ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣಗಳು

  • ಕೋಟ: ದಿನಾಂಕ 05/05/2021 ರಂದು ಸಂತೋಷ ಬಿ.ಪಿ, ಪೊಲೀಸ್ ಉಪನಿರೀಕ್ಷಕರು,  ಕೋಟಾ  ಪೊಲೀಸ್ ಠಾಣೆ ಇವರು ಸಿಬ್ಬಂದಿ ಜೊತೆ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೆದೂರು  ಗ್ರಾಮದ ಹಾಲು ಡೈರಿ ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ  ಮದ್ಯದ ಬಾಟಲಿಗಳನ್ನು ತಂದು  ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಸ್ಥಳಕ್ಕೆ ಹೋಗಿ ನೋಡಿದಾಗ ಹಾಲು ಡೈರಿ  ಬಳಿ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ  ನಿಂತುಕೊಂಡು ಕೈನಲ್ಲಿದ್ದ ಪ್ಲಾಸ್ಟಿಕ್ ಚೀಲದಿಂದ ಮಧ್ಯ ತುಂಬಿದ ಪ್ಯಾಕನ್ನು ತೆಗದು ಅದರಲ್ಲಿರುವ ಮಧ್ಯವನ್ನು ಪ್ಲಾಸ್ಟಿಕ್ ಲೋಟದಲ್ಲಿ ಹಾಕಿ ಸಾರ್ವಜನಿಕರಿಗೆ ನೀಡಿ ಅವರಿಂದ ಹಣವನ್ನು ಪಡೆದುಕೊಳ್ಳುತ್ತಿರುವುದು ಕಂಡು ಬಂದಿದ್ದು,  ದಾಳಿ ಮಾಡಿದಾಗ ಸಾರ್ವಜನಿಕರು ಓಡಿ ಹೋಗಿರುತ್ತಾರೆ. ಮದ್ಯ ಮಾರಾಟ ಮಾಡುತ್ತಿದ್ದ ರಂಗಸ್ವಾಮಿ, ತಂದೆ: ಮುನ್ನಿ ಸ್ವಾಮಿ, ವಾಸ: ಕೆದೂರು ಹಾಲು ಡೈರಿ ಬಳಿ, ಕೆದೂರು ಗ್ರಾಮ, ಕುಂದಾಪುರ ತಾಲೂಕು, ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಚೀಲದಲ್ಲಿ ಮದ್ಯದ ಟೆಟ್ರಾ  ಪ್ಯಾಕ್‌ಗಳಿರುವುದಾಗಿ ತಿಳಿಸಿದ್ದು ಪರಿಶೀಲಿಸಿದಲ್ಲಿ ಬಿಳಿ  ಬಣ್ಣದ  ಪ್ಲಾಸ್ಟಿಕ್‌ ಚೀಲ ಇದ್ದು  ಇದರಲ್ಲಿ HAYWARDS CHEERS WHISKY  ಎಂದು ಬರೆದಿರುವ  90 ml ಟೆಟ್ರಾ ಪ್ಯಾಕ್‌- 4 ಪ್ಯಾಕ್‌ಗಳು ಕಂಡು ಬಂದಿರುತ್ತದೆ. ಮದ್ಯದ ಒಟ್ಟು ಪ್ರಮಾಣ 360 ml ಆಗಿದ್ದು, ಮೌಲ್ಯ 140/- ರೂಪಾಯಿ ಆಗಿರುತ್ತದೆ. ಹಾಗೂ ಎರಡು ಪ್ಲಾಸ್ಟಿಕ್ ಲೋಟಗಳನ್ನು  ಮದ್ಯ ಮಾರಾಟದಿಂದ ಬಂದ ಹಣ 120/- ರೂಪಾಯಿ ಹಾಗೂ ಸ್ಥಳದಲ್ಲಿ ಬಿದ್ದಿದ್ದ 4 ಖಾಲಿ ಟೆಟ್ರಾ ಪ್ಯಾಕ್ ಗಳನ್ನು ಸ್ವಾದೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 78/2021  ಕಲಂ: 15(a), 32(3) KE Act   ರಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾರ್ಕಳ : ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ  ದಿನಾಂಕ 26/04/2021 ರಿಂದ ದಿನಾಂಕ 12/05/2021 ರವೆರೆಗೆ ಕೋವಿಡ್ ಕರ್ಪ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಪ್ಯೂ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು, ದಾಮೋದರ ಕೆ ಬಿ.  ಪೊಲೀಸ್ ಉಪ ನಿರೀಕ್ಷಕರು, ಕಾರ್ಕಳ ನಗರ ಪೊಲೀಸ್ ಠಾಣೆ ಇವರು ದಿನಾಂಕ 05/05/2021 ರಂದು ಸಿಬ್ಬಂದಿಯವರೊಂದಿಗೆ ಕಾರ್ಕಳ ನಗರ ಠಾಣಾ ಸರಹದ್ದಿನಲ್ಲಿ ರೌಂಡ್ಸ್  ಕರ್ತವ್ಯದಲ್ಲಿರುವಾಗ ಕಾರ್ಕಳ ಕಸಬ ಗ್ರಾಮದ ಜೋಡುರಸ್ತೆ ಮಟನ್‌ಸ್ಟಾಲ್‌ ಬಳಿ ಮದ್ಯಾಹ್ನ 13:00 ಗಂಟೆಗೆ ತಲುಪುವಾಗ KA-20-EB-8480 ನೇ ನೊಂದಣಿ ಸಂಖ್ಯೆಯ ಬಜಾಜ್‌ ಕಂಪೆನಿಯ  ಮೋಟಾರ್‌ ಸೈಕಲನ್ನು ನಿಲ್ಲಿಸಿ, ಸ್ಥಳದಲ್ಲಿ 5 ಜನರು ಮಾಸ್ಕ್ ಧರಿಸದೇ ನಿಂತುಕೊಂಡಿದ್ದು, ಆಪಾದಿತರಿಗೆ ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ 1)ಅಮರ್‌ ಪ್ರಾಯ 27 ವರ್ಷ, ತಂದೆ: ಸುಧಾಕರ,2)ಅನಿಲ್‌ ಪ್ರಾಯ 28 ವರ್ಷ, ತಂದೆ: ರವಿ,3) ಪ್ರಸನ್ನ ಪ್ರಾಯ 24 ವರ್ಷ, ತಂದೆ: ವಿಠಲ,4)ಸುಮಂತ್‌ ಪ್ರಾಯ 24 ವರ್ಷ, ತಂದೆ: ರಾಜೇಶ್‌, 5)ಅಕ್ಷಯ್‌ ಪ್ರಾಯ 29 ವರ್ಷ, ತಂದೆ: ಲಿಂಗಪ್ಪ ಇವರು ಒಟ್ಟು ಸೇರಿ ಜಿಲ್ಲಾಡಳಿತ ಆದೇಶ ಮತ್ತು ಕೋವಿಡ್ ನಿಯಮ ಉಲ್ಲಂಘಿಸಿರುತ್ತಾರೆ . ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2021 ಕಲಂ: 188, 269 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-05-2021 10:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080