ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಮಂಜುನಾಥ ಖಾರ್ವಿ (47). ತಂದೆ: ರಾಮ ಖಾರ್ವಿ, ವಾಸ; ದೊಡ್ಮನೆ, ಕೊಡೇರಿ, ಕಿರಿಮಂಜೇಶ್ವರ ಗ್ರಾಮ, ಬೈಂದೂರು ತಾಲೂಕು ಇವರು ದಿನಾಂಕ 03/08/2021 ಮಧ್ಯಾಹ್ನ 03:30 ಗಂಟೆಗೆ ಮಗ ಕ್ರಿಶಾನ್ ಪ್ರಾಯ ಏಂಟೂವರೆ ವರ್ಷದವರನ್ನು ಜೊತೆಯಲ್ಲಿ ಕರೆದುಕೊಂಡು ಮನೆಯ ಹತ್ತಿರದ ರಾಮ ಎಂಬುವವರ ಅಂಗಡಿಗೆ ಸಾಮಾನು ತರಲು ನಡೆದುಕೊಂಡು ರಸ್ತೆಯ ಎಡಬದಿಯ ಮಣ್ಣು ರಸ್ತೆಯಲ್ಲಿ ಪಿರ್ಯಾದಿದಾರರು ಮುಂದಿನಿಂದ ಹೋಗುತ್ತಿದ್ದು ಅವರ ಹಿಂದಿನಿಂದ ಕ್ರಿಶಾನ್ ಬರುತ್ತಿರುವಾಗ ಕುರುಡನ ಮನೆ ಸಮೀಪ ನಾಗೂರು ಕಡೆಯಿಂದ ಕೊಡೇರಿ ಕಡೆಗೆ KA-20-EP-3136 ನೇ ಮೋಟಾರ್ ಸೈಕಲ್ ಸವಾರ ಸುರೇಶ ಮೋಟಾರ್ ಸೈಕಲನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಹಿಂದಿನಿಂದ ಬರುತ್ತಿದ್ದ ಕ್ರಿಶಾನ್ ನಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕ್ರಿಶಾನ್ ರಸ್ತೆಗೆ ಬಿದ್ದು ಆತನ ಎಡಕಾಲಿಗೆ ಒಳಜಖಂವುಂಟಾಗಿದ್ದು, ನಂತರ ಕ್ರಿಶಾನ್ ನನ್ನು ಶ್ರೀದೇವಿ ನರ್ಸಿಂಗ್ ಹೋಮ್ ಗೆ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರಲ್ಲಿ ಪರೀಕ್ಷಿಸಿದಾಗ ವೈದ್ಯರು ಕ್ರಿಶಾನ್ ಗೆ ಎಡಕಾಲಿನ ಮೂಳೆ ಮುರಿತದ ಗಾಯವಾಗಿರುವುದರಿಂದ ಕ್ರಿಶಾನ್ ನನ್ನು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 123/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 03/08/2021 ರಂದು ಸಂಜೆ 5:30 ಗಂಟೆಗೆ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದ ಮುಗೇರ್ಕಳ ಎಂಬಲ್ಲಿ ಹಾದು ಹೋಗುವ ರೆಂಜಾಳ-ನೆಲ್ಲಿಕಾರು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಮೋಟಾರು ಸೈಕಲ್ ನಂಬ್ರ KA-20-EU-7974 ನೇಯದರ ಸವಾರ ಪ್ರವೀಣ ಎಂಬಾತನು ಶ್ರೀಮತಿ ಗಂಗಮ್ಮ ಎಂಬುವವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ರೆಂಜಾಳ ಮುದ್ದು ಕೃಷ್ಣ ಇಂಡಸ್ಟ್ರೀಸ್ ಕಡೆಯಿಂದ ಪಾಜಾಲು ಕಡೆಗೆ ಅತಿವೇಗವಾಗಿ ಸವಾರಿ ಮಾಡಿಕೊಂಡು ಹೋಗುವಾಗ ಜೋರಾಗಿ ಗಾಳಿ, ಮಳೆ ಬಂದ ಕಾರಣ ಸಹಸವಾರರು ಕೈಯ್ಯಲ್ಲಿದ್ದ ಕೊಡೆಯನ್ನು ಬಿಡಿಸುತ್ತಿರುವಾಗ ಗಾಳಿಯ ರಭಸಕ್ಕೆ ಕೊಡೆಯು ಒಮ್ಮೆಲೇ ಮೇಲಕ್ಕೆ ಹಾರಿದ್ದರಿಂದ ಹಿಂಬದಿ ಕುಳಿತ್ತಿದ್ದ ಮಹಿಳೆಯು ಡಾಮಾರು ರಸ್ತೆಗೆ ಬಿದ್ದು ತಲೆಯ ಹಿಂಭಾಗಕ್ಕೆ ಒಳ ನೋವು ಆದವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ಜ್ಯೋತಿ ಸಮೀಪ ಇರುವ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು, ಗಂಗಮ್ಮರವರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ದಿನಾಂಕ 05/08/2021 ರಂದು ಬೆಳಗ್ಗೆ 10:30 ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 93/2021 ಕಲಂ: 279, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣಗಳು

  • ಕೋಟ: ಪಿರ್ಯಾದಿದಾರರಾದ ನಿರುಪಮಾ ಎಂ .ಕೆ (45), ತಂದೆ:ಎಸ್ ಕುಶಲ ಶೆಟ್ಟಿ, ವಾಸ: ಯಶಸ್ವಿನಿ  ಕರಾವಳಿ ರೋಡ್ ಗಿಳಿಯಾರು ಗ್ರಾಮ ಬ್ರಹ್ಮಾವರ ತಾಲೂಕು ಇವರು ಸರ್ಕಾರಿ ವೈದ್ಯಾಧಿಕಾರಿಯಾಗಿದ್ದು , ಪಿರ್ಯಾದಿದಾರರ ಮನೆಯವರಿಗೂ ಹಾಗೂ ಶ್ರೀಮತಿ ಜಾಹ್ನವಿ  ಮಯ್ಯ ಇವರಿಗೂ ಜಾಗದ ವಿಚಾರದಲ್ಲಿ ತಕರಾರಿದ್ದು, ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ.  ದಿನಾಂಕ 05/08/2021 ರಂದು ಪಿರ್ಯಾದಿದಾರರು ಅವರ ತಂದೆ ಬೆಳಿಗ್ಗೆ 11:30 ಗಂಟೆಯ ಸಮಯಕ್ಕೆ  ಕೋಟ ಸಂತೆಗೆಂದು ಹೋದಾಗ ,ಸಂತೆಯಲ್ಲಿ  ಶ್ರೀಮತಿ ಜಾಹ್ನವಿ ರವರ ದೂರದ ಸಂಬಂಧಿಯಾದ ಅನಂತ ಪದ್ಮನಾಭ ಐತಾಳರು ಪಿರ್ಯಾದಿದಾರರಿಗೂ ಹಾಗೂ ಅವರ ತಂದೆಗೂ ದಾರಿಗೆ ಅಡ್ಡ ಕಟ್ಟಿ ನಿಂತು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಪಿರ್ಯಾದಿದಾರರ ತಂದೆಯ ಎದೆಗೆ ಕೈ ಹಾಕಿ ನೆಲಕ್ಕೆ ತಳ್ಳಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 146/2021 ಕಲಂ: 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಕೋಟ: ಪಿರ್ಯಾದಿದಾರರಾದ ಅನಂತ ಪದ್ಮನಾಭ ಐತಾಳ್ (57), ತಂದೆ: ಕೆ ಮಹಾಬಲ ಐತಾಳ, ವಾಸ: ಕೋಟ ಬಳಿ ಗಿಳಿಯಾರು ಗ್ರಾಮ ಬ್ರಹ್ಮಾವರ ತಾಲೂಕು ಇವರು ಕುಂದಾಪುರದಲ್ಲಿ ನ್ಯಾಯವಾದಿಯಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು,  ದಿನಾಂಕ 05/08/2021 ರಂದು ಬೆಳಿಗ್ಗೆ  11:15  ಗಂಟೆಯ ಸಮಯಕ್ಕೆ  ಕೋಟ ಸಂತೆಗೆಂದು ಹೋದಾಗ ,ಸಂತೆಯಲ್ಲಿ  ಹಣ್ಣು ಖರೀದಿಸುತ್ತಿರುವಾಗ ಪಿರ್ಯಾದಿದಾರರ ಪರಿಚಯದ ಕುಶಲ ಶೆಟ್ಟಿ ಹಾಗೂ ಅವರ ಮಗಳು ಸರಕಾರಿ ವೈದ್ಯಾಧಿಕಾರಿ ಡಾ. ನಿರುಪಮಾ ಹಾಗೂ ಕುಶಲ ಶೆಟ್ಟಿಯವರ ಮೊಮ್ಮಗಳು ಪಿರ್ಯಾದಿದಾರರನ್ನು ಅಡ್ಡಗಟ್ಟಿ ಸುತ್ತುವರೆದು ತಡೆದು ನಿಲ್ಲಿಸಿ  ಬೈದು ಅವಮಾನಿಸಿರುತ್ತಾರೆ. ಅಲ್ಲದೇ ಕುಶಲ ಶೆಟ್ಟಿಯವರ ಮಗಳು ಮತ್ತು ಮೊಮ್ಮಗಳು ಏಕಾಏಕಿ ಪಿರ್ಯಾದಿದಾರರ  ಹಿಂದಿನಿಂದ ಬಂದು ಬೆನ್ನಿಗೆ ಹೊಡೆದು ಜೀವ ಬೆದರಿಕೆ ಹಾಕಿರುರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 147/2021 ಕಲಂ: 341, 323, 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 04/08/2021 ರಂದು ಶಂಕರನಾರಾಯಣ ವಲಯದ ಮೊಳಹಳ್ಳಿ ಘಟಕದ ಉಪವಲಯ ಅರಣ್ಯಾಧಿಕಾರಿ ಮಂಜುನಾಥ ಜಿ ನಾಯಕ್ ರವರು ಸಿಬ್ಬಂದಿಯವರ ಜೊತೆ ಇಲಾಖಾ ವಾಹನದಲ್ಲಿ  ರಾತ್ರಿ ಗಸ್ತು ತಂಡದೊಂದಿಗೆ ಬೆಳಗ್ಗಿನ ಜಾವ 03:50 ರ ಸಮಯದಲ್ಲಿ  ಶಿರಿಯಾರ ದಿವಾಳಿ ಜಡ್ಡು ರಸ್ತೆಯಲ್ಲಿ  ಶಿರಿಯಾರ ಮೇಲ್ಮನೆ ಎಂಬಲ್ಲಿ ಕಾಡು ಪ್ರಾಣಿಗಳನ್ನು ಬೇಟೆಯಾಡುವ ವ್ಯಕ್ತಿಗಳ ಬಗ್ಗೆ ಕಾಯುತ್ತಿರುವಾಗ  ಬೆಳಿಗ್ಗೆ 06:15 ಸಮಯದಲ್ಲಿ  ದಿವಾಳಿ ಜಡ್ಡು ಕಾಂಕ್ರಿಟ್ ರಸ್ತೆಯಿಂದ ಎಡಭಾಗದ ಮಣ್ಣಿನ ರಸ್ತೆಯ ಹಾಡಿಯೊಳಗೆ ಒಂದು ದ್ವಿಚಕ್ರ ವಾಹನವೊಂದು ಹೋಗಿರುವುದನ್ನು ಗಮನಿಸಿದ್ದು ವಾಹನ ಹೋದ ಮಾರ್ಗದಲ್ಲಿ ಸಂಚರಿಸಿ ನೋಡಲಾಗಿ 40 ಮೀಟರ್ ದೂರದಲ್ಲಿ ವಾಹನ ನಿಂತಿರುವುದು ಕಂಡು ಬಂದಿದ್ದು, ಸ್ವಲ್ಪ ಸಮಯದಲ್ಲಿ  ವಾಹನದತ್ತ ಕಪ್ಪು ಬಣ್ಣದ ಪ್ಲಾಸ್ಟಿಕ್ ಕವರಿನೊಂದಿಗೆ ಬಂದಿರುವ ರೈನ್ ಕೊಟ್ ಧರಿಸಿರುವ ಇಬ್ಬರು ವ್ಯಕ್ತಿಗಳನ್ನು ತಡೆದು ನಿಲ್ಲಿಸಿ ವಿಚಾರಿಸಿ ಪರಿಶೀಲಿಸಿದಾಗ ಹಿಂದಿನ ರಾತ್ರಿ ಕಾಡು ಹಂದಿಯ ಬೇಟೆಗೆ ಇಟ್ಟಿರುವ ನಾಡ ಗುಂಡುಗಳನ್ನು ಸಂಗ್ರಹಿಸಲು ಮತ್ತು ಹಂದಿ ಸತ್ತಿರುವ ಬಗ್ಗೆ ನೋಡಲು ಬಂದಿರುವುದಾಗಿ ತಿಳಿಸಿದ್ದು ಸಂಗ್ರಹಿಸಿದ ಹಾಗೂ ಅಲ್ಲಯೇ  ಸಮೀಪದಲ್ಲಿ ಇರಿಸಿದ ನಾಡ ಗುಂಡುಗಳನ್ನು ತೋರಿಸಿರುವುದರಿಂದ  ವನ್ಯ ಜೀವಿಗಳನ್ನು ಭೇಟೆಯಾಡಲು ನಡಸುತ್ತಿರುವ ಪ್ರಯತ್ನವೆಂದು ಪರಿಗಣಿಸಿ ಆರೋಪಿಳಾದ 1.ಕೆ ಎಸ್ ಶೇಷಾದ್ರಿ ಯಾನೆ   ಸುರೇಂದ್ರ ಪ್ರಾಯ 41 ವರ್ಷ  C/O ರಘು ಶೆಟ್ಟಿ ವಾಸ: ಬೆಳಗೋಡು ಕೆದೂರುಗ್ರಾಮ ಮತ್ತು ಅಂಚೆ ಕುಂದಾಪುರ ತಾಲೂಕು, 2. ಸುಧಾಕರ ಪ್ರಾಯ 30 ವರ್ಷ ತಂದೆ: ಶಂಕರ ಪೂಜಾರಿ ವಾಸ: ಹೆಸ್ಕತ್ತೂರು ಅಂಚೆ ಕೊರ್ಗಿ ಗ್ರಾಮ ಕುಂದಾಪುರ ತಾಲೂಕು ಇವರನ್ನು ದಸ್ತಗಿರಿ ಮಾಡಿ  ಜೀವಂತ 07  ಜೀವಂತ ನಾಡ  (ಹಂದಿ) ಗುಂಡುಗಳೊಂದಿಗೆ  ಹಸ್ತಾಂತರಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 148/2021 ಕಲಂ: 9(B)(1)(b)  ಸ್ಪೋಟಕ ಕಾಯಿದೆ 1984 ರಂತೆ ಪ್ರಕರಣ ದಾಖಲಾಗಿರುತ್ತದೆ.    
  • ಉಡುಪಿ: ಆರೋಪಿಗಳಾದ 1)ಶ್ರೀಮತಿ.ಅಮಿತಾ ಶೆಟ್ಟಿ(33),ಗಂಡ: ಸುರೇಶ ಶೆಟ್ಟಿ, ವಾಸ:ಗಿರಿಜಾನಿಲಯಮಣೂರು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ, 2)ಸುರೇಶ ಶೆಟ್ಟಿ(44), ತಂದೆ: ಮಂಜಯ್ಯ ಶೆಟ್ಟಿ, ವಾಸ: ಗಿರಿಜಾ ನಿಲಯ, ಮಣೂರು ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರುಗಂಡ ಹೆಂಡತಿಯಾಗಿದ್ದು, ಪಿರ್ಯಾದುದಾರರಿಗೆ ಪರಿಚಯವಾಗಿದ್ದು, ಆರೋಪಿ ಅಮಿತಾ ಶೆಟ್ಟಿ ಇವರ ಹೆಸರಿನಲ್ಲಿ  ಉಡುಪಿ ನಗರ ಸಭಾ ವ್ಯಾಪ್ತಿಯ ಕೊಡಂಕೂರು ವಾರ್ಡ್‌ ಪುತ್ತೂರು ಗ್ರಾಮದ ಸರ್ವೆ ನಂಬ್ರ 55/12 ವಿಸ್ತೀರ್ಣ 12.75 ಸೆಂಟ್ಸ್‌ ಜಾಗವು ತಮ್ಮದೆಂದು ಪಿರ್ಯಾದಿದಾರರಿಗೆ ನಂಬಿಸಿ ಜಾಗದಲ್ಲಿ ಯಾವುದೇ ವ್ಯಾಜ್ಯ ತಕರಾರು ಇರುವುದಿಲ್ಲವಾಗಿ ಮತ್ತು ಈ ಜಾಗಕ್ಕೆ ನಾವೇ ಹಕ್ಕುದಾರರೆಂದು ತಿಳಿಸಿ ಜಾಗ ಮಾರಾಟ ಮಾಡುವುದಾಗಿ ಹೇಳಿ ಆರೋಪಿಗಳು ಪಿರ್ಯಾದಿದಾರರಿಗೆ ನಕಲು ಕ್ರಯಪತ್ರ ದಾಖಲೆಯನ್ನು ತೋರಿಸಿ ರೂಪಾಯಿ 60 ಲಕ್ಷ ಮೊತ್ತಕ್ಕೆ ಮಾತುಕತೆ ಮಾಡಿರುತ್ತಾರೆ. ಪಿರ್ಯಾದಿರರ ಜಾಗವನ್ನು ಖರೀದಿಸುವ ಉದ್ದೇಶದಿಂದ ಆರೋಪಿಗಳ ಮಾತನ್ನು ನಂಬಿ ದಿನಾಂಕ 03/04/2017 ರಂದು ಮುಂಗಡ ಹಣ ರೂಪಾಯಿ 5 ಲಕ್ಷ ದಿನಾಂಕ 05/04/2017 ರಂದು ರೂಪಾಯಿ 2 ಲಕ್ಷ ಹಾಗೂ ದಿನಾಂಕ 17/04/2017 ರಂದು ರೂಪಾಯಿ 3 ಲಕ್ಷ ಹಣವನ್ನು ನೀಡಿರುತ್ತಾರೆ. ಆದರೆ ಆರೋಪಿಗಳು ಪಿರ್ಯಾದಿದಾರರಿಂದ ಮುಂಗಡ ಹಣವನ್ನು ಮೋಸ ಮಾಡುವ ಉದ್ದೇಶದಿಂದ ಕ್ರಯಪತ್ರ ನೋಂದಣಿ ಮಾಡಿರುವುದಿಲ್ಲ. ಅಲ್ಲದೇ, ಆರೋಪಿಗಳು ಜಾಗಕ್ಕೆ ಸಂಬಂಧಿಸಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಬಗ್ಗೆ ಮುಚ್ಚುಮರೆ ಮಾಡಿ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 109/2021 ಕಲಂ: 406, 417, 418, 420, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಪಡುಬಿದ್ರಿ: ಪಿರ್ಯಾದಿದಾರರಾದ ಸಾಹುಲ್ ಹಮೀದ್ (43) , ತಂದೆ: ಅಬ್ದುಲ್ ಖಾದರ್, ವಾಸ: 4-39.-ಎ-1, ಕನ್ನಂಗಾರು, ಹೆಜಮಾಡಿ ಗ್ರಾಮ, ಕಾಪು ತಾಲೂಕು ಇವರು ದಿನಾಂಕ 05/08/2021 ರಂದು ಕಾಫು ತಾಲೂಕು ಹೆಜಮಾಡಿ ಗ್ರಾಮದ ಕನ್ನಂಗಾರ್‌ನಲ್ಲಿರುವ ಮನೆಯಲ್ಲಿರುವ ಸಮಯ 12:45 ಗಂಟೆಗೆ ಅವರ ಅಕ್ಕನ ಮಕ್ಕಳಾದ ಶಫೀಕ್ ಹಾಗೂ ಶಾಜ್ ಎಂಬುವವರು ಪಿರ್ಯಾದಿದಾರರ ಮನೆಯ ಹಾಕಿದ ಬಾಗಿಲನ್ನು ದೂಡಿ ಒಳ ಪ್ರವೇಶಿಸಿ  ಅವಾಚ್ಯ ಶಬ್ದಗಳಿಂದ ಬೈದು ಹೆಲ್ಮೆಟ್‌‌ನಿಂದ ಮತ್ತು ಕೈಯಿಂದ  ಪಿರ್ಯಾದಿದಾರರ ತಲೆಗೆ ಮತ್ತು ಕೆನ್ನೆಗೆ ಹೊಡೆದಿದ್ದು, ಈ ವೇಳೆ  ಬಿಡಿಸಲು ಬಂದ ಪಿರ್ಯಾದಿದಾರರ ಹೆಂಡತಿ ಯಾಸ್ಮಿನ್ ರವರಿಗೆ ಆರೋಪಿತರು ಕುತ್ತಿಗೆಗೆ ಕೈ ಹಾಕಿ ಮಂಚಕ್ಕೆ ದೂಡಿ ಬೀಳಿಸಿ ಅವರ ಕುತ್ತಿಗೆಯನ್ನು ಒತ್ತಿ ಹಿಡಿದು ಮುಖಕ್ಕೆ ಹಾಗೂ ತಲೆ, ಮೈಗೆ ಹೊಡೆದು ಕಾಲಿನಿಂದ ತುಳಿದು ಜೀವ ಬೆದರಿಕೆ ಹಾಕಿರುತ್ತಾರೆ.  ಹಲ್ಲೆಯಿಂದ ಗಾಯಗೊಂಡ ಪಿರ್ಯಾದಿದಾರರು ಹಾಗೂ ಅವರ ಹೆಂಡತಿಯನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಯಾಸ್ಮಿನ್ ರವರನ್ನು ಒಳರೋಗಿಯಾಗಿ ದಾಖಲಿಸಿದ್ದು, ಪಿರ್ಯಾದಿದಾರರು ಹೊರರೋಗಿಯಾಗಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2021 ಕಲಂ: 448, 504, 324, 323, 354, 506, ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 06-08-2021 10:11 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080