ಅಭಿಪ್ರಾಯ / ಸಲಹೆಗಳು

ಸುಲಿಗೆ ಪ್ರಕರಣ:

 • ಕುಂದಾಪುರ: ಪಿರ್ಯಾದಿ ರಾಮ ಪೂಜಾರಿ, ಪ್ರಾಯ: 65 ವರ್ಷ, ತಂದೆ: ದಿ. ಬಚ್ಚ ಪೂಜಾರಿ, ವಾಸ: ಲಕ್ಷ್ಮೀ ನಿವಾಸ, ಕಾಡಿನ ಬೆಟ್ಟು, ಕೊರ್ಗಿ ಗ್ರಾಮ, ಕುಂದಾಪುರ ಇವರ ಮಗಳು ದೇವಕಿ ಪ್ರಾಯ 35 ವರ್ಷ ರವರು  ದಿನಾಂಕ: 05.08.2022 ರಂದು ಸಂಜೆ 04:30 ಗಂಟೆಗೆ ಮನೆಯಿಂದ ಆಕೆಯ ಮಗ ಅದ್ವಿಕ್‌ನನ್ನು ಶಾಲೆಗೆ ಹೋಗಿದ್ದವನನ್ನು ಕರೆದುಕೊಂಡು ಬರಲು ಮನೆಯಿಂದ ಹೋಗಿದ್ದು, ಕೊರ್ಗಿ ಕ್ರಾಸ್‌ಬಳಿ 4:15 ಗಂಟೆಯಿಂದ 4:25 ಗಂಟೆಯ ಮದ್ಯದಲ್ಲಿ ಓಣಿಯಲ್ಲಿ ನಿಂತು ಬಸ್ಸಿಗಾಗಿ ಕಾಯುತ್ತಿರುವಾಗ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಹಿಂದಿನಿಂದ ಬಂದು ತನ್ನ ತಲೆಯ ಹಿಂಬದಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ತನ್ನನ್ನು ನೆಲಕ್ಕೆ ಬಿಳಿಸಿ ನಂತರ ತನ್ನ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ್ದು ಆಗ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಅಪರಿಚಿತ ವ್ಯಕ್ತಿಯು ಪುನ: ಪುನ: ರಾಡ್‌ನಿಂದ ತನ್ನ ತಲೆಗೆ ಹೊಡೆದು ಹಲ್ಲೆ ಮಾಡಿ ನಂತರ ತನ್ನ ಕರಿಮಣಿ ಸರ, ಒಂದು ಬಳೆ ಮತ್ತು ಒಂಕಿ ಉಂಗುರವನ್ನು ಬಲತ್ಕಾರವಾಗಿ ಕಿತ್ತುಕೊಂಡು ಅಲ್ಲೆ ಪಕ್ಕದಲ್ಲಿರುವ ಹಾಡಿಯಲ್ಲಿ ಓಡಿ ಹೋಗಿದ್ದು, ಪಕ್ಕದ ಮನೆಯ ಪಾರ್ವತಿ ಶೆಡ್ತಿ  ಕೂಡಲೇ ದೇವಕಿಯನ್ನು ಕೊರ್ಗಿಯ ರಘುರಾಮ ಶೆಟ್ಟಿಯವರ ರಿಕ್ಷಾದಲ್ಲಿ ಹಾಕಿಕೊಂಡು ಕೊಟೇಶ್ವರ ಎನ್‌.ಆರ್‌ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಎನ್‌.ಆರ್‌ಆಚಾರ್ಯ ಆಸ್ಪತ್ರೆಯ ವೈದ್ಯರು ದೇವಕಿಯನ್ನು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ  ಕಳುಹಿಸಿಕೊಟ್ಟಿರುತ್ತಾರೆ. ದೇವಕಿಯು  ಧರಿಸಿದ್ದ ಕರಿಮಣಿ ಸರವು ಸುಮಾರು 2 ಪವನ್‌ತೂಕ, ಬಳೆಯು ಸುಮಾರು 2 ½  ಪವನ್‌ತೂಕ ಮತ್ತು ಒಂಕಿ ಉಂಗುರವು ½  ಪವನ್‌ತೂಕದ್ದಾಗಿದ್ದು ಒಟ್ಟು ಅಂದಾಜು ಮೌಲ್ಯ ಸುಮಾರು 1,60,000/- ರೂಪಾಯಿ ಆಗಬಹುದ್ದಾಗಿದ್ದು, ಪಿರ್ಯಾದಿದಾರರ ಮಗಳಿಗೆ ಹಲ್ಲೆ ಮಾಡಿ ಆಕೆಯು ಧರಿಸಿದ್ದ ಆಭರಣಗಳನ್ನು ಬಲತ್ಕಾರವಾಗಿ ಸುಲಿಗೆ ಮಾಡಿಕೊಂಡು ಹೋಗಿರುವ ಆರೋಪಿತನ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2022 ಕಲಂ: 397 IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಳವು ಪ್ರಕರಣ:

 • ಕುಂದಾಪುರ : ಪಿರ್ಯಾದಿ ಮಂಜುನಾಥ ಜೋಗಿ, ಪ್ರಾಯ:52ವರ್ಷ, ತಂದೆ ದಿ ರಾಮಯ್ಯ ಜೋಗಿ, ವಾಸ: ಶ್ರೀ ದೇವಿ ನಿಲಯ, ವಿನಾಯಕ ನಗರ, ಮುಖ್ಯರಸ್ತೆ, ಕುಂಭಾಶಿ ಗ್ರಾಮ ದಾರರು ಕುಂದಾಪುರ ತಾಲೂಕು ಇವರು ದಿನಾಂಕ 29.07.2022 ರಂದು ರಾತ್ರಿ 08:30 ಗಂಟೆಗೆ ಕುಟುಂಬ ಸಮೇತರಾಗಿ ಪಂಡರಿಪುರ ಮತ್ತು ಶಿರ್ಡಿ ದೇವಸ್ಥಾನಕ್ಕೆ ತೆರಳಿ, ತೀರ್ಥಯಾತ್ರೆ ಮುಗಿಸಿ ದಿನಾಂಕ 05/08/2022 ರಂದು ಬೆಳಿಗ್ಗೆ 04:00 ಗಂಟೆಗೆ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಹಿಂಬದಿಯ ಬಾಗಿಲು ಮತ್ತು ಅಡುಗೆ ಮನೆಯ ಬಾಗಿಲನ್ನು ಒಡೆದು ಮನೆಯ ಕಪಾಟಿನಲ್ಲಿರಿಸಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿ ಮಾಡಿ, ಕಪಾಟಿನಲ್ಲಿದ್ದ 8 ಗ್ರಾಂ ತೂಕದ ಚಿನ್ನದ ಬ್ರಾಸಲೇಟ್-1, 12 ಗ್ರಾಂ ತೂಕದ ಪೆಂಡೇಂಟ್ ಇರುವ ರೋಪ್ ಚೈನ್-1, 4 ಗ್ರಾಂ ತೂಕದ ಬಿಳಿ ಹರಳು ಇರುವ ಚಿನ್ನದ ಉಂಗುರ-1, 3 ಗ್ರಾಂ ತೂಕದ ಪಚ್ಚೆಕಲ್ಲು ಇರುವ ಚಿನ್ನದ ಉಂಗುರ-1, ನಗದು ಹಣ 6000/- ರೂಪಾಯಿ ಮತ್ತು ಡಬ್ಬಿಯಲ್ಲಿದ್ದ 7500 ರೂಪಾಯಿ ನಗದು ಹಣ ಸೇರಿದಂತೆ 1,20,000/- ಮೌಲ್ಯದ ಒಟ್ಟು27 ಗ್ರಾಂ ಚಿನ್ನಾಭರಣಗಳು ಮತ್ತು 13,500/- ರೂಪಾಯಿ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಪಿರ್ಯಾದಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ಠಾಣೆ  ಅಪರಾಧ ಕ್ರಮಾಂಕ : 82/2022 ಕಲಂ: 454, 457, 380 IPC ಯಂತೆ ಪ್ರಕರಣ ದಾಖಿಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣ

 • ಕೋಟ : ಪಿರ್ಯಾದಿ ದುರ್ಗಪ್ಪ (26), ತಂದೆ: ಬರಮಪ್ಪ, ಕಾಟಾಪುರ, ಹನುಮಸಾಗರ, ಕೊಪ್ಪಳ ಇವರು ಸಿ.ಸಿ.ಟಿ. ಕಂಪೆನಿಯಲ್ಲಿ ಟಿಕೆಟ್‌‌‌‌‌‌‌‌‌‌‌ವ ಚೆಕ್ಕಿಂಗ್‌‌‌‌‌‌‌‌ ಕೆಲಸ ಮಾಡಿಕೊಂಡು ದಿನಾಂಕ 05/08/2022 ರಂದು ಬೆಳಿಗ್ಗೆ 08:45 ಗಂಟೆ ಸಮಯಕ್ಕೆ ಕಟಪಾಡಿ ಬಳಿ ಕೆ.ಎ-20-ಡಿ-7945 ನೇ ದುರ್ಗಾಂಬ ಬಸ್ಸಿನಲ್ಲಿ ಕಂಡೆಕ್ಟರ್‌‌‌‌‌‌‌‌‌ ಕೆಲಸ  ಮಾಡಿಕೊಂಡಿದ್ದ ದಿಲೀಪ್‌‌‌‌‌‌‌ನು ನೀಡಿದ  ಟಿಕೆಟ್‌‌‌‌‌‌ನ  ಬಗ್ಗೆ  ಚೆಕ್‌‌‌‌‌‌‌‌‌‌ಮಾಡಿದಾಗ 2  ಪ್ರಯಾಣಿಕರಿಗೆ  ಟಿಕೆಟ್‌‌‌‌‌‌‌‌‌‌ ನೀಡದೆ ಇದ್ದ ಬಗ್ಗೆ ಕಛೇರಿಗೆ  ಮೊಬೈಲ್‌‌‌‌‌‌‌‌‌‌‌‌‌ ಮೂಲಕ  ತಿಳಿಸಿದ್ದು, ಕಂಪೆನಿಯವರು ಆತನನ್ನು ಕಂಡೆಕ್ಟರ್‌‌‌‌‌‌ ಕೆಲಸದಿಂದ  ವಜಾಗೊಳಿಸಿರುತ್ತಾರೆ. ಇದೇ  ವಿಚಾರದಲ್ಲಿ ದಿಲೀಪನು ದಿನಾಂಕ 05/08/2022ರಂದು 16:00 ಗಂಟೆ ಸಮಯಕ್ಕೆ ಸಾಲಿಗ್ರಾಮ ಬಸ್‌‌‌‌‌ಸ್ಟಾಂಡ್‌‌‌‌‌‌‌ ಬಳಿ ಗುರು, ಪವನ ಎಂಬವರನ್ನು  ಕರೆದುಕೊಂಡು ಬಂದು ಸಾಲಿಗ್ರಾಮ  ಬಸ್‌‌‌ಸ್ಟಾಂಡ್‌‌‌‌‌‌‌ ಬಳಿ ನಿಂತಿದ್ದ ಪಿರ್ಯಾದಿದಾರರನ್ನು ತಡೆದು  ನಿಲ್ಲಿಸಿ  ದಿಲೀಪನು  ಪಿರ್ಯಾದಿದಾರರ  ಕೆನ್ನೆಗೆ  ಕೈಯಿಂದ  ಬಲವಾಗಿ  ಹೊಡೆದು ಅವಾಚ್ಯ  ಶಬ್ದಗಳಿಂದ  ಬೈದು ಬಸ್ಸಿನ  ಮಾಲಕರ ಬಳಿ  ಚಾಡಿ ಹೇಳಿ ನಿನ್ನನ್ನು ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 126/2022 ಕಲಂ: 341, 323, 504, 506 ಜೊತೆಗೆ IPC ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಶಂಕರನಾರಾಯಣ : ದಿನಾಂಕ: 05/08/2022 ರಂದು ರಾತ್ರಿ 01:35 ಗಂಟೆಗೆ ಹೆಬ್ರಿ ತಾಲೂಕು ಬೆಳ್ವೆ ಗ್ರಾಮದ  ಹೊನ್ಕಲ್‌‌ಎಂಬಲ್ಲಿನ ಪಿರ್ಯಾದಿ ಶ್ರೀಮತಿ ಜ್ಯೋತಿ ಪ್ರಾಯ 36 ವರ್ಷ ಗಂಡ:ರವಿಚಂದ್ರ ವಾಸ: ಹೊನ್ಕಲ್, ಬೆಳ್ವೆ ಗ್ರಾಮ ಕುಂದಾಪುರ ತಾಲೂಕು ಇವರ ಮನೆಯಲ್ಲಿ ಪಿರ್ಯಾದಿದಾರರ ಗಂಡ ಆರೋಪಿ ರವಿಚಂದ್ರ ಇವರು ಪಿರ್ಯಾದಿದಾರರಿಗೆ  ಅವಾಚ್ಯ ಶಬ್ದಗಳಿಂದ ಬೈದು ಕೈಯಲ್ಲಿ ಹಿಡಿದುಕೊಂಡಿದ್ದ ಕತ್ತಿಯನ್ನು ಬೀಸಿದಾಗ ಪಿರ್ಯಾದಿದಾರರು ತಡೆ ಮಾಡಿದಾಗ  ಪಿರ್ಯಾದಿದಾರರ ಬಲಕೈ ಮೊಣಗಂಟಿನ ಬಳಿ ರಕ್ತಗಾಯವಾಗಿದ್ದು ಕತ್ತಿಯ ತುದಿಯು ಮೂಗಿನ ಬಲಬಾಗಕ್ಕೆ ತಾಗಿ ರಕ್ತಗಾಯವಾಗಿರುತ್ತದೆ. ನಂತರ ಪಿರ್ಯಾದಿದಾರರು ಹತ್ತಿರದಲ್ಲಿರುವ ಅಕ್ಕನ ಮನೆಗೆ ರಕ್ಷಣೆಗೆ ಓಡುವಾಗ  ಪಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನನ್ನು ಕೊಂದೆ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ. ಈ ಬಗ್ಗೆ ಪಿರ್ಯಾದಿದಾರರು ನೀಡಿದ ದೂರನಿಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ: 326, 504, 506 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಪಘಾತ ಪ್ರಕರಣ

 • ಶಂಕರನಾರಾಯಣ : ದಿನಾಂಕ: 21/07/2022 ರಂದು  ಪಿರ್ಯಾದಿ ವಾಸುದೇವ ನಾಯ್ಕ  ಪ್ರಾಯ 37 ವರ್ಷ ತಂದೆ :ಜಟ್ಟ ನಾಯ್ಕ ವಾಸ, ನಾಗ ಲಕ್ಷೀ ಎನಕ್ಲೇವ್ ಬಿದ್ಕಲ್ ಕಟ್ಟೆ ಹಾರ್ದಳ್ಳಿ ಮಂಡಳ್ಳಿ ಗ್ರಾಮ ಕುಂದಾಪುರ ತಾಲೂಕು ಇವರು ಸಂಬಂಧಿಕರ ಮನೆಯಿಂದ ಕೆಎ, 20 ವಿ-8120ನೇ ನಂಬ್ರದ ಮೋಟಾರ್ ಸೈಕಲ್‌ನಲ್ಲಿ  ಹಾಲಾಡಿ  ಕಡೆಗೆ  ಬರಲು ಹೆಬ್ರಿ ತಾಲೂಕಿನ ಬೆಳ್ಬೆ ಗ್ರಾಮದ ಗೋಳಿಯಂಗಡಿ ಎಂಬಲ್ಲಿ ಸುರಭಿ ಪಾನಿಪುರಿ ಅಂಗಡಿ ಎದುರುಗಡೆ ಬರುತ್ತಿರುವಾಗ ಆರೋಪಿ ಗೋಪಾಲ ನು ತನ್ನ ಕೆಎ.20 ಇಎಸ್. 6392ನೇ ಸಂಖ್ಯೆಯ ಮೋಟಾರ್ ಸೈಕಲ್‌ನ್ನು ಗೋಳಿಯಂಗಡಿ ಪೇಟೆಯ ಕಡೆಯಿಂದ ಅತೀ ವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿ ಕೊಂಡು ಬಂದು ಫಿರ್ಯಾದುದಾರರು ಚಲಾಯಿಸುತ್ತಿದ್ದ ಮೋಟಾರ್ ಸೈಕಲ್‌‌ಗೆ ಡಿಕ್ಕಿ ಹೊಡೆದಿರುತ್ತಾನೆ, ಇದರ ಪರಿಣಾಮ ಫಿರ್ಯಾದುದಾರರ ಎಡಕೈಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿರುತ್ತದೆ. ಈ ಬಗ್ಗೆ ನೀಡಲಾದ ದೂರಿನಂತೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 75/2022 ಕಲಂ: 279, 338 ಐ.ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಹೆಬ್ರಿ : ಫಿರ್ಯಾದಿ ನವೀನ್.ಡಿ.ಎನ್ ಪ್ರಾಯ 34 ವರ್ಷ ತಂದೆ: ನಾರಾಯಣ.ಬಿ.ಡಿ ವಾಸ: ಆಕ್ಲಪುರ ಬೆಳ್ಳಿಕೊಪ್ಪ ಗ್ರಾಮ ತೀರ್ಥಹಳ್ಳಿ ತಾಲೂಕು ಶಿವಮೊಗ್ಗ ಜಿಲ್ಲೆ ರವರು ದಿನಾಂಕ 03/08/2022ರಂದು KA 19 C 6659ನೇ ಶ್ರೀ ಗಣೇಶ ಸರ್ವಿಸ್ ಮಿನಿ ಬಸ್ ನಲ್ಲಿ ಮುಂಭಾಗದ ಡೋರಿನ ಬಳಿ ಒಳಗಡೆ ನಿಂತುಕೊಂಡು ಕಾರ್ಕಳದಿಂದ ಶಿವಮೊಗ್ಗಕ್ಕೆ ಹೋಗುತ್ತಿರುವಾಗ ಸಮಯ ಸುಮಾರು ಸಂಜೆ 04:50 ಗಂಟೆಗೆ ಬಸ್ ಹೆಬ್ರಿ ಗ್ರಾಮದ ಹೆಬ್ರಿ ಬಂಟರ ಭವನದ ಬಳಿ ತಿರುವಿನಲ್ಲಿ ಬಸ್ ಚಾಲಕ ಮಂಜುನಾಥ ರವರು ಬಸ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಫಿರ್ಯಾದಿದಾರರು ಬಸ್ಸಿನಿಂದ ಕೆಳಕ್ಕೆ ಮಣ್ಣು ರಸ್ತೆಗೆ ಎಸೆಯಲ್ಪಟ್ಟಿರುತ್ತಾರೆ, ಪರಿಣಾಮ ಅವರ ಬಲಕಾಲಿನ ಮೊಣಗಂಟಿನ ಬಳಿ ಮೂಳೆ ಮುರಿತವಾಗಿರುತ್ತದೆ. ಈ ಬಗ್ಗೆ ನೀಡಿದ ದೂರಿನಂತೆ  ಹೆಬ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 34/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

 • ಮಲ್ಪೆ : ಪಿರ್ಯಾದಿ ಅಜಿತ್ (34), ತಂದೆ: ದೂಮ ಪೂಜಾರಿ, ವಾಸ: ಅಂಗನವಾಡಿ ಶಾಲೆಯ ಹತ್ತಿರ ಬೈಲಕೆರೆ ತೆಂಕನಿಡಿಯೂರು ಗ್ರಾಮ ಇವರ ತಾಯಿ ಸುಶೀಲ( 72 ವರ್ಷ) ರವರು ದಿನಾಂಕ: 30-07-2022 ರಂದು ಬೆಳಿಗ್ಗೆ 09:00 ಗಂಟೆಯ ಸಮಯಕ್ಕೆ ಕಟ್ಟಿಗೆಯ ಒಲೆಯ ಇಟ್ಟಿದ್ದ ಅನ್ನವನ್ನು ಬಾಗಿಸುವ ಸಮಯ ದಲ್ಲಿ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಪಿರ್ಯಾದಿದಾರರ ತಾಯಿಯ ಕಾಲು  ಹಾಗೂ ಸೊಂಟದ ಹಿಂಬಾಗಕ್ಕೆ ಸುಟ್ಟ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆ ಗೆ ದಾಖಲು ಮಾಡಿ ಚಿಕಿತ್ಸೆ ನೀಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುವಾಗ ಆರೋಗ್ಯಸ್ಥಿತಿ ಇನ್ನಷ್ಟು ಉಲ್ಬಣಗೊಂಡು ಬಿಪಿ ಕಡಿಮೆಯಾಗಿದ್ದು, ಆ ಸಮಯ ವೈದ್ಯರ ಸಲಹೆಯ ಮೇರೆಗೆ  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಕೆಎಂಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದು, ದಿನಾಂಕ: 05-08-2022 ರಂದು ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಬೆಳಿಗ್ಗೆ 7:50 ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಿರ್ಯಾದಿದಾರರು ನೀಡಿದ ದೂರಿನಂತೆ  ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್ ಸಂಖ್ಯೆ 41/2022 ಕಲಂ. 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
 • ಹೆಬ್ರಿ : ಪಿರ್ಯಾದಿ ರಕ್ಷಿತ್ ಕುಮಾರ್ (24), ತಂದೆ: ಶೇಖರ ನಾಯ್ಕ್, ವಾಸ: ಸುಭಾಷಿತ, ಕೆಲಕಿಲ ರಸ್ತೆ,ಮುದ್ರಾಡಿಗ್ರಾಮ, ಹೆಬ್ರಿ ತಾಲೂಕು ಇವರ ತಂದೆ ಶೇಖರ ನಾಯ್ಕ (ಪ್ರಾಯ 59 ವರ್ಷ 10 ತಿಂಗಳು) ರವರು ಹಿರಿಯ ಪಶು ವೈದ್ಯಕೀಯ ಪರೀಕ್ಷಕರಾಗಿ ಮುದ್ರಾಡಿ ಪಶು ಚಿಕಿತ್ಸಾ ಕೇಂದ್ರದಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ: 05/08/2022 ರಂದು ಶಿವಪುರ ಗ್ರಾಮದ ಸೂರಿಮಣ್ಣು ಎಂಬಲ್ಲಿ ಉದಯ ಎಂಬುವವರ ಮನೆಯಲ್ಲಿ ಜಾನುವಾರಿಗೆ ಇಂಜೆಕ್ಷನ್ ನೀಡಿ ಕೈತೊಳೆದು ಮಧ್ಯಾಹ್ನ ಸಮಯ ಸುಮಾರು 03:55 ಗಂಟೆಗೆ ಹೊರಡಲು ಪ್ರಯತ್ನಿಸಿದಾಗ ಅವರಿಗೆ ತಲೆ ತಿರುಗಿದ ಕಾರಣ ಅವರು ಅಲ್ಲಿಯೇ ಕುಳಿತು ಕೊಂಡವರು ಕುಸಿದು ಬಿದ್ದು ಮಾತನಾಡದ ಕಾರಣ ಅವರನ್ನು ಒಂದು ಕಾರಿನಲ್ಲಿ ಸಂಜೆ ಸಮಯ ಸುಮಾರು 05:00 ಗಂಟೆಗೆ ಹೆಬ್ರಿ ಸರಕಾರಿ ಆಸ್ಪತ್ರೆಗೆ ಕರೆ ತಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಪಿರ್ಯಾದಿದಾರರು ನೀಡಿದ ದೂರಿನಂತೆ ಹೆಬ್ರಿ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 24/2022 U/s 174 Crpc ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 06-08-2022 10:44 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080