ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 05/06/2022 ರಂದು ರಂದು ರಾತ್ರಿ ರಾತ್ರಿ 8:30 ಗಂಟೆಗೆ, ಕುಂದಾಪುರ  ತಾಲೂಕಿನ,  ತಲ್ಲೂರು ಗ್ರಾಮದ  ಪ್ರವಾಸಿ  ಹೊಟೇಲ್‌‌ ಬಳಿ  ಪಶ್ವಿಮ  ಬದಿಯ NH 66   ರಸ್ತೆಯಲ್ಲಿ,  ದಾರಿದೀಪವಿಲ್ಲದ ಕತ್ತಲು NH 66   ರಸ್ತೆಯಲ್ಲಿ ಆಪಾದಿತ ನಜ್ರುಲ್‌ ಬಷೀರ್‌ ನಿರ್ಲಕ್ಷ್ಯತನದಿಂದ ಯಾವುದೇ ಸಿಗ್ನಲ್‌‌‌,  ಇಂಡಿಕೇಟರ್‌‌, ಸಹಿತ ಇತರೆ ಯಾವುದೇ  ಮುನ್ನೆಚರಿಕೆ  ಕ್ರಮ  ವಹಿಸದೇ  ನಿಲ್ಲಿಸಿಕೊಂಡಿದ್ದ KA-02-C-7538ನೇ ಟಿಪ್ಪರ್‌  ಲಾರಿಗೆ,  ಸತೀಶ ಜೋಗಿ ಎಂಬುವವರು KA-20-ET-1383 Honda Activa ಸ್ಕೂಟರ್‌ ನಲ್ಲಿ ಆಕಾಶ ಜೋಗಿರವರನ್ನು ಸಹ ಸವಾರನಾಗಿ  ಕುಳ್ಳಿರಿಸಿಕೊಂಡು ಕುಂದಾಪುರದಿಂದ  ಬೈಂದೂರು ಕಡೆಗೆ   ಸವಾರಿ ಮಾಡಿಕೊಂಡು ಬಂದು, ಟಿಪ್ಪರ್‌  ಲಾರಿಯ ಹಿಂಬಂದಿಗೆ  ಡಿಕ್ಕಿ ಹೊಡೆದು ಅಪಘಾತಕ್ಕೆ ಒಳಗಾಗಿ ಆಕಾಶ ಜೋಗಿರವರ ಮುಖ, ತಲೆಗೆ ರಕ್ತಗಾಯ ಹಾಗೂ ಸತೀಶ ಜೋಗಿಯವರ ತಲೆಗೆ ಗಂಭೀರ ರಕ್ತಗಾಯ ಹಾಗೂ ಒಳಜಖಂ,  ಎಡಕಾಲಿಗೆ ಮೂಳೆ ಮುರಿತವಾದ  ಗಾಯವಾಗಿದ್ದು,  ಆಕಾಶ ಜೋಗಿರವರು ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಸತೀಶ ಜೋಗಿಯವರು ಕುಂದಾಪುರ ಚಿನ್ಮಯಿ, ಬಳಿಕ ಕುಂದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ  ಮಣಿಪಾಲ  ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದವರು    ಚಿಕಿತ್ಸೆ ಫಲಕಾರಿಯಾಗದೇ ರಾತ್ರಿ  10:55  ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 73/2022 ಕಲಂ: 279, 337,  304 (ಎ)  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕೋಟ: ಪಿರ್ಯಾದಿದಾರರಾದ ತಮ್ಮಯ್ಯ ಮಯ್ಯ (62) , ತಂದೆ: ದಿ ಶ್ರೀನಿವಾಸ ಮಯ್ಯ, ವಾಸ : ಭಟ್ರಕಟ್ಟೆ ಕಾರ್ಕಡ ಗ್ರಾಮ ಬ್ರಹ್ಮಾವರ ತಾಲೂಕು ಇವರ ಹೆಂಡತಿಯ ಅಕ್ಕ ಗೀತಾ ರವರು ಮಂಗಳೂರಿನಲ್ಲಿದ್ದವರು  ದೇವಸ್ಥಾನ ಭೇಟಿಗೆಂದು  ಬಂದಿದ್ದು ಕೋಟ ಅಮತೇಶ್ವರಿ  ದೇವಸ್ಥಾನಕ್ಕೆ  ಹೋಗಿ ಮರಳಿ ಸಾಲಿಗ್ರಾಮ ದೇವಸ್ಥಾನಗಳಿಗೆ ಭೇಟಿ ಮಾಡಿ ಸಂಜೆ ವಾಪಾಸ್ಸು ಮಂಗಳೂರಿಗೆಂದು ಹೊರಟವರು ಸಾಲಿಗ್ರಾಮ ಪೇಟಯ ಬಳಿ ಪಿರ್ಯಾದಿದಾರರ ಬಳಿ ಮಾತನಾಡಿ  ಸಂಜೆ 6:20 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 66 ಉಡುಪಿ ಕುಂದಾಪುರ  ಮುಖ್ಯ ರಸ್ತೆಯ  ಪಶ್ಚಿಮ ಬದಿಯಿಂದ  ಪೂರ್ವ ಬದಿಗೆ ರಸ್ತೆ ದಾಟುತ್ತಿದ್ದಾಗ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ರಸ್ತೆಯ ಪಶ್ಚಿಮ ಪಥದಲ್ಲಿ ಬರುತ್ತಿದ್ದ  KA-21-M-9285 ನೇ ಕಾರು ಚಾಲಕ ಮೊಹಮ್ಮದ್ ಜಾಯಿದ್ ಶರೀಪ್  ಸಾಲಿಗ್ರಾಮ ಪೇಟೆಯ ಬಳಿ ಬಂದಾಗ ಅತೀವೇಗ ಜಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ರಸ್ತೆ ದಾಟುತ್ತಿದ್ದ  ಗೀತಾ ರವರಿಗೆ ಢಿಕ್ಕಿ ಹೊಡೆದ ಪರಿಣಾಮ ಗೀತಾರವರ ಬಲ ಹಣೆಗೆ ತೀವೃ ತರಹದ  ರಕ್ತ ಗಾವಾಗಿರುತ್ತದೆ. ಹಾಗೂ ಮೈ ಕೈಗಳಿಗೆ  ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ.  ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 83/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರರಾದ ವಿಠಲ ಲಚಮನಾಯ್ಕರ (22), ತಂದೆ: ಎಲ್ಲಪ್ಪ  ವಾಸ: ಲಚಮ ನಾಯ್ಕರ, ಮುತ್ತಲಿಗೇರಿ ಗ್ರಾಮ, ಬಾದಾಮಿ ತಾಲೂಕು ಬಾಗಲಕೋಟೆ ಜಿಲ್ಲೆ ಇವರು 5 ದಿನಗಳ ಹಿಂದೆ ಮಂಗಳೂರಿನ ಪಣಂಬೂರು ಮೂಡುಶೆಡ್ಡೆ ಎಂಬಲ್ಲಿರುವ ಆತನ ಚಿಕ್ಕಪ್ಪನ ಮಗ ಹನುಮಂತ ಎಂಬುವವರ ಮನೆಗೆ ಬಂದಿದ್ದು, ದಿನಾಂಕ 05/06/2022 ರಂದು ಬೆಳಿಗ್ಗೆ ಉಡುಪಿ ಕೃಷ್ಣ ಮಠಕ್ಕೆ ಹೋಗಲು ಚಿಕ್ಕಪ್ಪನ ಪರಿಚಯದವರಿಂದ ಸ್ಕೂಟಿಯೊಂದನ್ನು ಪಡೆದುಕೊಂಡು ಉಡುಪಿಗೆ ಹೋಗಿ ದೇವರ ದರ್ಶನ ಮಾಡಿ, ಪಿರ್ಯಾದಿದಾರರಿಗೆ ಪರಿಚಯದ ನಾಗರಾಜ್ ಎಂಬುವವರು ಅಲ್ಲಿ ಸಿಕ್ಕಿದ್ದು ಅವರ KA-19-EZ-4123 ನೇ ಮೋಟಾರ್ ಸೈಕಲ್ ನಲ್ಲಿ ಗಂಗಾಧರ್ ನನ್ನು ಹಿಂದುಗಡೆ ಕುಳ್ಳಿರಿಸಿಕೊಂಡು ಮಂಗಳೂರು ಕಡೆಗೆ ಹೊರಟು, ಪಿರ್ಯಾದಿದಾರರು ಕೂಡಾ ಅವರ ಹಿಂದೆ ಸ್ಕೂಟಿಯಲ್ಲಿ ಮಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿ-66 ರ ಏಕಮುಖ ಸಂಚಾರ ರಸ್ತೆಯಲ್ಲಿ ಹೋಗುತ್ತಾ  18:20 ಗಂಟೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಬೀಡು ಯೂ ಟರ್ನ್ ಬಳಿ ತಲುಪುತ್ತದ್ದಂತೆ KA-20-C-5798 ನೇ ನಂಬ್ರದ ಟೆಂಪೋ ಚಾಲಕ ಮುಂಡ್ಕೂರು ದಿನೇಶ್ ಟೆಂಪೋವನ್ನು ಮಂಗಳೂರು-ಉಡುಪಿ ಏಕಮುಖ ಸಂಚಾರ ರಸ್ತೆಯಿಂದ ಯೂ ಟರ್ನ್ ಮೂಲಕ ನಿರ್ಲಕ್ಷ ಹಾಗೂ ದುಡುಕುತನದಿಂದ ತಿರುಗಿಸಿ ಉಡುಪಿ-ಮಂಗಳೂರು ಏಕಮುಖ ಸಂಚಾರ ರಸ್ತೆಗೆ ಚಲಾಯಿಸಿಕೊಂಡು ಬಂದು ನಾಗರಾಜನು ಚಲಾಯಿಸಿಕೊಂಡು  ಹೋಗುತ್ತಿದ್ದ ಮೋಟಾರ್ ಡಿಕ್ಕಿ ಹೊಡೆದು ಮೋಟಾರ್ ಸೈಕಲನ್ನು ಎಳೆದುಕೊಂಡು ಸುಜ್ಞಾನ್ ಕಂಪನಿಯ ಕಡೆಗೆ ಹೋಗುವ ರಸ್ತೆಯ ಮೇಲೆ ಹೋಗಿ ನಿಂತಿರುತ್ತದೆ. ಈ ಅಪಘಾತದ ಪರಿಣಾಮ ನಾಗರಾಜ ರವರ ಬಲಕೈ, ಬಲಕಾಲಿನ ಮೂಳೆ ಮುರಿತದ ತೀವ್ರಗಾಯ, ಮುಖಕ್ಕೆ ಗಾಯವಾಗಿರುತ್ತದೆ. ಗಂಗಾಧರ ರವರ ಕೈಕಾಲು, ಬೆನ್ನಿಗೆ, ಗಾಯವಾಗಿದ್ದು, ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2022, ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ:  ಪಿರ್ಯಾದಿದಾರರಾದ ಗಣೇಶ್‌ ಭಟ್‌ (56), ತಂದೆ:ದಿವಂಗತ ಪರಮೇಶ್ವರ ಭಟ್‌, ವಾಸ: ಮಧ್ಯಸ್ಧರ ಬೆಟ್ಟು, ನೀಲಾವರ ಗ್ರಾಮ, ಬ್ರಹ್ಮಾವರ  ತಾಲೂಕು ಇವರ ಜೊತೆ ಅವರ ಅಣ್ಣ ರವೀಂದ್ರ ಭಟ್‌(60) ಹಾಗೂ ಅವರ ಹೆಂಡತಿ ಶಾಂತ ವಾಸವಾಗಿದ್ದು ಶಾಂತ ರವರು 25 ವರ್ಷದಿಂದ ಕಣ್ಣು ಕಾಣಿಸದೇ  ಇದ್ದು  ಅವರನ್ನು ರವೀಂದ್ರ ಭಟ್‌ರವರು ನೋಡಿಕೊಳ್ಳುತ್ತಿದ್ದು ರಾತ್ರಿ ಹೊತ್ತಿನಲ್ಲಿ ಮೂತ್ರ ವಿಸರ್ಜನೆಗೆ ಕರೆದುಕೊಂಡು ಹೋಗುತ್ತಿರುವುದಾಗಿದೆ. ದಿನಾಂಕ 05/06/2022 ರಂದು ರಾತ್ರಿ 9:00 ಗಂಟೆಗೆ ಪಿರ್ಯಾದಿದಾರರು ಎಲ್ಲರೂ ಊಟ ಮಾಡಿ ಮಲಗಿದ್ದು, ದಿನಾಂಕ  06/06/2022 ರಂದು ಬೆಳಗಿನ ಜಾವ 2:00 ಗಂಟೆಗೆ ರವೀಂದ್ರ ಭಟ್‌ ರವರ ಹೆಂಡತಿ ಬೊಬ್ಬೆ ಹಾಕಿದ್ದನ್ನು ಕೇಳಿ ಅಂಗಳಕ್ಕೆ  ಹೋಗಿ ನೋಡಿದಾಗ ರವೀಂದ್ರ  ಭಟ್‌ರವರು ನೆಲದಲ್ಲಿ ಬಿದ್ದಿದ್ದು ಅವರ ಬಲ ಕಿವಿಯಲ್ಲಿ ರಕ್ತ ಸೋರಿಕೆಯಾಗುತಿದ್ದು ಮಾತನಾಡದೇ ಅಸ್ವಸ್ಧಗೊಂಡಿದ್ದು  ಅವರನ್ನು ನೆರೆಮನೆಯ ಕಾರಿನಲ್ಲಿ  ಚಿಕಿತ್ಸೆಯ ಬಗ್ಗೆ  ಬ್ರಹ್ಮಾವರ ಪ್ರಣಮ್‌ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅಲ್ಲಿ ವೈದ್ಯರು ಪರೀಕ್ಷಿಸಿ ಬೆಳಿಗ್ಗೆ 3:30 ಗಂಟೆಗೆ  ರವೀಂದ್ರ ಭಟ್‌ ರವರು ಮೃತ ಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್  ಕ್ರಮಾಂಕ 27/2022 ಕಲಂ: 174  ಸಿ.ಆರ್‌.ಪಿ.ಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ನಿಶಾಂತ (31), ತಂದೆ : ದಿ.  ಕರುಣಾಕರ ಕರ್ಕಡ, ವಾಸ : ಕರ್ಕಡ ಕಂಪೌಂಡ ಪಿತ್ರೋಡಿ ಅಂಚೆ ಉದ್ಯಾವರ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 05/06/2022 ರಂದು ಮಧ್ಯಾಹ್ನ 2:00 ಗಂಟೆಯ ಸಮಯಕ್ಕೆ ಸುಧಾಕರ ಎಂಬುವವರ  ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದು ನಂತರ ಅಲ್ಲಿಂದ ವಾಪಾಸ್ಸು ಬರುವ ವೇಳೆಯಲ್ಲಿ ಮಿಥೇಶ ರವರು ಹಣದ ವಿಚಾರದಲ್ಲಿ ಪಿರ್ಯಾದಿದಾರರಿಗೆ ನೀಡಬೇಕಾದ ಹಣದ ಬಗ್ಗೆ ಚರ್ಚೆ ನಡೆದಿದ್ದು, ಇದೇ ವಿಚಾರದಲ್ಲಿ ಪಿರ್ಯಾದಿದದಾರರನ್ನು ನೋಡಿಕೊಳ್ಳುತ್ತೇನೆ ಜೀವಂತ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿದ್ದು.  ನಂತರ ಸಂಜೆ 7:00 ಗಂಟೆಗೆ ಪಿರ್ಯಾದಿದಾರರು  ಉದ್ಯಾವರ ಪೇಟೆಯ ಭರತ ರವರ ಅಂಗಡಿಗೆ ಹೋಗಿ ವಾಪಾಸ್ಸು ಬರುವ ವೇಳೆ ಮಿಥೇಶ ಹಾಗೂ ಗಿರೀಶ ರವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಬೆದರಿಕೆ ಹಾಕಿ ಅವರ ಬಿಳಿ ಬಣ್ಣದ ಸುಜುಕಿ ಆಕ್ಸೆಸ್ ಮೋಟಾರು ಸೈಕಲ್ ನಿಂದ ಬಿಂದು ಬಾಟಲಿಯನ್ನು ತೆಗೆದು ಮಿಥೇಶ ಏಕಾಏಕಿ ಪಿರ್ಯಾದಿದಾರರ ತೆಲೆಗೆ ಹೊಡೆದಿರುತ್ತಾನೆ. ಆಗ ದುಡಾಟವಾಗಿದ್ದು ಈ ಸಮಯದಲ್ಲಿ ಪಿರ್ಯಾದಿದಾರರ ಕುತ್ತಿಗೆಯಲ್ಲಿದ್ದ ಚೇನ್ ಬಿದ್ದು ಹೋಗಿರುರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2022 ಕಲಂ 341 324 323 504 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಕಾಪು: ಪಿರ್ಯಾದಿದಾರರಾದ ಮಿಥೇಶ (35), ತಂದೆ :  ಗಣೇಶ ಸುವರ್ಣ ,ವಾಸ :  ಗುರು ಕೃಪಾ ಹೌಸ್, ಅಂಚೆ ಕಛೇರಿ ಬಳಿ, ಮಠದಂಗಡಿ ಉದ್ಯಾವರ ಗ್ರಾಮ ಉಡುಪಿ  ತಾಲ್ಲೂಕು  ಮತ್ತು ಜಿಲ್ಲೆ ಇವರು ದಿನಾಂಕ 05/06/2022 ರಂದು ಸಂಜೆ 8:20 ಗಂಟೆಗೆ ಉದ್ಯಾವರ ಗ್ರಾಮದ ಮಠದಂಗಡಿಯ ಪೇಟೆಗೆ ಹಾಲು ತರಲು ಬರುವಾಗ ಜೀನಸಿ ಅಂಗಡಿಯ ಎದುರು ಪಿರ್ಯಾದಿದಾರರಿಗೆ ಪರಿಚಯವಿರುವ ಉದ್ಯಾವರ ಪಿತ್ರೋಡಿಯ ನಿಶಾಂತ್ ಕರ್ಕಡ ಬಂದು ಪಿರ್ಯಾದಿದಾರರಿಗೆ  ತಡೆದು ನಿಲ್ಲಿಸಿ ಏಕಾಏಕಿ ಪಿರ್ಯಾದಿದಾರರಿಗೆ ಕೈಯಿಂದ ಹೊಡೆದು ಪಿರ್ಯಾದಿದಾರರ ಕುತ್ತಿಗೆಗೆ ಹೊಡೆದು, ನಂತರ ಪಿರ್ಯಾದಿದಾರರ ಕುತ್ತಿಗೆಗೆ ಕೈ ಹಾಕಿ ದೂಡಿದ್ದು, ಆಗ ನಮ್ಮ ಒಳಗೆ ದೂಡಾಟವಾಗಿ ಪಿರ್ಯಾದಿದಾರರ ಕುತ್ತಿಗೆಯಲ್ಲಿರುವ ಎರಡು ಸರ ಕಾಣೆಯಾಗಿರುತ್ತದೆ. ಆಗ ಪಿರ್ಯಾದಿದಾರರು ಬೊಬ್ಬೆ ಹಾಕಿದಾಗ ಆತನು ಕೊಲೆ ಬೆದರಿಕೆ ಹಾಕಿ ಅಲ್ಲಿಂದ ಹೋಗಿರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2022 ಕಲಂ: 341, 504, 323, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಕಾರ್ಕಳ ತಾಲೂಕು ಬೋಳ ಗ್ರಾಮದ ಬೋಳ -2 ನೇ ವಾರ್ಡಿನಲ್ಲಿ ಹೊಸದಾಗಿ ಕಾಂಕ್ರೀಟ್ ಮಾಡಿದ ರಸ್ತೆಗೆ ಯಾರೋ ಅಪರಿಚಿತರು ಗ್ರಾಮ ಪಂಚಾಯತ್ ನ ಪರವಾನಿಗೆಯನ್ನು ಪಡೆದುಕೊಳ್ಳದೇ, ಯಾವುದೋ ದುರುದ್ದೇಶದಿಂದ ಸಾರ್ವಜನಿಕರಿಗೆ ಕಿರಿಕಿರಿ ಆಗುವ ರೀತಿಯಲ್ಲಿ “ ಬೋಳ ಗ್ರಾಮ ಪಂಚಾಯತ್  ಪಡುಗಿರಿ ನಾಥೂರಾಮ್ ಗೋಡ್ಸೆ ರಸ್ತೆ” ಎಂಬ ನಾಮಫಲಕ ಇಟ್ಟ ಬಗ್ಗೆ ಪಿರ್ಯಾದಿದಾರರಾದ ರಾಜೇಂದ್ರ, ಪಂಚಾಯತ್ ಅಭಿವೃಧ್ದಿ ಅಧಿಕಾರಿಯವರು ಬೋಳ ಗ್ರಾಮ ಪಂಚಾಯತ್ ಬೋಳ ಗ್ರಾಮ ಕಾರ್ಕಳ  ತಾಲೂಕು ಉಡುಪಿ ಜಿಲ್ಲೆ ಇವರಿಗೆ ದಿನಾಂಕ 06/06/2022 ರಂದು ಬೆಳಿಗ್ಗೆ 10:15 ಗಂಟೆಗೆ ಶ್ರೀ ಸಂತೋಷ್ ದೇವಾಡಿಗ, ತಂದೆ: ವಾಸು, ಮೊಯ್ಲಿ ಬೋಳ ಅಂಚೆ ಮತ್ತು ಗ್ರಾಮ ಎಂಬವರು ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದು ಪಿರ್ಯಾದಿರರು ಕಚೇರಿಯ ಸಿಬ್ಬಂದಿಯವರೊಂದಿಗೆ ಸ್ಥಳಕ್ಕೆ ಹೋಗಿ ಪರಿಶೀಲಿಸಿ ಇಲಾಖಾ ಸಹಕಾರದೊಂದಿಗೆ ನಾಮಫಲಕವನ್ನು ತೆರವುಗೊಳಿಸಿ ಆರೋಪಿತರನ್ನು ಪತ್ತೆ ಮಾಡಿ ಕ್ರಮ ಕೈಗೊಳ್ಳುವ ಬಗ್ಗೆ ದೂರು ನೀಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 79/2022 ಕಲಂ: 290, 511  ಐಪಿಸಿ ಕಲಂ: 03 The Karnataka Open Places (Prevention of Disfiguremnet ) Act 1981 ರಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 06-06-2022 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080