ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಬೈಂದೂರು: ಪಿರ್ಯಾದಿ ವೆಂಕಟೇಶ ಇವರು ದಿನಾಂಕ; 05/06/2021 ರಂದು ಅವರ ಮನೆಯ ಹತ್ತಿರದ ಒಂದು ಮಗುವಿಗೆ ತುಂಬಾ ಆರೋಗ್ಯ ಸರಿ ಇಲ್ಲದ ಕಾರಣ ಪಿರ್ಯಾದಿದಾರರ ಬಾಬ್ತು ರಿಕ್ಷಾದಲ್ಲಿ  ಕುಳ್ಳಿರಿಸಿಕೊಂಡು ಕುಂದಾಪುರಕ್ಕೆ ಚಿಕಿತ್ಸೆಯ ಬಗ್ಗೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಿಗ್ಗೆ 05.00 ಗಂಟೆಗೆ ಕಂಬದಕೋಣೆ ಬ್ಯಾಂಕ್ ಆಫ್ ಬರೋಡಾದ ಹತ್ತಿರ ರಾಹೆ 66ರಲ್ಲಿ ತಲುಪಿದಾಗ ಪಿರ್ಯಾದಿದಾರರ ರಿಕ್ಷಾದ ಮುಂದೆ ಒಂದು ಬೈಕ್  ಹೋಗುತ್ತಿದ್ದು ಒಂದು ಲಾರಿ ಚಾಲಕನು ಲಾರಿಯನ್ನು ಕಂಬದಕೋಣೆ ಬ್ಯಾಂಕ್ ಆಫ್ ಬರೋಡಾದ ಹತ್ತಿರ ರಾಹೆ 66 ರ ಪೂರ್ವ ಬದಿಯ ರಸ್ತೆಯ ಎಡಭಾಗದಲ್ಲಿ ನಿಲ್ಲಿಸಿದ್ದು ಲಾರಿಯ ಇಂಡಿಕೇಟರ್,  ಬ್ಯಾರಿಕೇಡ್  ಹಾಗೂ ಯಾವುದೇ ಸೂಚನಾ ಫಲಕವನ್ನು ಇಡದೇ ಇದ್ದು ಆಗ  ಬೈಕ್ ಸವಾರನು ವಿಪರೀತ ಮಳೆ ಬರುತ್ತಿದ್ದುದ್ದರಿಂದ ಲಾರಿ ನಿಂತಿರುವುದು ತೋರದೇ ಇರುವುದರಿಂದ ಲಾರಿಯ ಹಿಂದಿನ ಬಲ ಬದಿಗೆ ಡಿಕ್ಕಿ ಹೊಡೆದಿದ್ದು ಅದರ ಪರಿಣಾಮ ಬೈಕ್ ಸವಾರ ಬೈಕ್ ಸಮೇತ ರಸ್ತೆಗೆ ಬಿದ್ದಿದ್ದು ಬೈಕ್ ಸವಾರನ ತಲೆಗೆ ರಕ್ತ ಗಾಯವಾಗಿರುತ್ತದೆ. ಗಾಯಗೊಂಡವರನ್ನು ಕುಂದಾಪುರ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕಳುಹಿಸಿ ಕೊಟ್ಟಿರುವುದಾಗಿದೆ. ಅಪಘಾತ ಸ್ಥಳದಲ್ಲಿ ಇದ್ದ  ಬೈಕ್ ನಂಬ್ರ ನೋಡಲಾಗಿ ಕೆ ಎ.15 ಎಚ್-6685 ಆಗಿದ್ದು ಲಾರಿಯ ನಂಬ್ರ ಕೆಎ.47-6350 ಆಗಿರುತ್ತದೆ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 97/2021 ಕಲಂ:.279,337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಕೊಲೆ ಪ್ರಕರಣ

  • ಶಂಕರನಾರಾಯಣ : ಫಿರ್ಯಾದಿ ಶ್ರೀಮತಿ   ಜ್ಯೋತಿ  ಗಾಣಿಗ ಇವರ ಗಂಡ ಉದಯ  ಕುಮಾರ್  ಗಾಣಿಗ ಮತ್ತು ಯಡಮೊಗ್ಗೆ  ಗ್ರಾಮ  ಪಂಚಾಯತ್  ಅಧ್ಯಕ್ಷರಾದ  ಪ್ರಾಣೇಶ  ಯಡಿಯಾಳ  ಈತನಿಗೂ  ಕೊಳವೆ  ಬಾವಿ  ತೆಗೆಯುವ  ಬಗ್ಗೆ   NOC   ಕೊಡುವ ವಿಚಾರದಲ್ಲಿ  ಗಲಾಟೆ  ಆಗಿರುತ್ತದೆ,  ಆ  ಬಳಿಕ  ಪ್ರಾಣೇಶ ಯಡಿಯಾಳ  ಈತನು  ಕಿರಿಕಿರಿ    ಮಾಡಿ  ಪಂಚಾಯತ್  ವತಿಯಿಂದ  NOC   ಕೊಟ್ಟಿರುತ್ತಾನೆ, ಆ  ನಂತರ   ಪ್ರಾಣೇಶ ಯಡಿಯಾಳ   ಹಾಗೂ ಬಾಲಚಂದ್ರ  ಭಟ್  ಇವರು  ಸೇರಿ ಫಿರ್ಯಾಧುದಾರರ  ಗಂಡನೊಂದಿಗೆ   ಗಲಾಟೆ  ಮಾಡಿ  ಕೊಲೆ ಮಾಡುವುದಾಗಿ  ಬೆದರಿಕೆ ಹಾಕಿರುತ್ತಾರೆ,  ದಿನಾಂಕ 05.06..2021  ರಂದು  ಸುಮಾರು  19:00  ಘಂಟೆಗೆ  ಫಿರ್ಯಾದುದಾರರ  ಗಂಡ   ಕುಂದಾಪುರ ತಾಲೂಕಿನ  ಯಡಮೊಗ್ಗೆ ಗ್ರಾಮದ  ಹೊಸಬಾಳು  ಎಂಬಲ್ಲಿ ಅವರ  ಮನೆಯಲ್ಲಿ  ಇರುವಾಗ  ಯಾರೋ   ಅವರ   ಮೊಬೈಲ್   ಪೋನ್‌‌ಗೆ   ಕರೆ ಮಾಡಿ  ಮನೆಯ  ಹತ್ತಿರದ  ರಸ್ತೆಗೆ   ಬಾ  ಮಾತನಾಡಲು  ಎಂದು   ಹೇಳಿ  ಕರೆದಿರುತ್ತಾರೆ, ಅದರಂತೆ ಅವರು ಕೆಎ, 20 ಇಇ. 9360  ನೇ  ನಂಬ್ರದ  ಮೋಟಾರ್ ಸೈಕಲ್‌ನಲ್ಲಿ  ಮನೆಯ   ಹತ್ತಿರದ   ರಸ್ತೆಗೆ   ಹೋಗಿ ಸುಮಾರು   19;30   ಘಂಟೆಗೆ    ರಸ್ತೆಯ   ಬದಿಯಲ್ಲಿ  ಮೋಟಾರ್  ಸೈಕಲ್  ನಿಲ್ಲಿಸಿಕೊಂಡು ನಿಂತಿದ್ದು,  , ಈ  ಸಮಯ  ಆರೋಪಿ  ಪ್ರಾಣೇಶ  ಯಡಿಯಾಳ ಈತನು   ಕೆಎ,20  ಝಡ್ .2067 ನೇ ನಂಬ್ರದ ಕಾರನ್ನು  ಆತನ  ಮನೆಯ  ಕಡೆಯಿಂದ  ಚಲಾಯಿಸಿಕೊಂಡು ಬಂದಿದ್ದು,  ಸದ್ರಿ ಕಾರಿನೊಳಗೆ ರಾಜೇಶ ಭಟ್   ಹಾಗೂ ಅವರ   ತಂಡದವರು   ಇರುತ್ತಾರೆ, ಈ  ಸಮಯ  ರಸ್ತೆಯ ಬದಿಯಲ್ಲಿ  ನಿಂತಿದ್ದ  ಉದಯ  ಕುಮಾರ್  ಗಾಣಿಗ ಇವರಿಗೆ  ಕಾರನ್ನು ವೇಗವಾಗಿ  ಚಲಾಯಿಸಿಕೊಂಡು ಬಂದು  ಗುದ್ದಿದ್ದು,  ಆಗ  ಅವರು  ರಸ್ತೆಯ   ಮೇಲೆ ಎಸೆದು  ಬಿದ್ದಾಗ  ಬೈದು ಮರದ ದೊಣ್ಣೆಯಿಂದ ಹಲ್ಲೆ ಮಾಡಿ  ಕಾರನ್ನು ಅಲ್ಲಿಯೇ  ಬಿಟ್ಟು  ಹೋಗಿರುತ್ತಾರೆ,  ಗಾಯಗೊಂಡ  ಉದಯ  ಕುಮಾರ್ ಗಾಣಿಗ  ಇವರನ್ನು ಒಮ್ನಿ  ಕಾರಿನಲ್ಲಿ  ಕರೆದುಕೊಂಡು ಬಂದು  ನಂತರ  108 ಅಂಬುಲೆನ್ಸ ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಕುಂದಾಪುರಕ್ಕೆ ಕರೆದುಕೊಂಡು  ಹೋಗುವಾಗ ದಾರಿ ಮಧ್ಯದಲ್ಲಿ ಮೃತಪಟ್ಟಿರುತ್ತಾರೆ,  ಆರೋಪಿ ಪ್ರಾಣೇಶ  ಯಡಿಯಾಳ  ಈತನು ವೈಯುಕ್ತಿಕ  ದ್ವೇಷದಿಂದ ರಾಜೇಶ  ಭಟ್ ಹಾಗೂ ಇತರರೊಂದಿಗೆ ಸೇರಿ ಕೊಲೆ ಮಾಡಿರುತ್ತಾನೆ, ಈ ಕೊಲೆಗೆ  ಬಾಲಚಂದ್ರ  ಭಟ್‌  ಈತನ   ಕುಮ್ಮಕ್ಕೆ  ಕಾರಣವಾಗಿದೆ  ಎಂಬಿತ್ಯಾದಿ. ಈ ಬಗ್ಗೆ ಶಂಕರನಾರಾಯಣ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 65/2021  ಕಲಂ:  302 109.506 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣಗಳು

  • ಉಡುಪಿ: ಉಡುಪಿ ನಗರ ಸಭಾ ವ್ಯಾಪ್ತಿಯ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಗೂಡಂಗಡಿ ಸ್ಥಾಪಿಸಿ ಮೀನಿನ ವ್ಯಾಪಾರ ಮಾಡುತ್ತಿರುವ ಬಗ್ಗೆ ಪೌರಾಯುಕ್ತರು,ಉಡುಪಿ ನಗರ ಸಭೆ, ಉಡುಪಿ ಇವರಿಗೆ ಸಾರ್ವಜನಿಕರಿಂದ ದೂರವಾಣಿ ಮೂಲಕ ದೂರುಗಳು ಬಂದಿರುವ ಹಿನ್ನಲೆಯಲ್ಲಿ ಪರಿಶೀಲಿಸಿ ಸದರಿ ಅನಧಿಕೃತ ಗೂಡಂಗಡಿಯನ್ನು ತೆರವುಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮೌಖಿಕವಾಗಿ ಸೂಚಿಸಿದ್ದು ಅದರಂತೆ ದಿನಾಂಕ: 05/06/2021 ರಂದು ಪೊಲೀಸರ ಉಪಸ್ಥಿತಿಯಲ್ಲಿ ಗೂಡಂಗಡಿಯ ತೆರವು ಕಾರ್ಯಾಚರಣೆಯನ್ನು ಮಾಡುತ್ತಿರುವ ವೇಳೆ ಈ ಕಾರ್ಯಾಚರಣೆಗೆ ಕಾಡಬೆಟ್ಟು ನಿವಾಸಿಗಳಾದ ಶ್ರೀಮತಿ ರಾಧಾ, ಶ್ರೀ ಅಶೋಕ್‌, ಪ್ರಮೋದಾ ಹಾಗೂ ಇವರ ಸಹಚರರು ಮತ್ತು ಸುಹೈಲ್‌ ಹಾಗೂ ಅವರ ಜೊತೆಗೆ ಇದ್ದವರು ಸರಕಾರಿ ಕೆಲಸಕ್ಕೆ ಅಡ್ಡಿಪಡಿಸಿರುತ್ತಾರೆ. ಅಲ್ಲದೇ ಇವರುಗಳು ಸದರಿ ತೆರವು ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಆರೋಗ್ಯ ನಿರೀಕ್ಷಕರ ಮೇಲೆ ದಲಿತ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿರುತ್ತಾರೆ ಎಂಬಿತ್ಯಾಧಿ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 93/2021 ಕಲಂ: 143, 147, 353 ಜೊತೆಗೆ 149  ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಫಿರ್ಯಾದಿ ಶ್ರೀಮತಿ ರಾಧಾ  ಅಶೋಕ್‌ರಾಜ್‌ ಇವರು ಪರಿಶಿಷ್ಟ  ಜಾತಿಗೆ  ಸೇರಿದವರಾಗಿದ್ದು,   ಉಡುಪಿ  ತಾಲೂಕು  ಮೂಡನಿಡಂಬೂರು  ಗ್ರಾಮದ  ಬ್ರಹ್ಮಗಿರಿ  ಸರ್ಕಲ್  ಬಳಿ , ಎಸ್ಪಿ  ಕಚೇರಿಗೆ  ಹೋಗುವ  ರಸ್ತೆಯ  ಆರಂಭದಲ್ಲಿ  ತಗಡಿನ  ಅಂಗಡಿಯಲ್ಲಿ  ಒಂದು ತಿಂಗಳಿನಿಂದ  ಮೀನು  ಮಾರಾಟವನ್ನು  ನಡೆಸಿಕೊಂಡಿದ್ದು, ದಿನಾಂಕ: 05/06/2021 ರಂದು  ಬೆಳಿಗ್ಗೆ  6:30  ಗಂಟೆಯ ಸುಮಾರಿಗೆ ಆರೋಪಿತರಾದ ಉಡುಪಿ  ನಗರ ಸಭೆಯ  ಹಿರಿಯ  ಆರೋಗ್ಯ  ನಿರೀಕ್ಷಕರಾದ  ಕರುಣಾಕರ ಎಂಬುವರು  ಫಿರ್ಯಾದುದಾರರನ್ನುದ್ದೇಶಿಸಿ ಜಾತಿನಿಂದನೆ  ಮಾಡಿ,  ಅವಮಾನಿಸಿದ್ದಲ್ಲದೇ  ಜೆಸಿಬಿಯಿಂದ  ಅಂಗಡಿಯನ್ನು  ಕೆಡವಲು  ಯತ್ನಿಸಿ,  ಅಂಗಡಿಯ  ಹಿಂಭಾಗಕ್ಕೆ  ಹಾನಿ  ಮಾಡಿದ್ದಲ್ಲದೇ, ಫಿರ್ಯಾದುದಾರರಿಗೆ  ಜಾತಿನಿಂದನೆ ಮಾಡಿ  ಅವಮಾನಿಸಿ,  ಮುಂದಕ್ಕೆ  ನೋಡಿಕೊಳ್ಳುವುದಾಗಿ  ಬೆದರಿಕೆ  ಹಾಕಿರುತ್ತಾನೆ  ಎಂಬಿತ್ಯಾದಿ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94/2021 ಕಲಂ :  504 IPC & ಕಲಂ: 3(1)(r),3(1)(s),3(2)(v-a), 3(1)(za) 3(1)(zc) SC/ST ACT ನಂತೆ ಪ್ರಕರಣ ದಾಖಲಾಗಿರುತ್ತದೆ.  
  • ಶಿರ್ವ: ಪಿರ್ಯಾದಿ ಶ್ರೀಮತಿ ಲಕ್ಷ್ಮೀ ಪ್ರಾಯ ಇವರು ದಿನಾಂಕ 05/06/2021 ರಂದು ಮದ್ಯಾಹ್ನ 12:30 ಗಂಟೆಗೆ ಕುರ್ಕಾಲು ಗ್ರಾಮದ ಪಾಜೈ ಎಂಬಲ್ಲಿ ಮೇಯಲು ಕಟ್ಟಿದ್ದ  ದನಕರುಗಳನ್ನು ಮನೆಗೆ ಕರೆದುಕೊಂಡು ಬರುವಾಗ ಒಂದು ಕರು ಪಿರ್ಯಾದಿದಾರರ ಕೈಯಿಂದ ತಪ್ಪಿಸಿಕೊಂಡು ನೆರೆಮನೆಯ ವಾಸಿಯಾದ ಆರೋಪಿ ಸದಾನಂದ ಮಡಿವಾಳರವರ ಮನೆಯ ಅಂಗಳಕ್ಕೆ ಹೋಗಿದ್ದು, ಸದ್ರಿ ಸಮಯ ಅಪಾದಿತನು ಏಕಾಏಕಿಯಾಗಿ ಬಂದು ನಿಮ್ಮ ದನಕರುಗಳನ್ನು ನನ್ನ ಮನೆಯ ಅಂಗಳಕ್ಕೆ ಯಾಕೆ ಬಿಟ್ಟಿದ್ದು, ಎಂಬುದಾಗಿ ಹೇಳಿ ಅವಾಚ್ಯ ಶಬ್ದಗಳಾದ ಬೈದು ಅಲ್ಲಿಯೇ ಇದ್ದ ಒಂದು ಕಾಟು ಮರದ ಸೊಂಟೆಯಿಂದ ಪಿರ್ಯಾದಿದಾರರ ತಲೆಗೆ, ಬೆನ್ನಿಗೆ ಹೊಡೆದು ಹಲ್ಲೆಮಾಡಿ ಇನ್ನು ಮುಂದೆ ನಿನ್ನ ದನಕರುಗಳು ನನ್ನ ಮನೆಯ ಅಂಗಳಕ್ಕೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಕೊಲೆ ಬೆದರಿಕೆ ಹಾಕಿರುವುದಾಗಿದೆ. ಹಲ್ಲೆಗೊಳಗಾದ ಪಿರ್ಯಾದಿದಾರರು ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2021, ಕಲಂ 504, 324, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ನ್ಯಾಯಾಲಯದ ಖಾಸಗಿ ಪಿರ್ಯಾದಿ ನಂ 31/2021ರ ಸಾರಾಂಶವೇನೆಂದರೆ  ಪಿರ್ಯಾದಿ ನಸೀಮಾ ಇವರಿಗೆ ಗುಂಡಿಬೈಲುನಲ್ಲಿರುವ ಲಕ್ಷ್ಮೀ ವಿಲಾಸ್ ಬ್ಯಾಂಕ್ ಸಿಬ್ಬಂಧಿಯೆಂದು ಪರಿಚಯವಾದ ಆರೋಪಿ ತಿಲಕರಾಜ್‌ ಎಂಬಾತನು ಪಿರ್ಯಾದುದಾರರಿಗೆ ಸೇರಿದ ಉಡುಪಿ ತಾಲೂಕು ಕೆಳಾರ್ಕಳಬೆಟ್ಟು ಗ್ರಾಮದ ಸರ್ವೆ ನಂಬ್ರ 61/8ಪಿ 2 ರಲ್ಲಿ 5 ಸೆಂಟ್ಸ್ ಸ್ಥಿರಾಸ್ತಿ  ಮೇಲೆ ಸಾಲ ಕೊಡಿಸುವುದಾಗಿ ನಂಬಿಸಿ,  ಸ್ಥಿರಾಸ್ತಿಯ ದಾಖಲೆಗಳನ್ನು ಹಾಗೂ 5000/- ಹಣವನ್ನು ಪಡೆದುಕೊಂಡು ಸಾಲ ಮಾಡಿಸಿಕೊಡದೇ ದಾಖಲೆಗಳನ್ನು ಕೂಡಾ ಹಿಂತಿರುಗಿಸದೇ ನಂಬಿಕೆ ದ್ರೋಹಮಾಡಿ, ಅಲ್ಲದೆ ಪಿರ್ಯಾದುದಾರರು ಹಣ ಹಾಗೂ ದಾಖಲೆಗಳನ್ನು ವಾಪಾಸು ಕೇಳಿದಾಗ ಅವಾಚ್ಯ ಶಬ್ದಗಳಿಂದ ಬೈದು ಪಿರ್ಯಾದುದಾರರ ಮನೆಯವರನ್ನು ಕೊಂದು ಹಾಕುವುದಾಗಿ ಜೀವ ಬೆದರಿಕೆ  ಹಾಕಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 91/2021 ಕಲಂ: 420, 406, 504, 506 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿ ದಿವಾಕರ ಖಾರ್ವಿ (47) ಫ್ಲೈಯಿಂಗ್‌ ಸ್ಕ್ವಾಡ್‌ಕೊರಂಗ್ರಪಾಡಿ, ಉಡುಪಿ ಇವರಿಗೆ ದೊರೆತ ಮಾಹಿತಿ ಮೇರೆಗೆ ಪಂಚಾಯತ್ ಅಧಿಕಾರಿಗಳು ಹಾಗೂ ಅರಕ್ಷಕ ಸಿಬ್ಬಂದಿಗಳೊಂದಿಗೆ ಉಡುಪಿ ತಾಲೂಕು ಅಲೆವೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಂಗ್ರಪಾಡಿ ಪಿಲಿ ಚಾಮುಂಡಿ ದೇವಸ್ಥಾನದ ಬಳಿ ಹೋದಾಗ ದಿನಾಂಕ: 05/06/2021 ರಂದು 13:16 ಗಂಟೆ ದಯಾನಂದ ಕೋಟ್ಯಾನ್ರವರ ಮನೆಯಲ್ಲಿ ದಿ: ಕೃಷ್ಣ ಪೂಜಾರಿಯವರ ಒಂಬತ್ತು ಮಕ್ಕಳ ಕುಟುಂಬದಲ್ಲಿನ ಸುಮಾರು 45 ಜನರು ಕಾರ್ಯಕ್ರಮದಲ್ಲಿ ಸೇರಿ ಕೋವಿಡ್ ನಿಯಮವನ್ನು ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 92/2021 ಕಲಂ: 188,269 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ: ದಿನಾಂಕ: 04/06/2021 ರಂದು 21:00 ಗಂಟೆಗೆ ಕಾರ್ಕಳ ತಾಲೂಕು ನೂರಾಳ್ ಬೆಟ್ಟು ಗ್ರಾಮದ ಗೋಪಾಲರ ಅಂಗಡಿಯ ಬಳಿ ಆರೋಪಿಗಳಾದ ಅಪ್ಪು ಮೂಲ್ಯ, ರಾಜೇಶ್, ಸಂತೋಷ್, ಕಿಟ್ಟ, ಯಾನೆ ಕೃಪ್ಣಪ್ಪ, ಸಂದೀಪ ಎಂಬವರು  ಪೊಲೀಸರಿಗೆ ಕೋಳಿ ಅಂಕದ ಬಗ್ಗೆ ಮಾಹಿತಿಯನ್ನು  ಪಿರ್ಯಾದಿ ಹರೀಶ್ ಪೂಜಾರಿ ಇವರು ಹಾಗೂ ಅವರ ಧನಿ ಪ್ರಸಾದ್ ಶೆಟ್ಟಿರವರು ನೀಡಿದ್ದಾರೆ ಎಂಬ ದ್ವೇಷದಿಂದ ಆರೋಪಿತರು ತಕ್ಷೀರು ಮಾಡುವ ಸಮಾನ ಉದ್ದೇಶದಿಂದ ಅಕ್ರಮ ಕೂಟ ಸೇರಿಕೊಂಡು ಪಿರ್ಯಾದಿದಾರರನ್ನು ಉದ್ದೇಶಿಸಿ  ಅವಾಚ್ಯವಾಗಿ ಬೈದು ಆರೋಪಿಗಳು ಪಿರ್ಯಾದಿದಾರರರಿಗೆ ಕೈಯಿಂದ ಹೊಡೆದಿದ್ದು, ಸಂತೋಷನು  ಅವನ ಕೈಯಲ್ಲಿ ಇದ್ದ ಕೇಬಲ್ ವಾಯರ್ ನಿಂದ ಪಿರ್ಯಾದಿದಾರರ ಎರಡು ತೊಡೆಗಳಿಗೆ ಹೊಡೆದಿರುವುದಾಗಿದೆ. ಪಿರ್ಯಾದಿದಾರರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 70 /2021 ಕಲಂ: 143,144,147,148,323, 324,504 ಜೊತೆಗೆ 149 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ:5-06-2021 ರಂದು ಸಂತೋಷ ಬಿ.ಪಿ, ಪೊಲೀಸ್ ಉಪನಿರೀಕ್ಷಕರು (ಕಾ & ಸು), ಕೋಟ ಠಾಣೆ ಇವರು ಸಿಬ್ಬಂದಿಗಳೊಂದಿಗೆ ಠಾಣಾ  ವ್ಯಾಪ್ತಿಯಲ್ಲಿ  ರೌಂಡ್ಸ್  ಕರ್ತವ್ಯದಲ್ಲಿರುವಾಗ 17:00 ಗಂಟೆಗೆ  ಬೀಟ್  ಸಿಬ್ಬಂದಿ  ನೀಡಿದ ಮಾಹಿತಿಯಂತೆ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಮಾವಿನ  ಕಟ್ಟೆ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆನಂದ  ಕೊಠಾರಿ ಹೆಗ್ಡೆ ಬಾರ್ &  ರೆಸ್ಟೋರೆಂಟ್ ನಿಂದ ಮದ್ಯದ ಟೆಟ್ರಾ ಪ್ಯಾಕ್ಗಳನ್ನು ಪಡೆದುಕೊಂಡು.  ಕೋವಿಡ್-19 ವೈರಾಣು ಪ್ರಯುಕ್ತ ಜಿಲ್ಲಾಡಳಿತದ ಆದೇಶದಂತೆ ಕರ್ಪ್ಯೂ ನಿಷೇಧಾಜ್ಞೆ ಸಂದರ್ಭದಲ್ಲಿ ಯಾವುದೇ ಪರವಾನಿಗೆ  ಇಲ್ಲದೆ  ಸದ್ರಿ ಮದ್ಯದ ಟೆಟ್ರಾ ಪ್ಯಾಕ್‌ ಗಳನ್ನು ಸ್ವಂತ ಲಾಭದ  ಉದ್ದೇಶದಿಂದ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮಾರಾಟ  ಮಾಡುತ್ತಿದ್ದುದನ್ನು  ಗಮನಿಸಿದ್ದು  ಅಲ್ಲದೇ ಸಾರ್ವಜನಿಕರು ಆತನಿಂದ ಟೆಟ್ರಾ ಪ್ಯಾಕ್‌ ಗಳನ್ನು   ಪಡೆದುಕೊಂಡು ಅಲ್ಲಿಯೇ ಕಟ್ ಮಾಡಿ ಮದ್ಯವನ್ನು  ಪ್ಲಾಸ್ಟಿಕ್ ಲೋಟಗಳಿಗೆ ಹಾಕಿ ಕುಡಿದು ಖಾಲಿ ಟೆಟ್ರಾ ಪ್ಯಾಕ್‌ ಗಳನ್ನು ಸಾರ್ವಜನಿಕ ಸ್ಥಳದಲ್ಲಿ ಬಿಸಾಡುತ್ತಿದ್ದು,  ಸ್ಥಳಕ್ಕೆ 18-00 ಗಂಟೆಗೆ ದಾಳಿ ನಡೆಸಿ ಸ್ಥಳದಲ್ಲಿದ್ದ ಖಾಲಿ ಟೆಟ್ರಾ ಪ್ಯಾಕ್-1, ಖಾಲಿ ಪ್ಲಾಸ್ಟಿಕ್  ಲೋಟ-2 ಹಾಗೂ  ಸ್ವಂತ ಲಾಭದ ಉದ್ದೇಶದಿಂದ ಸಾರ್ವಜನಿಕರಿಗೆ ಮಾರಾಟ  ಮಾಡುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡು    ವಿಚಾರಿಸಿದಲ್ಲಿ ಆತನು ತನ್ನ ಹೆಸರು ಆನಂದ ಕೊಠಾರಿ, ಪ್ರಾಯ: 40 ವರ್ಷ, ತಂದೆ: ಸಂಕ ಕೊಠಾರಿ, ವಾಸ: ಮಾವಿನ ಕಟ್ಟೆ  ಬಸ್ ನಿಲ್ದಾಣ ಹತ್ತಿರ, ಮಾವಿನ ಕಟ್ಟೆ, ಮೊಳಹಳ್ಳಿ ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ. ಎಂಬುವುದಾಗಿ ತಿಳಿಸಿದ್ದು, ಅಲ್ಲದೆ  ಅತನ ಬಳಿಯಿದ್ದ 1) Old Tavern Whisky 180 ml TETRA PACK-05 2) Mysore Lancer Whisky 90ml TETRA PACK-14 ಗಳಿದ್ದು, ಸದ್ರಿ ಮದ್ಯದ ಒಟ್ಟು ಪ್ರಮಾಣ 2.160 ml ಆಗಿದ್ದು, ಮೌಲ್ಯ  920 /- ರೂಪಾಯಿ ಆಗಿದ್ದು, ಮತ್ತು ಆತನ ಕಿಸೆಯಲ್ಲಿದ್ದ ಮಾರಾಟ ಮಾಡಿದ ಹಣ 340/- ರೂಪಾಯಿ ಇದ್ದು. ಸದ್ರಿ ಆರೋಪಿ, ಸ್ವತ್ತುಗಳನ್ನು ಮಾರಾಟ ಮಾಡಿದ ನಗದು ಹಣವನ್ನು ಹಾಗೂ ಟೆಟ್ರಾ ಪ್ಯಾಕ್ ತುಂಬಿದ  ಪ್ಲಾಸ್ಟಿಕ್ ತೊಟ್ಟೆಯನ್ನು  ಪಂಚರ ಸಮಕ್ಷಮ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿದ್ದು ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 113/2021 ಕಲಂ: 15(a), 32(3) K.E.Act  & 269  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಉಡುಪಿ  ತಾಲೂಕು  76ನೇ  ಬಡಗುಬೆಟ್ಟು  ಗ್ರಾಮದ ಬಿಗ್ಬಝಾರ್ ಜನಾರ್ಧನ ಟವರ್  ಅಪಾರ್ಟ್ಮೆಂಟಿನ  ಫ್ಲ್ಯಾಟ್  ನಂ:  701ರಲ್ಲಿ ವಾಸವಿದ್ದ  ಶ್ರೀಮತಿ ಆರ್.  ಗಂಗಮ್ಮ(70 ವರ್ಷ)ರವರು , ಅವರ  ಗಂಡನು ಕೊರೊನಾ ಸೋಂಕಿನಿಂದ  ಅಸ್ವಸ್ಥರಾಗಿ ಉಡುಪಿಯ  ಆದರ್ಶ  ಆಸ್ಪತ್ರೆಗೆ ದಾಖಲಾಗಿ ಐಸಿಯುನಲ್ಲಿರುವ  ವಿಷಯಕ್ಕೆ  ತುಂಬಾ  ಚಿಂತಿತರಾಗಿದ್ದು, ಇದೇ ಕಾರಣದಿಂದ ಜೀವನದಲ್ಲಿ  ಜಿಗುಪ್ಸೆ ಹೊಂದಿ,  ದಿನಾಂಕ:  05/06/2021 ರಂದು  ಮಧ್ಯರಾತ್ರಿ  00:30  ಗಂಟೆಯಿಂದ  ಬೆಳಿಗ್ಗೆ 8:30 ಗಂಟೆಯ  ಮಧ್ಯಾವಧಿಯಲ್ಲಿ ಅವರು ವಾಸವಿದ್ದ  ಅಪಾರ್ಟಮೆಂಟಿನಿಂದ  ಕೆಳಗೆ ಜಿಗಿದು,  ಆತ್ಮಹತ್ಯೆಯನ್ನು  ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಠಾಣಾ ಯುಡಿಆರ್‌ ಕ್ರಮಾಂಕ 23/2021 ಕಲಂ: 174 ಸಿ.ಆರ್.ಪಿ.ಸಿ. ರಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 06-06-2021 11:12 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080