ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ :

  • ಕಾಪು : ಪಿರ್ಯಾದಿ ತುತ್ರಿಯನ್ (47) ತಂದೆ: ನಿಕೋಲಾಸ್ ವಾಸ: ಸೇಥುಪತಿ ನಗರ್ ಪಂಬನ್, ರಾಮ ನಗರ ಮಹಾಪುರಂ ರಾಮೇಶ್ವರ ತಾಲೂಕು ತಮಿಳುನಾಡು ಇವರು ಮೀನುಗಾರಿಕಾ ಬೋಟನ್ನು ಇಟ್ಟುಕೊಂಡು ಜೀವನ ನಡೆಸಿಕೊಂಡಿದ್ದು ಅವರೊಂದಿಗೆ 10 ಜನ ಕೆಲಸಗಾರರು ಇದ್ದು ಅವರಲ್ಲಿ ರಾಜನ್(32) ಎಂಬವರು ಕೂಡಾ ಎರಡು ತಿಂಗಳಿನಿಂದ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 01/05/2023 ರಂದು ರಾತ್ರಿ ಪಿರ್ಯಾದಿದಾರರ ಬಾಬ್ತು ಬೋಟು ಮಲ್ಪೆಯಿಂದ ಕೆಲಸಗಾರರೊಂದಿಗೆ  ಹೊರಟು ಕಟಪಾಡಿಯ ಹತ್ತಿರ ತಲುಪುವಾಗ ಬೋಟ್‌ನಲ್ಲಿದ್ದ ರಾಜನ್ ಎಂಬವನು ಬೋಟ್‌ನ ಹಿಂಬದಿಯ ತುದಿಯಲ್ಲಿ ನಿಂತುಕೊಂಡು ಮೂತ್ರ ಮಾಡುತ್ತಿರುವಾಗ ರಾತ್ರಿ ಸುಮಾರು 00:15 ಗಂಟೆ ಸಮಯಕ್ಕೆ ಆಯತಪ್ಪಿ ಬೋಟಿನಿಂದ ಸಮುದ್ರದ ನೀರಿಗೆ  ಬಿದ್ದಿದ್ದು, ಎಲ್ಲಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ದಿನಾಂಕ 05/05/2023 ರಂದು 12:10 ಗಂಟೆಗೆ ರಾಜನ್‌ (32) ರವರ ಮೃತದೇಹವು ಕಾಪು ಬೀಚ್‌ ನಲ್ಲಿ ದೊರಕಿದ್ದು ಮೃತರು ದಿನಾಂಕ 01/05/2023 ರಂದು ರಾತ್ರಿ 00:15 ಗಂಟೆಗೆ ಬೋಟ್‌ ನಿಂದ ಆಯತಪ್ಪಿ ಸಮುದ್ರಕ್ಕೆ ಬಿದ್ದು ಮೃತ ಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಸ್ವಾಭಾವಿಕ ಮರಣ ಪ್ರಕರಣ ಸಂಖ್ಯೆ : 14/2023 ಕಲಂ 174 ಸಿಆರ್‌‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾಪು: ಪಿರ್ಯಾದಿ ಸುಮಲತಾ (35) ಗಂಡ: ಮಂಜುನಾಥ ಆಚಾರ್ಯ ವಾಸ: ಸೀತಾರಾಮ  ನಿಲಯ ದುರ್ಗಾ ದೇವಸ್ಥಾನದ ಹತ್ತಿರ ನಂದಿಕೂರು, ಕಾಪು ತಾಲೂಕು ಇವರ ಅಣ್ಣ ನವೀನ ಆಚಾರ್ಯ (41) ಮತ್ತು ಪಿರ್ಯಾದಿದಾರರ ತಾಯಿಯವರು ಮಣಿಪುರ ಗ್ರಾಮ ದೆಂದೂರು ಕಟ್ಟೆಯಲ್ಲಿ ವಾಸ ಮಾಡಿಕೊಂಡಿದ್ದು, ನವೀನ ಆಚಾರ್ಯ ರವರು ಮರದ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ತನ್ನ ಮಕ್ಕಳೊಂದಿಗೆ ದಿನಾಂಕ 30.04.2023 ರಂದು ಅವರ ತವರು ಮನೆಯಾದ ದೆಂದೂರುಕಟ್ಟೆಗೆ ಬಂದಿದ್ದು ದಿನಾಂಕ 05.05.2023 ರಂದು ಪಿರ್ಯಾದಿದಾರರು ತನ್ನ ಮಕ್ಕಳೂ ಹಾಗೂ ತಾಯಿಯೊಂದಿಗೆ ದೇವಸ್ಥಾನಕ್ಕೆ ಹೋಗಿದ್ದು, ಆ ಸಮಯ ನವೀನ್ ಆಚಾರ್ಯ ರವರು ಮನೆಯಲ್ಲಿಯೇ ಇದ್ದರು, ಸಂಜೆ ಸುಮಾರು 5:00 ಗಂಟೆಗೆ ಪಿರ್ಯಾದಿದಾರರು ಹಾಗೂ ಅವರ ತಾಯಿಯವರು ದೇವಸ್ಥಾನದಿಂದ ವಾಪಾಸು ಮನೆಗೆ ಬಂದು ಮನೆಯ ಒಳಗೆ ಹೋಗೊ ಪಿರ್ಯಾದಿದಾದಾರ ತಾಯಿಯವರು ನವೀನ ಆಚಾರ್ಯ ರವರ ರೂಮನ್ನು ಇಣುಕಿ ನೋಡಿದಾಗ ನವೀನ ಆಚಾರ್ಯನು ರೂಮಿನ ತಾರಸಿಯ ಕಬ್ಬಿಣದ ಕೊಂಡಿಗೆ ಬಿಳಿ ಬಣ್ಣದ ಎರಡು ಬೈರಸ್‌ ಗಳನ್ನು ಒಟ್ಟು ಮಾಡಿ ಕಟ್ಟಿ ಕುತ್ತಿಗೆ ನೇಣೂ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿರುತ್ತದೆ. ನವೀನ ಆಚಾರ್ಯರವರು ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದು ಮತ್ತು ವಿಪರೀತ ಮಧು ಸೇವನೆ ಚಟ ಹೊಂದಿದ್ದು ಅಲ್ಲದೇ ಆರೋಗ್ಯ ಸಮಸ್ಯೆ ಕೂಡಾ ಇದ್ದುದರಿಂದ  ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 05/05/2023 ರಂದು 11:30 ಗಂಟೆಯಿಂದ 17:00 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಮಲಗುವ ಕೋಣೆಯ ತಾರಸಿಯ  ಕಬ್ಬಿಣದ ಕೊಂಡಿಗೆ ಬಿಳಿ ಬಣ್ಣದ ಎರಡು ಬೈರಸ್‌ ಗಳನ್ನು  ಒಟ್ಟು ಮಾಡಿ ಕಟ್ಟಿ ಕುತ್ತಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಸ್ವಾಭಾವಿಕ ಮರಣ ಪ್ರಕರಣ ಸಂಖ್ಯೆ : 15/2023 ಕಲಂ 174 ಸಿಆರ್‌‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬ್ರಹ್ಮಾವರ: ಫಿರ್ಯಾದು ಕೃಷ್ಣ ನಾಯ್ಕ್ .‌ (52), ತಂದೆ: ದಿ. ವಾಗು ನಾಯ್ಕ್ , ವಾಸ: ಕೃಷ್ಣ ರುಕ್ಮಿಣಿ, ಯಡ್ತಾಡಿ ಗೇರು ಪ್ಲ್ಯಾಟ್‌ ಹತ್ತಿರ, ಯಡ್ತಾಡಿ ಗ್ರಾಮ ಬ್ರಹ್ಮಾವರ ತಾಲೂಕು   ಇವರ ಹಿರಿಯ ಮಗನಾದ ಗಿರೀಶ ನಾಯ್ಕ್‌, ಪ್ರಾಯ 26 ವರ್ಷ, ಎಂಬವನು ಸೆಂಟ್ರೀಗ್‌ ಕೆಲಸ ಮಾಡಿಕೊಂಡಿದ್ದು ಅವನು ಒಂದು ವಾರದ ಹಿಂದೆ ನನಗೆ ತುಂಬಾ ಟೆನ್ನಷನ್‌ ಆಗುತ್ತಿದೆ, ಕೈ ಕಡ ಮಾಡಿದವರು ಹಣ ಕೇಳುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದು, ಇದೇ ಕಾರಣದಿಂದಲೋ ಅಥವಾ ಬೇರೆ ಯಾವುದೋ ಕಾರಣದಿಂದ ಗಿರೀಶ ನಾಯ್ಕ್‌ ನು ಒತ್ತಡದಲ್ಲಿ ಮಾನಸಿಕವಾಗಿ ನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 05-05-2023 ರಂದು ಮಧ್ಯಾಹ್ನ 2:30 ರಿಂದ 3:30 ಗಂಟೆಯ ಮದ್ಯಾವಧಿಯಲ್ಲಿ ತನ್ನ ವಾಸದ ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಮನೆಯ ಪಶ್ಚಿಮ ಬದಿಯ ಕೋಣೆಯ ಮರದ ಅಡ್ಡೆಗೆ ರೋಪ್ ಅನ್ನು ಬಿಗಿದು, ಕುತ್ತಿಗೆ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಸ್ವಾಭಾವಿಕ ಮರಣ ಪ್ರಕರಣ ಸಂಖ್ಯೆ : 37/2023 ಕಲಂ 174 ಸಿಆರ್‌‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಕಾರ್ಕಳ : ಕಾರ್ಕಳ ತಾಲೂಕು ನಿಟ್ಟೆ ಗ್ರಾಮದ ವಿಷ್ಣುಮೂರ್ತಿ ನಗರ ಕಲ್ಲಂಬಾಡಿ ಪದವು ನಿವಾಸಿ ಪಿರ್ಯಾದಿ ಶ್ರೀಮತಿ ಸೌಮ್ಯ ಪ್ರಾಯ: 33 ವರ್ಷ ಗಂಡ: ಯಶೋದರ ಆಚಾರ್ಯ ವಾಸ: ವಿಷ್ಣುಮೂರ್ತಿ ನಗರ ಕಲ್ಲಂಬಾಡಿ ಪದವು ನಿಟ್ಟೆ ಗ್ರಾಮ, ಕಾರ್ಕಳ ತಾಲೂಕು ಇವರ ಗಂಡ ಯಶೋದರ ಆಚಾರ್ಯ ಪ್ರಾಯ 43 ವರ್ಷ ಇವರು ಸುಮಾರು 7 ವರ್ಷದಿಂದ ಲೋ ಬಿಪಿ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ನಿಟ್ಟೆ ಪ್ರಾಥಮಿಕ ಆರೋಗ್ಯ ಕೆಂದ್ರ ಮತ್ತು ಕಾರ್ಕಳ ಸರಕಾರಿ ಆಸ್ಪತ್ರೆಯಿಂದ ಮದ್ದು ಮಾಡುತ್ತಿದ್ದು, ದಿನಾಂಕ 05/05/2023 ರಂದು ಮಧ್ಯಾಹ್ನ ಸುಮಾರು 01:30 ಗಂಟೆಗೆ ಮನೆಯಲ್ಲಿ ಕೆಲಸ ಮಾಡಿ ಬಳಿಕ ಊಟ ಮಾಡಿ ಮಲಗಲು ಹೋದವರು ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದವರನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ಯಶೋದರ ಆಚಾರ್ಯ ರವರು ದಾರಿ ಮಧ್ಯೆ ಮೃತಪಟ್ಟಿರುವುದಾಗಿ ಮಧ್ಯಾಹ್ನ 2:45 ಗಂಟೆಗೆ ತಿಳಿಸಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಸ್ವಾಭಾವಿಕ ಮರಣ ಪ್ರಕರಣ ಸಂಖ್ಯೆ : 27/2023 ಕಲಂ 174 ಸಿಆರ್‌‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 

ಮನುಷ್ಯ ಕಾಣೆ ಪ್ರಕರಣ :

  • ಕೋಟ : ಪಿರ್ಯಾದಿ ಸುಧಾಕರ ಶೇಟ್( 19 ವರ್ಷ) ತಂದೆ:ನಾರಾಯಣ ಸೌಡ ಅಂಚೆ ಜನ್ನಾಡಿ ಗ್ರಾಮ ಬ್ರಹ್ಮಾವರ ತಾಲೂಕು ಇವರು ತನ್ನ ಗೆಳೆಯರಾದ ಸುಹಾಸ್ ಗೌಡ, ಸಂತೋಷ ಮತ್ತು ಮಂಜುನಾಥ ಎಂಬುವವರೊಂದಿಗೆ ದಿನಾಂಕ:05-05-2023 ರಂದು ಸಮಯ ಸುಮಾರು 13:20 ಗಂಟೆಗೆ ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಜನ್ನಾಡಿಯಲ್ಲಿರುವ ವರಾಹಿ ನದಿಗೆ ಈಜಲು ಹೋದಾಗ ಸುಹಾಸ್ ಮಾತ್ರ ಆಳ ನೋಡುವುದಾಗಿ ಈಜಿಕೊಂಡು ಮುಂದೆ ಹೋಗಿರುತ್ತಾನೆ. ಆಗ ಸ್ವಲ್ಪ ಸಮಯದ ನಂತರ ನೀರಿನ ಹರಿವು ಜಾಸ್ತಿಯಾಗಿದ್ದು ಆತನಿಗೆ ಈಜಲು ಆಗದೇ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 81/2023 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :

  • ಶಂಕರನಾರಾಯಣ : ಫಿರ್ಯಾದು ಕೀರ್ತಿರಾಜ್  ಶೆಟ್ಟಿ  ಪ್ರತಾಯ 27 ವರ್ಷ ತಂದೆ, ರವಿರಾಜ್  ಶೆಟ್ಟಿ ವಾಸ, ಸುರ್ಗೊಳ್ಳಿ  ಮೇಲ್ಮನೆ   ಬೆಳ್ವೆ  ಅಂಚೆ & ಗ್ರಾಮ  ಹೆಬ್ರಿ  ತಾಲೂಕು ಇವರು ದಿನಾಂಕ  04.05.2023  ರಂದು ಸುಮಾರು  20;50  ಘಂಟೆಗೆ  ಹೆಬ್ರಿ  ತಾಲೂಕಿನ ಬೆಳ್ವೆ ಗ್ರಾಮದ  ಸುರ್ಗೊಳ್ಳಿ  ಮೇಲ್ಮನೆ  ಎಂಬಲ್ಲಿ  ಬಾವಿಯ ಪಂಪಸೆಟ್ ಸ್ವಿಚ್ ಆನ್ ಮಾಡಲು ಹೋದಾಗ ಆರೋಪಿ ಮೋಹನ ಶೆಟ್ಟಿ ಈತನು ಆತನ ಮನೆಯ ಗೇರು ಗಿಡವನ್ನು ಫಿರ್ಯಾದುದಾರರ ಮನೆಯ ದನದ ಕರು ತಿಂದಿದೆ ಎಂದು ಹೇಳಿ ಗಲಾಟೆ ಮಾಡಿದ್ದು, ಈ ಸಮಯ   ಆರೋಪಿ ಸಂಧೀಪ್‌ ಶೆಟ್ಟಿ ಎಂಬವನು ಓಡಿ ಬಂದು  ಫಿರ್ಯಾದುದಾರರೊಂದಿಗೆ ಗಲಾಟೆ ಮಾಡಿ ಅವರನ್ನು ಅಡ್ಡಗಟ್ಟಿ ಕೈಯಿಂದ ಕಪಾಲಕ್ಕೆ ಹೊಡೆದಿರುತ್ತಾನೆ, ಈ ಸಮಯ ಮೋಹನ ಶೆಟ್ಟಿ ಫಿರ್ಯಧುದಾರರ  ಕೈಯಲ್ಲಿ ಇದ್ದ ಕಬಿಣ್ಣದ ಬ್ಯಾಟರಿ ಕಸಿದುಕೊಂಡು ಸಂಧೀಪ್ ಈತನಿಗೆ ನೀಡಿ  ಅವನನ್ನು ಕೊಂದು ಹಾಕು ಎಂದು ಹೇಳಿದಾಗ ಸಂಧೀಪನು   ಫಿರ್ಯಾಧುದಾರರ ತಲೆಗೆ ಬ್ಯಾಟರಿಯಿಂದ ಹೊಡೆದು ರಕ್ತಗಾಯವನ್ನುಂಟು  ಮಾಡಿರುಯತ್ತಾನೆ, ಈ ಸಮಯ ಫಿರ್ಯಾದುದಾರರು ಅವರಿಂದ  ತಪ್ಪಿಸಿಕೊಂಡು ಮನೆಗೆ ಓಡಿ ಹೋದಾಗ ಅಲ್ಲಿಗೆ ಬಂದ ಆರೋಪಿಗಳು  ಫಿರ್ಯಾದುದಾರರ ಮನೆಯ ಅಂಗಳಕ್ಕೆ ಕೈಯಲ್ಲಿ ಕತ್ತಿ ಹಿಡಿದುಕೊಂಡು  ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದದಿಂದ ಬೈದು ಜೀವ ಬೆದರಿಕೆ   ಹಾಕಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : , 46/2023 ಕಲಂ:,341, 323, 324 504, 506 (2),447 ಜೊತೆಗೆ  34 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತರ ಪ್ರಕರಣ :

  • ಉಡುಪಿ : ಪಿರ್ಯಾದಿ ಆಸ್ಟಿನ್ ಪ್ರದೀಪ್ ಅಲ್ಮೇಡಾ, ಪ್ರಾಯ 33 ವರ್ಷ, ತಂದೆ: ಆಲ್ವಿನ್ ಪಿಯುಸ್ ಅಲ್ಮೇಡಾ, ವಾಸ: ನಂಬ್ರ 1-47 A, ಇಮ್ಯಾನ್ವೆಲ್ ವಿಲ್ಲಾ, ಹೆರಾಡಿ ಶಾಲೆಯ ಹತ್ತಿರ, ಬಾರ್ಕೂರು ಪೋಸ್ಟ್, ಉಡುಪಿ ಇವರಿಗೆ ದಿನಾಂಕ 18.04.2023 ರಂದು ಯಾರೋ ಅಪರಿಚಿತ ವ್ಯಕ್ತಿ ಮೊಬೈಲ್ ನಂಬ್ರ +16096304134 ನೇದರಿಂದ ಆನ್ ಲೈನ್ ಜಾಬ್ ಬಗ್ಗೆ ಸಂದೇಶ ಕಳುಹಿಸಿ, ಆ ಬಳಿಕ Google review task complete ಮಾಡಿ ಹೆಚ್ಚಿನ ಬೋನಸ್ ಹಣ ಪಡೆಯುವ ಬಗ್ಗೆ ಟೆಲಿಗ್ರಾಮ್ ನಲ್ಲಿ ಸಂದೇಶ ಕಳುಹಿಸಿ, ಟಾಸ್ಕ್ ಬಗ್ಗೆ ಹಣ ಪಾವತಿಸುವಂತೆ ಬ್ಯಾಂಕ್ ಖಾತೆಗಳನ್ನು ನೀಡಿದ್ದು, ಅದರಂತೆ ಪಿರ್ಯಾದಿದಾರರು ದಿನಾಂಕ 20.04.2023 ರಂದು ರೂ. 15,740/-, ದಿನಾಂಕ 21.04.2023 ರಂದು ರೂ. 55,900/- ಮತ್ತು ದಿನಾಂಕ 22.04.2023 ರಮದು ರೂ. 1,98,700/- ರಂತೆ ಒಟ್ಟು ರೂ. 2,70,340/- ಹಣವನ್ನು ಆರೋಪಿಗಳು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಆನ್ ಲೈನ್ ಮುಖೇಣ ವರ್ಗಾವಣೆ ಮಾಡಿರುತ್ತಾರೆ.  ಆನ್ ಲೈನ್ ಜಾಬ್ ನೀಡುವುದಾಗಿ ಪಿರ್ಯಾದಿದಾರರನ್ನು ನಂಬಿಸಿ, ಮೋಸದಿಂದ ಹಣ ಪಡೆದು ಜಾಬ್ ನೀಡದೇ ಪಡೆದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆ ಅ.ಕ್ರ: 85/2023  ಕಲಂ: 66(C)  66(D)   ಐ.ಟಿ. ಆಕ್ಟ್.ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಿರ್ವ : ದಿನಾಂಕ: 05.05.2023ರಂದು 22:40 ಗಂಟೆಗೆ ಪಿರ್ಯಾದಿ ರಾಘವೇಂದ್ರ ಸಿ, ಪೊಲೀಸ್‌ ಉಪನಿರೀಕ್ಷಕರು, ಶಿರ್ವ ಪೊಲೀಸ್‌ ಠಾಣೆ ಇವರಿಗೆ ಬಂದ ಖಚಿತ ವರ್ತಮಾನದಂತೆ ಕಾಪು ತಾಲೂಕು ಕುರ್ಕಾಲು ಗ್ರಾಮದ ಕುಂಜಾರುಗಿರಿ ದೇವಸ್ಥಾನದ  ದ್ವಾರದ  ಬಳಿ ದರೋಡೆ ಮಾಡುವ ಉದ್ದೇಶದಿಂದ ಹೊಂಚು ಹಾಕುತ್ತಿದ್ದ ವ್ಯಕ್ತಿಗಳನ್ನು ಪಂಚರು ಮತ್ತು ಠಾಣಾ ಸಿಬ್ಬಂದಿಯವರೊಂದಿಗೆ 23:20 ಗಂಟೆಗೆ ಸ್ಥಳಕ್ಕೆ ತೆರಳಿ ಖಚಿತಪಡಿಸಿಕೊಂಡು ದಾಳಿ ನಡೆಸಿ ಆಪಾದಿತರಾದ 1) ಇಕ್ಬಾಲ್‌ @ಇಕ್ಬಾಲ್‌ ಶೇಖ್‌ @  ಇಕ್ಬಾಲ್‌ ಅಹಮ್ಮದ್‌(32),ತಂದೆ:ದಿವಂಗತ ಶಬ್ಬೀರ್‌ ಅಹಮ್ಮದ್‌,ವಾಸ: ಶಾರದ ನಗರ, 1 ಕ್ರಾಸ್‌ ಮಂಚಿಕೆರೆ ಬಾಡಿಗೆ  ಮನೆ, ಮಂಚಿ ಗ್ರಾಮ,ಉಡುಪಿ ತಾಲೂಕು. 2) ಪರ್ವೇಜ್‌ (24)  ತಂದೆ:  ದಿವಂಗತ ಉಮ್ಮರ್‌  ಸಾಹೇಬ್‌, ವಾಸ: ಕಿನ್ನಿಮೂಲ್ಕಿ ವಿಆರ್‌ಎಲ್‌ ರಾಮಚಂದ್ರ ಲೇಔಟ್‌  ಕಿನ್ನಿಮೂಲ್ಕಿ  ಉಡುಪಿ ತಾಲೂಕು. 3)  ಅಬ್ದುಲ್‌ ರಾಕೀಬ್‌(20) ತಂದೆ:ಅಬ್ದುಲ್‌ ರಶೀದ್‌, ವಾಸ: ಹೂಡೆ ಸಾಲಿಯತ್‌ ಶಾಲೆಯ  ಹತ್ತಿರ  ಪಡುತೋನ್ಸೆ ಗ್ರಾಮ ಉಡುಪಿ ತಾಲೂಕು. 4) ಮೊಹಮ್ಮದ್‌  ಸಕ್ಲೇನ್‌(23) ತಂದೆ: ಶೇಖ್‌  ಅಬ್ದುಲ್‌  ರಜಾಕ್‌, ವಾಸ: ಶೇಖ್‌  ದಾವೂದ್‌ ಮಂಜಿಲ್‌, ಉರ್ದು  ಶಾಲೆಯ ಹಿಂಬದಿ. ಹೂಡೆ  ಪಡುತೋನ್ಸೆ ಗ್ರಾಮ ಉಡುಪಿ ತಾಲೂಕು 5) ಸಲೇಮ್‌ @ ಸಲೀಂ (19) ತಂದೆ: ಬಿ ಕೆ ಫಯಾಜ್‌, ವಾಸ: 7  ಕ್ರಾಸು  ನೇಜಾರು ಕೆಳರ್ಕಾಳಬೆಟ್ಟು  ಗ್ರಾಮ, ಉಡುಪಿ ತಾಲೂಕು 6) ಅನಾಸ್‌ (19) ತಂದೆ: ರಪೀಕ್‌, ವಾಸ: 1 ನೇ ಮಹಡಿ, ಗ್ರೀನ್‌ ಪ್ಲಾಟ್‌, ಕ್ಲಾಸಿಕ್‌ ಛಾಯಾ ಲೇಔಟ್‌, ಸಂತೆಕಟ್ಟೆ, ಉಡುಪಿ ತಾಲೂಕು ಇವರನ್ನು ವಶಕ್ಕೆ ಪಡೆದುಕೊಂಡು ಅವರುಗಳ ವಶದಲ್ಲಿದ್ದ ಡ್ರಾಗನ್‌ -1, ಮೆಣಸಿನ ಹುಡಿ ಪ್ಯಾಕೆಟ್‌ -2, ಮರದ ವಿಕೆಟ್‌ - 3, KA20EQ 3582ನೇ ನೊಂದಣಿ ಸಂಖ್ಯೆಯ  ದ್ವಿ  ಚಕ್ರವಾಹನ, KA20HA 6340ನೇ ನೊಂದಣಿ ಸಂಖ್ಯೆಯ ದ್ವಿ ಚಕ್ರ ವಾಹನ, YAMAHA ಕಂಪೆನಿ ತಯಾರಿಕೆಯ FZ ಮಾದರಿಯ ಕಪ್ಪುಬಣ್ಣದ ಚಾಸಿಸ್‌ ನಂಬ್ರ ME121COM262002263  ಎಂದು ನಮೂದು ಮೋಟಾರ್‌ ಸೈಕಲ್ ಹಾಗೂ ನಾಲ್ಕು  ಮೊಬೈಲ್ ಫೋನ್ ಗಳನ್ನು ಸ್ವಾಧೀನ ಪಡಿಸಿಕೊಂಡಿದ್ದು,, ಸ್ವಾಧೀನಪಡಿಸಿಕೊಂಡ ಸ್ವತ್ತುಗಳ ಒಟ್ಟು ಮೌಲ್ಯ ರೂ.2,31,000/- ಆಗಬಹುದು. ಈ ಬಗ್ಗೆ ಶಿರ್ವ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ :  ಎಂಬಿತ್ಯಾದಿ  ಪಿರ್ಯಾದಿ 42/23 ಕಲಂ 399, 402   ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಲಲಾಗಿದೆ.

ಅಪಘಾತ ಪ್ರಕರಣ :

  • ಬೈಂದೂರು : ಫಿರ್ಯಾದಿ ಪ್ರಶಾಂತ್ ಪ್ರಾಯ: 35 ವರ್ಷ ತಂದೆ: ಮಂಜುನಾಥ  ದೇವಾಡಿಗ ವಾಸ: ಸನ್ನಿಧಿ ನಿಲಯ , ಪಡುವರಿ ಗ್ರಾಮ, ಬೈಂದೂರು ತಾಲೂಕು ಇವರ ತಂಗಿಯ ಮದುವೆ ಆರತಕ್ಷತೆ ಕಾರ್ಯಕ್ರಮವನ್ನು ಅರೆಹೊಳೆ  ಬೈಪಾಸಿನಲ್ಲಿರುವ ಶ್ರೀ ನಿಧಿ ಭವನ ದಲ್ಲಿ ದಿನಾಂಕ 02/05/2023 ರಂದು ಇಟ್ಟುಕೊಂಡಿದ್ದು  ಸದ್ರಿ ಕಾರ್ಯಕ್ರಮಕ್ಕೆ  ಸಂಬಂಧಿಕರು ಹಾಗೂ ನೆರೆಕೆರೆಯ ಮನೆಯವರಿಗೆ ಹೋಗಲು KA 51 D 8739 ನೇ ಟೆಂಪೋ ವನ್ನು ಬಾಡಿಗೆ ಪಡೆದಿದ್ದು ಫಿರ್ಯಾದಿದಾರರ ಪಕ್ಕದ ಮನೆಯವರಾದ ರಾಜೀವಿ ರವರು  ಕೂಡಾ ಸದ್ರಿ ಆರತಕ್ಷತೆ ಕಾರ್ಯಕ್ರಮಕ್ಕೆ ಫಿರ್ಯಾದುದಾರರೊಂದಿಗೆ  ಟೆಂಪೋದಲ್ಲಿ ಬಂದಿದ್ದು ಮಧ್ಯಾಹ್ನ  ಹಾಲ್ ನಲ್ಲಿ ಊಟ ಮುಗಿಸಿ KA 51 D 8739ನೇ ಟೆಂಪೋದಲ್ಲಿ ಹಾಲ್ ನಿಂದ ಸಂಜೆ 4:00 ಗಂಟೆಗೆ ಹೊರಟು ಯಡ್ತರೆ ಗ್ರಾಮದ ಶಂಕರ ಸಿನೆಮಾ ಟಾಕೀಸ್ ಎದುರಿನ ಸರ್ವಿಸ್ ರಸ್ತೆಯಲ್ಲಿ ಸಂಜೆ 4;30 ಗಂಟೆಗೆ ಬರುತ್ತಿರುವಾಗ  KA 51 D 8739 ನೇ ಟೆಂಪೋ ಚಾಲಕ ಮಂಜುನಾಥ ರವರು ಟೆಂಪೋವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೇ ಬ್ರೇಕ್ ಹಾಕಿದ ಪರಿಣಾಮ ಟೆಂಪೋದ ಎದುರು ಸೀಟಿನಲ್ಲಿ ಕುಳಿತಿದ್ದ ರಾಜೀವಿ ರವರು ಟೆಂಪೋದೊಳಗೆ ಕವಚಿ ಬಿದ್ದು ಎದುರಿಗಿದ್ದ ಟೆಂಪೋದ ಸಪೋರ್ಟಿಂಗ್ ರಾಡ್ ನೊಳಗೆ ಕಾಲು ಸಿಲುಕಿ  ಎಡಕಾಲಿನ ಮೂಳೆಗೆ ಪೆಟ್ಟಾಗಿದ್ದು ಫಿರ್ಯಾದುದಾರರು ಗಾಯಗೊಂಡ  ರಾಜೀವಿ ರವರನ್ನು ಎತ್ತಿ ಉಪಚರಿಸಿ ರಾಜೀವಿರವರ ಮಗ ಸುಬ್ರಹ್ಮಣ್ಯ ರವರೊಂದಿಗೆ ಕುಂದಾಪುರದ ಮಂಜುನಾಥ ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ಕರೆ ತಂದಲ್ಲಿ ಅಲ್ಲಿನ ವೈದ್ಯರು  ರಾಜೀವಿ ರವರನ್ನು  ಪರೀಕ್ಷಿಸಿ ಎಡಕಾಲಿನ ಮೂಳೆ   ಮುರಿತವಾಗಿರುವುದಾಗಿ ತಿಳಿಸಿ ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ ೀ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 73/2023 ಕಲಂ:279, 338 ಭಾದಂಸಂರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಬೈಂದೂರು ಫಿರ್ಯಾದಿ ಲಿಧಿನ್ (ಪ್ರಾಯ:22) ತಂದೆ: ಆ್ಯಂಟನಿ ಜೋಸೇಫ್ ವಾಸ:ಆತ್ಯಾಡಿ , ಶಿರೂರು ಪೋಸ್ಟ್ & ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 01/05/2023ರಂದು ಸಂಜೆ 4:00 ಗಂಟೆಗೆ ಕೆಲಸದ ನಿಮಿತ್ತ ಬೈಂದೂರಿಗೆ ಬಂದು ಬೈಂದೂರು ಬಿಜೆಪಿ ಕಚೇರಿ ಬಳಿ ನಿಂತುಕೊಂಡಿದ್ದಾಗ  ಅವರ ಪರಿಚಯದ ಬಾಬು ಕೆ ಎಸ್ ರವರು ಬೈಂದೂರು  ಹೊಸ ಬಸ್ ನಿಲ್ದಾಣ ಕಡೆಯಿಂದ ಬೈಂದೂರು ಪೇಟೆ ಕಡೆಗೆ ಅವರ ಬಾಬ್ತು KA 20 EM 7733 ನೇ ಮೋಟಾರು ಸೈಕಲ್ ನ್ನು ಸವಾರಿ ಮಾಡಿಕೊಂಡು ಬರುತ್ತಿರುವಾಗ  ಬೈಂದೂರು ಪೇಟೆ ಕಡೆಯಿಂದ KA 12 M 4766 ನೇ  ಮಾರುತಿ ಸುಜುಕಿ 800 ಕಾರು ಚಾಲಕನು ಆತನ ಬಾಬ್ತು ಕಾರನ್ನು ವಿರುದ್ದ ದಿಕ್ಕಿನಲ್ಲಿ ಸರ್ವಿಸ್  ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು  ರಸ್ತೆಯ ತೀರಾ ಬಲಭಾಗಕ್ಕೆ ಬಂದು ಹೊಸ ಬಸ್ ನಿಲ್ದಾಣದ ಕಡೆಯಿಂದ ಬರುತ್ತಿದ್ದ ಬಾಬುರವರ ಮೋಟಾರು ಸೈಕಲ್ ಗೆ ಎದುರಿನಿಂದ ಡಿಕ್ಕಿ  ಹೊಡೆದನು. ಪರಿಣಾಮ ಮೋಟಾರು ಸೈಕಲ್ ಸವಾರ ಬಾಬು ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು ಫಿರ್ಯಾದಿದಾರರು  ಕೂಡಲೇ ಹೋಗಿ ಬಾಬು ರವರನ್ನು ಎತ್ತಿ ಉಪಚರಿಸಿದ್ದು  ಬಾಬು ರವರಿಗೆ ಬಲ ಕಾಲಿಗೆ ಜಖಂ ಉಂಟಾಗಿದ್ದು, ಬಾಯಿಂದ ರಕ್ತ ಬರುತ್ತಿದ್ದು, ಕೈಗೆ, ಕಾಲಿಗೆ, ಬೆನ್ನಿಗೆ  ತರಚಿದ ಗಾಯವಾಗಿರುತ್ತದೆ. ಫಿರ್ಯಾದುದಾರರು ಗಾಯಾಳು ಬಾಬು ರವರನ್ನು  ಚಿಕಿತ್ಸೆ ಬಗ್ಗೆ ಬೈಂದೂರು ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು ಬಂದಲ್ಲಿ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ  ಕುಂದಾಪುರಕ್ಕೆ ಹೋಗುವಂತೆ ತಿಳಿಸಿದ ಮೇರೆಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ  ಕರೆದುಕೊಂಡು  ಹೋಗಿದ್ದು  ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿಗೆ ಹೋಗಲು ತಿಳಿಸಿದ್ದು  ಉಡುಪಿ ಸರಕಾರಿ ಆಸ್ಪತ್ರೆಗೆ ಕರೆ ಹೋದಲ್ಲಿ ಅಲ್ಲಿನ ವೈದ್ಯರು ಕೂಡಾ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ವೆನ್ಲಾಕ್ ಗೆ ಕರೆದುಕೊಂಡು ಹೋಗಲು ತಿಳಿಸಿದ್ದು, ಅದರಂತೆ   ಮಂಗಳೂರು  ವೆನ್ಲಾಕ್  ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ   ಬಾಬು  ರವರನ್ನು  ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 74/2023 ಕಲಂ:279, 337ಭಾದಂಸಂರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಹಿರಿಯಡ್ಕ : ಪಿರ್ಯಾದು ಸುಂದರ ಕುಲಾಲ್ ಪ್ರಾಯ 51 ವರ್ಷ ತಂದೆ: ಗೋಂಕ್ರ ಕುಲಾಲ್ ವಾಸ: ಧೂಪದಕಟ್ಟೆ ಮನೆ ಬೈರಂಪಳ್ಳಿ ಗ್ರಾಮ ಹರಿಖಂಡಿಗೆ ಅಂಚೆ ಉಡುಪಿ ತಾಲ್ಲೂಕು ಇವರು ದಿನಾಂಕ: 02/05/2023 ರಂದು ಸಮಯ ಸುಮಾರು ರಾತ್ರಿ 11:00 ಗಂಟೆಗೆ ತನ್ನ ಅಟೋ ರಿಕ್ಷಾದಲ್ಲಿ ಪೆರ್ಡೂರು ಹರಿಖಂಡಿಗೆ ಮುಖ್ಯ ರಸ್ತೆಯಲ್ಲಿ ದೂಪದಕಟ್ಟೆಯಲ್ಲಿನ ತನ್ನ ಮನೆಗೆ  ಬರುತ್ತಿದ್ದಾಗ ತನ್ನ ಮುಂದಿನಿಂದ ಪೆರ್ಡೂರು ಕಡೆಯಿಂದ ಹರಿಖಂಡಿಗೆ ಕಡೆಗೆ KA-20-ER-7905ನೇ ಮೋಟಾರು ಸೈಕಲ್ ಸವಾರ ಶ್ರೀನಿವಾಸ ಪೂಜಾರಿ ಎಂಬಾತನು ತನ್ನ ಮೋಟಾರು ಸೈಕಲ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಕಾರಣ ಮೋಟಾರು ಸೈಕಲ್ ನಿಯಂತ್ರಣ ತಪ್ಪಿ ರಸ್ತೆಯ ತೀರಾ ಎಡಭಾಗಕ್ಕೆ ಹೋಗಿ ಚರಂಡಿಗೆ ಬಿದ್ದಿರುತ್ತದೆ. ಪರಿಣಾಮ ಮೋಟಾರು ಸೈಕಲ್‌ ಸವಾರನ ಕೆನ್ನೆಗೆ ತೀವ್ರ  ಸ್ವರೂಪದ  ರಕ್ತಗಾಯವಾಗಿರುತ್ತದೆ.  ಅತನನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಂಸಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತಕ್ಕೆ KA-20-ER-7905ನೇ ಮೋಟಾರು ಸೈಕಲ್‌ ಸವಾರ ಶ್ರೀನಿವಾಸ ಪೂಜಾರಿಯ ಅತೀವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಹಿರಿಯಡಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 33/2023    ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 06-05-2023 11:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080