ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ದಿನಾಂಕ 06-09-2021 ರಂದು ನಸುಕಿನಲ್ಲಿ  ಪಿರ್ಯಾದಿ ವಸಂತ ಸುವರ್ಣ ಇವರು  ಅಗತ್ಯ ಕೆಲಸಕ್ಕೆ  ಹೊರಗಡೆ  ಹೋಗಿ ನಸುಕಿನ ಸಮಯ ಸುಮಾರು 2-45 ಘಂಟೆಗೆ ಮನೆಗೆ  ಬಂದು ಮನೆ ಹತ್ತಿರದಲ್ಲಿರುವಾಗ ಮನೆ ಎದುರಿನ  ರಾ.ಹೆ.66  ರ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಎಕಮುಖ  ಡಾಮಾರು  ರಸ್ತೆಯಲ್ಲಿ ತೆಕ್ಕಟ್ಟೆ  ಕಡೆಯಿಂದ  ಕೋಟ  ಕಡೆಗೆ ಓರ್ವ ಪಿಕ್‌ಅಪ್‌ ಟೆಂಪೋ ವಾಹನ ನಂಬ್ರ KA 28 D 8570 ನೇದನ್ನು ಅದರ ಚಾಲಕ ದಿನೇಶ ಚಂದ್ರಶೇಖರ ಮುಚ್ಚಂಡಿ ಎಂಬುವವನು ಅತೀ ವೇಗ  ಹಾಗೂ ಅಜಾಗರೂಕತೆಯಿಂದ  ಚಾಲನೆ  ಮಾಡಿಕೊಂಡು  ಬಂದು ಮಣೂರು  ಗ್ರಾಮದ  ರಾಜಲಕ್ಷ್ಮೀ  ಸಭಾಭವನದ ಎದುರು ತಲುಪುಷ್ಟರಲ್ಲಿ ವಾಹನವನ್ನು ಒಮ್ಮೇಲೆ  ಎಡಕ್ಕೆ ಚಲಾಯಿಸಿ  ರಸ್ತೆಯ  ಬದಿಯಲ್ಲಿದ್ದ  ಡಿವೈಡರ್‌  ಗ್ರಿಲ್‌ಗಳಿಗೆ ಡಿಕ್ಕಿ ಹೊಡೆದ ಪರಿಣಾಮ  ಪಿಕ್‌ಅಪ್‌ ವಾಹನ ಡಾಮಾರು ರಸ್ತೆಯಲ್ಲಿ  ಪಲ್ಟಿಯಾಗಿ  ಕುಂದಾಪುರ ಕಡೆಗೆ  ಮುಖಮಾಡಿ ಬಿದ್ದುಕೊಂಡಿದ್ದು ಚಾಲಕನು ವಾಹನದಲ್ಲಿ ಅಡಿಯಲ್ಲಿ  ಸಿಕ್ಕಿಹಾಕಿಕೊಂಡಿದ್ದು ಪಿರ್ಯಾದಿದಾರರು ಹಾಗೂ  ಸ್ಥಳೀಯರು ಓಡಿ  ಹೋಗಿ  ನೋಡಿ ಚಾಲಕನನ್ನು ವಾಹನದ ಅಡಿಯಿಂದ ತೆಗೆದು  ಪರಿಶೀಲಿಸಿದಲ್ಲಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೆ ಇದ್ದು ಮೃತಪಟ್ಟಿರುವುದು ಕಂಡು ಬಂದಿರುತ್ತದೆ.   ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 159/2021 ಕಲಂ: 279, 304(A)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ:05/09/2021 ರಂದು ಪಿರ್ಯಾದಿ ಶೈನಿ ಥಾಮಸ್‌‌‌‌‌ರವರು ತನ್ನ ಬಾಬ್ತು KA-20-EW-3074 ನೇ ದ್ವಿಚಕ್ರ ವಾಹನವನ್ನು ಸವಾರಿ ಮಾಡಿಕೊಂಡು ಬ್ರಹ್ಮಾವರ ಮಹೇಶ್‌ ಆಸ್ಪತ್ರೆಯಿಂದ ಮನೆಗೆ ಹೊರಟು ಸಂಜೆ ಸುಮಾರು 6:00 ಗಂಟೆಗೆ ವಾರಂಬಳ್ಳಿ ಗ್ರಾಮದ ಬ್ರಹ್ಮಾವರ ಬಸ್‌ ನಿಲ್ದಾಣದ ಎದುರು ರಾ.ಹೆ 66 ರ ಡಿವೈಡರ್‌‌ನ ಬಳಿ ತಲುಪಿ ವಾಹನವನ್ನು ನಿಧಾನವಾಗಿ ಉಪ್ಪೂರು ಕಡೆಗೆ ಹೋಗಲು “ಯು” ಟರ್ನ್‌ ಮಾಡುತ್ತಿರುವಾಗ ಹಿಂದಿನಿಂದ ಅಂದರೆ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಆರೋಪಿಯು ತನ್ನ ಬಾಬ್ತು MH-09-EM-5656 ನೇ ಲಾರಿಯನ್ನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಪಿರ್ಯಾದಿದಾರರ ವಾಹನಕ್ಕೆ ಡಿಕ್ಕಿ  ಹೊಡೆದ  ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ದ್ವಿಚಕ್ರ ವಾಹನ  ಲಾರಿಯ ಅಡಿಗೆ ಸಿಲುಕಿರುತ್ತದೆ. ಸದ್ರಿ ಅಪಘಾತದಿಂದ  ಪಿರ್ಯಾದಿದಾರರ ಎಡಕೈ ಭುಜದ ಕೆಳಗೆ ಮೂಳೆ ಮುರಿತವಾಗಿರುತ್ತದೆ. ಹಾಗೂ ಇತರ ಕಡೆ ತರಚಿದ ಗಾಯವಾಗಿರುತ್ತದೆ. ಪಿರ್ಯಾದಿದಾರನ್ನು ಚಿಕಿತ್ಸೆಯ ಬಗ್ಗೆ ಮಹೇಶ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 165/2021 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಹಲ್ಲೆ ಪ್ರಕರಣ

 • ಕಾರ್ಕಳ: ದಿನಾಂಕ: 05/09/2021 ರಂದು ರಾತ್ರಿ 9:00 ಗಂಟೆಗೆ ಕಾರ್ಕಳ ತಾಲೂಕಿನ ಈದು  ಗ್ರಾಮದ ಅಲಿಮಾರು ಗುಡ್ಡೆ ಎಂಬಲ್ಲಿ ಪಿರ್ಯಾದಿ ಗಣೇಶ್ ಇವರು ತನ್ನ ಮನೆಯ ಬಳಿ ಆತನ ಸ್ನೇಹಿತ ರವಿ ಎಂಬವರೊಂದಿಗೆ ಮಾತನಾಡುತ್ತಾ ನಿಂತುಕೊಂಡಿರುವಾಗ ಆರೋಪಿತ ಶೋಭಿತ್ ಪೂಜಾರಿ ಎಂಬವನು  ತನ್ನ  ಮೋಟಾರ್ ಸೈಕಲಿನಲ್ಲಿ ಅಲ್ಲಿಗೆ ಬಂದು ರವಿಯ ಬಳಿ “ ಏನಂಬೆ ನಿಕ್  ಕ್ರಿಕೆಟ್ ದ ಟೀ ಶರ್ಟ್ ಬೋಡ “ಎಂದು ಕೇಳಿದಾಗ ಪಿರ್ಯಾದಿದಾರರು ಆತನನ್ನು ಸಮಾಧಾನಪಡಿಸಲು ಹೋಗಿದ್ದು ಆ ಸಮಯ ಆರೋಪಿತನು ಪಿರ್ಯಾದಿದಾರರ ಜುಟ್ಟು ಹಿಡಿದು ಅವಾಚ್ಯವಾಗಿ ಬೈದು ಆತನ ಕೈಯಲ್ಲಿದ್ದ ಚಾಕುವಿನಿಂದ ಪಿರ್ಯಾದಿದಾರರ ತಲೆಯ ಎಡಭಾಗಕ್ಕೆ ಚುಚ್ಚಿ, ಕೈಯಿಂದ ಎರಡು ಕೆನ್ನೆಗೆ ಹಲ್ಲೆ ಮಾಡಿದ್ದು  ಅಲ್ಲದೇ ಪರಿಣಾಮ ಪಿರ್ಯಾದಿದಾರರ ತಲೆಗೆ ರಕ್ತಗಾಯವಾಗಿದ್ದು, ಅಲ್ಲದೇ  ಪಿರ್ಯಾದಿದಾರರಿಗೆ ಜೀವ ಬೆದರಿಕೆ ಹಾಕಿ ಹೋಗಿದ್ದು ಪಿರ್ಯಾದುದಾರರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 104/2021  ಕಲಂ: 504, 324,  323, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ

 • ಬೈಂದೂರು: ಪಿರ್ಯಾದಿ ಗೋವಿಂದ ಇವರ ತಮ್ಮನಾದ ಸುಧಾಕರ ದೇವಾಡಿಗ ಪ್ರಾಯ: 30 ವರ್ಷ ರವರು ಗುಲ್ಭರ್ಗದ ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದು ಕಳೆದ 3 ತಿಂಗಳಿನಿಂದ ಊರಿಗೆ ಬಂದವನು ಮನೆಯಲ್ಲೇ ಇರುವುದಾಗಿದ್ದು 3 ವರ್ಷದಿಂದ ಮಾನಸಿಕ ಅಸ್ವಸ್ಥನಾಗಿರುವುದರಿಂದ ಕುಂದಾಪುರದ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು 2 ತಿಂಗಳಿನಿಂದ ಮಾನಸಿಕ ಖಾಯಿಲೆ ಉಲ್ಬಣಗೊಂಡು ರಾತ್ರಿ ಸಮಯ ನಿದ್ದೆ ಮಾಡದೇ ಒಬ್ಬನೇ ಕುಳಿತು ಯಾರ ಬಳಿಯೂ ಮಾತನಾಡದೇ ಆಲೋಚನೆ ಮಾಡುತ್ತಿದ್ದು ವೈದ್ಯರಲ್ಲಿಗೆ ತೋರಿಸಿ  ವೈದ್ಯರ ಸಲಹೆಯಂತೆ ಮಾತ್ರೆ ಮುಂದುವರೆಸಿದ್ದು ನಿನ್ನೆ ದಿನಾಂಕ :05-09-2021 ರಂದು ರಾತ್ರಿ 09:00 ಗಂಟೆಗೆ ಪಿರ್ಯಾದಿದಾರರು ತಾಯಿಯ  ಮನೆಯಲ್ಲಿ ತಾಯಿ,ತಮ್ಮಂದಿರರು,ತಂಗಿಯಂದಿರರು ಮಲಗಿದ ಬಳಿಕ ಪಕ್ಕದಲ್ಲಿರುವ ಪಿರ್ಯಾದಿದಾರರ ಮನೆಗೆ ಹೋಗಿದ್ದು ದಿನಾಂಕ:06-09-2021 ರಂದು ಬೆಳಿಗ್ಗೆ 05:30 ಗಂಟೆಗೆ ಪಿರ್ಯಾದಿದಾರರ ತಾಯಿ ಮನೆಯಲ್ಲಿ ಬೊಬ್ಬೆ ಕೇಳಿಸಿದ್ದು ಪಿರ್ಯಾದಿದಾರರು ಓಡಿ ಹೋಗಿ ವಿಚಾರಿಸಿದಲ್ಲಿ ಪಿರ್ಯಾದಿದಾರರ ತಮ್ಮ ಸುಧಾಕರ ದೇವಾಡಿಗ ಕಾಣಿಸುತ್ತಿಲ್ಲವಾಗಿ ತಿಳಿಸಿದ್ದು ಮನೆಯವರೆಲ್ಲರೂ ಹುಡುಕಾಡಿ ನೋಡಲಾಗಿ ಪಿರ್ಯಾದಿದಾರರ ತಮ್ಮ ಸುಧಾಕರ ದೇವಾಡಿಗ  ಮನೆಯ ಕೋಣೆಯ ಮಾಡಿಗೆ  ಸೀರೆಯನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 33/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ : ನಾರಾಯಣ ಎನ್ ಪೂಜಾರಿ ರವರು ಕಾರ್ಕಳ ತಾಲೂಕು ಬೋಳ ಗ್ರಾಮದ ಕೊಲಜಾಲು ಎಂಬಲ್ಲಿ ವಾಸವಾಗಿದ್ದು, ವಿಪರೀತ ಕುಡಿತದ  ಚಟವನ್ನು  ಹೊಂದಿದ್ದು, ಅದೇ ಕಾರಣದಿಂದ ಈ ದಿನ ಬೆಳಿಗ್ಗೆ 08: 00 ಗಂಟೆಗೆ ಅಸ್ವಸ್ಥಗೊಂಡವರನ್ನು ಚಿಕಿತ್ಸೆ  ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಚಿಕಿತ್ಸೆಗೆ ಸ್ಪಂದಿಸದೇ ಈ ದಿನ ದಿನಾಂಕ 06/09/2021 ರಂದು ಬೆಳಿಗ್ಗೆ 11:15   ಗಂಟೆಗೆ ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ  ಗ್ರಾಮಾಂತರ  ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 30/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-09-2021 05:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080