ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕಾರ್ಕಳ: ದಿನಾಂಕ 05/07/2021 ರಂದು 13:00  ಗಂಟೆಗೆ ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ಲೆಮಿನಾ ಕ್ರಾಸ್ ಬಳಿ ಕಾರ್ಕಳ ಪಡುಬಿದ್ರೆ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದಿದಾರರಾದ ತುಕ್ರ (45), ತಂದೆ: ಗುರುವಾ, ವಾಸ: ಲೆಮಿನಾ ಕ್ರಾಸ್  ಹತ್ತಿರ ನಿಟ್ಟೆ  ಗ್ರಾಮ,  ಕಾರ್ಕಳ  ತಾಲೂಕು, ಉಡುಪಿ ಜಿಲ್ಲೆ ಇವರು ನಡೆದುಕೊಂಡು ಹೋಗುತ್ತಿದ್ದಾಗ KA-17-N- 8317 ನೇ  ಕಾರು ಚಾಲಕನು ಆತನ ಕಾರನ್ನು ಪಡುಬಿದ್ರೆ  ಕಡೆಯಿಂದ  ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡ ಬದಿಗೆ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು  ರಸ್ತೆಗೆ ಬಿದ್ದು  ಅವರ ತಲೆಯ ಎಡಭಾಗಕ್ಕೆ ರಕ್ತ ಗಾಯ ಮತ್ತು ಎಡ ಭುಜಕ್ಕೆ ಒಳ ಜಖಂ ಆಗಿದ್ದು, ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ  ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 82 /2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ದಿನಾಂಕ 05/07/2021 ರಂದು ಮಧ್ಯಾಹ್ನ 13:50 ಗಂಟೆಗೆ ಕೆರ್ವಾಶೆ ಗ್ರಾಮದ ಬಟ್ಟ ಸೇತುವೆ ಬಳಿ ಕೆರ್ವಾಶೆ ಕಡೆ ಆಪಾದಿತ ವಿವೇಕ ಭಟ್ ಎಂಬುವವರು ತನ್ನ ಮೋಟಾರು ಸೈಕಲ್ ನಂಬ್ರ KA-20-ET-1008 ನೇಯದನ್ನು ಮುಡಾರು ಕಡೆಯಿಂದ ಕೆರ್ವಾಶೆ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು, ಕೆರ್ವಾಶೆಯಿಂದ ಮುಡಾರು ಕಡೆಗೆ ಚಲಾಯಿಸಿಕೊಂಡು ಬರುತ್ತಿದ್ದ KA-20-ET-0147 ನೇ ಟಿವಿಎಸ್ ಎಕ್ಸ್ ಎಲ್. ಮೋಟಾರು ಸೈಕಲ್‌‌‌ಗೆ ಢಿಕ್ಕಿ ಹೊಡೆದ ಪರಿಣಾಮ KA-20-ET-0147 ನೇ ಟಿವಿಎಸ್ ಎಕ್ಸ್ ಎಲ್. ಮೋಟಾರು ಸೈಕಲ್‌ ಸವಾರ ಗೋಪಾಲ ದೇವಾಡಿಗ ಎಂಬುವವರು ವಾಹನ ಸಮೇತ ಡಾಮಾರು ರಸ್ತೆಗೆ ಬಿದ್ದ ಪರಿಣಾಮ ಅವರ ಬಲಬದಿಯ ಕಣ್ಣಿನ ಬಳಿ ಮತ್ತು ಎಡಕಾಲಿನ ಹೆಬ್ಬೆರಳಿಗೆ ರಕ್ತಗಾಯವಾಗಿದ್ದು, ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2021  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 05/07/2021 ರಂದು ಪಿರ್ಯಾದಿದಾರರಾದ ಧನುಷ್ ಆಚಾರ್ಯ (22), ತಂದೆ: ಮಾಧವ ಆಚಾರ್ಯ, ವಾಸ: ದುರ್ಗಾ ಪರಮೇಶ್ವರಿ ದೇವಸ್ಥಾನದ ಹತ್ತಿರ, ಸಂತೆಕಟ್ಟೆ ಅಂಚೆ, ಪುತ್ತೂರು ಗ್ರಾಮ, ಉಡುಪಿ ತಾಲೂಕು ಇವರು ಅವರ ಸ್ನೇಹಿತ ಸಂಜಯ್ ರವರು ಚಲಾಯಿಸುತ್ತಿದ್ದ  KA-20-MD-0504 ನೇ ನಂಬ್ರದ ಕಾರಿನ ಮುಂದಿನ ಎಡ ಬದಿಯ ಸೀಟಿನಲ್ಲಿ ಹಾಗೂ ಇನ್ನೊಬ್ಬ ಸ್ನೇಹಿತ ಯತೀಶ್ ಕಾರಿನ ಹಿಂಬದಿಯ ಸೀಟಿನಲ್ಲಿ ಕುಳಿತು ಸಾಲಿಗ್ರಾಮ ದಿಂದ ಉಡುಪಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಪ್ರಯಾಣಿಸುತ್ತಿದ್ದಾಗ ರಾತ್ರಿ  10:30 ಗಂಟೆಯ ಸಮಯಕ್ಕೆ ವಾರಂಬಳ್ಳಿ, ಗ್ರಾಮದ ಬ್ರಹ್ಮಾವರದ ಆಕಾಶವಾಣಿ ಜಂಕ್ಷನ್ ಬಳಿ ಮಿತವಾದ ವೇಗದಲ್ಲಿ ತಲುಪುವಾಗ ಬಾರ್ಕೂರು ಕ್ರಾಸ್ ಕಡೆಯಿಂದ ಆರೋಪಿ ನವೀನ KA-20-EG-2075 ನೇ ನಂಬ್ರದ ಮೋಟಾರ್ ಸೈಕಲ್‌ನಲ್ಲಿ ಇಬ್ಬರು ಸಹಸವಾರರನ್ನು ಕುರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಒಮ್ಮೇಲೆ ರಾಷ್ಟ್ರೀಯ ಹೆದ್ದಾರಿ 66 ರನ್ನು ಕ್ರಾಸ್ ಮಾಡಲು ಮೋಟಾರ್ ಸೈಕಲ್‌ನ್ನು ಸವಾರಿ ಮಾಡಿದ್ದರಿಂದ ಪಿರ್ಯಾದಿದಾರರ ಕಾರು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದು ಕಾರು ಪಲ್ಟಿಯಾಗಿ ಎಡಗಡೆಯ ಸರ್ವಿಸ್ ರಸ್ತೆಗೆ ಉರುಳಿ ಬಿದ್ದು ಸಂಪೂರ್ಣ ಜಖಂ ಗೊಂಡಿರುತ್ತದೆ  ಹಾಗೂ ಮೋಟಾರ್ ಸೈಕಲ್ ಸಮೇತ ಅದರಲ್ಲಿದ್ದ ಮೂವರು ರಸ್ತೆಗೆ  ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಕಾರಿನಲ್ಲಿದ್ದ ಪಿರ್ಯಾದಿದಾರ ಧನುಷ್ ಆಚಾರ್ಯ, ಯತೀಶ್ ಹಾಗೂ ಕಾರಿನ ಚಾಲಕ ಸಂಜಯ್ ರವರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ಅಲ್ಲದೇ ಮೋಟಾರ್ ಸೈಕಲ್ ಸಹಸವಾರಾದ ಅವಿನಾಶ್‌ನ ಕಾಲಿಗೆ ಗಾಯವಾಗಿದ್ದು ಮತ್ತು ಇನ್ನೊಬ್ಬ  ಅಪರಿಚಿತ ಸಹಸವಾರನಿಗೆ  ಬಲಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ ಹಾಗೂ ಮೋಟಾರ್ ಸೈಕಲ್ ಸವಾರ ಆರೋಪಿ ನವೀನ್‌ ರವರ ತಲೆಗೆ ತೀವ್ರಗಾಯವಾಗಿರುತ್ತದೆ. ಗಾಯಾಳು ಗಳನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ದಾಖಲಿಸಿದ್ದು ಅದರಲ್ಲಿ ಆರೋಪಿ ನವೀನ್‌ನನ್ನು ಹೆಚ್ಚಿನ ಚಿಕಿತ್ಸೆ  ಬಗ್ಗೆ ಕೆಎಮ್‌ಸಿ ಮಣಿಪಾಲ ಆಸ್ಪತ್ರಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 130/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಅಸ್ವಾಭಾವಿಕ ಮರಣ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಸುಲೋಚನಾ (39), ಗಂಡ: ರವಿ, ವಾಸ: 303 , ಗ್ರೀನ್ ಪ್ಯಾಲೇಸ್  ಅಪಾರ್ಟ್‌ ಮೆಂಟ್, ನಿಟ್ಟೂರು, ಉಡುಪಿ ಇವರ ಗಂಡ ರವಿ (46) ರವರು ಕೆ.ಎಸ್.ಆರ್.ಟಿಸಿ. ಚಾಲಕರಾಗಿ ರಾಮನಗರ ಜಿಲ್ಲೆಯ ಮಾಗಡಿ ಡಿಪ್ಪೋದಲ್ಲಿ ಕೆಲಸ ಮಾಡಿಕೊಂಡಿದ್ದು ದಿನಾಂಕ 02/07/2021 ರಂದು ಊರಿಗೆ ಬಂದವರು, ಪುನಃ ಕೆಲಸಕ್ಕೆ ಹೋಗುವ ಬಗ್ಗೆ ಬ್ಯಾಗ್ ತರಲು ದಿನಾಂಕ 05/07/2021 ರಂದು ಕುಂದಾಪುರದ ಡಿಪ್ಪೋಗೆ ಅರುಣ್ ಕುಮಾರ್ ರವರೊಂದಿಗೆ  ಕಾರ್ ನಲ್ಲಿ  ನಿಟ್ಟೂರಿನಿಂದ ಹೋದವರು ಕೋಟೇಶ್ವರ ಸ್ಮಶಾನದ ಎದುರು ತಲುಪುವಾಗ ಮಾತನಾಡದೇ ಇದ್ದು ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ, ಅಲ್ಲಿನ ವೈದ್ಯರು  ರವಿಯವರನ್ನು ಪರೀಕ್ಷಿಸಲಾಗಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.   ರವಿಯವರು ಹೃದಯಾಗಾತ ಅಥವಾ ಇತರ ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 26/2021 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಕುಂದಾಪುರ: ದಿನಾಂಕ 02/07/2021 ರಂದು ಸದಾಶಿವ ಆರ್. ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ ಕುಂದಾಪುರ ತಾಲೂಕು ವಕ್ವಾಡಿ ಗ್ರಾಮದ ವಕ್ವಾಡಿ ಬಸ್ ನಿಲ್ದಾಣದ ಹಿಂಬದಿಯ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ  ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ 7  ಜನರು ಕುಳಿತುಕೊಂಡಿದ್ದು ಅಂದರ್ ಬಾಹರ್ ಎಂಬ ಇಸ್ಪೀಟ್ ಆಟದಲ್ಲಿ ಹಣವನ್ನು ಪಣವಾಗಿಟ್ಟು  ಜೂಜಾಟ ಆಡುತ್ತಿರುವುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿದ್ದು 3 ಜನರು ಓಡಿಹೋಗಿದ್ದು  4 ಜನರನ್ನು ಸಿಬ್ಬಂದಿಗಳ  ಸಹಾಯದಿಂದ  ಹಿಡಿದುಕೊಂಡಿದ್ದು, ಅವರ ಹೆಸರು ವಿಳಾಸ ವಿಚಾರಿಸಲಾಗಿ 1) ನಟರಾಜ (35), ತಂದೆ: ರಾಜೇಂದ್ರ  ಪೂಜಾರಿ, ನಟರಾಜ ನಿಲಯ, ವಕ್ವಾಡಿ, ಕುಂದಾಪುರ, 2) ಹರೀಶ (32), ತಂದೆ: ಮಂಜುನಾಥ, ವಾಸ: ಜನತಾ ಕಾಲನಿ, ವಕ್ವಾಡಿ, ಕುಂದಾಪುರ ತಾಲೂಕು, 3) ಅಶ್ರಫ್ (29),  ತಂದೆ: ಬಾಷಾ ಸಾಹೇಬ್, ಜನತಾ ಕಾಲನಿ, ವಕ್ವಾಡಿ, ಕುಂದಾಪುರ, 4) ಇಕ್ಬಾಲ್ ಅಹಮದ್ (48), ತಂದೆ: ಮೊಹಿದೀನಬ್ಬ, ವಾಸ: ಹವ್ವಾ ಕಾಟೇಜ್,, ಮಸೀದಿ ರಸ್ತೆ, ಕಣ್ಣುಕೆರೆ, ತೆಕ್ಕಟ್ಟೆ, ಕುಂದಾಪುರ ಎಂಬುದಾಗಿ ತಿಳಿಸಿದ್ದು, ಆರೋಪಿತರು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ 3150/, ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52, ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಆರೋಪಿತರು ಕೋವಿಡ್-19 ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ಹಾಗೂ ಮಾನ್ಯ ಜಿಲ್ಲಾ ದಂಡಾಧಿಕಾರಿಗಳ ಆದೇಶದ ಬಗ್ಗೆ ತಿಳುವಳಿಕೆ ಇದ್ದರೂ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವವಿದೆಯೆಂದು ತಿಳಿದೂ ಕೂಡಾ ಆರೋಪಿತರು ಒಟ್ಟು ಸೇರಿಕೊಂಡು  ಜೂಜಾಟದಲ್ಲಿ ಪಾಲುಗೊಂಡಿದ್ದು, ಅಪಾಯಕಾರಿಯಾದ ರೋಗದ ಸೋಂಕನ್ನು ತಡೆಗಟ್ಟುವಲ್ಲಿ ನಿರ್ಲಕ್ಷ್ಯತನ ತೋರಿ ಅಪರಾಧ ಎಸಗಿರುತ್ತಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 85/2021  ಕಲಂ: 269 ಐಪಿಸಿ ಮತ್ತು  87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣಗಳು

 • ಕೋಟ: ಪಿರ್ಯಾದಿದಾರರಾದ ಅಶೋಕ  (45), ತಂದೆ: ದಿ ಮಹಾಬಲ, ವಾಸ: ಪ್ರತೀಕ್ ಶನೀಶ್ವರ ದೇವಸ್ಥಾನದ ಬಳಿ ಪಾರಂಪಳ್ಳಿ ಪಡುಕೆರೆ  ಪಾರಂಪಳ್ಳಿ ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 04/07/2021 ರಂದು ಸಂಜೆ 15:20 ಗಂಟೆಯ ಸಮಯಕ್ಕೆ ಮನೆಯಲ್ಲಿರುವಾಗ ಪ್ರಶಾಂತ ಎಂಬುವವರು ಪಿರ್ಯಾದಿದಾರರಿಗೆ ಪೋನ್  ಕರೆ ಮಾಡಿ ಸಂತೋಷ ನನ್ನೊಂದಿಗೆ ಕೆಲಸ ಮಾಡುತ್ತಿದ್ದವನನ್ನು ಯಾಕೆ ಹೇಳಿಕೊಟ್ಟು ಕೆಲಸ ತಪ್ಪಿಸಿದ್ದೀಯಾ ಎಂದು ಜೋರು ಮಾಡುತ್ತಿದ್ದು ಆಗ ಪಿರ್ಯಾದಿದಾರರು ಸುಮ್ಮನಿದ್ದು ಬೇಕಾದರೆ ದೇವರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ ಎಂದು ಹೇಳಿದ್ದು ಅದಕ್ಕೆ ಬೈದಿರುವುದಾಗಿದೆ. ನಂತರ ಪಿರ್ಯಾದಿದಾರರು ಮತ್ತು ನಾಗೇಶ ಶನೀಶ್ವರ ದೇವಸ್ಥಾನದ  ಬಳಿಯಿರುವಾಗ  ಸಂಜೆ 18.30 ಗಂಟೆಯ ಸಮಯಕ್ಕೆ ಅಲ್ಲಿಗೆ ಬಂದ ಪ್ರಶಾಂತ ಪಿರ್ಯಾದಿದಾರರನ್ನು ಅಡ್ಡಗಟ್ಟಿ  ಅವಾಚ್ಯ ಶಬ್ದಗಳಿಂದ ಬೈದು  ಎಡ ಭುಜ ,ಕುತ್ತಿಗೆಯ ಹಿಂಭಾಗ ಮತ್ತು ಬೆನ್ನಿಗೆ ಕೈಯಿಂದ ಗುದ್ದಿದ್ದು, ಆಗ ತಪ್ಪಿಸಲು ಬಂದ ಪಿರ್ಯಾದಿದಾರರೊಂದಿಗಿದ್ದ ನಾಗೇಶ ಮರಕಾಲರಿಗೆ  ಸೊಂಟಕ್ಕೆ ಕಾಲಿನಿಂದ ತುಳಿದಿರುತ್ತಾನೆ. ಚಿಕಿತ್ಸೆಯ ಬಗ್ಗೆ ಕುಂದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 134/2021 ಕಲಂ: 341, 323, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕೋಟ: ದಿನಾಂಕ 04/07/2021 ರಂದು  ಮಧ್ಯಾಹ್ನ ಶನಿಶ್ವರ ದೇವಸ್ಥಾನದ ಹತ್ತಿರ  ರಮಾನಂದ  ರವರ  ಅಂಗಡಿ ಬಳಿ ಪಿರ್ಯಾದಿದಾರರಾದ ಪ್ರಶಾಂತ ಪೂಜಾರಿ (28), ತಂದೆ: ಸಂಜೀವ  ಪೂಜಾರಿ, ವಾಸ: ಮಾರುತಿಕೃಪಾ, ಪಾರಂಪಳ್ಳಿ  ಪಡುಕೆರೆ  ಬ್ರಹ್ಮಾವರ  ತಾಲೂಕು, ಉಡುಪಿ ಜಿಲ್ಲೆ  ಹಾಗೂ  ಪ್ರತಾಪ, ರಂಜಿತ  ರವರುಗಳು  ಮಾತನಾಡಿಕೊಂಡಿರುವಾಗ  ನಾಗೇಶ ಎಂಬುವವರು ಅಲ್ಲಿಗೆ  ಬಂದು  ಪಿರ್ಯಾದಿದಾರರು  ಸರಿ  ಇಲ್ಲ  ಅವನ  ಸಂಗಡ  ಯಾರು  ಕೆಲಸಕ್ಕೆ  ಹೊಗುವುದು  ಬೇಡ ಎಂದು  ಹೇಳಿದ್ದು  ಇದಕ್ಕೆ  ಕಳೆದ  15  ದಿನಗಳ  ಹಿಂದೆ ಆರೋಪಿ ನಾಗೇಶ  ಪಿರ್ಯಾದಿದಾರರಲ್ಲಿ 1000/- ರೂಪಾಯಿ  ಕೇಳಿದ್ದು  ಅದನ್ನು  ಪಿರ್ಯಾದಿದಾರರು ನೀಡದೆ  ಇದ್ದಿರುವುದೇ  ಕಾರಣವಾಗಿರುತ್ತದೆ. ನಂತರ  ಪಿರ್ಯಾದಿದಾರರು  ಕೆಲಸಕ್ಕೆ  ಹೋಗಿದ್ದು  6:30 ಗಂಟೆಗೆ  ಪಿರ್ಯಾದಿದಾರರು ಕೆಲಸ ಮುಗಿಸಿ  ಶನಿಶ್ವರ  ದೇವಸ್ಥಾನದ  ಬಳಿ  ಇರುವ  ರಸ್ತೆ  ಬಳಿ ಬಂದಾಗ  ನಾಗೇಶ  ಮತ್ತು  ಅಶೋಕ  ಕುಳಿತಿಕೊಂಡು  ಮಾತನಾಡುತ್ತಿದ್ದು  ಪಿರ್ಯಾದಿದಾರರು  ಅವರಲ್ಲಿ  ನನ್ನೊಂದಿಗೆ  ಕೆಲಸಕ್ಕೆ  ಹೋಗಬೇಡಿ  ಎಂದು  ಹೇಳಲು ಏನು  ಕಾರಣ  ಎಂದು  ಕೇಳಿದ್ದು ಅದಕ್ಕೆ  ನಾಗೇಶನು ಪಿರ್ಯಾದಿದಾರರನ್ನು ಉದ್ದೇಶಿಸಿ ಬೈದು ಅಶೋಕ  ಪಿರ್ಯಾದಿದರರನ್ನು  ತಡೆದು  ನಿಲ್ಲಿಸಿ   ಜೋರು  ಮಾಡುತ್ತಿದ್ದಾಗ  ನಾಗೇಶನು  ಕಬ್ಬಿಣದ  ರಾಡ್‌ನಿಂದ  ಹಿಂದಿನಿಂದ  ಪಿರ್ಯಾದಿದಾರರ  ತಲೆಗೆ  ಎರಡು  ಮೂರು  ಬಾರಿ ಹೊಡೆದಿದ್ದು, ನಂತರ  ಪಿರ್ಯಾದಿದಾರರಿಗೆ  ಅಶೋಕ  ಮತ್ತು  ನಾಗೇಶ  ಸೇರಿ  ಕಾಲಿನಿಂದ  ತುಳಿದಿದ್ದು  ಅ  ಸಮಯದಲ್ಲಿ  ರಮಾನಂದ  ಅಂಗಡಿ  ಬಳಿ  ಕುಳಿತಿದ್ದ  ರಂಜಿತ ನು  ಬಂದು  ಪಿರ್ಯಾದಿದಾರರಿಗೆ  ಹೊಡೆಯುವುದನ್ನು ಬಿಡಿಸಿದ್ದು  ಅಷ್ಟರಲ್ಲಿ  ಪಿರ್ಯಾದಿದಾರರ  ಮನೆಯವರಿಗೆ ವಿಚಾರ ತಿಳಿದು ಪಿರ್ಯಾದಿದಾರರ ತಾಯಿ  ಮತ್ತು  ಮಾವ  ಸ್ಥಳಕ್ಕೆ  ಬಂದು  ರಿಕ್ಷಾದಲ್ಲಿ ಚಿಕಿತ್ಸೆ  ಬಗ್ಗೆ  ಪಿರ್ಯಾದಿದಾರರನ್ನು  ಕೋಟ  ಸಮುದಾಯ  ಆರೋಗ್ಯ  ಕೇಂದ್ರಕ್ಕೆ ಕರೆದುಕೊಂಡು ಹೋಗಿ ಅಲ್ಲಿಂದ  ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ  ದಾಖಲಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 135/2021 ಕಲಂ: 341, 323, 324, 504 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
      

ಇತ್ತೀಚಿನ ನವೀಕರಣ​ : 06-07-2021 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080