ಅಭಿಪ್ರಾಯ / ಸಲಹೆಗಳು


ಅಪಘಾತ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ದಾಮೋದರ  ಆಚಾರಿ (53), ತಂದೆ  ಕುಪ್ಪಣ್ಣ  ಆಚಾರಿ,  ಮಾವಿನ ತೋಟ  ಇನ್ನಂಜೆ  ಗ್ರಾಮ  ಇನ್ನಂಜೆ  ಉಡುಪಿ ತಾಲೂಕು ಇವರು ದಿನಾಂಕ 05/06/2022 ರಂದು  ಉಡುಪಿ  ತಾಲೂಕಿನ  ಕುಂಜಿಬೆಟ್ಟು  ಕಡಿಯಾಳಿ  ಜಂಕ್ಷನ್ನ  ಬಳಿ   ಎಳ್ಳಾರೆ  ಕಟ್ಟಡದ   ಎದುರುಗಡೆ  ರಾಷ್ಟ್ರೀಯ  ಹೆದ್ದಾರಿ 169   (ಎ)ಯ  ರಸ್ತೆಯ  ಬದಿಯಲ್ಲಿ  ನಿಂತಿರುವಾಗ  ಬೆಳಿಗ್ಗೆ  11:30 ಗಂಟೆಗೆ KA-20-AB-4366 ನೇ ಆಟೋರಿಕ್ಷಾ  ಚಾಲಕ  ಮಹಮ್ಮದ್  ರಾಝೀಕ್   ತನ್ನ  ಅಟೋರಿಕ್ಷಾವನ್ನು ಮಣಿಪಾಲ  ಕಡೆಯಿಂದ  ಕಲ್ಸಂಕ  ಕಡೆಗೆ ಚಲಾಯಿಸಿಕೊಂಡು  ಬಂದು  ಎಳ್ಳಾರೆ  ಕಟ್ಟಡದ   ಎದುರುಗಡೆ  ದುಡುಕುತನ ಮತ್ತು ನಿರ್ಲಕ್ಷತನದಿಂದ ತೀರಾ ಎಡ ಬದಿಗೆ  ಚಲಾಯಿಸಿ  ಪಿರ್ಯಾದಿದಾರರಿಗೆ  ಡಿಕ್ಕಿ ಹೊಡೆದ  ಪರಿಣಾಮ ಪಿರ್ಯಾದಿದಾರರು  ರಸ್ತೆಗೆ  ಬಿದ್ದು  ತಲೆಗೆ  ಗಂಬೀರ  ಗಾಯವಾಗಿದ್ದು  ಮೇಲಿನ  ನಾಲ್ಕು ಹಲ್ಲಗಳು  ಮತ್ತು  ಕೆಳಗಿನ ಎರಡು  ಹಲ್ಲಗಳು  ತುಂಡಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾಪು: ಪಿರ್ಯಾದಿದಾರರಾದ ದಿನಕರ (53), ತಂದೆ: ಜನಾರ್ಧನ ಮೆಂಡನ್, ವಾಸ: ಕೊಡವೂರು ಮೂಡಬೆಟ್ಟು ರೋಡ್ ಸರ್ವನಿಧಿ, ಕೊಡವೂರು ಗ್ರಾಮ ಉಡುಪಿ ಇವರು ದಿನಾಂಕ 04/06/2022 ರಂದು ಉದ್ಯಾವರ ಗ್ರಾಮದ ಉದ್ಯಾವರ ಭಗವತಿ ಹಾರ್ಡ್‌ವೇರ್‌ ಬಳಿ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ ಪಶ್ಚಿಮ ಬದಿಯಲ್ಲಿ ನಿಂತುಕೊಂಡಿದ್ದು,  ಪಿರ್ಯಾದಿದಾರರ ಹೆಂಡತಿ ಸವಿತಾ ರವ ರು ಕೆಲಸದ ನಿಮಿತ್ತ ಬೊಳ್ಜೆ ಕಡೆಗೆ ಹೋಗಿ ಬೊಳ್ಜೆ ರಸ್ತೆಯಿಂದ ಬಂದು ಉದ್ಯಾವರ ಭಗವತಿ ಹಾರ್ಡ್‌ವೇರ್ ಹತ್ತಿರ ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 66 ರಸ್ತೆಯನ್ನು ದಾಟಲು ರಸ್ತೆ ಪೂರ್ವ ಬದಿಯಲ್ಲಿ ನಿಂತುಕೊಂಡಿದ್ದಾಗ ರಾತ್ರಿ 7:45 ಗಂಟೆಯ ಸಮಯಕ್ಕೆ ಉಡುಪಿ ಕಡೆಯಿಂದ KA-20-P-8275 ನೇ ಕಾರು ಚಾಲಕ ರಶೀದ್ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲಾಯಿಸಿ ತೀರಾ ಎಡಬದಿಗೆ ಬಂದು ಪಿರ್ಯಾದಿದಾರರ ಹೆಂಡತಿ ಸವಿತಾ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಸವಿತಾ ರವರ ರಸ್ತೆಗೆ ಬಿದ್ದು ಅವರ ಎಡಕೈ ಕಿರು ಬೆರಳು, ಬಲಕಾಲಿನ ಗಂಟಿಗೆ, ಬಲಕೈ ಗಂಟಿಗೆ, ಮತ್ತು ಹಣೆಗೆ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ:  ಪಿರ್ಯಾದಿದಾರರಾದ ಅಬ್ದುಲ್ ರವೂಫ್ (41), ತಂದೆ:ಹಸೈನಾರ್, ವಾಸ:ಅಲ್‌ಭದ್ರಿಯಾ ಜುಮ್ಮಾ ಮಸೀದಿ ಎದುರುಗಡೆ ಮಾವಿನಕಟ್ಟೆ  ಗುಲ್ವಾಡಿ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 04/06/2022 ರಂದು ರಾತ್ರಿ 08:30 ಗಂಟೆಗೆ ತನ್ನ ಅಕ್ಕನ ಮಗನಾದ ದಾನಿಶನಿಗೆ ಬುದ್ದಿವಾದವನ್ನು ಹೇಳಿದ್ದಕ್ಕಾಗಿ ದಿನಾಂಕ 05/06/2022 ರಂದು ಮಧ್ಯಾಹ್ನ 01:30 ಗಂಟೆಗೆ ಪಿರ್ಯಾದಿದಾರರು KA-20-Z-6284 ನೇ ನಂಬ್ರದ ಬುಲೆರೋ ಜೀಪಿನಲ್ಲಿ ಕುಂದಾಪುರಕ್ಕೆ ಹೋಗುತ್ತಿರುವಾಗ ಆರೋಪಿತರಾದ 1.ಸಫಾನ್ (26), ತಂದೆ:ಹನೀಫ್ , ವಾಸ:ಶಾಂತಿನಗರ ಬಜ್ಪೆ  ಮಂಗಳೂರು, 2. ದಾನೀಶ್, ತಂದೆ: ಮೊಹಮ್ಮದ್ ಇಕ್ಬಾಲ್, ವಾಸ:ಅಲ್‌ಭದ್ರಿಯಾ ಜುಮ್ಮಾ ಮಸೀದಿ ಎದುರುಗಡೆ ಮಾವಿನಕಟ್ಟೆ  ಗುಲ್ವಾಡಿ ಗ್ರಾಮ ಕುಂದಾಪುರ ತಾಲೂಕು ಇವರು KA-19-MG-508  ನೇ ನಂಬ್ರದ ಬಿಳಿ ಬಣ್ಣದ ಹುಂಡೈ  ಐ-20 ಕಾರಿನಿಂದ ಬಂದು  ಶೆಟ್ರಕಟ್ಟೆ  ಪೆಟ್ರೋಲ್ ಬಂಕಿನ ಬಳಿ ಪಿರ್ಯಾದಿದಾರರ ಜೀಪನ್ನು ಅಡ್ಡಗಟ್ಟಿದ್ದು ಆಗ ಕಾರನ್ನು ಚಲಾಯಿಸುತ್ತಿದ್ದ ಸಫಾನ್ ಪಿರ್ಯಾದಿದಾರರನ್ನು ಉದ್ದೇಶಿಸಿ ನಿನ್ನದು ಜಾಸ್ತಿಯಾಗಿದೆ, ನೋಡಿಕೊಳ್ಳುತ್ತೇನೆ ಎಂದು ಹೇಳುತಿದ್ದು. ಆಗ ಪಿರ್ಯಾದಿದಾರರು ಕಾರಿನ ಎಡ ಭಾಗದ ಮುಂಬದಿಯ ಸೀಟಿನಲ್ಲಿ ಕುಳಿತಿದ್ದ  ತನ್ನ ಅಕ್ಕನ ಮಗನಾದ ದಾನಿಶ್ ನೋಡಿ ಈತನೇ ಪಿರ್ಯಾದಿದಾರರೊಂದಿಗೆ ಗಲಾಟೆ ಮಾಡಲು ಜನ ಕರೆಸಿರಬಹುದೆಂದು ತಿಳಿದು ಪಿರ್ಯಾದಿದಾರರು ವಾಪಾಸ್ಸು ಮನೆಗೆ ಬಂದು ಮಧ್ಯಾಹ್ನ 01:45 ಗಂಟೆಗೆ ಈ ವಿಚಾರವನ್ನು ಕೇಳಲು ಅಕ್ಕನ ಮನೆಯ ಅಂಗಳದಲ್ಲಿ ಹೋಗುತ್ತಿರುವಾಗ ಸಫಾನ್ ಪಿರ್ಯಾದಿದಾರರ ಹಿಂದಿನಿಂದ ಬಂದು ಒಂದು ಕಬ್ಬಿಣದ ರಾಡ್‌ನಿಂದ ಪಿರ್ಯಾದಿದಾರರ ತಲೆ ಹಿಂಬದಿಗೆ ಹೊಡೆದಿದ್ದು. ಆಗ ದಾನಿಶನು ಕೈಯಿಂದ ಕೆನ್ನೆಗೆ ಹೊಡೆದು ನಂತರ ಅಲ್ಲೆ ಬಿದ್ದುಕೊಂಡಿದ್ದ ಒಂದು ರೀಪಿನಿಂದ ಪಿರ್ಯಾದಿದಾರರ ಸೊಂಟಕ್ಕೆ ಹೊಡೆಯುತ್ತಾ ಅವಾಚ್ಯವಾಗಿ ಬೈದು ಸಫಾನ್ ಮತ್ತು ದಾನಿಶನು ಏರು ಧ್ವನಿಯಲ್ಲಿ ಬೈಯುತಿದ್ದು, ಆಗ ಪಿರ್ಯಾದಿದಾರರ ಬೊಬ್ಬೆಯನ್ನು ಕೇಳಿ ಪಿರ್ಯಾದಿದಾರರ ಹೆಂಡತಿ ರಾಫಿಯಾ, ಮಗಳು ಮೋರಿ ರೀಹಾ ಮತ್ತು ಮಗ ತವಕ್ಕಲ್ ರೈಫ್‌ ಓಡಿ ಬಂದಿದ್ದು ಅವರಿಗೂ ಕೂಡ ದಾನಿಶ್ ಮತ್ತು  ಸಫಾನ್ ರೀಪಿನಿಂದ ಹೊಡೆದು ಕಾಲಿನಿಂದ ತುಳಿದು ಪಿರ್ಯಾದಿದಾರರ ಹೆಂಡತಿ ಮಕ್ಕಳಿಗೆ  ಬೆದರಿಕೆ ಹಾಕಿದ್ದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2022 ಕಲಂ: 341, 323, 324, 354, 504, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಪಡುಬಿದ್ರಿ: ಪಿರ್ಯಾದಿದಾರರಾದ ಲೀಲೇಶ್‌ ಸುವರ್ಣ (36),  ತಂದೆ: ವಾಸುದೇವ ಸುವರ್ಣ, ವಾಸ: ಕೊಳಂಬೆ ಹೌಸ್‌, ಹೆಜಮಾಡಿ, ಕಾಪು ತಾಲೂಕು ಇವರ ದೊಡ್ಡಪ್ಪ ಶೇಖರ ಕರ್ಕೇರ ರವರು ಕಾಪು ತಾಲೂಕು ನಡ್ಸಾಲು ಗ್ರಾಮದ ಕನ್ನಂಗಾರ್‌ ಬೈಪಾಸ್‌ ಬಳಿ ಯ ಇಂದ್ರ ಪ್ರಸ್ಥ ಎಂಬ ಮನೆಯಿಂದ ಅವರ ಸಂಬಂಧಿಯ ಮದುವೆ ಕಾರ್ಯಕ್ರಮಕ್ಕೆ 2-3 ದಿನಗಳ ಹಿಂದೆ ಕುಟುಂಬ ಸಮೇತವಾಗಿ ಮುಂಬೈಗೆ ಹೋಗಿರುತ್ತಾರೆ. ಅವರ ಮನೆಯ ಪಕ್ಕದಲ್ಲಿ ಗದಗ ಮೂಲದ ಶೋಭ ಮತ್ತು ಅವರ ಗಂಡ ಮತ್ತು ಮಕ್ಕಳಿಗೆ ಉಳಿದುಕೊಳ್ಳಲು ಹೆಂಚಿನ ಮನೆಯೊಂದನ್ನು ನೀಡಿರುತ್ತಾರೆ. ದಿನಾಂಕ 04/06/2022 ರಂದು ಸಂಜೆ.18:00 ಗಂಟೆಗೆ ಶೋಭಾ ರವರು  ಶೇಖರ ಕರ್ಕೇರ ರವರ ಮನೆಯ ಬಾಗಿಲಿನ ಬೀಗ ತೆಗೆದು ನಾಯಿಗೆ ಅನ್ನ ಹಾಕಿ ಬಾಗಿಲು ಬೀಗ ಹಾಕಿ  ಪಕ್ಕದ ಮನೆಗೆ ಹೋಗಿ ದಿನಾಂಕ 05/06/2022 ಬೆಳಿಗ್ಗೆ 8:00 ಗಂಟೆಗೆ ನಾಯಿಗೆ ಅನ್ನ ಬೇಯಿಸಲು ಶೇಖರ್ ಕರ್ಕೇರ ರವರು  ಮನೆಯ ಬಾಗಿಲು ತೆರೆದಂತಿದ್ದು,  ಬಾಗಿಲು ತೆರೆದಂತಿದ್ದು ಒಳಗೆ ಹೋಗಿ ನೋಡಿದಾಗ ಕೋಣೆಯ ಬಾಗಿಲು ತೆರೆದಿದ್ದು, ಅದರೊಳಗಿನ ಕಪಾಟಿನ ಬಾಗಿಲನ್ನು ತೆರೆದಿದ್ದು ಅವರು  ಹೆದರಿ ಶೇಖರ್ ಕರ್ಕೇರ ರವರಿಗೆ ಫೋನ್‌ ಮಾಡಿ ವಿಚಾರ ತಿಳಿಸಿದಾಗ ಅವರು ಪಿರ್ಯಾದಿದಾರರಿಗೆ ಮಾಹಿತಿ ತಿಳಿಸಿ ಸ್ಥಳಕ್ಕೆ ಹೋಗುವಂತೆ ತಿಳಿಸಿದಾಗ ಪಿರ್ಯಾದಿದಾರರು,  ತಾರನಾಥ ಮತ್ತು ಹೆಜಮಾಡಿಯ ಸುಧೀರ್‌ ಎಂಬುವವರೊಂದಿಗೆ  ಮನೆಯ ಬಳಿ ಬಂದು ನೋಡಿದಾಗ ಮನೆಯ ಉತ್ತರ ಪಶ್ಚಿಮದ ಮೂಲೆಯಲ್ಲಿದ್ದ ಸಿ.ಸಿ. ಕ್ಯಾಮಾರವನ್ನು ಮೇಲ್ಗಡೆ ಮಾಡಿಸಿ ಇಡಲಾಗಿತ್ತು  ಮನೆಯ ಹಿಂಬದಿ ಬಾಗಿಲನ್ನು ನೋಡಿದಾಗ ಮನೆಯ ಹಿಂಬದಿ ಬಾಗಿಲನ್ನು ಯಾವುದೋ ಆಯುದದಿಂದ ಮೀಟಿಸಿ ತೆರೆದಂತೆ ಇದ್ದು ಒಳಗೆ ಹೋಗಿ ನೋಡಿದಾಗ  ಒಳಗಿನ ಮಲಗುವ ಕೋಣೆಯ ಬಾಗಿಲು ತೆರೆದಿದ್ದು, ಅದಕ್ಕೆ ಬೀಗ ಹಾಕಿರುವುದು ಕಂಡು ಬರಲಿಲ್ಲ ಕೋಣೆಯಲ್ಲಿದ್ದ  ಕಬ್ಬಿಣದ ಕಪಾಟು ಮತ್ತು ವಾರ್ಡ್‌ರೋಬಿನ ಬಾಗಿಲನ್ನು ಕೂಡಾ ಮೀಟಿಸಿ ತೆರೆದಂತಿರುತ್ತದೆ. ವಾರ್ಡ್‌ ರೋಬಿನ ಡ್ರಾವರ್‌ ಬೀಗ ಹಾಕಿ  ಯಥಾ ಸ್ಥಿತಿಯಲ್ಲಿದ್ದು ತೆರೆದಿರುವುದಿಲ್ಲ. ಕಪಾಟು ಮತ್ತು ವಾರ್ಡ್ ರೋಬಿನ ಬಟ್ಟೆ ಬರೆ ಯಥಾ ಸ್ಥಿತಿಯಲ್ಲಿತ್ತು. ಮೇಲಂತಸ್ಥಿನ ಒಂದು ಕೋಣೆಯಲ್ಲಿ ಕೂಡಾ ವಾರ್ಡ್‌ರೋಬಿನ ಬಾಗಿಲನ್ನು ಮೀಟಿಸಿ ತೆರೆದಂತಿದ್ದು, ಅದರ ಎರಡು ಡ್ರಾವರ್‌ ಬೀಗ ಹಾಕಿ  ಯಥಾ ಸ್ಥಿತಿಯಲ್ಲಿದ್ದು ತೆರೆದಿರುವುದಿಲ್ಲ. ಅದರಲ್ಲಿದ್ದ ಬಟ್ಟೆ ಬರೆಗಳು ಕೂಡಾ ಯಥಾ ಸ್ಥಿತಿಯಲ್ಲಿತ್ತು ಮೇಲಂತಸ್ಥಿನ ಸಿ.ಸಿ. ಕ್ಯಾಮಾರಾ ಮೇಲ್ಮುಖವಾಗಿತ್ತು.ಶೇಕರ್‌ ಕರ್ಕೇರ ರವರಿಗೆ ಫೋನ್‌ ಮಾಡಿ ತಿಳಿಸಿದಾಗ ಕೆಳ ಅಂತಸ್ಥಿನ ಡ್ರಾವರ್‌ನ್ಲಲಿ ಒಂದು ಚಿನ್ನದ ಆಭರಣ ಮೇಲಂತಸ್ಥಿನ ಡ್ರಾವರ್‌ನಲ್ಲಿ  50,000/- ಹಣ ಇದ್ದ ಬಗ್ಗೆ ತಿಳಿಸಿರುತ್ತಾರೆ. ಆದರೆ ಯಾವ ಡ್ರಾವರ್‌ ಎಂದು ತಿಳಿದಿರುವುದಿಲ್ಲ. ಉಳಿದಂತೆ ಸ್ವತ್ತುಗಳು ಯಥಾಸ್ಥಿತಿಯಲ್ಲಿತ್ತು ಎಷ್ಟು ಹಣ ಚಿನ್ನ ಹೋಗಿದೆ ಎಂದು ಅವರು ಮುಂಬೈಯಿಂದ ಬಂದ ಮೇಲೆ ತಿಳಿಸುವುದಾಗಿಯೂ ಠಾಣೆಯಲ್ಲಿ ದೂರು ದಾಖಲಿಸುವಂತೆ ತಿಳಿಸಿರುತ್ತಾರೆ. ಯಾರೋ ಕಳ್ಳರು ದಿನಾಂಕ 04/06/2022 ರಂದು ಸಂಜೆ 6:00 ಗಂಟೆಯಿಂದ ದಿನಾಂಕ 05/06/2022 ರ ಬೆಳಿಗ್ಗೆ 08:00 ಗಂಟೆಯ ಮದ್ಯಾವದಿಯಲ್ಲಿ ಶೇಕರ ಕರ್ಕೇರರವರ ಮನೆಯ ಹಿಂಬದಿಯ ಬಾಗಿಲನ್ನು ಮೀಟಿಸಿ ತೆರೆದು ಒಳಹೊಕ್ಕಿ ಕಪಾಟು ಹಾಗೂ ಹಾಗೂ ವಾರ್ಡ್‌ರೋಬ್‌ಗಳನ್ನು ಮೀಟಿಸಿ ತೆರೆದು ಕಳ್ಳತನಕ್ಕೆ ಪ್ರಯತ್ನಿಸಿರುತ್ತಾರೆ. ಕಳವಾದ ಸ್ವತ್ತು ಹಾಗೂ ಅದರ ಮೌಲ್ಯವನ್ನುದೊಡ್ಡಪ್ಪನವರು ಮುಂಬೈಯಿಂದ ಬಂದ ಮೇಲೆ ತಿಳಿಸುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2022 ಕಲಂ:  457, 380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

     

ಇತ್ತೀಚಿನ ನವೀಕರಣ​ : 06-06-2022 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080