಳೂರಿಗೆ  ಕಾರ್ಕಳದಿಂದ ಪಡುಬಿದ್ರಿ ಕಡೆಗೆ ಸಾಗುವ ರಾಜ್ಯ ಹೆದ್ದಾರಿ-1 ರಲ್ಲಿ ಬರುತ್ತಾ ಸಂಜೆ 19:45 ಗಂಟೆಗೆ ಕಾಪು ತಾಲೂಕು ನಂದಿಕೂರು ಗ್ರಾಮದ ರಾಮ ಮಂದಿರದ ಎದುರು ತಲಪುತ್ತಿದ್ದಂತೆ ರಸ್ತೆಯಲ್ಲಿ ಹಂಪ್ ಇದ್ದ ಕಾರಣ ತಮ್ಮ ಕಾರನ್ನು ನಿಧಾನಗತಿಗೆ ತಂದಾಗ, ಹಿಂದಿನಿಂದ ಬರುತ್ತಿದ್ದ  KA-47-W-1272 ನೇ ನಂಬ್ರದ ಮೋಟಾರ್ ಸೈಕಲ್ ಸವಾರ ದತ್ತಾತ್ರೇಯ  ಎಂಬಾತನು ತನ್ನ ಮೋಟಾರ್ ಸೈಕಲ್ಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಸದ್ರಿ ಅಪಘಾತದ  ಪರಿಣಾಮ ಕಾರಿನ ಹಿಂಬದಿಯ ಬಂಪರ್ ಹಾಗೂ ಟೇಲ್ ಲೈಟ್ ಜಖಂಗೊಂಡಿರುತ್ತದೆ. ಈ ಅಪಘಾತದಿಂದ ಮೋಟಾರ್ ಸೈಕಲ್ಲಿನ ಸವಾರನ ಕೈಬೆರಳುಗಳಿಗೆ ಸಣ್ಣ ತರಚಿದ ಗಾಯವಾಗಿದ್ದು ಯಾವುದೇ ಗಾಯ ನೋವುಗಳುಂಟಾಗಿರುವುದಿಲ್ಲ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 88/2021 ಕಲಂ 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿ ಲವ ಇವರು ದಿನಾಂಕ: 05-09-2021 ರಂದು  ಮದ್ಯಾಹ್ನ  2:45 ಗಂಟೆಗೆ ಕೆಲಸದ ನಿಮಿತ್ತ  ತನ್ನ ಬಾಬ್ತು ಮೋಟಾರ್ ಸೈಕಲ್ ನ್ನು ವಂಡ್ಸೆ ಕಡೆಯಿಂದ ಚಿತ್ತೂರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದಾಗ ವಂಡ್ಸೆ ಗ್ರಾಮದ  ರಾಜ್ಯ ಹೆದ್ದಾರಿ  27 ರಲ್ಲಿ  ಶಾರ್ಕೆ ಎಂಬಲ್ಲಿ ತಲುಪಿದಾಗ   ವಂಡ್ಸೆ ಕಡೆಯಿಂದ ಚಿತ್ತೂರು ಕಡೆಗೆ  ಆರೋಪಿ ಗಣಪತಿ ನಾಯ್ಕ್ KA 20 EC 8827 ನೇ  ಮೋಟಾರು  ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ  ಪಿರ್ಯಾದಿದಾರರ ಮೋಟಾರ್ ಸೈಕಲ್ ನ್ನು ಓವರ್ ಟೇಕ್ ಮಾಡಿ ಶಾರ್ಕೆ ರಾಜು ಎಂಬುವರ ಮನೆಯ ಬಳಿ  ತಿರುವು ರಸ್ತೆಯಲ್ಲಿ ತೀರ ಬಲಕ್ಕೆ ಚಲಾಯಿಸಿ ಚಿತ್ತೂರು ಕಡೆಯಿಂದ ವಂಡ್ಸೆ ಕಡೆಗೆ  ಶಾರದ ರವರು  ಹಿಂಬದಿ ಸಹ ಸವಾರ ರಾಗಿ ನರಸಿಂಹ ರವರನ್ನು  ಕುಳ್ಳಿರಿಸಿಕೊಂಡು  ಚಲಾಯಿಸಿಕೊಂಡು ಹೋಗುತ್ತಿದ್ದ KA 20 EM 4528  ನೇ ಸ್ಕೂಟರ್ ಗೆ ಎದುರಿನಿಂದ  ಡಿಕ್ಕಿ ಹೊಡೆದ ಪರಿಣಾಮ  ಶಾರದ ಮತ್ತು ನರಸಿಂಹ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು  ಶಾರದರವರಿಗೆ ಬಲಕೈ ಒಳನೋವು ಹಾಗೂ ಬಲಕೈ ಬೆರಳು, ತುಟಿ , ಬಲಕೆನ್ನೆ ಬಳಿ  ರಕ್ತಗಾಯ ಉಂಟಾಗಿದ್ದು. ನರಸಿಂಹ ರವರಿಗೆ ತಲೆಗೆ ರಕ್ತಗಾಯ ಉಂಟಾಗಿದ್ದು   ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ 279, 337, 338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ: 05.09.2021 ರಂದು ಮದ್ಯಾಹ್ನ 13:30 ಗಂಟೆಗೆ  ಮಧು  ಬಿ ಇ ಪಿಎಸ್‌ಐ  ಕಾರ್ಕಳ  ನಗರ ಪೊಲೀಸ್‌  ಠಾಣೆರವರು    ಠಾಣಾ  ಸಿಬ್ಬಂದಿಯವರಾದ  ಎಎಸ್‌ಐ   ದಿನಕರ ಮತ್ತು ಗಿರಿಧರ  ಪೈಯವರ ಜೊತೆ ಠಾಣಾ ಸರಹದ್ದಿನ ಕಾರ್ಕಳ ತಾಲೂಕು  ಕುಕ್ಕುಂದೂರು  ಗ್ರಾಮದ   ಜೋಡುರಸ್ತೆ  ಬೋಳ  ರಾಘವೇಂದ್ರ  ಕಾಮತ್‌  ಎಂಬ ಹೆಸರಿನ ವೃತ್ತದ  ಬಳಿ ವಾಹನ ತಪಾಸಣೆ  ಮಾಡುತ್ತಿದ್ದ  ಸಮಯದಲ್ಲಿ ಕಾರ್ಕಳ  ಬಂಗ್ಲೆಗುಡ್ಡೆ ಜಂಕ್ಷನ್‌ ಕಡೆಯಿಂದ  ಉಡುಪಿ ಕಡೆಗೆ  ಒಂದು ಮೋಟಾರ್‌  ಸೈಕಲನ್ನು ಅದರ  ಸವಾರನು ಹೆಲ್ಮೇಟ್‌   ಧರಿಸದೇ  ಸಹ ಸವಾರನನ್ನು ಕುಳ್ಳಿರಿಸಿಕೊಂಡು  ಅತೀ ವೇಗ  ಮತ್ತು ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು ಬರುತ್ತಿದ್ದುದ್ದನ್ನು ಕಂಡು ದೂರದಲ್ಲಿಯೇ ನೋಡಿ ಮೋಟಾರ್‌  ಸೈಕಲ್‌ ಸವಾರನಿಗೆ  ಕೈ ಸನ್ನೆ ಮಾಡಿ ಮೋಟಾರ್‌ ಸೈಕಲನ್ನು ಬದಿಗೆ ನಿಲ್ಲಿಸುವಂತೆ   ಸೂಚನೆ ನೀಡಿದ್ದರು ಕೂಡ ಸೂಚನೆಯನ್ನು ಮೋಟಾರ್‌ ಸೈಕಲ್‌ ಸವಾರನು ಪಾಲಿಸದೇ ಅದೇ  ವೇಗದಲ್ಲಿ ಪಿರ್ಯಾದಿದಾರರ  ಹಾಗೂ ಸಿಬ್ಬಂದಿಯವರ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ತಾಗುವಂತೆ ಸವಾರಿಮಾಡಿಕೊಂಡು ಉಡುಪಿ ಕಡೆಗೆ ಮೋಟಾರ್‌ ಸೈಕಲನ್ನು ಸವಾರಿ ಮಾಡಿಕೊಂಡು ಹೋಗಿದ್ದು ಈ ಸಮಯದಲ್ಲಿ ಮೋಟಾರ್‌ ಸೈಕಲಿಗೆ ಮುಂದುಗಡೆ ಮತ್ತು ಹಿಂದುಗಡೆ ನಂಬರ್‌ ಪ್ಲೇಟ್‌  ಇರುವುದಿಲ್ಲ   ಮೋಟಾರ್‌  ಸೈಕಲ್‌ ಕಪ್ಪು ಬಣ್ಣದ ಯಮಹ  ಕಂಪೆನಿ ತಯಾರಿಕೆಯ ಮೋಟಾರ್‌  ಸೈಕಲ್‌  ಆಗಿರುತ್ತದೆ. ಮೋಟಾರ್‌  ಸೈಕಲ್‌  ಸವಾರನು ನೀಲಿ ಬಣ್ಣದ ಜಿನ್ಸ್‌ ಪ್ಯಾಂಟ್‌, ಕಪ್ಪು  ಬಣ್ಣದ ಬಿಳಿ ಹೂವಿನ ಚಿತ್ರ  ಇರುವ ತುಂಬು  ತೋಳಿನ ಶರ್ಟ್‌, ಸಹಸವಾರನು ಕಪ್ಪು ಬಣ್ಣದ ಪ್ಯಾಂಟ್‌ ಕಪ್ಪು ಬಣ್ಣದ ತುಂಬು ತೋಳಿನ ಎದೆಯ  ಭಾಗದಲ್ಲಿ  ಎರಡು ಬಿಳಿ ಗೆರೆಗಳಿರುವ ರೌಂಡ್  ನೆಕ್‌ ಬನಿಯಾನ್‌  ಧರಿಸಿರುತ್ತಾನೆ ಈ ಸಮಯದಲ್ಲಿ ಮೋಟಾರ್‌ ಸೈಕಲ್‌ ಸವಾರನಿಗೆ ಸಹ ಸವಾರನು ಕೈ  ಸನ್ನೆ  ಮಾಡಿ ಮೋಟಾರ್‌ ಸೈಕಲನ್ನು ನಿಲ್ಲಿಸದಂತೆ ಪ್ರಚೋದನೆ ನೀಡುತ್ತಿದ್ದನು ಎಂಬಿತ್ಯಾದಿ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2021 ಕಲಂ: 279,336, 109 ಐಪಿಸಿ, Rule 129 R/W 177 IMV Act, Rule 179(1) IMV act CMV Rule 51 R/W 177 IMV Act  ನಂತೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಅರುಣ ಕುಮಾರಿ(44) ಗಂಡ:ಸತೀಶ್ ನಾಯ್ಕ್ ವಾಸ:2-72(ಇ), ವಾಸುಕೀನಗರ, ಸತ್ಯನಾರಾಯಣ ಲೇಔಟ್, ಅಂಬಾಗಿಲು, ಇವರ ಗಂಡ ಸತೀಶ್‌ ನಾಯ್ಕ ರವರು ಉಡುಪಿ ಕಲ್ಪನ ಥಿಯೇಟರ್‌ ಬಳಿ ಇರುವ ಅಂಗಡಿ ಡೋ.ನಂ 9-3-105(ಎ) ಯಲ್ಲಿ ಪಿತ್ರಾರ್ಜಿತ ಆಸ್ತಿಯಿಂದ ಬಂದ ಅಂಗಡಿಯಲ್ಲಿ ಬೊಂಡಾ ವ್ಯಾಪಾರ ನಡೆಸುತ್ತಿದ್ದು, ಅಂಗಡಿಯ ಪ್ರಕರಣ ಹೈಕೋರ್ಟ್‌ ನಲ್ಲಿ ವಿಚಾರಣೆಯಲ್ಲಿರುತ್ತದೆ. ದಿನಾಂಕ 05/09/2021 ರಂದು ಮದ್ಯಾಹ್ನ ಸುಮಾರು 1:30 ಗಂಟೆಗೆ  ಆಪಾದಿತ 1ನೇ ಪ್ರೀತೇಶ್ ಇವರು 2)ಯಶೋಧ ಮತ್ತು 3) ಸೀಮಾ ನೇಯವರೊಂದಿಗೆ ಸೇರಿ ಅಂಗಡಿಗೆ ಅಕ್ರಮವಾಗಿ ಬೀಗ ಜಡಿದಿದ್ದು, ಶ್ರೀಮತಿ ಅರುಣ ಕುಮಾರಿ ಇವರು ಹಾಗೂ ಇವರ ಗಂಡ ಮತ್ತು ಅವರ ತಂಗಿ ಶೋಭ ಹಾಗೂ ಇತರೊಂದಿಗೆ ಅಂಗಡಿಯ ಹತ್ತಿರ ಬಂದು ಬೀಗ ತೆರೆಯಲು ಹೇಳಿದಾಗ ಬೀಗ ತೆರೆಯಲು ಆಪಾದಿತರು ಒಪ್ಪದಿದ್ದಾಗ ಇವರು ಬೀಗ ಒಡೆಯುವ ಹಂತದಲ್ಲಿದ್ದಾಗ ಆಪಾದಿತ 1ನೇಯವರು  ಆಪಾದಿತ 2 ಮತ್ತು 3ನೇಯವರೊಂದಿಗೆ ಸೇರಿ ಶ್ರೀಮತಿ ಅರುಣ ಕುಮಾರಿ ರವರು ಹಾಗೂ ಅವರ ತಂಗಿಯ ಮೇಲೆ ಹಲ್ಲೆ ನಡೆಸಿದ್ದು, ತಂಗಿ ಶೋಭ ರವರ ಕರಿಮಣಿ ಸರವನ್ನು ಎಳೆದಾಡಿ ತಂಡರಿಸಿರುವುದಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 39/2021 ಕಲಂ:354, 323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ ಯಶೋಧ (65) ಗಂಡ:ದಿ.ಆನಂದ ವಾಸ:ಮನೆ ನಂ 9-2-104, ಬಂಧನ್ ಬ್ಯಾಂಕ್ ಬಳಿ ಹಳೇಪೋಸ್ಟ್ ಆಫೀಸ್ ರೋಡ್,ಉಡುಪಿ ಇವರಿಗೆ ಸಂಬಂಧಿಸಿದ ಉಡುಪಿ ಕಲ್ಪನ ಥಿಯೇಟರ್‌ ಬಳಿ ಇರುವ ಜಾಗದಲ್ಲಿ ಆಪಾದಿತ 1.ಸತೀಶ್ ನಾಯ್ಕ್ 2.ದಿನೇಶ್ 3.ರಾಜೇಶ್ 4.ರಘುರಾಮ ನಾಯ್ಕ್ 5.ವಾಸುನಾಯ್ಕ್ 6.ಶ್ರೀಧರ ನಾಯ್ಕ್ 7.ಅರುಣಕುಮಾರಿ, 8.ಶೋಭಾ. 9.ಶಾರದ,10.ಸುನಿಲ್, 11.ಸುನಿತ್, 12.ಕರುಣಾಕರ, 13.ಇತರುಗಳು ಅಂಗಡಿ ವ್ಯವಹಾರ ನಡೆಸಿಕೊಂಡಿದ್ದು, ಆಪಾದಿತರುಗಳು ಸದ್ರಿ ಜಾಗದಲ್ಲಿ ತಮಗೂ ಹಕ್ಕಿದೆ ಎಂದು ಶ್ರೀಮತಿ ಯಶೋಧ ಇವರೊಂದಿಗೆ ಜಗಳ ಮಾಡುತ್ತಾ ಹಲ್ಲೆ ಮಾಡಲು ಬರುತ್ತಿದ್ದು, ಶ್ರೀಮತಿ ಯಶೋಧ ರವರು ಸುಮಾರು 2 ತಿಂಗಳ ಹಿಂದೆ ಸದ್ರಿ ಅಂಗಡಿಗಳಿಗೆ ಬೀಗ ಹಾಕಿರುತ್ತಾರೆ. ದಿನಾಂಕ 05/09/2021 ರಂದು ಮದ್ಯಾಹ್ನ 1:30 ಗಂಟೆಗೆ ಆಪಾದಿತರುಗಳು ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಕೈಯಲ್ಲಿ ಮಾರಕಾಸ್ತ್ರಗಳಾದ ಸಬ್ಬಾಲ್‌, ಸುತ್ತಿಗೆ ಹಾಗೂ ದೊಡ್ಡ ಕಲ್ಲು ಹಿಡಿದುಕೊಂಡು ಬಂದು ಶ್ರೀಮತಿ ಯಶೋಧ ರವರಿಗೆ ಅವಾಚ್ಯವಾಗಿ ಬೈದು ಕೈ ಹಿಡಿದು ಎಳೆದಾಡಿ ಆಪಾದಿತರುಗಳು ಸುತ್ತೆ ಹಾಗೂ ಸಬ್ಬಾಲ್‌ನಿಂದ ಶ್ರೀಮತಿ ಯಶೋಧ ರವರ ಬಲಕಾಲಿಗೆ ಹೊಡೆದು ರಕ್ತಗಾಯಗೊಳಿಸಿದ್ದಲ್ಲದೇ, ತಡೆಯಲು ಬಂದ ಶ್ರೀಮತಿ ಯಶೋಧ ರವರ ಸೊಸೆ ನೀತಾರವರಿಗೆ ಕೆನ್ನೆಗೆ ಹೊಡೆದು ಪ್ರಿತೇಶ್‌ನಿಗೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 40/2021 ಕಲಂ:143,144, 147,148,354, 504,324,506 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ಪಿರ್ಯಾದಿದಾರರಾದ ಅಶ್ವಥ್‌  ಆಚಾರ್ಯ, (35) ತಂದೆ: ಪುರುಶೋತ್ತಮ ಆಚಾರ್ಯ, ವಾಸ: ಕಾಳಿಕಾಂಬ ನಿಲಯ, ಕುಂಟಿಬೈಲು ಅಂಚೆ, ಮಿಯ್ಯಾರು ಗ್ರಾಮ, ಕಾರ್ಕಳ ಇವರು ಕುಂಟಿಬೈಲಿನಲ್ಲಿ  ವೆಲ್ಡಿಂಗ್‌ ಕೆಲಸ ಮಾಡಿಕೊಂಡಿರುತ್ತಾರೆ. ಅಶ್ವಥ್‌  ಆಚಾರ್ಯ ರವರ ಮನೆ ಸಮೀಪ ಸದಾನಂದ ಶೆಟ್ಟಿಯವರ ಮನೆ  ಇದ್ದು ಅವರು ಒಬ್ಬರೇ ವಾಸ್ತವ್ಯ ಇದ್ದಾರೆ. ಅಶ್ವಥ್‌  ಆಚಾರ್ಯ ರವರ ಜಾಗಕ್ಕೆ ತಾಗಿಕೊಂಡು ಸರಕಾರಿ ಕುಮ್ಕಿ ಸ್ಥಳ ಇರುತ್ತದೆ. ಈ ಕುಮ್ಕಿ ಸ್ಥಳವನ್ನು ಅಶ್ವಥ್‌  ಆಚಾರ್ಯ ರವರೇ ಉಪಯೋಗಿಸುತ್ತಿದ್ದಾರೆ. ಅಶ್ವಥ್‌  ಆಚಾರ್ಯ ರವರು ತಮ್ಮ ಸ್ಥಳದಲ್ಲಿ ಮಲ್ಲಿಗೆ  ಗಿಡ ನೆಡಲು ಅಂದಾಜಿಸಿದ್ದು ಅದರಂತೆ ದಿನಾಂಕ 05/09/2021  ರಂದು ಬೆಳಿಗ್ಗೆ ಅಶ್ವಥ್‌  ಆಚಾರ್ಯ ರವರು ಹಾಗೂ ಅವರ ಹೆಂಡತಿ ಅವರ ಜಾಗಕ್ಕೆ ತಾಗಿ ಇದ್ದ ಸರಕಾರಿ ಕುಮ್ಕಿ ಸ್ಥಳದಲ್ಲಿದ್ದ ಮಣ್ಣನ್ನು ತೆಗೆದುಕೊಂಡು ಬಂದಿದ್ದು, ಈ ವಿಷಯ ತಿಳಿದು ಬೆಳಿಗ್ಗೆ 8:45 ಗಂಟೆಗೆ ಸದಾನಂದ ಶೆಟ್ಟಿ ಈತನು ಅಕ್ರಮವಾಗಿ ಅಶ್ವಥ್‌  ಆಚಾರ್ಯ ರವರ ಮನೆಯ ಅಂಗಳಕ್ಕೆ ಪ್ರವೇಶ ಮಾಡಿ ಇವರನ್ನು ಉದ್ದೇಶಿಸಿ ಕೆಟ್ಟ ಶಬ್ದಗಳಿಂದ ಬೈದು, ಆ ಸ್ಥಳ ನನಗೆ ಸೇರಿದ್ದು  ಎಂದು ಹೇಳಿ ಅಶ್ವಥ್‌  ಆಚಾರ್ಯ ರವರಿಗೆ ಕೈಯಿಂದ ಕೆನ್ನೆಗೆ ಹೊಡೆದನು ಇನ್ನು ಮುಂದಕ್ಕೆ ಆ ಸ್ಥಳಕ್ಕೆ ಬಂದಲ್ಲಿ ಕೈ ಕಾಲು ಕಡಿದು ಹಾಕುವುದಾಗಿ ಬೆದರಿಕೆ ಹಾಕಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2021  ಕಲಂ: 447, 323, 504 ,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಗಂಗೊಳ್ಳಿ : ದಿನಾಂಕ 05.09.2021 ರಂದು ಗಂಗೊಳ್ಳಿ ಠಾಣಾ ಎಎಸ್‌ಐ ವೆಂಕಟೇಶ ಗೊಲ್ಲ ರವರು ಠಾಣಾ ಸಿಬ್ಬಂದಿ ಯವರೊಂದಿಗೆ 19:30 ಗಂಟೆಗೆ ತ್ರಾಸಿ ಗ್ರಾಮದ ತ್ರಾಸಿ ಬೀಚ್‌ಬಳಿ ಸಮವಸ್ತ್ರದಲ್ಲಿ ರೌಂಡ್ಸ್ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಬೀಚ್‌ಬಳಿ KA-47 M-7900 Swift ಕಾರಿನ ಚಾಲಕ 1) ಶಾಹೀದ್‌ಅಹಮ್ಮದ್‌ಪ್ರಾಯ 37 ವರ್ಷ ತಂದೆ: ಅಬ್ದುಲ್‌ಹಮೀದ್‌ಹುಸೇನ್‌ವಾಸ:ಅಮೀರ್‌ಮಂಜಿಲ್‌ಬಂದರ್‌ರಸ್ತೆ ಭಟ್ಕಳ ತಾಲೂಕು ಉತ್ತರ ಕನ್ನಡ ಜಿಲ್ಲೆ ಮೊಬೈಲ್ ನಂಬ್ರ 9535721490 ಹಾಗೂ ಕಾರಿನಲ್ಲಿದ್ದ ಇನ್ನೋರ್ವ ವ್ಯಕ್ತಿ 2) ಮಹಮ್ಮದ್‌ನೌಫೀಲ್ ಪ್ರಾಯ 32 ವರ್ಷ ತಂದೆ: ನಿಜಾಮುದ್ದೀನ್‌ಜುಶಿದ್ದಿ ವಾಸ: ಅಮೀರ್‌ಮಂಜಿಲ್‌ಜಾಲಿ ರೋಡ್‌ಬಂದರ್‌ರಸ್ತೆ ಮುಗ್ದಾಂ ಕಾಲನಿ ಭಟ್ಕಳ ತಾಲೂಕು ಇವರು ಸಕಾರಣವಿಲ್ಲದೇ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸುವ ಮೂಲಕ ಸರಕಾರ ಹಾಗೂ ಜಿಲ್ಲಾಡಳಿತವು ಕೋವಿಡ್-19 ತಡೆಗಟ್ಟಲು ಹೊರಡಿಸಿದ ವಾರಾಂತ್ಯ ಕರ್ಫ್ಯೂ ಆದೇಶವನ್ನು ಉಲ್ಲಂಘಿಸಿದ್ದು, ಮಾನವನ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಸೋಂಕು ಹರಡುವ ಸಂಭವ ಇದೆ ಎಂದು ತಿಳಿದೂ ನಿರ್ಲಕ್ಷತನ ತೋರಿದ್ದರಿಂದ ಆಪಾದಿತರ ವಾಹನವನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಪಡುಬಿದ್ರಿ ಗಂಗೊಳ್ಳಿ ಠಾಣೆ ಅಪರಾಧ ಕ್ರಮಾಂಕ 80/2021 ಕಲಂ 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-09-2021 10:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080