ಅಭಿಪ್ರಾಯ / ಸಲಹೆಗಳು

ವಂಚನೆ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಸುರೇಶ್‌ (43) , ತಂದೆ: ಗಂಗಾಧರ, ವಾಸ:ಶ್ರೇಯಾ ನಿವಾಸ, ಹೊಸ್ಮಾರು ಅಂಚೆ, ಈದು ಗ್ರಾಮ, ಕಾರ್ಕಳ ತಾಲೂಕು ಇವರಿಗೆ ದಿನಾಂಕ  23/02/2023 ರಂದು ಮುದ್ರಾ ಲೋನ್‌ ಬಗ್ಗೆ ಮೇಸೆಜ್ ಬಂದಿದ್ದು  ಮೇಸೆಜ್ ನಲ್ಲಿ ನಮೂದಿಸಿದ ಮೊಬೈಲ್ ನಂಬ್ರಗಳಿಗೆ ಪಿರ್ಯಾದಿದಾರರು ಕರೆ ಮಾಡಿದ್ದು  ಆ ಸಮಯ ರೂಪಾಯಿ 50,00,000/- ಮುದ್ರಾ ಲೋನ್ ದೊರೆತಿರುವುದಾಗಿ ತಿಳಿಸಿ ಪೇಪರ್ ಚಾರ್ಜ್ , ಇನ್ಸೂರೆನ್ಸ್, ಮುಗಂಡ ಹಣ  ಮುಂತಾದ ಚಾರ್ಜ್ ಗಳನ್ನು ಪಾವತಿಸಬೇಕೆಂದು ತಿಳಿಸಿದಂತೆ  ಆರೋಪಿಗಳು ನೀಡಿದ ವಿವಿಧ ಖಾತೆಗಳಿಗೆ ಪಿರ್ಯಾದಿದಾರರು ಹಂತ ಹಂತವಾಗಿ ಒಟ್ಟು ರೂಪಾಯಿ 1,30,900/-  ಹಣವನ್ನು ಪಾವತಿಸಿದ್ದು  ಮುದ್ರಾ  ಲೋನ್‌ ನೀಡದೇ ಪಡೆದ ಹಣವನ್ನು ಹಿಂತಿರುಗಿಸದೇ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2023  ಕಲಂ: 66(C), 66(D)   ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶ್ವೇತಾ ಕುಮಾರಿ ಶೆಣೈ (30), ತಂದೆ: ಜಗದೀಶ ಶೆಣೈ, ವಾಸ:ಮನೆ ನಂಬ್ರ 6-82-4 ಪುನಾರು , ಬೆಳ್ಮಣ್ಣು, ಕಾರ್ಕಳ ತಾಲೂಕು ಇವರ  ಅಜ್ಜ ಬಾಲಕೃಷ್ಣ ಶೆಣೈ.ಪಿ ರವರು ಮುದರಂಗಡಿ ಕೆನರಾ ಬ್ಯಾಂಕ್ ನಲ್ಲಿ ಎಸ್.ಬಿ. ಖಾತೆ ಹೊಂದಿದ್ದು, ದಿನಾಂಕ 05/04/2023 ರಂದು ಬಾಲಕೃಷ್ಣ ಶೆಣೈ ರವರ ಮೊಬೈಲ್‌ ನಂಬ್ರಕ್ಕೆ  KYC ಅಪ್‌‌ಡೇಟ್ ಮಾಡುವ ಬಗ್ಗೆ ಸಂದೇಶ ಬಂದಿದ್ದು,  ಸಂದೇಶ ಬ್ಯಾಂಕ್ ಅಧಿಕಾರಿಗಳೇ ಕಳುಹಿಸಿರಬಹುದೆಂದು ತಿಳಿದು ನಂಬ್ರಗಳಿಗೆ ಕರೆ ಮಾಡಿದಲ್ಲಿ ಆತನು ತಾನು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಬ್ಯಾಂಕ್ ಖಾತೆಯ ವಿವರ, ಎ.ಟಿ.ಎಂ. ಕಾರ್ಡ್ ವಿವರ, ಸಿ.ವಿ.ವಿ. ವಿವರವನ್ನು ಪಡೆದು, ಅಲ್ಲದೇ ಮೊಬೈಲ್ ಗೆ ಬಂದಿರುವ OTP ಯನ್ನು ಸಹಾ ಪಡೆದು, ಅದೇ ದಿನ ಬಾಲಕೃಷ್ಣ ಶೆಣೈ ರವರ ಮೇಲಿನ ಖಾತೆಯಿಂದ ರೂಪಾಯಿ 1,98,221/-  ಹಣವನ್ನು  ಆನ್ ಲೈನ್ ಮುಖೇನ ವರ್ಗಾವಣೆ ಮಾಡಿ ನಷ್ಟ ಉಂಟು ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2023 ಕಲಂ: 66(C), 66(D) ಐ.ಟಿ. ಆಕ್ಟ್  ರಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಶ್ರೀಕಾಂತ್ ಆಚಾರ್ಯ (33), ತಂದೆ: ವಿಶ್ವನಾಥ ಆಚಾರ್ಯ, ವಾಸ: ವಿಶ್ವಕರ್ಮ ನಿಲಯ, ಕಕ್ಕೆ ಪದವು, ನಂದಳಿಕೆ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು,ಉಡುಪಿ ಜಿಲ್ಲೆ ಇವರು  ಹೊಂದಿರುವ ಓಂಕಾರ್ ಜುವೆಲ್ಲರ್ಸ್ ಎಂಬ ಹೆಸರಿನ ಚಿನ್ನದ ಮಳಿಗೆಯಲ್ಲಿ ಚಿನ್ನದ ಕೆಲಸದ ಸಲುವಾಗಿ ಅಂಗಡಿಯ ಡ್ರಾವರ್‌ನಲ್ಲಿ ಪರ್ಸ್ ನಲ್ಲಿ ಇರಿಸಿದ್ದ 24 ಕ್ಯಾರೇಟ್‌ನ 20 ಗ್ರಾಂ ತೂಕದ ಚಿನ್ನದ ಗಟ್ಟಿಯನ್ನು ದಿನಾಂಕ 03/04/2023 ರಂದು ಸಂಜೆ 4:15 ಗಂಟೆಗೆ ಒಬ್ಬ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರ ಅಂಗಡಿಗೆ ಬಂದು ಅಂಗಡಿಯ ಒಳಗೆ  ಡ್ರಾವರ್‌ಗೆ ಕೈ ಹಾಕಿ ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನದ ಗಟ್ಟಿಯ ಮೌಲ್ಯ 1,20,000/- ರೂಪಾಯಿ ಆಗಿರುತ್ತದೆ. ಪಿರ್ಯಾದಿದಾರರು ದಿನಾಂಕ 05/04/2023 ರಂದು ಕೆಲಸದ ಸಲುವಾಗಿ ಡ್ರಾವರ್‌‌ನಲ್ಲಿ ಪರ್ಸಿನಲ್ಲಿ ಇರಿಸಿದ್ದ ಚಿನ್ನದ ಗಟ್ಟಿಯನ್ನು ತೆಗೆಯಲು ನೋಡಿದಾಗ ಚಿನ್ನದ ಗಟ್ಟಿ ಇಲ್ಲದೇ ಇರುವುದನ್ನು ಕಂಡು, ಅಂಗಡಿಗೆ ಅಳವಡಿಸಿದ ಸಿಸಿಟಿವಿಯ ಫೂಟೇಜನ್ನು ಪರಿಶೀಲಿಸಿದಾಗ ಈ ದೃಶ್ಯ ಕಂಡು ಬಂದಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 47/2023 ಕಲಂ: 380 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸಾಕು ಶೆಡ್ತಿ (55), ಗಂಡ: ಬಾಬು ಶೆಟ್ಟಿ, ವಾಸ: ಹರ್ಕಾಡಿ ಅಂಗಡಿ ಮನೆ ಹಳ್ಳಾಡಿ ಹರ್ಕಾಡಿ ಗ್ರಾಮ ಕುಂದಾಪುರ ತಾಲೂಕು  ಇವರ  ಮಗ ಗಣೇಶ ಶೆಟ್ಟಿ(32) ರವರು ಗದಗ ದಲ್ಲಿ ಹೋಟೆಲ್ ನಲ್ಲಿ ಮ್ಯಾನೇಜರ್ ಕೆಲಸ ಮಾಡಿಕೊಂಡಿದ್ದು . 6-7 ತಿಂಗಳಿಗೊಮ್ಮೆ ಊರಿಗೆ ಬಂದು ಹೋಗುತ್ತಿದ್ದು,ದಿನಾಂಕ 04/04/2023 ರಂದು ಮನೆಗೆ ಕರೆ ಮಾಡಿ ಮಾತನಾಡಿ ಇವತ್ತು ಮನೆಗೆ ಬರುವುದಾಗಿ ತಿಳಿಸಿದ್ದು  ದಿನಾಂಕ 05/04/2023 ರಂದು ಬೆಳಿಗ್ಗೆ ಆದರೂ ಮನೆಗೆ ಬಾರದೇ ಇದ್ದು ಗದಗಕ್ಕೆ ಹೋಟೆಲ್ ಗೆ ಪೋನ್ ಮೂಲಕ ವಿಚಾರಿಸಿದಾಗ ದಿನಾಂಕ 04/04/2023 ರಂದೇ ಹೋಟೆಲ್ ನಿಂದ ಹೋಗಿರುವುದಾಗಿ ತಿಳಿಸಿರುತ್ತಾರೆ. ಗಣೇಶನ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಗಿರುತ್ತದೆ. ನಂತರ ನಮ್ಮ ಸಂಬಂಧಿಕರ ಮನೆ  ಹಾಗೂ ಎಲ್ಲಾ ಕಡೆ ಹುಡುಕಾಡಿದಲ್ಲಿ ಪತ್ತೆಯಾಗದೇ ಇದ್ದು ಕಾಣೆಯಾಗಿರುತ್ತಾರೆ . ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 55/2023 ಕಲಂ: ಮನುಷ್ಯ ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಉಡುಪಿ: ದಿನಾಂಕ 04/04/2023 ರಂದು ಉಡುಪಿ ತಾಲೂಕು, ಶಿವಳ್ಳಿ ಗ್ರಾಮದ ಎಮ್ ಪಿ ಅಪಾರ್ಟಮೆಂಟ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ಅಮನ್ ಚೇತ್ರಿ (24) ಎಂಬಾತನನ್ನು ಅಶೋಕ್ ಕುಮಾರ್, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು ವಶಕ್ಕೆ ಪಡೆದು ಮೆಡಿಕಲ್ ತಪಾಸಣೆಗೊಳಪಡಿಸಿದ್ದು ದಿನಾಂಕ 06/04/2023  ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿದ್ದು ವರದಿಯಲ್ಲಿ ಆರೋಪಿ ಅಮನ್ ಚೇತ್ರಿ ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ     59/2023 ಕಲಂ: 27 (b) ಎನ್‌.ಡಿ.ಪಿ.ಎಸ್  ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 04/04/2023 ರಂದು ಉಡುಪಿ ತಾಲೂಕು, ಮೂಡನಿಡಂಬೂರು ಗ್ರಾಮದ ಆರ್.ಎಸ್.ಬಿ ವಿಂಡ್ಸೋರ್ ಅಪಾರ್ಟಮೆಂಟ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ  ಭಕ್ತ ಬಹದ್ದೂರ್ ಶರ್ಕಿ (40) ಎಂಬಾತನನ್ನು ಕೋಕಿಲಾ ಹೆಚ್.ಜೆ, ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು  ವಶಕ್ಕೆ ಪಡೆದಿ ಮೆಡಿಕಲ್ ತಪಾಸಣೆಗೊಳಪಡಿಸಿದ್ದು, ದಿನಾಂಕ 06/04/2023  ರಂದು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿದ್ದು ವರದಿಯಲ್ಲಿ ಆರೋಪಿ ಭಕ್ತ ಬಹದ್ದೂರ್ ಶರ್ಕಿ  ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  58/2023 ಕಲಂ: 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-04-2023 06:25 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080