ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ರಾಜೇಂದ್ರ (45), ತಂದೆ: ಕೃಷ್ಣ ಪೂಜಾರಿ, ವಾಸ,. ಮೆಣಸಿನ ಕಾಯಿ  ಮನೆ ರಾಮ ಮಂದಿರದ  ಬಳಿ  ಗಂಗೊಳ್ಳಿ   ಕುಂದಾಪುರ  ತಾಲೂಕು ಇವರು ದಿನಾಂಕ  05/04/2023 ರಂದು 15:45  ಗಂಟೆಗೆ  KA-20-EZ-7985 ನೇ ನಂಬ್ರದ ಮೋಟಾರ ಸೈಕಲ್‌‌ನಲ್ಲಿ ಹೆಬ್ರಿ ಕೆಡೆಗೆ  ಹೋಗಲು  ಬೆಳ್ಬೆ   ಗ್ರಾಮದ   ಗೋಕುಲ್ ಸ್ಟೋರ್  ಬಳಿ  ಹೋಗುತ್ತಿರುವಾಗ ಅಲ್ಬಾಡಿ ಕಡೆಯಿಂದ KA-51-MQ-3345 ನೇ ನಂಬ್ರದ  ಕಾರನ್ನು  ಅದರ ಚಾಲಕ  ಅತೀ  ವೇಗ    ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸಿಕೊಂಡು  ಹೋಗುತ್ತಿದ್ದ  ಮೋಟಾರ  ಸೈಕಲ್‌ಗೆ  ಡಿಕ್ಕಿ ಹೊಡೆದ ಪರಿಣಾಮ ಮೋಟಾರ್  ಸೈಕಲ್‌ ಸವಾರ ರಾಜೇಂದ್ರ ಇವರಿಗೆ  ಎಡಕೈಗೆ  ತೀವ್ರ ಸ್ವರೂಪದ   ಮೂಳೆ  ಮುರಿತದ   ಹಾಗೂ ಬಲಕಾಲು ತಲೆಗೆ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಬೇಬಿ ಪೂಜಾರ್ತಿ (36), ಗಂಡ: ಹರೀಶ, ವಾಸ: ಮನೆ ನಂ. 1-63, ಪ್ರೀತು ನಿಲಯ, ಹಾರಾಡಿ ಮನೆ, ಹಾರಾಡಿ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಇವರ ಗಂಡ ಹರೀಶ (37) ರವರು ಕಳೆದ 4 ವರ್ಷಗಳಿಂದ ಲೀವರ್‌ ಹಾಗೂ ಇತರ ದೈಹಿಕ ಸಮಸ್ಯೆಯಿಂದ ಬಳಲುತ್ತಿದ್ದವರು ಉದ್ಯಾವರದ ಆರ್ಯುರ್ವೆದಿಕ್‌ ಆಸ್ಪತ್ರೆ, ಬ್ರಹ್ಮಾವರದ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು,, ಸುಮಾರು 2 ತಿಂಗಳ ಹಿಂದೆ ಲೀವರ್‌ ಸಮಸ್ಯೆ ಹಾಗೂ ಅರಶಿನ ಕಾಯಿಲೆ ಉಲ್ಬಣಿಸಿಕೊಂಡು ಉಡುಪಿ ಅಜ್ಜರಕಾಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಯನ್ನು ಮಣಿಪಾಲದ ಕೆಎಮ್‌ಸಿ ಆಸ್ಪತ್ರೆಯಲ್ಲಿ ಪಡೆದುಕೊಂಡು ಆಸ್ಪತ್ರೆಯಿಂದ ಬಿಡುಗಡೆಗೊಂಡು ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇದ್ದವರು  ದಿನಾಂಕ 05/04/2023 ರಂದು ರಾತ್ರಿ 8:00 ಗಂಟೆಯಿಂದ ರಾತ್ರಿ 8:15ಗಂಟೆಯ ಮಧ್ಯಾವಧಿಯಲ್ಲಿ ತನಗಿದ್ದ ಅನಾರೋಗ್ಯದ ಸಮಸ್ಯೆಯಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಜೀವನದಲ್ಲಿ ಜಿಗುಪ್ಸೆಗೊಂಡು ತಾನು ಮಲಗುವ ಕೋಣೆಯ ಫ್ಯಾನ್‌ಗೆ ಸೀರೆಯನ್ನು ಕಟ್ಟಿ ಇನ್ನೊಂದು ನೇಣನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 25/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ನವೀನ್‌ ಆಚಾರ್ಯ (39), ತಂದೆ: ಗಂಗಾಧರ ಆಚಾರ್ಯ, ವಾಸ: ನೀರಕಟ್ಟೆ, ವಲಾಲ್‌ ಅಂಚೆ, ಬಜತ್ತೂರು, ದ.ಕ ಜಿಲ್ಲೆ ಇವರಿಗೆ ದಿನಾಂಕ 04/04/2023 ರಂದು 19:00 ಗಂಟೆಗೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಉಡುಪಿ ಆಭರಣ ಜುವೆಲ್ಲರಿ ಶಾಪ್‌ ಬಳಿ ಆಪಾದಿತ ಸಂಪತ್‌ ಎಂಬಾತನು ಅಡ್ಡಗಟ್ಟಿ, ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 46/2023 ಕಲಂ: 341, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 21/03/2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನಿಧಿ ಬಿ ಎನ್‌ ರವರು ಸಿಬ್ಬಂದಿಯವರೊಂದಿಗೆ ರೌಂಡ್ಸ್‌ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರ ಪ್ರಥಮ ಕೃಷ್ಣ ಅಪಾರ್ಟಮೆಂಟ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ದಿಲೀಪ್‌ ಶೆಟ್ಟಿ (21) ಎಂಬಾತನನ್ನು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಗಳು  ದಿನಾಂಕ 05/04/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 83/2023, ಕಲಂ: 27(b) NDPS Act  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 21/03/2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ  ನವೀನ್‌ ಎಸ್‌ ನಾಯ್ಕ್ ರವರು ಸಿಬ್ಬಂದಿಯವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರ ಬಳಿ ಸಾರ್ವಜನಿಕ ಸ್ಥಳದಲ್ಲಿ ಆದಿತ್ಯ ರಾಜ್‌ (20) ಎಂಬಾತನನ್ನು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಗಳು  ದಿನಾಂಕ 05/04/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 84/2023, ಕಲಂ: 27(b) NDPS Act  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 23/03/2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್‌ ಉಪನಿರೀಕ್ಷಕರಾದ  ನವೀನ್‌ ಎಸ್‌ ನಾಯ್ಕ್ ರವರು ಸಿಬ್ಬಂದಿಯವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು 80 ಬಡಗುಬೆಟ್ಟ ಗ್ರಾಮದ ದಶರಥ ನಗರ ಡೌನ್ ಟೌನ್ ಹೊಟೇಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಆಶಿಶ್‌ ಕುಮಾರ್ (23)‌ ಎಂಬಾತನನ್ನು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಗಳು  ದಿನಾಂಕ 05/04/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 85/2023, ಕಲಂ: 27(b) NDPS Act  ರಂತೆ ಪ್ರಕರಣ ದಾಖಲಾಗಿರುತ್ತದೆ.
  •  ಮಣಿಪಾಲ: ದಿನಾಂಕ 24/03/2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರುಕ್ಮಾ ನಾಯ್ಕ್ ರವರು  ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ IRIS PLAZA NEAR BARRALS ಬಳಿ ಸಾರ್ವಜನಿಕ ಸ್ಥಳದಲ್ಲಿ ಆನಂದ್‌ ಶಂಕರ್‌ D.S (20) ಎಂಬಾತನನ್ನು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಗಳು  ದಿನಾಂಕ 05/04/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 86/2023, ಕಲಂ: 27(b) NDPS Act  ರಂತೆ ಪ್ರಕರಣ ದಾಖಲಾಗಿರುತ್ತದೆ.
  • . ಮಣಿಪಾಲ: ದಿನಾಂಕ 24/03/2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರುಕ್ಮಾ ನಾಯ್ಕ್ ರವರು  ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ IRIS PLAZA NEAR BARRALS ಬಳಿ ಸಾರ್ವಜನಿಕ ಸ್ಥಳದಲ್ಲಿ ವಿಷ್ಣು ವಿನು ( 19)ಎಂಬಾತನನ್ನು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಗಳು  ದಿನಾಂಕ 05/04/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 87/2023, ಕಲಂ: 27(b) NDPS Act  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 24/03/2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ರುಕ್ಮಾ ನಾಯ್ಕ್ ರವರು  ರಾತ್ರಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಣಿಪಾಲದ IRIS PLAZA NEAR BARRALS ಬಳಿ ಸಾರ್ವಜನಿಕ ಸ್ಥಳದಲ್ಲಿ ದೇವನಾರಾಯಣ ಎ ( 20) ಎಂಬಾತನನ್ನು ಗಾಂಜಾ ಸೇವನೆ ಮಾಡಿರುವ ಅನುಮಾನದ ಮೇರೆಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಗಳು  ದಿನಾಂಕ 05/04/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 88/2023, ಕಲಂ: 27(b) NDPS Act  ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂರನಾರಾಯಣ: ಪಿರ್ಯಾದಿದಾರರಾದ ಶ್ರೀಮತಿ ಗುಲಾಬಿ (48), ಗಂಡ: ರಾಜು, ವಾಸ: ತೊಂಬತ್ತು  ಕ್ರಾಸ್   ಗೋಳಿಯಂಗಡಿ ಬೆಳ್ವೆ ಗ್ರಾಮ ಕುಂದಾಪುರ  ತಾಲೂಕು ಇವರ  ತಂಗಿ   ಶ್ರೀಮತಿ ಯಶೋಧಾ  ಇವರಿಗೆ ಅವರ  ಗಂಡ  ಅಣ್ಣಪ್ಪ ಯಾವಾಗಲೂ  ತೊಂದರೆ  ಮಾಡುತ್ತಿದ್ದು, ಮಕ್ಕಳಿಗೆ  ಓದಲು  ಬಿಡುತ್ತಿರಲಿಲ್ಲ. ಈ  ಕಾರಣದಿಂದ ಯಶೋಧಾ  ಇವರು ಅವರ  ಮಕ್ಕಳೊಂದಿಗೆ  ಪಿರ್ಯಾದಿದಾರರ  ಮನೆಗೆ  ಬಂದು  ಅಲ್ಲಿ  ಅವರ ಮಕ್ಕಳೊಂದಿಗೆ  ವಾಸವಾಗಿದ್ದರು  ಈ ವಿಷಯದಲ್ಲಿ  ಕೋಪಗೊಂಡ ಆರೋಪಿಯು  ದಿನಾಂಕ  04/04/2023  ರಂದು 22:30 ಗಂಟೆಗೆ  ಏಕಾಏಕಿಯಾಗಿ  ಪಿರ್ಯಾದಿದಾರರ  ಮನೆಯ  ಒಳಗಡೆ   ಅಕ್ರಮ  ಪ್ರವೇಶ ಮಾಡಿ ಅವಾಚ್ಯವಾಗಿ ಬೈದು  ಬೆದರಿಕೆ  ಹಾಕಿ  ಕೈಯಿಂದ ಬೆನ್ನಿಗೆ  ಹೊಡೆದು  ಎದೆಯ  ಮೇಲೆ  ಕೈ ಹಾಕಿ  ದೂಡಿತ್ತಾನೆ. ಅಲ್ಲದೆ   ಜಗಳ ಬಿಡಿಸಲು  ಬಂದ   ಅಮೃತಾ  ಇವರಿಗೆ   ಮರದ  ಕೋಲಿನಿಂದ  ಎಡಕೈಗೆ   ಹಲ್ಲೆ  ಮಾಡಿ ಅವಾಚ್ಯ  ಶಬ್ದದಿಂದ ಬೈದು   ಜೀವ ಬೆದರಿಕೆ  ಹಾಕಿರುವುದಾಗಿ ನೀಡಿದ ದೂರಿನಂತೆ ಶಂಕರನಾರಾಯಣ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2023 ಕಲಂ:,  447, 354, 504, 506, 323, 324 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
  • ಮಣಿಪಾಲ: ದಿನಾಂಕ 05/04/2023 ರಂದು ರುಕ್ಮ ನಾಯ್ಕ್‌, ಪೊಲೀಸ್‌ ಉಪನಿರೀಕ್ಷಕರು, ಮಣಿಪಾಲ ಪೊಲೀಸ್‌ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಕರ್ನಾಟಕ ವಿಧಾನಸಭಾ ಚುನಾವಣೆ ನಿಮಿತ್ತ ಎಂ ಐ ಟಿ ಜಂಕ್ಷನ್‌ ಬಳಿ ಪರ್ಕಳ – ಉಡುಪಿ ರಾ ಹೆ 169 (ಎ) ನೇದರಲ್ಲಿ ದಿಡೀರ್‌ ವಾಹನ ತಪಾಸಣೆ ಮಾಡುತ್ತಿರುವ ಸಮಯ ಪರ್ಕಳ ಕಡೆಯಿಂದ ಮಣಿಪಾಲದ ಕಡೆಗೆ KA-31-4536 ನೇದರ ಲಾರಿಯ ಚಾಲಕ ಡೇನಿಲ್‌ ಆಂತೋನಿ ಫರ್ನಾಂಡೀಸ್‌ ಎಂಬಾತನು ಹಳಿಯಾಳ ದಿಂದ ಬೆಳ್ತಂಗಡಿ ತಾಲೂಕಿನ ಮಾರುತಿಪುರ ದ ಅಕ್ಕಿ ಮಿಲ್‌ ಗೆ ಸಮರ್ಪಕವಾದ ದಾಖಲಾತಿ ಇಲ್ಲದೇ  100 ಮೂಟೆ ಭತ್ತ ತುಂಬಿದ ಗೋಣಿ ಚೀಲ ಸಾಗಾಟ ಮಾಡುತ್ತಿರುವುದಾಗಿದೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 89/2023, ಕಲಂ: 98 KP Act ರಂತೆ ಪ್ರಕರಣ ದಾಖಲಾಗಿರುತ್ತದೆ.
     

ಇತ್ತೀಚಿನ ನವೀಕರಣ​ : 06-04-2023 09:48 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080