ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕುಂದಾಪುರ: ದಿನಾಂಕ 06/05/2021 ರಂದು  ಬೆಳಿಗ್ಗೆ ಸುಮಾರು 09:30 ಗಂಟೆಗೆ ಪಿರ್ಯಾದಿದಾರರಾಧ ಸುಧಾಕರ ಫೈ (47) ತಂದೆ:- ಲಕ್ಷ್ಮಣ್‌ಫೈ ವಾಸ:- ಗಣೇಸ್‌ಎಣ್ಣೆ ಮಿಲ್ಲ್‌ಬಳಿ ಮಾರ್ಕೇಟ್‌ ಯಾರ್ಡ್‌ ಹತ್ತಿರ, ಕಸಬಾ ಗ್ರಾಮ, ಕುಂದಾಪುರ ಇವರು ತನ್ನ KA-20-EG-6035 ನೇ ಹೊಂಡಾ ಆ್ಯಕ್ಟೀವ ಸ್ಕೂಟರ್‌ ಅನ್ನು ತನ್ನ ಮನೆಯಾದ ಕುಂದಾಪುರ ಕಸಬಾ ಗ್ರಾಮದ ಗಣೇಶ್‌ ಎಣ್ಣೆ ಮಿಲ್‌ಬಳಿ ಮಾರ್ಕೇಟ್‌ ಯಾರ್ಡ್‌ನಿಂದ ಸವಾರಿ ಮಾಡಿಕೊಂಡು ಮನೆಯ ಬಳಿಯ ಅಡ್ಡ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ-66 ರಸ್ತೆಗೆ ಬಂದು ತಲ್ಲೂರು ಕಡೆಗೆ ಹೋಗುತ್ತಿರುವಾಗ ಕೊಟೇಶ್ವರ  ಕಡೆಯಿಂದ ತಲ್ಲೂರು ಕಡೆಗೆ KA-19-AA-220 ನೇ ಟಿಪ್ಪರ್ ಲಾರಿಯನ್ನು ಅದರ ಚಾಲಕ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು, ಬಂದು ಸುಧಾಕರ ಪೈ ರವರ ಸ್ಕೂಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಇವರ ವಾಹನ ಸಮೇತ  ರಸ್ತೆಯಲ್ಲಿ ಬಿದ್ದು ಬಲಕೈ ಗೆ ಮೂಳೆ ಮುರಿತವಾದ ಗಾಯವಾಗಿದ್ದು, ಬಲಕಾಲು, ಸೊಂಟಕ್ಕೆ ಒಳಜಖಂ ಹಾಗೂ ಬಲಭುಜ ಎಡಕಾಲಿಗೆ ಹಾಗೂ ಬಲಭುಜಕ್ಕೆ ತರಚಿದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ  ಒಳ ರೋಗಿಯಾಗಿ  ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಫುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 51/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ವಿರಾಜ್ ಶೆಟ್ಟಿ (35) ತಂದೆ: ಜಯರಾಮ ಶೆಟ್ಟಿ ವಾಸ: ಕಿರಾಬಳಿ ಬೆಟ್ಟು ಕಾಳಾವರ ಇವರ ತಂದೆಯಾದ ಜಯರಾಮ ಶೆಟ್ಟಿ  (68) ರವರು  ಮನೆಯಲ್ಲಿಯೇ ಕೃಷಿ ಕೆಲಸ ಮಾಡಿಕೊಂಡಿದ್ದು  ವಿಪರೀತ ಮಧ್ಯಪಾನ ಮಾಡುವ ಚಟ ಹೊಂದಿರುತ್ತಾರೆ ದಿನಾಂಕ 05/05/2021 ರಂದು ರಾತ್ರಿ 11:00 ಗಂಟೆಗೆ  ಊಟಮಾಡಿ ಮಲಗಿದ್ದು  ದಿನಾಂಕ 06/05/2021 ರಂದು ಬೆಳಿಗ್ಗೆ ನೋಡುವಾಗ ಮನೆಯಲ್ಲಿ ಇಲ್ಲದೇ ಇದ್ದು ಅಕ್ಕ ಪಕ್ಕದಲ್ಲಿ  ಹುಡುಕಾಡಿದಾಗ ಬೆಳಿಗ್ಗೆ 06:30 ಗಂಟೆಗೆ ಮನೆಯ ಬಳಿ ಹುಣಸೆ ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ, ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 12/2021 ಕಲಂ 174 ಸಿ ಆರ್ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣಗಳು

  • ಕಾರ್ಕಳ: ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ 1 ನೇ ಎದ್ರಿದಾರ ಶ್ರೀಮತಿ ಲಲಿತಾ, ಜಕ್ಕಿರಬೆಟ್ಟು ಮನೆ, ಹಿರ್ಗಾನ ಇವರು ಪಿರ್ಯಾದಿದಾರರಾಧ ವಸಂತ ಪೂಜಾರಿ (55) ತಂದೆ: ದಿವಂಗತ ಜೋಗಿ ಪೂಜಾರಿ, ವಾಸ: ಜಕ್ಕಿರಬೆಟ್ಟು ಮನೆ, ಮಂಗಿಲಾರು ಹಿರ್ಗಾನ ಗ್ರಾಮ ಕಾರ್ಕಳ ಇವರ ಸಂಬಂದಿಕರಾಗಿದ್ದು ನಾಗರಾಜ ಎನ್‌. ಭೂಮಾಪಕರು ಕಾರ್ಕಳ ಇತನು ಸಮಷ್ಟಿ ಹಕ್ಕಿನ ಜಾಗವನ್ನು ಸರ್ವೇ ಮಾಡಲು ಬಂದಂತಹ  ಖಾಯಂ ಸರ್ವೇಯರ್‌ ಆಗಿರುತ್ತಾರೆ. ಹಿರ್ಗಾನ ಗ್ರಾಮದ ಸ.ನಂ: 147/1, ಸ,ನಂ: 147/2 ಮತ್ತು ಇತರ ಸರ್ವೇ ನಂಬರುಗಳಲ್ಲಿರುವ ಸ್ಥಿರಾಸ್ತಿಗಳ ಬಗ್ಗೆ ದಿನಾಂಕ 03/06/2017 ರಂದು ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ರಾಜಿ ಡಿಕ್ರಿ ಆಗಿರುತ್ತದೆ. ರಾಜಿ ಡಿಕ್ರಿಯಾಗುವ ಸಮಯ ಖಾಸಗಿ ಸರ್ವೇಯರ್‌ ಮಾಡಿದ ಪಾಲು ನಕ್ಷೆಯಲ್ಲಿ ವಿಸ್ತೀರ್ಣಗಳನ್ನು ಸರಿಯಾಗಿ ಅಳತೆ ಮಾಡದೇ ನಮೂದು ಮಾಡಿರುವುದರಿಂದ ಪಹಣಿಯ ಒಟ್ಟು ವಿಸ್ತೀರ್ಣಕ್ಕೂ “ಎ“  ಯಿಂದ “ಎಫ್‌“  ಶೆಡ್ಯೂಲ್‌‌ಗಳಲ್ಲಿ ವಿಂಗಡಿಸಿದ ವಿಸ್ತೀರ್ಣಕ್ಕೂ ವ್ಯತ್ಯಾಸ  ಕಂಡು ಬರುತ್ತದೆ.  ಸರ್ವೇ ನಂಬ್ರ 147/1 ರ ಪಹಣಿಯಲ್ಲಿ 4.60 ಎಕ್ರೆ ವಿಸ್ತೀರ್ಣ ಇದ್ದರೆ ರಾಜಿ ಡಿಕ್ರಿಯ ಶೆಡ್ಯೂಲ್‌ಗಳಲ್ಲಿ ವಿಭಾಗಿಸಿದ ಒಟ್ಟು ವಿಸ್ತೀರ್ಣ 4.82 ಎಕ್ರೆ ಆಗಿರುತ್ತದೆ. ಹಾಗೇ 22 ಸೆಂಟ್ಸ್‌ಜಾಸ್ತಿ ವಿಸ್ತೀರ್ಣ ವಿಭಾಗ ಪತ್ರದಲ್ಲಿ ಸೇರಿ ಹೋಗಿ ತಪ್ಪಾಗಿರುತ್ತದೆ. ಸ.ನಂ: 147/2 ರ ಪಹಣಿ ವಿಸ್ತೀರ್ಣ 3.88 ಎಕ್ರೆ ಇದ್ದರೆ ರಾಜಿ ಡಿಕ್ರಿಯ ಶೆಡ್ಯೂಲ್‌ಗಳಲ್ಲಿ ವಿಭಾಗಿಸಿದ ಒಟ್ಟು ವಿಸ್ತೀರ್ಣ 3.66 ಎಕ್ರೆ ಆಗಿರುತ್ತದೆ. ಹಾಗೇ 22 ಸೆಂಟ್ಸ್‌ಕಡಿಮೆ ವಿಸ್ತೀರ್ಣ ವಿಭಾಗ ಪತ್ರದಲ್ಲಿ ನಮೂದಿಸಿ ತಪ್ಪಾಗಿರುತ್ತದೆ.  ಪಹಣಿ ಪತ್ರ, ಎಫ್‌ಎಂಬಿ, ಆಕಾರ್‌ಬಂದ್‌ ವಿಸ್ತೀರ್ಣಕ್ಕೆ ತಾಳೆ ಆಗುವ ಹಾಗೇ ವಿಭಾಗ ಪತ್ರವನ್ನು ದುರಸ್ತಿ ಮಾಡಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕಾಗಿದೆ. ಆದರೆ ಆರೋಪಿ ಇವರು  ಉಳಿದ ಹಿಸೆದಾರರಿಗೆ ಮೋಸ ಮಾಡುವ ಉದ್ದೇಶದಿಂದ 11 ಇ ನಕ್ಷೆಗೆ ಅರ್ಜಿಯನ್ನು ಸಲ್ಲಿಸಿ ಉಳಿದ ಹಿಸೆದಾರರಿಂದ ವಸಂತ ಪೂಜಾರಿ ರವರ ಮತ್ತು ಅವರ ಸಂಬಂದಿಕರಾದ ಶ್ರೀಮತಿ ಗುಲಾಬಿ ಪೂಜಾರ್ತಿ, ದಿವಂಗತ ಗೋಪ ಪೂಜಾರಿಯವರ ವಾರೀಸುದಾರರಾದ ಲಲಿತಾ, ಜಯಂತಿ, ಸಂತೋಷ, ಗಣೇಶರವರ ಸಹಿಯನ್ನು ಪೋರ್ಜರಿ ಮಾಡಿ ಮ್ಯೂಟೇಷನ್‌ಗೆ  ಪಹಣಿ ಬದಲಾವಣೆಗೆ ಅರ್ಜಿಯನ್ನು ಸಲ್ಲಿಸಿರುತ್ತಾರೆ. ಉಳಿದ ಆರೋಪಿ ಮನೋಜ್‌ಪೂಜಾರಿ. ಜಕ್ಕಿರಬೆಟ್ಟು ಮನೆ, ಹಿರ್ಗಾನ, ಶ್ರೀಮತಿ ವಿಜಯಾ ಮನೋಜ್‌ ಪೂಜಾರಿ. ಜಕ್ಕಿರಬೆಟ್ಟು ಮನೆ, ಹಿರ್ಗಾನ ಇವರು ಸೇರಿಕೊಂಡು ಕಾನೂನಿಗೆ ವಿರುದ್ದವಾಗಿ 11 ಇ ನಕ್ಷೆಯನ್ನು ತಯಾರಿಸಿ ವಸಂತ ಪೂಜಾರಿ ಹಾಗೂ ಇತರರ ಸಹಿಯನ್ನು ನಕಲು ಮಾಡಿಸಿ 11 ಇ ನಕ್ಷೆಯನ್ನು 1 ನೇ ಎದ್ರಿದಾರರಿಗೆ ನೀಡಿರುತ್ತಾರೆ, ಪಿರ್ಯಾದಿದಾರರ ಹಾಗೂ ಅವರ ಸಂಬಂದಿಕರ ಬೆಲೆಬಾಳುವ ಜಾಗದ ದಾಖಲೆಯನ್ನು ಕಾನೂನಿಗೆ ವಿರುದ್ದವಾಗಿ ತಿದ್ದಿ ಅವರಿಗೆ ಮೋಸ ಮಾಡುವ ಉದ್ದೇಶದಿಂದ ಪಿರ್ಯಾದುದಾರರ ಹಾಗೂ ಅವರ ಸಂಬಂದಿಕರ ನಕಲಿ ಸಹಿಯನ್ನು ಮಾಡಿ ಇವರಿಗೆ ತುಂಬಲಾರದ ನಷ್ಟವನ್ನು ಉಂಟು ಮಾಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 53/2021, ಕಲಂ: 419,420,465,467,468,471 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-05-2021 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080