ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಆದರ್ಶ ಶೆಟ್ಟಿ ಇವರು ನಿನ್ನೆ ದಿನ ದಿನಾಂಕ: 05.07.2021 ರಂದು ಸಂಜೆ ಕಾಪು ತಾಲೂಕು ಪಲಿಮಾರು ಗ್ರಾಮದ ಹೈಸ್ಕೂಲ್ ಮೈದಾನದಲ್ಲಿ ಅವರ ಸ್ನೇಹಿತರೊಂದಿಗೆ ಕ್ರಿಕೆಟ್ ಆಟವಾಡುತ್ತಿರುವ ಸಮಯ ಸುಮಾರು 17:30 ಗಂಟೆಯ ವೇಳೆಗೆ  ಕ್ರಿಕೆಟ್ ಆಟವಾಡಲು ಕರ್ನಿರೆ ಗ್ರಾಮದಿಂದ ಕೀರ್ತೇಶ್, ನಿತೇರ್ಶ, ಅಭಿಷೇಕ್, ದಿನೇಶ್, ನಿತೇಶ್ ದೇವಾಡಿಗ, ಹಾಗೂ ರಾಜೇಶ್ ಎಂಬುವರು ಬಂದು ಆಟವಾಡುತ್ತಿರುವ ಸಮಯ 18:00 ಗಂಟೆಯ ವೇಳೆಗೆ ಪಿರ್ಯಾದಿದಾರರು ಬೌಲಿಂಗ್ ಮಾಡುವ ವಿಚಾರದಲ್ಲಿ ಆರೋಪಿತರಿಗೂ ಹಾಗೂ ಪಿರ್ಯಾದಿದಾರರ ನಡುವೆ ಮಾತಿಗೆ ಮಾತು ಬೆಳೆದು ಆ 6 ಜನ ಆರೋಪಿತರು ಕೈಯಿಂದ ಪಿರ್ಯಾದಿದಾರರ ಮುಖ, ತಲೆ, ಎದೆ, ಹೊಟ್ಟೆಗೆ ಹೊಡೆದು, ಕಾಲಿನಿಂದ ಹೊಟ್ಟೆ ಗೆ ಮತ್ತು ಮರ್ಮಾಂಗಕ್ಕೆ ತುಳಿದು ಹಲ್ಲೆ ನಡೆಸಿ, ಪಿರ್ಯಾದಿದಾರರನ್ನುದ್ದೇಶಿಸಿ ಅವಾಚ್ಯವಾಗಿ ಬೈದು  ನಿನ್ನನ್ನು ನೋಡಿಕೊಳ್ಳುತ್ತೇವೆ ಎಂದು ಬೆದರಿಕೆ ಹಾಕಿದ್ದು,  ಪಿರ್ಯಾದಿದಾರರು  ಚಿಕಿತ್ಸೆಯ ಬಗ್ಗೆ ಉಡುಪಿಯ ಜಿಲ್ಲಾ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ: 143, 147, 323, 504, 506, ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಬೈಂದೂರು : ದಿನಾಂಕ 05/07/2021 ರಂದು 16:00 ಗಂಟೆಗೆ ಸಂತೋಷ್ ಎ ಕಾಯ್ಕಿಣಿ  ವೃತ್ತ ನಿರೀಕ್ಷಕರು ಬೈಂದೂರು ವೃತ್ತ, ಬೈಂದೂರು ಇವರಿಗೆ ಬಿಜೂರು ಗ್ರಾಮದ ಕೋಟ್ಯಾಡಿ ಎಂಬಲ್ಲಿ ಸರಕಾರಿ ಜಾಗದ ಸಾರ್ವಜನಿಕ ಸ್ಥಳದಲ್ಲಿ  ಕೋಳಿ ಅಂಕ ಜುಗಾರಿ ಆಟ ನಡೆಯುತ್ತಿದೆ ಎಂದು ಮಾಹಿತಿ ಬಂದ ಮೇರೆಗೆ ಬೈಂದೂರು ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಗಳೊಂದಿಗೆ ಸದ್ರಿ ಸ್ಥಳಕ್ಕೆ ತಲುಪಿ ಮರೆಯಲ್ಲಿ ನಿಂತು  ಗುಪ್ತವಾಗಿ ಮಾಹಿತಿ ಕಲೆಹಾಕಿದಾಗ ಜನರು ಗುಂಪು ಕಟ್ಟಿಕೊಂಡು ಇಬ್ಬರು 2 ಕೋಳಿ ಹುಂಜಗಳ ಕಾಲಿಗೆ  ಕೋಳಿ ಬಾಳನ್ನು ಕಟ್ಟಿ ಜೂಜಾಟಕ್ಕೆ ಬಿಟ್ಟಿದ್ದು ಉಳಿದವರು ಸುತ್ತುವರಿದು ತಮ್ಮ ಕೋಳಿಗಳನ್ನು ಕೈ ನಲ್ಲಿ ಹಿಡಿದುಕೊಂಡು ಕಾದಾಟಕ್ಕೆ ಬಿಟ್ಟಿದ ಕೋಳಿಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಕೋಳಿ ಅಂಕ ನಡೆಸುತ್ತಿದ್ದ 1) ಮಹಮ್ಮದ್ ಇರ್ಷಾದ್ ಪ್ರಾಯ: 36 ವರ್ಷ ವಾಸ: ಅಯೂಬ್ ರಿಯಾಝ್ ಮಂಜಿಲ್ ಯೋಜನಾನಗರ ಯಡ್ತರೆ  ಗ್ರಾಮ, ಬೈಂದೂರು  ತಾಲೂಕು ಮತ್ತು 2) ಮಹಮ್ಮದ್ ಜಾಹೀರ್ ಪ್ರಾಯ: 34 ವರ್ಷ ವಾಸ: ಅಯೂಬ್ ರಿಯಾಝ್ ಮಂಜಿಲ್ ಯೋಜನಾನಗರ ಯಡ್ತರೆ  ಗ್ರಾಮ, ಬೈಂದೂರು  ತಾಲೂಕು ಇವರನ್ನು ವಶಕ್ಕೆ ಪಡೆದಿದ್ದು ಉಳಿದವರು ಓಡಿ ಹೋಗಿರುತ್ತಾರೆ. ಓಡಿ ಹೋದವರರು ರಾಜು, ಶೇಖರ ಹಾಗೂ ಭರತ್ ಎಂಬುದಾಗಿ ತಿಳಿಯಿತು,  ಕೋಳಿ ಅಂಕಕ್ಕೆ ಬಳಸಿದ  5  ಕೋಳಿಗಳನ್ನು,  ಕೋಳಿಯ ಕಾಲಿಗೆ ಕಟ್ಟಿದ  ಕತ್ತಿ-2 ಹಾಗೂ ನಗದು 1500/-  ರೂಫಾಯಿಯನ್ನು ಪಂಚರುಗಳ ಸಮಕ್ಷಮ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 115/2021 ಕಲಂ: 87, 93  ಕರ್ನಾಟಕ ಪೊಲೀಸ್  ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಕೋಟ: ಪಿರ್ಯಾದಿ ಶಕುಂತಳಾ ಇವರ ತಮ್ಮ ರಾಘವೇಂದ್ರ ಪ್ರಾಯ 29 ವರ್ಷ ಎಂಬವರು ಕಲ್ಮರ್ಗಿ ಹಾರ್ಡ ವೇರ್ ನಲ್ಲಿ ಕೆಲಸ ಮಾಡಿಕೊಂಡಿದ್ದವನು ಪಿರ್ಯಾದಿದಾರರ ಜೊತೆಯಲ್ಲಿಯೇ ವಾಸವಾಗಿದ್ದು, ದಿನಾಂಕ 05/7/2021 ರಂದು ರಾತ್ರಿ 9.30   ಗಂಟೆಯ ಸಮಯಕ್ಕೆ ಊಟ ಮಾಡಿ ನಂತರ ಮನೆಯ ಹೊರಗಡೆ ಇರುವ ನಾಯಿಗೆ ಅನ್ನ ಹಾಕುವರೆ ಬಾವಿಯ ಬಳಿಯಿರುವ ಕಲ್ಲಿನ ಬಳಿ ಹೋಗುತ್ತಿರುವಾಗ  ಆವರಣವಿಲ್ಲದ ಬಾವಿಗೆ  ಕಾಲು ಜಾರಿ ಬಿದ್ದಿದ್ದು, ಆ ಸಮಯ ಮಳೆ ಬರುತ್ತಿದ್ದು, ಪಿರ್ಯಾದಿದಾರರು ನೋಡಿ ಬೊಬ್ಬೆ ಹೊಡೆದಾಗ ನೆರೆಕೆರೆಯ ಸುಜನ್ ಹಾಗೂ ಮಂಜುನಾಥ ರವರು ಓಡಿ ಬಂದು ಬಾವಿಗೆ ಏಣಿ ಇಳಿಸಿ ಬಾವಿಯಿಂದ ಮೇಲಕ್ಕೆತ್ತಿ  ನೋಡಲಾಗಿ   ಮಾತನಾಡುವ ಸ್ಥಿತಿಯಲ್ಲಿ  ಇರಲಿಲ್ಲ. ಕೂಡಲೇ ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ  ಸರ್ಕಾರಿ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ  ವೈದ್ಯರು ಪರೀಕ್ಷಿಸಿ  ರಾತ್ರಿ 11.00 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 20/2021 ಕಲಂ:174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 06-07-2021 06:11 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080