ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಪಡುಬಿದ್ರಿ: ಹರೀಶ್ (37) ಎಂಬುವರು ಪಕ್ಷಿಕೆರೆಯ ಅಶ್ವಿನ್ ಆಳ್ವ ಎಂಬುವರಿಗೆ ಸಂಬಂಧಿಸಿದ KA-20-D-2756 ನೇ ನಂಬ್ರದ ಟಿಪ್ಪರ್‌ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದು, ಎಂದಿನಂತೆ ದಿನಾಂಕ:06.06.2021 ರಂದು ಬೆಳಿಗ್ಗೆ 10:30 ಗಂಟೆಗೆ ಈ ಮೇಲಿನ ಟಿಪ್ಪರ್ ವಾಹನದಲ್ಲಿ ಹರೀಶನು ಕಾಪು ತಾಲೂಕು ನಂದಿಕೂರು ಗ್ರಾಮದ ನಂದಿಕೂರು ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಎ.ಎಂ. ಬೆಳ್ಮ ಎಂಬುವರಿಗೆ ಸೇರಿದ ಸೈಟಿಗೆ ಮಣ್ಣನ್ನು ತುಂಬಿಸಲು ಹತ್ತಿರದ ಸೈಟ್ ಒಂದರಿಂದ KA-20-D-2756 ನೇ ನಂಬ್ರದ ಟಿಪ್ಪರಿನಲ್ಲಿ ಮಣ್ಣನ್ನು ತುಂಬಿಸಿಕೊಂಡು ಬಂದು  ಎ.ಎಂ. ಬೆಳ್ಮ ಎಂಬುವರಿಗೆ ಸೇರಿದ ಸೈಟಿಗೆ ಟಿಪ್ಪರಿನಲ್ಲಿದ್ದ ಮಣ್ಣನ್ನು ಅನ್‌ಲೋಡ್ ಮಾಡಲು ಟಿಪ್ಪರಿನ ಬಕೆಟನ್ನು ಮೇಲಕ್ಕೆತ್ತಿದಾಗ,  ಮಣ್ಣು ಸೈಟಿಗೆ ಬೀಳದೇ ಇದ್ದುದರಿಂದ ಚಾಲಕ ಹರೀಶನು ಟಿಪ್ಪರಿನಿಂದ ಕೆಳಗಿಳಿದು ಯಾವುದೇ ಮುಂಜಾಗ್ರತೇ ವಹಿಸದೇ ಟಿಪ್ಪರಿನ ಹಿಂಭಾಗಕ್ಕೆ ಬಂದು ನೋಡುತ್ತಿರುವ ಸಮಯ ಟಿಪ್ಪರ್ ಒಮ್ಮೆಲೇ ಎಡಕ್ಕೆ ವಾಲಿ ಟಿಪ್ಪರ್ ಮಗುಚಿ ಬಿದ್ದು, ಟಿಪ್ಪರಿನ ಬಕೆಟ್ ಭಾಗ ಹರೀಶನ ಮೈಮೇಲೆ ಬಿದ್ದುದರಿಂದ, ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ಠಾಣೆ ಅಪರಾಧ ಕ್ರಮಾಂಕ 53/2021 ಕಲಂ:304(A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಕುಂದಾಪುರ : ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಶ್ರೀಕಾಂತ ಕೆ. ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಶ್ರೀಮತಿ ಸುಧಾ ಪ್ರಭು ಯು, ಪಿಎಸ್‌‌ಐ (ಅಪರಾಧ ವಿಭಾಗ) ಇವರು ಸಿಬ್ಬಂದಿಯವರೊಂದಿಗೆ ಕುಂದಾಪುರ ತಾಲೂಕು ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ ಶಶಿಧರ ಹಾಗೂ ವಿಶ್ವನಾಥ ಇವರು ಯಾವುದೇ ಪರವಾನಿಗೆ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ 19-30 ಗಂಟೆಗೆ ದಾಳಿ ನಡೆಸಿ ಆರೋಪಿತರು ಪರವಾನಿಗೆ ಇಲ್ಲದೆ ಮಾರಾಟ ಮಾಡಿದ್ದ Director’s Special Whisky ಹೆಸರಿನ 180 ML ನ 2 ಪ್ಯಾಕೆಟ್‌‌‌‌‌‌‌‌, ಹಾಗೂ Mc Dowells No-1 RESERVE WHISKY ಹೆಸರಿನ 180 ML 1  ನ 1 ಬಾಟಲಿಯನ್ನು  ( ಒಟ್ಟು 540 ML ಮದ್ಯ, ರೂ. 526/- ) ನ್ನು ಸ್ವಾಧೀನಪಡಿಸಿಕೊಂಡಿದ್ದು, ಮೇಲ್ಕಾಣಿಸಿದ ಆರೋಪಿತರು ಕೋವಿಡ್‌‌19 ಸಾಂಕ್ರಾಮಿಕ ರೋಗ ನಿಯಂತ್ರಣ ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ಸಾಮಾಜಿಕ ಅಂತರ ಕಾಪಾಡದೆ,  ಮದ್ಯ ಮಾರಾಟ ನಿಷೇಧ ಇರುವ ಅವಧಿಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2021 ಕಲಂ: 269 ಐಪಿಸಿ ಮತ್ತು ಕಲಂ: 15 ಕರ್ನಾಟಕ ಅಬಕಾರಿ ಕಾಯ್ದೆ -1965 ಯಂತೆ ಪ್ರಕರಣ ದಾಖಲಾಗಿರುತ್ತದೆ.  

 

ಕಳವು ಪ್ರಕರಣ

  • ಮಲ್ಪೆ: ದಿನಾಂಕ 01/06/2021 ರಂದು ಫಿರ್ಯಾದಿ ಶ್ರೀಮತಿ ಯಮುನಾ ಗಂಗಾಧರ ಇವರು ಹೆಣ್ಣು ಕರುವನ್ನು ಬೆಳಿಗ್ಗೆ 9:00 ಗಂಟೆಗೆ ಫಿರ್ಯಾದಿದಾರರ ಮನೆಯಾದ ನಿಡಂಬಳ್ಳಿ ರಸ್ತೆ, ನೇಜಾರು ಮನೆಯ ಹತ್ತಿರದ ಖಾಲಿ ಜಾಗದಲ್ಲಿ ಕರುವನ್ನು ಕಟ್ಟಿದ್ದು, ಬೆಳಿಗ್ಗೆ 11:00 ಗಂಟೆಯ ಸಮಯಕ್ಕೆ ಫಿರ್ಯಾದಿದಾರರು ಕರುವಿಗೆ ಅಕ್ಕಚ್ಚು ಇಟ್ಟು ಬಂದಿದ್ದು, ಮಧ್ಯಾಹ್ನ 1:00 ಗಂಟೆ ಸಮಯಕ್ಕೆ ಫಿರ್ಯಾದಿದಾರರು ವಾಪಾಸು ಕರುವನ್ನು ಮನೆಗೆ ತರಲು ಹೋದಾಗ ಕಟ್ಟಿದ ಜಾಗದಲ್ಲಿ ಹೆಣ್ಣು ಕರು ಇರುವುದಿಲ್ಲ. ಸುತ್ತಮುತ್ತ ಪರಿಸರ ಹಾಗೂ ನೆರೆಕರೆಯವರಲ್ಲಿ ಹುಡುಕಾಡಿದಾಗ ಸಿಕ್ಕಿರುವುದಿಲ್ಲ. ಫಿರ್ಯಾದಿದಾರರು ನೆರೆಕರೆಯ ಖಾಸಿಂ ಸಾಹೇಬರ ಮನೆಗೆ ಹೋಗಿ ವಿಚಾರಿಸಿದ್ದು, ಅವರ ಮನೆಯವರು ಕರುವನ್ನು ನೋಡಿಲ್ಲವಾಗಿ ತಿಳಿಸಿದ್ದು, ನಂತರ ಖಾಸಿಂ ಸಾಹೇಬರ ಮಗ ಇಬ್ರಾಹಿಂ ಸಾಹೇಬ ಈತನು ಫಿರ್ಯಾದಿದಾರರ ಮನೆಗೆ ಬಂದು ತಾನು ಕರುವನ್ನು ರಸ್ತೆಯಲ್ಲಿ ಬಿಟ್ಟಿರುವುದಾಗಿ ತಿಳಿಸಿದ್ದು, ಫಿರ್ಯಾದಿದಾರರು ಕರುವನ್ನು ಎಲ್ಲಾ ಕಡೆ ಹುಡುಕಿದರೂ ಸಿಕ್ಕಿರುವುದಿಲ್ಲ. ದಿನಾಂಕ 03/06/2021 ರಂದು ನೆರೆಕರೆಯ ಮನೆಯ ಸಿ.ಸಿ ಕ್ಯಾಮೇರ ಪರಿಶೀಲಿಸಿದಲ್ಲಿ ದಿನಾಂಕ 01/06/2021 ರಂದು ಮಧ್ಯಾಹ್ನ 11:45 ಗಂಟೆಯ ಸಮಯಕ್ಕೆ ಇಬ್ರಾಹಿಂ ಈತನು ಕರುವನ್ನು ತೆಗೆದುಕೊಂಡು ಹೋಗುವುದು ಸಿ.ಸಿ ಕ್ಯಾಮರಾದಲ್ಲಿ ದಾಖಲಾಗಿದ್ದು, ಇಬ್ರಾಹಿಂ ಈತನು ಫಿರ್ಯಾದಿದಾರರ ಹೆಣ್ಣು ಕರುವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಕಳವಾದ ಹೆಣ್ಣು ಕರುವಿನ ಅಂದಾಜು ಮೌಲ್ಯ. ರೂ. 9000/- ಆಗಿರಬಹುದು. ಈ ಬಗ್ಗೆ ಮಲ್ಪೆ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 75/2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 06-06-2021 05:38 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080