ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ


  • ಕಾರ್ಕಳ:  ದಿನಾಂಕ: 06/04/2022 ರಂದು ಬೆಳಿಗ್ಗೆ 10:45  ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಘಾಟಿಯ ಓಟೆಹಳ್ಳ ಎಂಬಲ್ಲಿ ಹಾದುಹೋಗಿರುವ ಮಾಳ-ಶ್ರಂಗೇರಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಶ್ರಂಗೇರಿ ಕಡೆಯಿಂದ ಮಾಳ ಕಡೆಗೆ ರಸ್ತೆಯ ತಿರುವಿನಲ್ಲಿ KA18-EH-8940 ನೇದರ ಸವಾರ ನಿತೇಶ್ ಎಂಬಾತನು ತನ್ನ ಬಾಬ್ತು ಬೈಕಿನಲ್ಲಿ ಸಹಸವಾರನಾದ ನಂದೇಶ್‌‌ನನ್ನು ಕುಳ್ಳಿರಿಸಿಕೊಂಡು ಅತೀವೇಗ ಹಾಗೂ ಅಜಾಗರೂಕತೆಯಿಂದ ಎದುರುಗಡೆ ಬರುತ್ತಿದ್ದ ಒಂದು ಟಿಪ್ಪರ್ ಲಾರಿಯನ್ನು ಓವರ್ ಟೇಕ್  ಮಾಡುವ ಭರದಲ್ಲಿ ಬೈಕ್ ನ್ನು ರಸ್ತೆಯ ತೀರಾ ಬಲಭಾಗಕ್ಕೆ ಸವಾರಿ ಮಾಡಿಕೊಂಡು ಬಂದು ಮಾಳ ಕಡೆಯಿಂದ ಶ್ರಂಗೇರಿ ಕಡೆಗೆ ಹೋಗುತ್ತಿದ್ದ KA20-D-8419 ನೇ ನಂಬ್ರದ ವಿಶಾಲ್ ಬಸ್ಸಿನ ಮುಂಭಾಗಕ್ಕೆ ಡಿಕ್ಕಿ ಹೊಡೆದು ರಸ್ತೆಯ ಬದಿಯಲ್ಲಿ ನಿರ್ಮಿಸಲಾದ ಸಿಮೆಂಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ನಿತೇಶ್ ಪ್ರಾಯ:23 ವರ್ಷ ಎಂಬಾತನ ತಲೆಗೆ ತೀವ್ರ ಸ್ವರೂಪದ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದು ಸಹಸವಾರನ ಹಣೆಗೆ ರಕ್ತಗಾಯವಾಗಿರುವುದಾಗಿದೆ.ಈ ಬಗ್ಗೆ ಪಿರ್ಯಾದಿ ಶ್ರೀ ಪದ್ಮಕುಮಾರ್ ಪ್ರಾಯ:32 ವರ್ಷ ತಂದೆ: ಸುಭಾಶ್ ಚಂದ್ರ ಜೈನ್ ವಾಸ: ಧರ್ಮಶ್ರೀ ನಿಲಯ, ಮಾಳ ಚೌಕಿ, ಮಾಳ ಅಂಚೆ ಮತ್ತು ಗ್ರಾಮ ಇವರು ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಠಾಣಾ ಅಪರಾಧ ಕ್ರಮಾಂಕ 42/2022 ಕಲಂ: 279,337, 304(ಎ) ಭಾದಸಂ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ:  ಪಿರ್ಯಾದಿ ಎಸ್ ಎನ್ ಪುರುಷೋತ್ತಮ, ಪ್ರಾಯ: 62 ವರ್ಷ, ತಂದೆ: ಎಸ್ ಟಿ ನಾರಾಯಣಯ್ಯ, ವಾಸ: ಎಮ್ಐಜಿ 2/78, ಹನುಮಾನ ದೇವಸ್ಥಾನದ ಹತ್ತಿರ,ಗೋಕುಲ ರಸ್ತೆ, ಹುಬ್ಬಳ್ಳಿ. ಇವರು ದಿನಾಂಕ: 06.04.2022 ರಂದು ತಮ್ಮ ಬಾಬ್ತು KA47M 7060 ನೇ ನೊಂದಣಿ ಸಂಖ್ಯೆಯ ಕಾರಿನಲ್ಲಿ ಧಾರ್ಮಿಕ ಕಾರ್ಯಕ್ರಮದ ಸಲುವಾಗಿ ಚಾಲಕ ಸುನೀಲ ಬಂಡಿ ಹಾಗೂ ಪಿರ್ಯಾದಿದಾರರ ಪತ್ನಿ ಶ್ರೀಮತಿ ಲೀಲಾವತಿ ಯವರೊಂದಿಗೆ ಕಾರ್ಕಳದಿಂದ ಮೂಡುಬಿದ್ರೆ ಕಡೆಗೆ ಹೋಗುತ್ತಿರುವಾಗ ಸಮಯ ಸುಮಾರು ಬೆಳಗ್ಗೆ 09:25 ರ ಹೊತ್ತಿಗೆ ಕಾರ್ಕಳ ತಾಲೂಕು ಸಾಣೂರು ಗ್ರಾಮದ ಸೇತುವೆಯಿಂದ ಸ್ವಲ್ಪ ಹಿಂದಕ್ಕೆ ತಲುಪುವಾಗ ಕಾರ್ಕಳಕಡೆಯಿಂದ ಮೂಡುಬಿದ್ರೆ ಕಡೆಗೆ KA21A 0839 ನೇ ನೊಂದಣಿ ಸಂಖ್ಯೆಯ ಟಿಪ್ಪರ್ ಚಾಲಕ ಅತಿ ವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಬದಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರಿನ ಹಿಂಭಾಗ ಜಖಂಗೊಂಡಿದ್ದು, ಅಪಘಾತದಿಂದ ಪಿರ್ಯಾದಿದಾರರಿಗೆ ಹಾಗೂ ಚಾಲಕ ಸುನೀಲ ಬಂಡಿ ಹಾಗೂ ಪಿರ್ಯಾದಿದಾರರ ಪತ್ನಿ ಶ್ರೀಮತಿ ಲೀಲಾವತಿ ಯವರಿಗೆ ಯಾವುದೇ ಗಾಯವಾಗಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣಾ ಅಪರಾಧ ಕ್ರಮಾಂಕ 49/2022 ಕಲಂ 279,ಐಪಿಸಿ. ರಂತೆ ಪ್ರಕರಣ ದಾಖಲಿಸಲಾಗಿದೆ.


ಹಲ್ಲೆ ಪ್ರಕರಣ

  • ಶಂಕರನಾರಾಯಣ:: ದಿನಾಂಕ: 05-04-2022 ರಂದು 14:30 ಗಂಟೆಗೆ ಕುಂದಾಪುರ ತಾಲೂಕು ಸಿದ್ದಾಪುರ ಗ್ರಾಮದ ಗಣೇಶ ಹೊಟೇಲ್ ಹತ್ತಿರದ ರಿಕ್ಷಾ ನಿಲ್ದಾಣ ಬಳಿ ಪಿರ್ಯಾದಿ ಶ್ರೀಕಾಂತ ಶೆಟ್ಟಿ(33) ತಂದೆ: ದಿ: ನಾರಾಯಣ ಶೆಟ್ಟಿ ವಾಸ: ಸುರ್ಗಿ ಜೆಡ್ಡು ಉಳ್ಳೂರು-74 ಇವರು ಗುರುತು ಪರಿಚಯದ  ಆರೋಪಿಯಲ್ಲಿ   ಜಾಗ ಮಾರಾಟದ ಬಗ್ಗೆ ಕೇಳಿದಾಗ  ಆರೋಪಿಯು ಫಿರ್ಯಾದು ದಾರರಲ್ಲಿ   ನೀನು ಜಾಗವನ್ನು ನನಗೆ ಧರ್ಮಕ್ಕೆ ಕೊಡುವುದಾದರೇ ಬೇಕು ಎಂದು ಹೇಳಿದಾಗ,  ಇದಕ್ಕೆ ಪಿರ್ಯಾದಿದಾರರು ಧರ್ಮಕ್ಕೆ ಲ್ಲಾ ಕೊಡಲಿಕ್ಕೆ ಆಗುತ್ತಾ ಎಂದು ಹೇಳಿ ಹೊರಡುವಾಗ ಒಮ್ಮೆಲೇ  ಆರೋಪಿಯು  ಆಟೋ ರಿಕ್ಷಾದಿಂದ ಬಳಿಗೆ ಬಂದು ಅವಾಚ್ಯ ಶಬ್ದಗಳಿಂದ ಬೈದು , ಕೈಗಳಿಂದ ಮೈಗೆ ಕೈಗೆ ಹೊಡೆದನು ತಪ್ಪಿಸಿಕೊಂಡಾಗ, ಆರೋಪಿಯು ಆತನಿಗೆ ಸೇರಿದ  ಆಟೋರಿಕ್ಚಾ ದೊಳಗೆ  ಇದ್ದ   ಸುಮಾರು 3 ಅಡಿ ಉದ್ದದ ಕಬ್ಬಿ ಣದ ರಾಡ್ ನ್ನು ತಂದು ಬಲಕೈಗೆ ,ಬೆನ್ನಿಗೆ , ಬಲಕೈ ಮೊಣಗಂಟಿನ ಬಳಿ ಹಲ್ಲೆ ಮಾಡಿರುತ್ತಾನೆ, ಅದರ  ಪರಿಣಾಮ ಫಿರ್ಯಾದಿದಾರರ  ಮೊಣಗಂಟಿನಬಳಿ ರಕ್ತಗಾಯವಾಗಿ ನೆಲಕ್ಕೆ ಬಿದ್ದ  ಪಿರ್ಯಾದಿ ದಾರರನ್ನು ಅರೋಪಿ  ಕಾಲಿನಿಂದ ತುಳಿದು ಕೈಯಲ್ಲಿ ಇದ್ದ ರಾಡ್ ನ್ನು ತೊರಿಸಿ ನನ್ನ ಮೇಲೆ ತುಂಬಾ ಕೇಶ್ ಇದೆ ನೀನು ಕೇಸ್ ಮಾಡಿದರೂ ನನಗೆ ಬೇಲ್‌ ರೆಡಿ ಇರುತ್ತದೆ ಈ ಬಗ್ಗೆ  ಅರೋಪಿ  ಕಾಲಿನಿಂದ ತುಳಿದು ಕೈಯಲ್ಲಿ ಇದ್ದ ರಾಡ್ ನ್ನು ತೊರಿಸಿ ನನ್ನ ಮೇಲೆ ತುಂಬಾ ಕೇಸ್‌ ಇದೆ ನೀನು ಕೇಸ್ ಮಾಡಿದರೂ ನನಗೆ ಬೇಲ್‌ ರೆಡಿ ಇರುತ್ತದೆ ಈ ಬಗ್ಗೆ ಕಂಪ್ಲೆಟ್ ಕೊಟ್ಟರೇ ನಿನ್ನನ್ನು  ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಕ್ರ 44/2022  ಕಲಂ:  341,323,324,504,506(2)    ಐ.ಪಿಸಿ  ರಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣಗಳು:

  • ಹೆಬ್ರಿ: ಫಿರ್ಯಾದಿ ಐತು ಪೂಜಾರಿ(63) ತಂದೆ: ಅಪ್ಪಣ್ಣ ಪೂಜಾರಿ ವಾಸ: ಸಾಂಗತ್ಯ ಹೌಸ್ ಪಾಂಡುಕಲ್ಲು  ರಸ್ತೆ  ಇವರ ಮಗ ದೀಕ್ಷಿತ್ (27 ವರ್ಷ) ರವರು ಉಡುಪಿಯಲ್ಲಿ ಮೆಡಿಕಲ್ ರೆಪ್ ಆಗಿ ಸುಮಾರು ಒಂದು ತಿಂಗಳಿನಿಂದ ಕೆಲಸ ಮಾಡಿಕೊಂಡಿದ್ದರು.ಇತ್ತೀಚಿಗೆ ಅವರು ಯಾವುದೋ ವಿಷಯದ ಬಗ್ಗೆ ವಿಚಾರಮಾಡುತ್ತಿದ್ದು ಅವರು ಮನೆಯವರೊಂದಿಗೆ ಸರಿಯಾಗಿ ಮಾತನಾಡುತ್ತಿರಲಿಲ್ಲ. ಅಲ್ಲದೇ ಯಾವುದೇ ವಿಚಾರವನ್ನು ಹೇಳಕೊಳ್ಳುತ್ತಿರಲಿಲ್ಲ. ದೀಕ್ಷಿತ್ ಅವರು ಯಾವುದೋ ವಿಚಾರದಲ್ಲಿ ಮನನೊಂದು ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ;  06.04.2022 ರಂದು ಬೆಳಿಗ್ಗೆ 08:30 ಗಂಟೆಯಿಂದ 08:45 ಗಂಟೆಯ ಮದ್ಯಾವಧಿಯಲ್ಲಿ  ಶಿವಪುರ ಗ್ರಾಮದ ಪಾಂಡುಕಲ್ಲುರಸ್ತೆಯಲ್ಲಿರುವ ಮನೆಯ ಮಲಗುವ ಕೋಣೆಯಲ್ಲಿರುವ ಸೀಲಿಂಗ್  ಫ್ಯಾನಿಗೆ ಸೀರೆಯನ್ನು ಕಟ್ಟಿ ಇನ್ನೊಂದು ತುದಿಯನ್ನುಕುತ್ತಿಗೆಗೆ ನೇಣು ಬಿಗಿದುನೇತಾಡುತ್ತಿದ್ದವರನ್ನು ಮನೆಯವರು ಕಂಡು ದೀಕ್ಷಿತನು ಬದುಕಿರಬಹುದೆಂದು ಭಾವಿಸಿ  ಸೀರೆಯಗಂಟನ್ನು ಬಿಚ್ಚಿ ಹೆಬ್ರಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ತೋರಿಸಿದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ, ಮೃತರ ಮರಣದಲ್ಲಿ ಯಾವುದೇ ಸಂದೇಹವಿಲ್ಲ,ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣಾ ಯು.ಡಿ.ಆರ್ ನಂಬರ್‌ 14/2022U/s 174 ಸಿ ಆರ್ ಪಿ ಸಿ   ರಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾದಿ ಸ್ನೇಹಸಿಶ್ ಮಜುಂದರ್, ಪ್ರಾಯ:59ವರ್ಷ, ತಂದೆ: ಬಿ ಮಜುಂದರ್, ವಾಸ: ನೀವ್‌ ನಂ 17, ಒಲ್ಡ್‌ ನಂ 48, 5ನೇ ಮೈನ್, ಎಸ್‌ಎಮ್‌ ರಸ್ತೆ, ಜಾಲಹಳ್ಳಿ ಇವರ ಮಗನಾದ ಸಾಮ್ರಾಟ್ ಮಜುಂದಾರ್ (28) ರವರು ದಿನಾಂಕ:04-04-2022 ರಂದು ರಾತ್ರಿ ತನ್ನ ಸ್ನೇಹಿತರಾದ ಆರ್ಕೋ, ಜೀನತ್, ಅಶ್ವರಿ ರವರೊಂದಿಗೆ ಬೆಂಗಳೂರಿನಿಂದ ಸಾಹಿಲ್ ಅರೂರ್ ರವರ ಮದುವೆ ಕಾರ್ಯಕ್ರಮದ ಬಗ್ಗೆ ಉಡುಪಿಗೆ ಬಂದಿರುತ್ತಾರೆ, ಮದುವೆಗೆ ಬಂದ ಇತರೆ ತನ್ನ ಸ್ನೇಹಿತರೊಂದಿಗೆ ಮಲ್ಪೆ ಬ್ಲೂ ವೇವ್ಸ್ ಹೋಟೆಲ್‌ ನಲ್ಲಿ ದಿನಾಂಕ:05-04-2022 ರಂದು ಎಲ್ಲರೂ ವಿಶ್ರಾಂತಿ ಪಡೆದುಕೊಂಡು ಅದೇ ದಿನ ದಿನಾಂಕ:05-04-2022 ರಂದು ಬೆಳಿಗ್ಗೆ 10:00 ಗಂಟೆಗೆ ಸಾಮ್ರಾಟ್ ಮಜುಂದಾರನು ತನ್ನ ಸ್ನೇಹಿತರಾದ ಆರ್ಕೋ, ಜೀನತ್, ಅಶ್ವರಿ, ಕೇರಳ ಆದಿತ್, ಮಹರಾಷ್ಟ್ರ ಬಿನು ಮೋಹನ್, ರಿಯಾ, ಸಾಹಿಲ್ ಗುಪ್ತಾ, ತಮಿಳುನಾಡಿನ ಅರವಿಂದ್, ರವರೊಂದಿಗೆ ಮಲ್ಪೆ ಬೀಚ್‌ ನ ಕುಲ್ಲುಗ ರೆಸಾರ್ಟ್ ನ ಎದುರು ಅರಬ್ಬಿ ಸಮುದ್ರದಲ್ಲಿ ಈಜಾಡಲು ಹೋಗಿದ್ದು ಸಮಯ ಸುಮಾರು 11:00 ಗಂಟೆಗೆ ಸಾಮ್ರಾಟ್ ಮಜುಂದಾರ್ ಹಾಗೂ ಬಿನು ಮೋಹನ್ ರವರು ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಮುಳುಗುತ್ತಿದ್ದವರನ್ನು ಮಲ್ಪೆಯ ಲೈಫ್‌ಗಾರ್ಡ್ ಚಂದ್ರು ರವರು ಬಿನು ಮೋಹನ್ ರವರನ್ನು ರಕ್ಷಿಸಿ  ಸಾಮ್ರಾಟ್ ಮಜುಂದಾರ್ ರವರನ್ನು ರಕ್ಷಿಸಲು ಹೋದಾಗ ಸಾಮ್ರಾಟ್ ಮಜುಂದಾರ್ ನು ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರದ ನೀರಿನಲ್ಲಿ ಮುಳುಗಿ ಅಸ್ವಸ್ಥ್ಯಗೊಂಡವರನ್ನು ಒಂದು ಅಂಬ್ಯುಲೆನ್ಸ್‌ ನಲ್ಲಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿ ಪರೀಕ್ಷಿಸಿದ ವೈದ್ಯರು ಸಾಮ್ರಾಟ್ ಮಜುಂದಾರ್ ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದು ಸಾವಿನ ಬಗ್ಗೆ ಪಿರ್ಯಾದಿದಾರರಿಗೆ ವಾಸ್ತವಾಂಶ ತಿಳಿದಿರುವುದಿಲ್ಲವಾಗಿ ತಿಳಿಸಿದ್ದು ಮೃತರ ಮರಣದ ಬಗ್ಗೆ ಸರಿಯಾದ ಕಾರಣವನ್ನು ತನಿಖೆಯಿಂದ ತಿಳಿಯಬೇಕಾಗಿ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್ ನಂಬ್ರ  21/2022  ಕಲಂ 174 (3)&(iv) ಸಿ.ಆರ್.ಪಿ.ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕುಂದಾಪುರ ಗ್ರಾಮಾಂತರ: ಪಿರ್ಯಾದಿ ಕಿರಣ್ ದೇವಾಡಿಗ (39),  ಮಾಧವ ದೇವಾಡಿಗ, ಚಿತ್ತೇರಿ ಮಕ್ಕಿ ತಲ್ಲೂರು ಗ್ರಾಮ, ಕುಂದಾಪುರ ಇವರ  ತಮ್ಮನಾದ ಕೃಷ್ಣ ದೇವಾಡಿಗ ಎಂಬುವವರು ದಿನಾಂಕ 05-04-2022 ರಂದು ಕಟ್ ಬೆಲ್ತೂರು ಗ್ರಾಮದ ಜಾಲಾಡಿ ರಮೇಶ್ ಪ್ರಭು ಎಂಬವರ ಯುನೈಟೆಡ್ ಕಂಪೆನಿ ಜಾಗದಲ್ಲಿ ನಾಗಬನವನ್ನು ಸ್ಥಾಪಿಸಲು ತಯಾರಿ ಮಾಡಿಕೊಂಡಿದ್ದು ಸದ್ರಿ ಕೆಲಸಕ್ಕೆ ಇತರರ ಜೊತೆ ಪಿರ್ಯಾದಿದಾರರ ತಮ್ಮ ಕೃಷ್ಣ ದೇವಾಡಿಗರು ಹೋಗಿರುತ್ತಾರೆ. ರಾತ್ರಿ ಸಮಯ ಸುಮಾರು 08:45 ಗಂಟೆಗೆ ಪಿರ್ಯಾದಿಯ ಪರಿಚಯದವರು ಪೋನ್ ಕರೆ ಮಾಡಿ ರಮೇಶ್ ಪ್ರಭು ಎಂಬವರ ನಾಗಬನದ ಹತ್ತಿರ ಆವರಣವಿಲ್ಲದ ಬಾವಿಯ ಹತ್ತಿರ  ಕೈ ಕಾಲು ತೊಳೆಯಲು ಹೋದಾಗ ರಾತ್ರಿ 08:30 ಸಮಯಕ್ಕೆ ಆಕಸ್ಮಿಕವಾಗಿ ಕಾಲು ಜಾರಿ  ಬಾವಿಗೆ ಬಿದ್ದು  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.ಮೃತರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ  ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್ ನಂ :13/2022ಕಲಂ:174 ಸಿ ಆರ್ ಪಿ ಸಿ ರಂತೆ ಪ್ರಕರಣ ದಾಖಲಿಸಲಾಗಿದೆ.


ಇತ್ತೀಚಿನ ನವೀಕರಣ​ : 06-04-2022 06:30 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080