ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ ಪ್ರಕಾಶ್  ನಾಯ್ಕ್ ಇವರು ದಿನಾಂಕ: 05/08/2022 ರಂದು ಸಂಜೆ 5:00 ಗಂಟೆಯವರೆಗೆ ತನ್ನ ಶಿವಪುರದ ಚಿಕ್ಕಮ್ಮ ಸುಗಂಧಿನಾಯ್ಕ್ ರವರ ಬಾಬ್ತು ಹಡಿಲು ಬಿದ್ದ ಜಾಗದ ಕೃಷಿ ಕೆಲಸ ಮಾಡಿ ಅಲ್ಲಿಂದ ಪಿರ್ಯಾದುದಾರರ ಹೆಂಡತಿಯ ಅಕ್ಕನ ಗಂಡ ಬಾಸ್ಕರ್‌ ನಾಯ್ಕ್ ರವರ ಬಾಬ್ತು   KA-20-EY-9019ನೇ ಸ್ಕೂಟರ್‌ನಲ್ಲಿ ಪಿರ್ಯಾದುದಾರರು ಸವಾರನಾಗಿ ಭಾಸ್ಕರ್ ನಾಯ್ಕ್ ರವರು ಸಹಸವಾರನಾಗಿ  ರಾಹೆ. 169 ಎ ರಲ್ಲಿ ಶಿವಪುರದಿಂದ  ಮಣಿಪಾಲಕ್ಕೆ ಹೊರಟಿದ್ದು  ಓಂತಿಬೆಟ್ಟು ಪ್ರಕಾಶ್ ಎಂಬವರ ಹೊಲ್‌ಸೆಲ್ ಅಂಗಡಿಯ ಬಳಿ ತಲುಪುವಾಗ  ಉಡುಪಿ ಕಡೆಯಿಂದ ಒಂದು ಒಮ್ನಿ ಕಾರನ್ನು ಅದರ ಚಾಲಕ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೆ ಹೊಲ್‌ಸೆಲ್ ಅಂಗಡಿಯ ಕಡೆಗೆ ಬಲಕ್ಕೆ ತಿರುಗಿಸಿ  ಪಿರ್ಯಾದುದಾರರ ಸ್ಕೂಟರ್ ಗೆ ಡಿಕ್ಕಿ ಹೊಡೆದನು. ಪರಿಣಾಮ  ಇಬ್ಬರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದುದಾರರಿಗೆ ಹಣೆಗೆ, ಬಲಕಣ್ಣಿಗೆ ಪೆಟ್ಟಾಗಿದ್ದು, ತಲೆಗೆ ಬಲಕಾಲಿಗೆ  ತರಚಿದ ಗಾಯವಾಗಿರುತ್ತದೆ. ಭಾಸ್ಕರ್ ನಾಯ್ಕ್ ರವರಿಗೆ ಎಡಕೈಗೆ , ಬಲಕೈಗೆ ಮೂಳೆ ಮುರಿತದ  ಪೆಟ್ಟಾಗಿದ್ದು  ಗಲ್ಲಕ್ಕೆ ಕೂಡ ರಕ್ತಗಾಯವಾಗಿರುತ್ತದೆ. ಈ ಅಪಘಾತ ಸಂಭವಿಸುವಾಗ ಸಮಯ ಸುಮಾರು ಸಂಜೆ 5:45 ಗಂಟೆಗೆ ಆಗಿದ್ದು ಓಮ್ನಿ ಕಾರು ನಂಬ್ರ KA-20-P-7036 ಆಗಿದ್ದು ಅದರ ಚಾಲಕನ ಹೆಸರು ಉದಯ ಆಗಿರುತ್ತದೆ.  ಈ ಬಗ್ಗೆ ಹಿರಿಯಡ್ಕ ಪೊಲೀಸ್‌ಠಾಣೆ  ಅಪರಾಧ ಕ್ರಮಾಂಕ : 41/2022 ಕಲಂ:  279,337,338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ

  • ಅಜೆಕಾರು: ಪ್ರತಿವಾದಿ 1.) ಚಾರ್ಲ್ ಮಾಥ್ಯೂ (39) ತಂದೆ: ಮಥಾಯಿವಾಸ : ಪುಲ್ಲಾಟ್ ಹೌಸ್ ತೆಳ್ಳಾರ್ ಅಂಚೆ ದುರ್ಗಾ ಗ್ರಾಮ ಕಾರ್ಕಳ ತಾಲೂಕು2.) ಮಥಾಯಿ (66) ತಂದೆ : ಮಾಥ್ಯೂ ವಾಸ : ಪುಲ್ಲಾಟ್ ಹೌಸ್ ತೆಳ್ಳಾರ್ ಅಂಚೆ ದುರ್ಗಾ ಗ್ರಾಮ ಕಾರ್ಕಳ ತಾಲೂಕು ಇವರುಗಳು  ಕಾರ್ಕಳ ತಾಲೂಕು ದುರ್ಗ ಗ್ರಾಮದ ತೆಳ್ಳಾರಿನ ನಿವಾಸಿಯಾಗಿರುತ್ತಾರೆ. ಮುಂಡ್ಲಿ ಗ್ರಾಮದ ಜೆ.ವಿ.ಪಿ ಪ್ರಾಜೆಕ್ಟ್ ಪೈ ಲಿ,ನಲ್ಲಿ ವಿದ್ಯುತ್ ಉತ್ಪಾದಿಸಲು ನೀರು ತಡೆ ಮಾಡಿದ ಗೇಟನ್ನು ತೆಗೆಯದೇ ಮಳೆಯ ನೀರು ಪ್ರತಿವಾದಿಯವರ ತೋಟಕ್ಕೆ ಹೋಗುತ್ತಿರುವುದಾಗಿ  ತಮ್ಮ ತೋಟಕ್ಕೆ ನೀರು ಬಾರಬಾರದಂದು ಸದ್ರಿ ಪ್ರಾಜೆಕ್ಟ್ ನಲ್ಲಿ ವಿದ್ಯುತ್ ಉತ್ಪಾದಿಸಲು ನೀರು ತಡೆ ಮಾಡಿದ ಗೇಟನ್ನು ತೆಗೆಯವರೇ ಪದೇ ಪದೇ ಪ್ರಾಜೆಕ್ಟ್ ನ ಪರಿಸರದಲ್ಲಿ ಗಲಾಟೆ ಮಾಡುತ್ತಾರೆ.  ಪ್ರತಿವಾದಿಯವರ ಕಿರುಕುಳ ತಾಳಲಾರದೆ ಜೆ.ವಿ.ಪಿ ಪ್ರಾಜೆಕ್ಟ್ ಪೈ ಲಿ,ನಲ್ಲಿ ಇಲೆಕ್ಟ್ರಿಷನ್ ಕೆಲಸ ಮಾಡುತ್ತಿರುವ ನಾಗೇಶ ಎಂಬವರು ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ದೂರು ಅರ್ಜಿಗೆ ಸಂಬಂದಿಸಿ ಎರಡೂ ಕಡೆಯವರನ್ನು ಸಮಕ್ಷಮ ವಿಚಾರಣೆ ನಡೆಸಿ ಸ್ಥಳದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಹಾಗೂ ನೀರಿನ ಹರಿವಿನ ಬಗ್ಗೆ ನಿಮ್ಮೊಳಗೆ ಇತ್ಯರ್ಥಪಡಿಸಿಕೊಳ್ಳುವಂತೆ ಇಲ್ಲವೇ ಸಂಬಂಧಪಟ್ಟ ಇಲಾಖೆ/ ನ್ಯಾಯಾಲಯದಲ್ಲಿ ವ್ಯವಹರಿಸಿ ಬಗೆಹರಿಸಿಕೊಳ್ಳುವಂತೆಯೂ ಅಲ್ಲದೇ ಸ್ಥಳದಲ್ಲಿ ಯಾವುದೇ ತಂಟೆ ತಕ್ಷೀರಿಗೆ ಅವಕಾಶ ನೀಡದಂತೆ ಸೂಕ್ತ ತಿಳುವಳಿಕೆ ನೀಡಲಾಗಿರುತ್ತದೆ. ಪ್ರತಿವಾದಿಗಳು ಜಾರ್ಕಳ-ಮುಂಡ್ಲಿ ಗ್ರಾಮದ ಜೆ.ವಿ.ಪಿ ಪ್ರಾಜೆಕ್ಟ್ ಪೈ ಲಿ, ಪ್ರಾಜೆಕ್ಟ್  ನಲ್ಲಿ ವಿದ್ಯುತ್ ಉತ್ಪಾದಿಸಲು ನೀರು ತಡೆ ಮಾಡಿದ ಗೇಟನ್ನು ತೆಗೆಯದಿದರೇ ವಿಪರೀತ ಮಳೆಯ ಬಂದರೆ ಮಳೆನೀರು ಪ್ರತಿವಾದಿಯವರ ತೋಟಕ್ಕೆ ಹೋದಾಗ ಪ್ರತಿವಾದಿಯವರು ಪದೇ ಪದೇ ಜೆ.ವಿ.ಪಿ ಪ್ರಾಜೆಕ್ಟ್ ಪೈ ಲಿ, ಪ್ರಾಜೆಕ್ಟ್  ಗೆ ಹೋಗಿ ತಕರಾರು ತೆಗೆದು ಸ್ಥಳದಲ್ಲಿ ತಂಟೆ - ತಕರಾರು ಮಾಡಿ ಶಾಂತಿ ನೆಮ್ಮದಿಗೆ ಭಂಗ ತಂದು ಶಾಂತಿ ಕದಡುವ ಅಲ್ಲದೇ ಸ್ಥಳದಲ್ಲಿ ಯಾವುದೇ ಸಂದರ್ಭದಲ್ಲಿ  ಹಲ್ಲೆ, ದೊಂಬಿಯಂತಹ ಕೃತ್ಯಗಳನ್ನು ಮಾಡುವ ಸಾಧ್ಯತೆ ಇರುತ್ತದೆ. ಅಲ್ಲದೆ ಈ ಪರಿಣಾಮ ಸ್ಥಳದಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗವುಂಟಾಗುವ ಹಾಗೂ ಆಸ್ತಿ ಪಾಸ್ತಿಗಳಿಗೆ ನಷ್ಟವುಂಟಾಗುವ ಸಾಧ್ಯತೆ ಇರುತ್ತದೆ. ಪ್ರತಿ ವಾದಿಯವರು  ಸ್ಥಳೀಯ ರಾಜಕೀಯ ಮುಖಂಡರ ಬೆಂಬಲ ಹೊಂದಿದ್ದು ಧನ ಬಲ ಹಾಗೂ ಜನ ಬಲವನ್ನು ಹೊಂದಿದ್ದು ಯಾವುದೇ ಕ್ರಿಮಿನಲ್‌ ತಕ್ಷೀರು ನಡೆಸಲು ಹಿಂಜರಿಯದ ಪ್ರವೃತ್ತಿಯವರಾಗಿರುತ್ತಾರೆ.ಆದ್ದರಿಂದ ಪ್ರತಿವಾದಿಯವರು ಪರಿಸರದಲ್ಲಿ ಸಾರ್ವಜನಿಕ ನೆಮ್ಮದಿಗೆ ಭಂಗ ಬಾರದಂತೆ  ಯಾವುದೇ  ತಕರಾರು ತಕ್ಷೀರು ನಡೆಸದೇ ಸ್ಥಳದಲ್ಲಿ ಶಾಂತಿ ಮತ್ತು ಸು-ವ್ಯವಸ್ಥೆ ಕಾಪಾಡಿಕೊಂಡು ಇರುವಂತೆ ಪ್ರತಿ ವಾದಿಯವರಿಂದ ಕಲಂ:107, 116(3) ದಂಡ ಪ್ರಕ್ರೀಯಾ ಸಂಹಿತೆಯಂತೆ  ಸೂಕ್ತ ಜಾಮೀನು ಮುಚ್ಚಳಿಕೆಯನ್ನು ಪಡೆದುಕೊಳ್ಳುವರೇ ಅಜೆಕಾರು ಪೊಲೀಸ್‌ಠಾಣೆ  ಅಪರಾಧ ಕ್ರಮಾಂಕ :  06/2022 ಕಲಂ 107 ,116 (3) ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಗಂಡಸು ಕಾಣೆ ಪ್ರಕರಣ

  • ಕೊಲ್ಲೂರು: ಸಾಜು ಕೆ. ಎಮ್  (47 ವರ್ಷ) ರವರು ತಾನು ಸಂಸಾರದೊಂದಿಗೆ ವಾಸವಾಗಿರುವ ಬೈಂದೂರು ತಾಲೂಕು ಜಡ್ಕಲ್  ಗ್ರಾಮದ ಬೀಸಿನಪಾರೆ ಎಂಬಲ್ಲಿಂದ  ದಿನಾಂಕ: 31-07-2022  ರಂದು ಬೆಳಿಗ್ಗೆ 08:45 ಗಂಟೆಗೆ ಮನೆಯಿಂದ ಎನ್. ಆರ್ ಪುರಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೋದವರು  ಈ ತನಕ ಮನೆಗೆ ವಾಪಾಸ್ಸು ಬಾರದೇ, ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ಠಾಣೆ  ಅಪರಾಧ ಕ್ರಮಾಂಕ : 34/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ; ಬ್ರಹ್ಮಾವರ  ತಾಲೂಕು, ಹಂದಾಡಿ ಗ್ರಾಮ, ಮಕ್ಕಿಮನೆ ಎಂಬಲ್ಲಿ ವಾಸವಾಗಿರುವ ಬಾಬು ಪೂಜಾರಿ ಯವರು ಕೃಷಿ ಕೂಲಿ ಕೆಲಸ ಮಾಡಿಕೊಂಡಿದ್ದು, ಅವರು ದಿನಾಂಕ: 04.08.2022 ರಂದು ಸಂಜೆ 7:30 ಗಂಟೆಯಿಂದ ದಿನಾಂಕ 06.08.2022 ರ ಬೆಳಿಗ್ಗೆ  6:00 ಗಂಟೆಯ ಮಧ್ಯಾವಧಿಯಲ್ಲಿ ಮಗಳ ಮನೆಗೆ ಹೋಗುವರೇ ಅವರ ಮನೆಯಿಂದ ಸ್ವಲ್ಪ ದೂರದಲ್ಲಿ ರಸ್ತೆ ಬದಿಯಲ್ಲಿರುವ ಮರಿಕೆರೆ ಎಂಬ ಶಿವಣ್ಣ ಶೆಟ್ಟಿಯವರ ಮನೆಯ ಪಕ್ಕದಲ್ಲಿ ಇರುವ ಕೆರೆಯ ಸಮೀಪ ನಡೆದುಕೊಂಡು ಹೋಗುವಾಗ ಗಾಳಿ ಮಳೆ ರಭಸಕ್ಕೆ ಆಕಸ್ಮಿಕವಾಗಿ ಕಾಲು ಜಾರಿ ಕೆರೆ ನೀರಿಗೆ ಬಿದ್ದು ಮುಳುಗಿ ಮೃಪಟ್ಟಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ಠಾಣೆ ಯು.ಡಿ.ಆರ್ 35/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ: ಶ್ರೀ ಸತೀಶ್ ಬಂಗೇರ ಇವರಿಗೆ 45 ವರ್ಷ ಪ್ರಾಯವಾಗಿದ್ದು ಅವರು ಕೃಷಿ ಕೆಲಸ ಮಾಡಿಕೊಂಡಿದ್ದು ಕಾರ್ಕಳ ತಾಲೂಕು ಇರ್ವತ್ತೂರು ಗ್ರಾಮದ ಪಾಲ್ದಂಟು ಎಂಬಲ್ಲಿ ದಿನಾಂಕ: 05/08/2022 ರಂದು ಬೆಳಿಗ್ಗೆ 09:00 ಗಂಟೆಗೆ ಮನೆಯ ಬಳಿ ಇರುವ ಅವರ ಗದ್ದೆಯಲ್ಲಿ ಕೃಷಿ ಕೆಲಸ ಮಾಡಿಕೊಂಡಿದ್ದವರು ಮಧ್ಯಾಹ್ನ ಊಟಕ್ಕೆ ಹೋಗುವ ಬಗ್ಗೆ ಗದ್ದೆಯ ಬಳಿಯ ತೋಡಿನಲ್ಲಿ ಕೈಕಾಲು ತೊಳೆಯುತ್ತಿರುವಾಗ ನಿನ್ನೆ ಸುರಿದ ವಿಪರೀತ ಮಳೆಯಿಂದ ತೋಡಿನಲ್ಲಿ ತುಂಬಿ ಹರಿಯುತ್ತಿದ್ದ ತೋಡಿನ ನೀರಿನ ಸೆಳೆತಕ್ಕೆ ಸಿಕ್ಕಿ ಸುಮಾರು 200 ಮೀಟರ್ ದೂರ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ಠಾಣೆ ಯು.ಡಿ.ಆರ್ 25/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕೋಟ ರತ್ನ(67ವರ್ಷ) ರವರು ಸುಮಾರು 20 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು  ಈ ಬಗ್ಗೆ  ಚಿಕಿತ್ಸೆ ಪಡೆಯುತ್ತಿದ್ದರು. ದಿನಾಂಕ: 01/08/2022 ರಂದು 1.00 ಗಂಟೆಯಿಂದ 02.00 ಗಂಟೆಯ  ಮಧ್ಯಾವಧಿಯಲ್ಲಿ ಇಲಿ ಪಾಷಾಣ ಸೇವಿಸಿ ವಾಂತಿ ಮಾಡಿಕೊಂಡವರನ್ನು ಕೂಡಲೇ  ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ  ಉಡುಪಿ ಅಜ್ಜರ ಕಾಡು ಆಸ್ಪತ್ರೆಗೆ  ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾರೆ.  ದಿನಾಂಕ 05/08/2022 ರಂದು ರಾತ್ರಿ 9.21 ಗಂಟೆಗೆ  ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ಠಾಣೆ ಯು.ಡಿ.ಆರ್ 34/2022 ಕಲಂ: 174 ಸಿ.ಆರ್‌.ಪಿ.ಸಿ  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 06-08-2022 05:57 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080