ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ನಾಗೇಶ (57), ತಂದೆ: ಪಳನಿಸ್ವಾಮಿ, ವಾಸ: ಬಸ್ರಿ,  5 ಸೆಂಟ್ಸ್,  ಕುಕ್ಕುಂದೂರು ಅಂಚೆ, ಕಾರ್ಕಳ ತಾಲೂಕು ಇವರು ದಿನಾಂಕ 05/05/2022 ರಂದು ಎರ್ಲಪ್ಪಾಡಿ ಗ್ರಾಮದ ಜಾರ್ಕಳ ಪೇಟೆಯ ಬೋಜಣ್ಣ ಎಂಬುವವರ ಅಂಗಡಿಗೆ ಬಂದಿದ್ದು ಅಂಗಡಿಯಲ್ಲಿರುವಾಗ ಪಿರ್ಯಾದಿದಾರರ ಪರಿಚಯದ ಮಹಾಲಿಂಗ ಎಂಬುವವರು ಸಂಜೆ 4:50 ಗಂಟೆಗೆ KA-20-ET-9854 ನೇ ನೋಂದಣಿ ಸಂಖ್ಯೆಯ ಸ್ಕೂಟರ್ ನಲ್ಲಿ ಸಹಸವಾರರಾಗಿ ಶಾರದ ಎಂಬುವವರನ್ನು ಕುಳ್ಳಿರಿಸಿಕೊಂಡು ಎರ್ಲಪ್ಪಾಡಿ ರಸ್ತೆ ಕಡೆಯಿಂದ ಜಾರ್ಕಳ ರಸ್ತೆ ಕಡೆಗೆ ಬರುತ್ತಿರುವಾಗ ಜಾರ್ಕಳ ಜಂಕ್ಷನ್ ತಲುಪುವಾಗ ಕಾರ್ಕಳ ಕಡೆಯಿಂದ ಉಡುಪಿ ಕಡೆಗೆ KA-19-F-3067 ನೇ ನೋಂದಣಿ ಸಂಖ್ಯೆಯ K.S.R.T.C ಬಸ್ಸನ್ನು ಅದರ ಚಾಲಕ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮಹಾಲಿಂಗರವರ ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯ ಸವಾರರಿಬ್ಬರು ಸ್ಕೂಟರ್ ಸಮೇತ ಡಾಮಾರು ರಸ್ತೆಯ ಮೇಲೆ ಬಿದ್ದ ಪರಿಣಾಮ ಸ್ಕೂಟರ್ ಜಖಂಗೊಂಡಿದ್ದು, ಮಹಾಲಿಂಗ ರವರಿಗೆ ಎದೆಗೆ ಗುದ್ದಿದ ಗಾಯ ಹಾಗೂ ತಲೆಗೆ ತಾಗಿ ಮೂಗಿನಲ್ಲಿ ರಕ್ತ ಬರುತ್ತಿದ್ದು ಶಾರದ ರವರ ಎರಡೂ ಕಾಲಿನ ಪಾದಗಳಿಗೆ ರಕ್ತಗಾಯವಾಗಿದ್ದು, ಚಿಕಿತ್ಸೆಯ ಬಗ್ಗೆ ಪಿರ್ಯಾದಿದಾರರ ಮಗ ಸಂತೋಷ್ ರವರು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ನಂತರ ಸಂತೋಷರವರು ಪಿರ್ಯಾದಿದಾರರಿಗೆ ಮೊಬೈಲ್ ಮುಖಾಂತರ ಮಹಾಲಿಂಗರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಅಪಘಾತ ನಡೆಯುವಾಗ ಸ್ಕೂಟರ್ ನ ಸವಾರ ಮಹಾಲಿಂಗರವರು ಹೆಲ್ಮೆಟ್ ಧರಿಸಿದ್ದು, ಹೆಲ್ಮೆಟ್ ಜಖಂಗೊಂಡಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 71/2022 ಕಲಂ: 279, 338, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಕಿರಣ ಕುಮಾರ್ ಬಿ (45), ತಂದೆ: ದಿ. ಎಸ್ ಸೋಮನಾಥ, ಬೆಳ್ಳಾಯ್ರು ಗ್ರಾಮ ಕೆರೆಕಾಡು ಕೆಂಚನಕೆರೆ, ಅಂಚೆ ಮುಲ್ಕಿ ತಾಲೂಕು ದ.ಕ ಇವರು ಪ್ರಾಕೃತಿಕ ಚಿಕಿತ್ಸೆ ಮಾಡಿಕೊಂಡಿದ್ದು, ದಿನಾಂಕ 13/03/2022 ರಂದು ಪ್ರಾಕೃತಿಕ ಚಿಕಿತ್ಸೆಯನ್ನು ಮುಗಿಸಿ ತನ್ನ ಮೋಟಾರು ಸೈಕಲ್ ನಂಬ್ರ KA-19-EV-7133 ನೇದರಲ್ಲಿ ಎರ್ಮಾಳಿನಿಂದ ಉಡುಪಿಗೆ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯಲ್ಲಿ ಬರುತ್ತಿರುವಾಗ ಕಾಪು ಮಂದಾರ ಹೋಟೆಲ್ ಬಳಿ ತಲುಪುತ್ತಿದ್ದಂತೆ 17:30 ಗಂಟೆಗೆ ಪಿರ್ಯಾದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-19-EV-7133 ಮೋಟಾರು ಸೈಕಲಿಗೆ ಅವರ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-19-ME-7010 ನೇ ಕಾರು ಚಾಲಕ ವಿಲ್ಸನ್ ತನ್ನ ಕಾರನ್ನು ಅತೀ ವೇಗ ಹಾಗೂ ಅಜಗರೂಕತೆಯಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಹೊಡೆದಿದ್ದು ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕೈ ಮೂಳೆ ಮುರಿತಗೊಂಡಿದ್ದು ಹಾಗೂ ಎರಡೂ ಕಾಲುಗಳಿಗೆ ತರಚಿದ ಗಾಯವಾಗಿದ್ದು  ಕೂಡಲೇ ಡಿಕ್ಕಿ ಹೊಡೆದ ಕಾರು ಚಾಲಕ  ಪಿರ್ಯಾದಿದಾರರನ್ನು ಅದೇ ಕಾರಿನಲ್ಲಿ  ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿ  ಒಳರೋಗಿಯನ್ನಾಗಿ  ದಾಖಲಿಸಿ ಚಿಕಿತ್ಸೆ ನೀಡಿರುತ್ತಾರೆ.  ಅಪಘಾತಗೊಳಿಸಿದ  ಕಾರು ಚಾಲಕ ವಿಲ್ಸ ನ್ ರವರು ಪಿರ್ಯಾದಿದಾರರಲ್ಲಿ ಕಾನೂನು ಕ್ರಮ ಕೈಗೊಳ್ಳುವುದು ಬೇಡ ನಾನು ಚಿಕಿತ್ಸಾ ವೆಚ್ಚ ನೀಡುತ್ತೇನೆ,  ಮೋಟಾರು ಸೈಕಲ್ ರಿಪೇರಿ ಮಾಡಿ ಕೊಡುತ್ತೇನೆ, ಪಿರ್ಯಾದಿದಾರರ ಆದಾಯದಷ್ಟು ಹಣವನ್ನು ನೀಡುತ್ತೇನೆಂದು ಭರವಸೆಯನ್ನು ನೀಡಿ ಆದರೆ ಈ ತನಕ ಯವುದೇ ರೀತಿಯ ಸಹಾಯ ನೀಡದ ಕಾರಣ ದೂರು ನೀಡಲು ವಿಳಂಬವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಶಂಶೀರ್ ಅಲಿ (49) ಬಿನ್. ಬಿ ಬುಡನ್ ಸಾಹೇಬ, ವಾಸ:  ಜ್ಯೋತಿ ನಗರ , ಕೆಳಾರ್ಕಳಬೆಟ್ಟು-ಅಂಚೆ, ನೇಜಾರ್, ಉಡುಪಿ ತಾಲೂಕು ಇವರು  ಮಲ್ಪೆ ಯಲ್ಲಿ  ಉ.ಎಫ್. ಎಮ್  ಎಂಬ ಸಂಸ್ಥೆಯಿಟ್ಟುಕೊಂಡು ಮೀನು ವ್ಯಾಪಾರವನ್ನು ಮಾಡುತ್ತಿದ್ದು ,ಆರೋಪಿ  ಮತೀನ್ ಶೇಖ್ ಪರಿಚಯವಾಗಿದ್ದು. ಪಿರ್ಯಾದಿದಾರರು ಒಂದು ವರ್ಷ ಮೂರು ತಿಂಗಳ ಹಿಂದೆ ಗೋವಾದ ಪಿಂಟೋಸ್ ಎಂಬ ಮೀನಿನ ಫ್ಯಾಕ್ಟರಿಗೆ ಮಲ್ಪೆ ಯಿಂದ  ಮೀನನ್ನು  ಕಳುಹಿಸುತ್ತಿದ್ದು , ಆರೋಪಿಯು ಉಡುಪಿಯ ಲೆಗಾಡೋ ಹೋಟೆಲ್  ನಲ್ಲಿ  ವ್ಯಾಪಾರದ ಬಗ್ಗೆ ಮೀಟಿಂಗ್  ಮಾಡಿದ್ದು, ಮೀಟಿಂಗ್ ನಲ್ಲಿ ಆರೋಪಿ, ಸುಲೇಮಾನ್ ಗ್ಯಾಬ್ರಿಯಲ್ ಪಿಂಟೋ ಮತ್ತು ಇನ್ನೊಬ್ಬ ವ್ಯಕ್ತಿಯು ಪಿರ್ಯಾದಿದಾರರಲ್ಲಿ  ಮೀನನ್ನು ಗೋವಾದ ಫ್ಯಾಕ್ಟರಿಗೆ ಕಳುಹಿಸುವಂತೆ ವ್ಯವಹಾರದ ಮಾತುಕತೆ ಯಾಗಿದ್ದು ಅದರಂತೆ ಪಿರ್ಯಾದಿದಾರರು ಮೀನನ್ನು ಗೋವಾಕ್ಕೆ ಕಳುಹಿಸುತ್ತಿದ್ದು  . ಆರೋಪಿಯು ಮೀನಿನ ಹಣ ಕೊಡಲು ಬಾಕಿಯಿದ್ದು , ಪಿರ್ಯಾದಿದಾರರು ಕೇಳಿದಾಗ ಕರೋನದಿಂದ ವ್ಯವಹಾರ ಕುಂಠಿತವಾಗಿದ್ದು ಬಾಕಿ ಇದ್ದ ಹಣವನ್ನು ನೀಡುವುದಾಗಿ ಆರೋಪಿ ತಿಳಿಸಿದ್ದು , ಹಣ ನೀಡದ ಕಾರಣ ಪಿರ್ಯಾದಿದಾರರು ಮೀನನ್ನು ಕಳುಹಿಸಿರುವುದಿಲ್ಲ, ದಿನಾಂಕ 17/11/2021 ರಂದು ಪಿರ್ಯಾದಿದಾರರು ಮತ್ತು ಮ್ಯಾನೇಜರ ಅಬ್ದುಲ್ ರಜಾಕ್  ಹಾಗೂ ಇನ್ನಿಬ್ಬರು ಸೇರಿ  ಗೋವಾ ಫ್ಯಾಕ್ಟರಿಗೆ  ಹೋಗಿ ಹಣದ ಬಗ್ಗೆ ಕೇಳಿದಾಗ ಸರಿಯಾಗಿ ಉತ್ತರವನ್ನು ನೀಡಿರುವುದಿಲ್ಲ. ಮ್ಯಾನೇಜರ್  1 ನೇ ಆರೋಪಿ ಮತೀನ್ ಶೇಖ್ ಗೆ ಕರೆ ಮಾಡಿ ಹಣವನ್ನು ಕೇಳಿದಾಗ ನಾನು ಕಂಪೆನಿಯನ್ನು ಬಿಟ್ಟಿರುತ್ತೇನೆ , ಏನೂ ಬೇಕಾದ್ರೂ ಮಾಡು ಎಂದು ಅವಾಚ್ಯ ಶಬ್ದಗಳಿಂದ ಬೈದು,  ನಿನ್ನ ಕೈಕಾಲು ಕಡಿದು  ಹಾಕುವುದಾಗಿ ಬೆದರಿಕೆ ಹಾಕಿರುತ್ತಾನೆ. ಪಿರ್ಯಾದಿದಾರರಿಗೆ ಮೋಸ ಮಾಡುವ ಉದ್ದೇಶದಿಂದ ಮೀನು ಪಡೆದು ಹಣ ನೀಡದೆ  ನಂಬಿಕೆ ದ್ರೋಹ ಮಾಡಿ ,ಮೋಸ ಮಾಡಿ ನಷ್ಟ ಉಂಟು ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ ನಂಬ್ರ  38/2022 ಕಲಂ: 406, 420,504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಬೈಂದೂರು: ಪಿರ್ಯಾದಿದಾರರಾದ ಮಾಚಿ ಖಾರ್ವಿ (65), ಗಂಡ: ಪುಟ್ಟಯ್ಯ ಖಾರ್ವಿ, ವಾಸ ಕಾಂಜಿ ಮನೆ, ಅಳುವೆ ಕೋಡಿ, ತಾರಾಪತಿ ಪಡುವರಿ ಗ್ರಾಮ, ಬೈಂದೂರು ತಾಲೂಕು ಇವರು ಅಂಗವಿಕಲೆಯಾಗಿದ್ದು, ಪಡುವರಿ ಗ್ರಾಮದ ಕಾಂಜಿ ಮನೆ, ತಾರಾಪತಿ, ಅಳುವೆ ಕೋಡಿ, ಎಂಬಲ್ಲಿ  ಮಗಳು ಲಕ್ಷ್ಮಿ ಯೊಂದಿಗೆ ವಾಸ್ತವ್ಯ ಮಾಡಿ ಕೊಂಡಿದ್ದು,  ಮಗಳು ಲಕ್ಷಿಯನ್ನು ಆರೋಪಿ ಗಂಗಾದರ ಎಂಬುವವನಿಗೆ ಮದುವೆ ಮಾಡಿಕೊಟ್ಟಿದ್ದು, ಪಿರ್ಯಾದಿದಾರರ ಮಗಳನ್ನು ಆರೋಪಿಯು ಚೆನ್ನಾಗಿ ನೋಡಿಕೊಳ್ಳದ ಕಾರಣದಿಂದ  ಮಗಳನ್ನು ಪಿರ್ಯಾದಿದಾರರ ಜೊತೆಯಲ್ಲಿ ವಾಸ ಮಾಡಿಕೊಂಡಿದ್ದು, , ದಿನಾಂಕ 04/05/2022 ರಂದು ಮದ್ಯಾಹ್ನ 13:45 ಗಂಟೆಗೆ ಆರೋಪಿಯು ಮದ್ಯಪಾನ ಮಾಡಿ ಕೊಂಡು ಪಿರ್ಯಾದಿದಾರರ ಮನೆಯ ಒಳಗೆ ಬಂದು ಅವಾಚ್ಯ ಶಬ್ದಗಳಿಂದ ಬೈದಾಗ ಮಾತಿಗೆ ಮಾತಾಗಿ ಆರೋಪಿಯು ಹೊಡೆಯಲು ಬಂದಾಗ ಮಗಳು ಲಕ್ಷ್ಮಿ ಹೊಡೆಯುವುದನ್ನು ತಪ್ಪಿಸಲು ಬಂದಾಗ ಗಲಾಟೆ ಬಿಡಿಸಲು ಬಂದ ಲಕ್ಷ್ಮಿಗೆ ಆರೋಪಿಯು ಕೈಯಿಂದ ಹೊಡೆದು, ಪಿರ್ಯಾದಿದಾರರಿಗೆ ಆರೋಪಿಯು  ಒಣಗಿದ ತೆಂಗಿನ ಬೊಂಡದಿಂದ ಹೊಡೆದು ಬಿಸಾಡಿದ  ಪರಿಣಾಮ ಪಿರ್ಯಾದಿದಾರರ ಎದೆಯ ಎಡಭಾಗದಲ್ಲಿ ನೋವಾಗಿ ರಕ್ತಹೆಪ್ಪು ಗಟ್ಟಿರುತ್ತದೆ. ಗಲಾಟೆಯ ಬೊಬ್ಬೆ ಕೇಳಿ ನೆರೆಕೆರೆಯವರು ಬರುವುದನ್ನು ಕಂಡ ಆರೋಪಿಯು ಜೀವ ಬೆದರಿಕೆ ಹಾಕಿ ಹೋಗಿರುತ್ತಾನೆ.  ಹಲ್ಲೆಯಿಂದ ಗಾಯಗೊಂಡವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದು ಕೊಂಡು ಹೋದಲ್ಲಿ ವೈದ್ಯಾಧಿಕಾರಿಯವರು ಪರೀಕ್ಷೀಸಿ  ಒಳರೋಗಿಯಾಗಿ ದಾಖಲು ಮಾಡಿಕೊಂಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 87/2022 ಕಲಂ: 354, 323, 324 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 06-05-2022 09:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080