ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು:

  • ಬೈಂದೂರು: ಫಿರ್ಯಾದಿ ಅಣ್ಣಪ್ಪ ನಾಯ್ಕ (ನಿರ್ವಾಹಕರು,ಬಿಲ್ಲೆ ಸಂಖ್ಯೆ 3696)  ಪ್ರಾಯ 49 ವರ್ಷ ತಂದೆ: ಸತ್ಯ ನಾರಾಯಣ ನಾಯ್ಕ ವಾಸ:  ಕುಂದಾಪುರ  ಘಟಕ ಇವರು ಕುಂದಾಪುರ ಕೆ ಎಸ್ ಆರ್ ಟಿ ಸಿ ಘಟಕದಲ್ಲಿ ನಿರ್ವಾಹಕರಾಗಿದ್ದು ಅವರ ಬಿಲ್ಲೆ ಸಂಖ್ಯೆ 3696 ಆಗಿದ್ದು , ದಿನಾಂಕ 05-07-2022 ರಂದು ರೂಟ್ ನಂಬ್ರ 35/36 ರಲ್ಲಿ ವಾಹನ ಸಂಖ್ಯೆ ಕೆ ಎ 19 ಎಫ್ 3199 ನೇದರಲ್ಲಿ ರಾ ಹೆ 66 ರ ಪಶ್ಚಿಮ ಬದಿಯ ರಸ್ತೆಯಲ್ಲಿ ಕುಂದಾಪುರದಿಂದ ಭಟ್ಕಳಕ್ಕೆ ಹೊರಟಿದ್ದು ಸಮಯ ಸುಮಾರು 12:10 ಕ್ಕೆ ನಾವುಂದ ಬಸ್ಸು ನಿಲ್ದಾಣದ ಹತ್ತಿರ ತಲುಪಿದಾಗ ಅದೇ ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಕೆಎ 13  ಎನ್ 6505 ನೇ ಕಾರು ಚಾಲಕನು ಆತನ ಬಾಬ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಬಸ್ಸಿನ  ಹಿಂಬದಿಗೆ ಡಿಕ್ಕಿಹೊದಿದ್ದು. ಸದ್ರಿ ಅಪಘಾದಲ್ಲಿ ಬಸ್ಸಿನ ಹಿಂಭಾಗದ ಎಡಬದಿಗೆ ಜಖಂ ಗೊಂಡಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿರುವುದಿಲ್ಲ, ಕಾರಿನಲ್ಲಿ 5 ಜನ ಪ್ರಯಾಣಿಕರಿದ್ದು ಅವರಿಗೆ ಸಣ್ಣ ಪುಟ್ಟ ತರಚಿದ ರಕ್ತಗಾಯವಾಗಿದ್ದು, ಅವರನ್ನು ಫಿರ್ಯಾದಿದಾರರು  ಹಾಗೂ ಬಸ್ಸಿನ ಚಾಲಕ , ಹಾಗೂ ಸ್ಥಳಿಯರು ಕಾರಿನಿಂದ ಇಳಿಸಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಚಿಕಿತ್ಸೆಯ ಬಗ್ಗೆ ಕಳುಹಿಸಿ ಕೊಟ್ಟಿರುತ್ತಾರೆ, ಸದ್ರಿ ಅಪಘಾತದಲ್ಲಿ ಕಾರು ಜಖಂ ಗೊಂಡಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 135/2022 ಕಲಂ. 279 ,337 ಭಾ. ದಂ. ಸಂ. ರಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು : ಫಿರ್ಯಾದಿ ಗುರುರಾಜ ಮೊಗವೀರ ಪ್ರಾಯ: 36 ವರ್ಷ ತಂದೆ: ಪಂಜು ಮೊಗವೀರ ವಾಸ: ಈರುಮನೆ ಗರ್ಜಿನಹಿತ್ಲು ಯಡ್ತರೆ ಗ್ರಾಮ ಇವರು ದಿನಾಂಕ 05/07/2022 ರಂದು ಕೆಲಸದ ಬಗ್ಗೆ  ತಮ್ಮ ಮೋಟಾರು ಸೈಕಲ್ ನಲ್ಲಿ  ಮನೆಯಿಂದ ಶಿರೂರು ಗೆ ಹೊರಟು ರಾಹೆ 66 ರಲ್ಲಿ ಹೋಗುತ್ತಾ ಬೆಳಿಗ್ಗೆ 9:30 ಗಂಟೆಯ ಸುಮಾರಿಗೆ ಬೈಂದೂರು ಫ್ಲೈಓವರ್ ಮೇಲೆ ಹೋಗುತ್ತಾ ಪಾವಸ್ಕರ್ ಬಿಲ್ಡಿಂಗ್ ನ ಎದುರು ಪ್ಲೈ ಓವರ್ ತಲುಪಿದಾಗ ಫಿರ್ಯಾದುದಾರರ ಹಿಂದಿನಿಂದ ಮಾರುತಿ ಸುಜುಕಿ ಬ್ರಿಜಾ ಕಾರು ನಂಬ್ರ KA51MP1419 ನೇಯದನ್ನು ಅದರ ಚಾಲಕ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ವಿಪರೀತ ಮಳೆ ಬರುತ್ತಿದ್ದರಿಂದ ಆಟೋ ರಿಕ್ಷಾವನ್ನು ಅಸ್ಪಷ್ಟವಾಗಿ ಕಂಡು, ಕಾರು ರಿಕ್ಷಾಕ್ಕೆ ಢಿಕ್ಕಿ ಹೊಡೆಯಬಹುದೆಂಬ ಕಾರಣದಿಂದ ಕಾರಿನ ಚಾಲಕನು ಕಾರಿಗೆ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಕಾರು ಚಾಲಕನ ಹತೋಟಿ ತಪ್ಪಿ ಫ್ಲೈಓವರ್ ನ ತಡೆಗೋಡೆಗೆ ಢಿಕ್ಕಿ ಹೊಡೆದು ನಂತರ ಎದುರಿನಲ್ಲಿ ಹೋಗುತ್ತಿದ್ದ ರಿಕ್ಕಾ ಕ್ಕೆ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸುನೀಲ್ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಂಜುನಾಥ, ಯಶೋಧ ಹಾಗೂ ಅವರ ಮಕ್ಕಳಾದ ಆರಾಧ್ಯ ಮತ್ತು ಆರ್ಯನ್ ರವರು ರಸ್ತೆಗೆ ಬಿದ್ದು, ಚಾಲಕ ಸುನೀಲ್ ರವರಿಗೆ ತಲೆಗೆ ರಕ್ತಗಾಯ, ಎಡಕೈ ಗೆ ಎಡಕಾಲಿಗೆ ತರಚಿದ ಗಾಯ, ಮಂಜುನಾಥ ರವರಿಗೆ ಮುಖಕ್ಕೆ ರಕ್ತಗಾಯ, ಬೆನ್ನಿಗೆ ತರಚಿದ ಗಾಯ ಹಾಗೂ ಸೊಂಟ ಕ್ಕೆ ಗುದ್ದಿದ ಒಳನೋವು, ಯಶೋಧ ರವರಿಗೆ ತಲೆಗೆ ರಕ್ತಗಾಯ ಸೊಂಟಕ್ಕೆ ರಕ್ತಗಾಯ ಹಾಗೂ ಎಡಭುಜಕ್ಕೆ ಒಳಜಖಂ ಹಾಗೂ ಮಕ್ಕಳಾದ ಆರ್ಯನ್ ಹಣೆಗೆ ರಕ್ತಗಾಯ ಮುಖಕ್ಕೆ ತರಚಿದ ಗಾಯ, ಕಾಲುಗಳಿಗೆ ತರಚಿದ ಗಾಯ ಆಗಿದ್ದು, ಆರಾಧ್ಯ ಳಿಗೆ ಎರಡೂ ಕಾಲುಗಳ ಮೊಣಕಾಲಿಗೆ ಹಾಗೂ ಮೊಣಕೈ ಗೆ ತರಚಿದ ಗಾಯವಾಗಿದ್ದು, ಗಾಯಾಳುಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಒಳರೋಗಿಗಳಾಗಿ ದಾಖಲು ಮಾಡಿದ್ದು ಈ ಅಪಘಾತಕ್ಕೆ ಮಾರುತಿ ಸುಜುಕಿ ಬ್ರಿಜಾ ಕಾರು ನಂಬ್ರ KA51MP1419 ನೇದರ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ.ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 136/2022 ಕಲಂ. 279 , 337 ಭಾ. ದಂ. ಸಂ. ರಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕಾರ್ಕಳ : ಪಿರ್ಯಾದಿ ನೀಲವ್ವ, ಪ್ರಾಯ: 36 ವರ್ಷ, ಗಂಡ: ಯಲ್ಲಪ್ಪ ಬಸಪ್ಪ ರಾಜೂರ, ವಾಸ: ಕೇರ್ ಆಫ್ ರಂಜನ್ ಕಾಮತ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಿಂದುಗಡೆ, ಕಸಬಾ ಗ್ರಾಮ, ಕಾರ್ಕಳ ಇವರ ಗಂಡ ಯಲ್ಲಪ್ಪ ಬಸಪ್ಪ ರಾಜೂರ, ಪ್ರಾಯ: 37 ವರ್ಷ ರವರು ವಿಪರೀತ ಕುಡಿತದ ಅಭ್ಯಾಸವಿದ್ದು, ಕಾರ್ಕಳ ತಾಲೂಕು ಕಸಬಾ ಗ್ರಾಮದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಹಿಂದುಗಡೆ ಇರುವ ರಂಜನ್ ಕಾಮತ್ ರವರ ಬಾಡಿಗೆ ಮನೆಯಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಾಗಿರುತ್ತಾರೆ. ದಿನಾಂಕ: 05.07.2022 ರಂದು ರಾತ್ರಿ 11:30 ಗಂಟೆಯ ಹೊತ್ತಿಗೆ ಯಲ್ಲಪ್ಪ ಬಸಪ್ಪ ರಾಜೂರ ರವರ ದೇಹವೆಲ್ಲಾ ನಡುಗುತ್ತಿದ್ದು ಪಿರ್ಯಾದಿದಾರರು ತಮ್ಮ ಹಾಗೂ ಶಿವಪ್ಪರೊಂದಿಗೆ ಒಂದು ವಾಹನದಲ್ಲಿ ರಾತ್ರಿ 12:30 ಗಂಟೆಗೆ ಮನೆಯಿಂದ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಪರೀಕ್ಷಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿದ್ದು, ಯಲ್ಲಪ್ಪ ಬಸಪ್ಪ ರಾಜೂರ ರವರಿಗೆ 04:00 ಗಂಟೆಯ ಹೊತ್ತಿಗೆ ಉಸಿರಾಟದ ತೊಂದರೆ ಜಾಸ್ತಿಯಾಗಿದ್ದು, ಹೆಚ್ಚಿನ ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುತ್ತಿದ್ದು ಬೈಲೂರು ಸಮೀಪಿಸುತ್ತಿದ್ದಂತೆ  ಯಲ್ಲಪ್ಪ ಬಸಪ್ಪ ರಾಜೂರ ರವರು ಮೃತಪಟ್ಟಿದ್ದು, ವಾಪಾಸು ಅಂಬ್ಯುಲೆನ್ಸ್ ನಲ್ಲಿ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಪರೀಕ್ಷಿಸಿ ದಿನಾಂಕ: 06.07.2022 ರಂದು ಸಮಯ ಸುಮಾರು  ಬೆಳಗ್ಗೆ 05:00 ಗಂಟೆಗೆ ಮೃತಪಟ್ಟಿರುತ್ತಾರೆ. ಮೃತರ ಮರಣದಲ್ಲಿ ಯಾವುದೇ ಸಂಶಯವಿರುವುದಿಲ್ಲ. ಈ ಬಗ್ಗ್ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ ಸಂಖ್ಯೆ 29/2022 ಕಲಂ 174 CRPC  ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 06-07-2022 05:53 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080