ಅಭಿಪ್ರಾಯ / ಸಲಹೆಗಳು

ಹಲ್ಲೆ ಪ್ರಕರಣ

  • ಕುಂದಾಪುರ: ಆರೋಪಿತ 1.ಸಿದ್ದಿಕ್ ಬ್ಯಾರಿ 2.ಆಶ್ರಫ್ ಬ್ಯಾರಿ 3.ಇಕ್ಬಾಲ್ 4.ಮುನೀರ್ 5.ಸಲೀಂ 6.ಮಸ್ಸೂರು ಕೋಡಿ 7.ಮೊಹಮ್ಮದ್ ಇಮ್ರಾನ್ 8.ಸಮೀರ್ ಪ್ರಾಂಶುಪಾಲ 9. ಸಿದ್ದಪ್ಪ ಪ್ರಾಂಶುಪಾಲ 10. ಸೆಕ್ಯೂರಿಟಿ ಇನ್ ಚಾರ್ಜ್  ಹಾಗೂ ಇತರರು  ಮತ್ತು ಪಿರ್ಯಾದಿ ಫಿರೋಜ್ ಇವರಿಗೂ ಕುಂದಾಪುರ ಕಸಬಾ ಗ್ರಾಮದ ಕೋಡಿ ಬ್ಯಾರೀಸ್ ಶಾಲೆಯ ಪಕ್ಕದಲ್ಲಿನ ಜಾಗದ ವಿಚಾರದಲ್ಲಿ ತಕರಾರು ಇದ್ದು ದಿನಾಂಕ 05/05/2022 ರಂದು  17:00 ಗಂಟೆಗೆ ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರರ ತಾಯಿಯಾದ ನೂರ್ ಜಹಾನ್ ರವರು ಮನೆಯಲ್ಲಿರುವಾಗ ಆರೋಪಿತರು  ಪಿರ್ಯಾದುದಾರರ ಮನೆಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ ಹಾಗೂ  ಪಿರ್ಯಾದಿದಾರರ ತಾಯಿಗೆ ನಿಮ್ಮನ್ನು ಈ ಜಾಗದಲ್ಲಿಇರಲು ಬಿಡುವುದಿಲ್ಲ ಎಂದು  ಅವಾಚ್ಯ ಶಬ್ದಗಳಿಂದ ಬೈದು ಮನೆಯೊಳಗೆ ನುಗ್ಗಿ ಪಿರ್ಯಾದಿದಾರರಿಗೆ ಸಿದ್ದೀಕ್ ಬ್ಯಾರಿ ಹಾಗೂ ಮುನೀರ್ ರವರು ಅವರ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಬೆನ್ನಿಗೆ ಹೊಡೆದಿದ್ದು, ಗಲಾಟೆ ತಪ್ಪಿಸಲು ಬಂದ ಪಿರ್ಯಾದಿದಾರರ ತಾಯಿಗೆ ಮರದ ದೊಣ್ಣೆಯಿಂದ ಬಲಕಾಲಿನ ಗಂಟಿಗೆ ಹೊಡೆದಿರುತ್ತಾರೆ. ಅಶ್ರಫ್, ಮುನೀರ್, ಸಿದ್ದಿಕ್  ರವರು ಪಿರ್ಯಾದಿದಾರರ ತಾಯಿಯನ್ನು ನೆಲಕ್ಕೆ ದೂಡಿ ಬೀಳಿಸಿ  ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದು ಸದ್ರಿ ಸಮಯ ಪಿರ್ಯಾದುದಾರರ ಸಂಬಂಧಿ ಆಸಿಫ್ ಹಾಗೂ ಪಿರ್ಯಾದಿದಾರರ ತಮ್ಮ ಬಂದು ಜಗಳ ಬಿಡಿಸಿರುತ್ತಾರೆ. ಅಲ್ಲದೇ ಮನೆಯಲ್ಲಿ ವಾಸ ಮಾಡಿದರೆ ನಿಮ್ಮನ್ನು ಮುಂದಕ್ಕೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ  ಹಾಕಿದ್ದು  ಈ ಕೃತ್ಯಕ್ಕೆ ಜಾಗದ ತಕರಾರು ಕಾರಣವಾಗಿರುತ್ತದೆ ಎಂಬಿತ್ಯಾದಿ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2022  ಕಲಂ:  143, 147, 148, 448, 323, 324, 354, 504, 506 R/W 149   ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.

  

ಇತ್ತೀಚಿನ ನವೀಕರಣ​ : 06-05-2022 05:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080