ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ : 

  • ಕೋಟ : ದಿನಾಂಕ 05/05/2023 ರಂದು ಮಧ್ಯಾಹ್ನ ಸುಮಾರು 1:30 ಗಂಟೆ ಸಮಯಕ್ಕೆ ಸುಹಾಸ್ ಎಂ. ಎಂ., ಸುಧಾಕರ ಶೇಟ್‌, ಸಂತೋಷ್‌ ಮತ್ತು ಮಂಜುನಾಥ್‌ರವರು ಸೇರಿ ಹಾರ್ದಳ್ಳಿ- ಮಂಡಳ್ಳಿ ಗ್ರಾಮದ ಸೌಡದಲ್ಲಿರುವ ವಾರಾಹಿ ಹೊಳೆಗೆ ಈಜುವ ಸಲುವಾಗಿ ಹೋಗಿ ಅಲ್ಲಿ ಈಜಲು ತಯಾರಿ ನಡೆಸುವಾಗ ಸುಹಾಸ್‌ ಈಜಲು ಹೊಳೆಯಲ್ಲಿ ಮುಂದಕ್ಕೆ ಹೋಗಿದ್ದು, ಆಗ ನೀರಿನ ಹರಿವು ಜಾಸ್ತಿಯಾದುದರಿಂದ ಈಜಲು ಆಗದೆ ನೀರಿನಲ್ಲಿಮುಳುಗಿ ಹೋಗಿ ಎಲ್ಲರೂ ಆತನನ್ನು ರಕ್ಷಿಸಲು ಪ್ರಯತ್ನಿಸಿದರೂ ಆಗದೆ ಇದ್ದುದಾಗಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಹುಡುಕಾಡಿದ್ದಲ್ಲಿ ನಿನ್ನೆ ರಾತ್ರಿಯವರೆಗೆ ಸುಹಾಸ್‌ ಸಿಕ್ಕಿರುವುದಿಲ್ಲ. ಈ ದಿನ ದಿನಾಂಕ 06/05/2023 ರಂದು ಬೆಳಗ್ಗೆ ಸುಮಾರು 8:15 ಗಂಟೆ ಸಮಯಕ್ಕೆ ಸೌಡದ ಹೊಳೆಯಲ್ಲಿ ಸುಹಾಸ್‌ ನ ಮೃತದೇಹ ನೀರಿನಲ್ಲಿ ತೇಲುತ್ತಿರುವ ವಿಷಯ ತಿಳಿದಿರುತ್ತದೆ ಅವನು ಸೌಡದಲ್ಲಿರುವ ವಾರಾಹಿ ಹೊಳೆಯಲ್ಲಿ ಈಜಲು ಹೋಗಿ ನೀರಿನ ಸೆಳೆತಕ್ಕೆ ನೀರಿನ ಆಳದಲ್ಲಿ ಮುಳುಗಿ ಉಸಿರುಕಟ್ಟಿ ಮೃತನಾಗಿರುತ್ತಾನೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 09/2023 ಕಲಂ:174 CRPCಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ : ಫಿರ್ಯಾದು ಗಣೇಶ ಭಂಡಾರಿ ಪ್ರಾಯ 36 ವರ್ಷ ತಂದೆ, ಮಂಜಪ್ಪ ಭಂಡಾರಿ ವಾಸ, ಅರಳಿಕೊಪ್ಪಗುಡ್ಡೆಕೊಪ್ಪಗ್ರಾಮ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ ಇವರ ಅಣ್ಣ ರವಿಚಂದ್ರ ಭಂಡಾರಿ ಈತನು ಸುಮಾರು 4 ತಿಂಗಳಿನಿಂದ ಕುಂದಾಪುರ ತಾಲೂಕಿನ ಆಜ್ರಿ ಗ್ರಾಮದ ಚಿತ್ತೇರಿ ಗಣಪತಿ ದೇವಸ್ಥಾನದ ಬಳಿ ರಸ್ತೆ ಕಾಮಗಾರಿ ಆಗುತ್ತಿದ್ದು, ಸದ್ರಿ ಸೈಟ್‌ನಲ್ಲಿ ಟಿಪ್ಪರ ಲಾರಿಯಲ್ಲಿಚಾಲಕ ಕೆಲಸ ಮಾಡಿಕೊಂಡಿದ್ದನು, ದಿನಾಂಕ 05.05.2023 ರಂದು ಕೆಲಸಕ್ಕೆ ರಜೆ ಇದ್ದ ಕಾರಣ ಸದ್ರಿ ಸೈಟನಲ್ಲಿ ಇದ್ದವರು ಅಲ್ಲಿಯೇ ಹತ್ತಿರದ ಕಾಡಿಗೆ ಬಹಿರ್ದೇಸೆಗೆ ಹೋದವರು ವಾಪಾಸು ಬಾರದೇ ಇದ್ದಾಗ ಅವರೊಂದಿಗೆ ಕೆಲಸ ಮಾಡುತ್ತಿದ್ದವರು ಅವರನ್ನು ಹುಡುಕುತ್ತಾ ಹೋದಾಗ ಅವರು ಕಾಡಿನಲ್ಲಿ ಕವುಚಿ ಬಿದ್ದಿದ್ದು, ಅವರನ್ನು ಕುಂದಾಪುರ ಸರಕಾರಿ ಅಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ರವಿಚಂದ್ರ ಇವರನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುತ್ತಾರೆ ಎಂದು ತಿಳಿಸಿರುತ್ತಾರೆ, ಮೃತ ರವಿಚಂದ್ರ ಇವರು ಆಕಸ್ಮಿಕವಾಗಿ ಬಿದ್ದೊ ಅಥವಾ ಬೇರೆ ಯಾವುದಾದರೂ ಕಾಯಿಲೆಯಿಂದಲೊ ಬಿದ್ದು ಮೃತಪಟ್ಟಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ ನಂಬ್ರ 1೪/2023 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
  • ಶಂಕರನಾರಾಯಣ : ಫಿರ್ಯಾದು ಪ್ರಸಾದ ಪೈ ಪ್ರಾಯ 44 ವರ್ಷ ತಂದೆ, ಪುಂಡಲೀಕ ಪೈ ವಾಸ,ಶ್ರೀ. ಮಹಾಲಸಾ ಮನೆ ನಂಬ್ರ 4-106/9 ಕೋಟತಟ್ಟು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಂದೆ, ಪುಂಡಲೀಕ ಪೈ ಪ್ರಾಯ 76 ವರ್ಷ ಇವರು ಅವರ ಹೆಂಡತಿ ತೀರಿಹೋದ ಬಳಿಕ ಅವರ ವಾಸದ ಮನೆಯಾದ ಬ್ರಹ್ಮಾವರ ತಾಲೂಕಿನ ಹಿಲಿಯಾಣ ಗ್ರಾ,ಮದ ತಾರೀಕಟ್ಟೆ ಎಂಬಲ್ಲಿ ಮನೆಯಲ್ಲಿ ಒಬ್ಬರೇ ವಾಸವಾಗಿದ್ದು, ಮಾನಸಿಕವಾಗಿ ಕುಗ್ಗಿಹೋಗಿದ್ದು, ಮನೆಯವರೊಂದಿಗೆ ಹಾಗೂ ಊರಿನಲ್ಲಿ ಸಹ ಯಾರೊಂದಿಗೆ ಸಹ ಮಾತನಾಡದೇ ಒಬ್ಬರು ವಾಸವಾಗಿದ್ದರು, ಹಾಗೂ ಅವರು ಬೆನ್ನು ನೋವು , ಕಾಲು ನೋವಿನಿಂದ ಬಳಲುತ್ತಿದ್ದರು, ಈ ವಿಷಯದಲ್ಲಿ ಅವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 05/05/2023 ರಂದು 19;30 ಘಂಟೆಯಿಂದ ದಿನಾಂಕ. 06.05.2023 ರಂದು ಬೆಳಿಗ್ಗೆ 6;30 ಘಂಟೆಯ ಮದ್ಯದ ಅವಧಿಯಲ್ಲಿ ಅವರ ವಾಸದ ಮನೆಯ ಎದುರುಗಡೆ ಇರುವ ಬಾವಿಯ ಕಬಿಣ್ಣದ ರಾಂಟೆಗೆ ಕುತ್ತಿಗೆಗೆ ನೇಣು ಬಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ ನಂಬ್ರ 13/2023 ಕಲಂ:174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಳವು ಪ್ರಕರಣ : 

  • ಬ್ರಹ್ಮಾವರ : ದಿನಾಂಕ: 05.05.2023 ರಂದು ಫಿರ್ಯಾದಿ ರಾಧಿಕಾ ಶೆಟ್ಟಿ (36), ಗಂಡ: ಸಂತೋಷ ಶೆಟ್ಟಿ, ವಾಸ: ಹೊಸಾಳ ಹೊಸಮನೆ, ಬೃಕೂರು ಅಂಚೆ, ಹೊಸಾಳ ಗ್ರಾಮ, ಬ್ರಹ್ಮಾವರ ತಾಲೂಕು. ಇವರು ತಾಯಿ ಯಶೋಧ ಹಾಗೂ ಮಗಳು ತನ್ವಿ ಯೊಂದಿಗೆ ಬೆಳಿಗ್ಗೆ 10:00 ಗಂಟೆಗೆ ಹೇರಾಡಿ ಬಸ್ಸ್‌ ನಿಲ್ದಾಣದಿಂದ KA.20.AA.0238 ನಂಬ್ರದ ಶ್ರೀ ದುರ್ಗಾಂಬಾ ಬಸ್ಸಿನಲ್ಲಿ ಬ್ರಹ್ಮಾವರಕ್ಕೆ ಪ್ರಯಾಣಿಸುವಾಗ ಬಸ್ಸ್‌ ರಷ್‌ ಇದ್ದುದರಿಂದ ಯಶೋಧರವರು ಧರಿಸಿದ್ದ ಚಿನ್ನದ ಚೈನ್‌ ಅನ್ನು ತನ್ನ ಕೈಯಲ್ಲಿದ್ದ ಸಣ್ಣ ಬ್ಯಾಗ್‌ ನಲ್ಲಿ ಹಾಕಿ ಜೀಪ್‌ ಹಾಕಿರುತ್ತಾರೆ, ಯಶೋಧ ರವರು ನಿಂತುಕೊಂಡಿದ್ದನ್ನು ನೋಡಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಮಹಿಳೆಯೊಬ್ಬಳು ತನ್ನ ಸೀಟನ್ನು ಬಿಟ್ಟು ಯಶೋಧರವರಿಗೆ ಕುಳಿತುಕೊಳ್ಳಲು ಹೇಳಿ, ಆಕೆಯು ಯಶೋಧರವರ ಪಕ್ಕದಲ್ಲಿ ನಿಂತುಕೊಂಡು, ಅವಳ ಕೈಯಲ್ಲಿದ್ದ ಒಂದು ಬ್ಯಾಗನ್ನು ಯಶೋಧರವರಿಗೆ ಹಿಡಿದುಕೊಳ್ಳಲು ಕೊಟ್ಟಳು, ನಂತರ ಬ್ರಹ್ಮಾವರ ಬಸ್ಸ್‌ ನಿಲ್ದಾಣಕ್ಕೆ ಬಂದು ಇಳಿಯುವ ಮೊದಲು ಯಶೋಧ ರವರು ಅವರ ಕೈಯಲ್ಲಿದ್ದ ಮಹಿಳೆಯ ಬ್ಯಾಗನ್ನು ಅವಳಿಗೆ ವಾಪಾಸ್ಸು ಕೊಟ್ಟು, ಬೆಳಿಗ್ಗೆ 10:15 ಗಂಟೆಯ ಸುಮಾರಿಗೆ ಫಿರ್ಯಾದಿದಾರರು ಅವರ ತಾಯಿ ಯಶೋಧ ಹಾಗೂ ಮಗಳ ಜೋತೆ ಬ್ರಹ್ಮಾವರ ಬಸ್ಸ್‌ ನಿಲ್ದಾಣಕ್ಕೆ ಬಂದು ಇಳಿದು ಸ್ವಲ್ಪ ಮುಂದೆ ಹೋಗಿ ತಾಯಿ ಯಶೋಧರವರ ಕೈಯಲ್ಲಿದ್ದ ಬ್ಯಾಗನ್ನು ನೋಡುವಾಗ ಅದರ ಜೀಪ್‌ ಓಪನ್‌ ಆಗಿದ್ದು, ಅದರಲ್ಲಿಟ್ಟಿದ ಚಿನ್ನದ ಸರ ಇಲ್ಲದೆ ಇರುವುದು ಕಂಡು ಬಂದಿರುತ್ತದೆ. ಬಸ್ಸಿನಲ್ಲಿ ಫಿರ್ಯಾದಿದಾರರ ತಾಯಿ ಯಶೋಧರವರಿಗೆ ಕುಳಿತುಕೊಳ್ಳಲು ಸೀಟು ಬಿಟ್ಟುಕೊಟ್ಟ ಮಹಿಳೆಯೇ ತಾಯಿಯ ಬ್ಯಾಗಿನ ಜೀಪ್‌ ಅನ್ನು ತೆರೆದು ಅದರ ಒಳಗಿದ್ದ ಸುಮಾರು 2.5 ಪಾವನಿನ ರೂ. 80,000/- ಮೌಲ್ಯದ ಮುಡಿಗಂಟಿನ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿರುತ್ತಾಳೆ, ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಚಿನ್ನದ ಸರವನ್ನು ಪತ್ತೆ ಮಾಡಿಕೊಡುವಂತೆ ನೀಡಿರುವ ಫಿರ್ಯಾದನ್ನು ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 96/2023 : ಕಲಂ 379 ಐಪಿಸಿಯಂತೆ ದಾಖಲಿಸಿಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 06-05-2023 08:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080