ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 05/04/2021 ರಂದು ಪಿರ್ಯಾದಿದಾರರಾದ ಶಮಂತ ಶೆಟ್ಟಿ (21) ಎಂಬುವವರು ಆರೋಪಿ ಶ್ರೀಕಾಂತ ರವರು ಸವಾರಿ ಮಾಡುತ್ತಿದ್ದ KA-20-EF-2937 ನೇ ಹೀರೋ ಹೊಂಡಾ ಮೋಟಾರ್ ಸೈಕಲ್‌ನಲ್ಲಿ ಸಹಸವಾರನಾಗಿ ಕುಳಿತುಕೊಂಡು ಮಂದಾರ್ತಿಯಿಂದ ಕೆಂಜೂರಿನಲ್ಲಿರುವ ತನ್ನ ಮನೆಗೆ ಕೊಕ್ಕರ್ಣೆ – ಹೆಬ್ರಿ ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಸಂಜೆ 5:00 ಗಂಟೆಗೆ  ಕೆಂಜೂರು ಗ್ರಾಮದ ಬೈದಬೆಟ್ಟು  ವರ್ಷಾ ಬಾರ್ ಸಮೀಪ ತಲುಪುವಾಗ ಆರೋಪಿಯು ಮೋಟಾರ್ ಸೈಕಲ್‌ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿ  ಎದುರಿನಿಂದ ಬರುತ್ತಿದ್ದ ವಾಹನವನ್ನು ನೋಡಿ ಮೋಟಾರ್ ಸೈಕಲ್‌ನ ನಿಯಂತ್ರಣ ತಪ್ಪಿ ಸ್ಕೀಡ್‌ ಆಗಿ ಇಬ್ಬರೂ ಮೋಟಾರ್ ಸೈಕಲ್‌ ಸಮೇತ ರಸ್ತೆಗೆ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಪಿರ್ಯಾದಿದಾರರ ಮುಖಕ್ಕೆ, ಎರಡೂ ಕಾಲಿನ ಮಂಡಿಗೆ ತರಚಿದ ರಕ್ತಗಾಯ ವಾಗಿರುತ್ತದೆ. ಅಲ್ಲದೇ ಆರೋಪಿ ಸವಾರ ಶ್ರೀಕಾಂತ ರವರಿಗೆ ಮೇಲ್ಭಾಗದ ತುಟಿಗೆ ಮುಖಕ್ಕೆ ರಕ್ತಗಾಯವಾಗಿದ್ದು,  ಗಲ್ಲದ ಬಳಿ ಜಖಂ ಉಂಟಾಗಿರುತ್ತದೆ. ಗಾಯಾಳುಗಳನ್ನು ಬ್ರಹ್ಮಾವರ ಜೀವನ ಜ್ಯೋತಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪಿರ್ಯಾದಿದಾರರಿಗೆ ಚಿಕಿತ್ಸೆ ನೀಡಿದ್ದು ಆರೋಪಿಯು ಚಿಕಿತ್ಸೆ ವೇಳೆ ರಕ್ತವಾಂತಿ ಮಾಡಿಕೊಂಡಿದ್ದರಿಂದ ಅವರನ್ನ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 52/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಹರೀಶ್ ಕುಮಾರ್ ಭಟ್ (42), ತಂದೆ: ಮನೆ ನಂಬ್ರ 5-83ಬಿ3 9ನೇ ಅಡ್ಡ ರಸ್ತೆ, ಎನ್ ಜಿ.ಓ ಕಾಲೋನಿ ಬೈಲೂರು 76 ಬಡಗುಬೆಟ್ಟು ಗ್ರಾಮ ಇವರು KA-20-EA-7128ನೇ  ನಂಬರಿನ  ಬಜಾಜ್ ಡಿಸ್ಕವರಿ ಮೋಟಾರ್ ಬೈಕ್ ನ  ನೋಂದಣಿ  ಮಾಲಕರಾಗಿದ್ದು,  ಬೈಕನ್ನು ಉಡುಪಿ  ಜಿಲ್ಲೆಯ 76ನೇ ಬಡಗುಬೆಟ್ಟು ಗ್ರಾಮದ  ಬೈಲೂರು-ಎನ್ಜಿಓ  ಕಾಲೋನಿಯ  9ನೇ ಅಡ್ಡರಸ್ತೆಯ   ಮನೆ ನಂಬ್ರ  5-83ಬಿ3 ರ ಎದುರು  ಅಂಗಳದಲ್ಲಿ ಎಂದಿನಂತೆ   ಪಾರ್ಕ್  ಮಾಡಿದ್ದನ್ನು  ದಿನಾಂಕ 05/04/2021 ರಂದು ರಾತ್ರಿ  01:00 ಗಂಟೆಯಿಂದ 02:00  ಗಂಟೆಯ  ಮಧ್ಯಾವಧಿಯಲ್ಲಿ  ಯಾರೋ  ಇಬ್ಬರು ಅಪರಿಚಿತ  ದುಷ್ಕರ್ಮಿಗಳು ಪಿರ್ಯಾದಿದಾರರು ಮನೆಯಿಂದ  ಹೊರ ಬರದಂತೆ ಮನೆಯ  ಬಾಗಿಲಿನ  ಚಿಲಕವನ್ನು ಹೊರಗಿನಿಂದ ಹಾಕಿ  ಮೋಟಾರ್ ಬೈಕಿಗೆ  ಬೆಂಕಿ  ಹಚ್ಚಿದ ಪರಿಣಾಮ ಮೋಟಾರ್  ಬೈಕ್  ಸಂಪೂರ್ಣ  ಸುಟ್ಟು  ಹೋಗಿ  20,000/- ರೂಪಾಯಿಯಷ್ಟು ನಷ್ಟವುಂಟಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2021 ಕಲಂ:342, 435 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಅಬ್ದುಲ್ ರಶೀದ್ (50), ತಂದೆ: ಕರೀಮ್ ಸಾಹೇಬ್ ,ವಾಸ: ಮನೆ ನಂ 5-36 ಎ ಕರೀಮ್ ಮಂಜಿಲ್, ಬೈಲೂರು, ಎನ್‌ಜಿಓ ಕಾಲೋನಿ, ಒಂಭತ್ತನೆ ಅಡ್ಡ ರಸ್ತೆ, 76 ಬಡಗುಬೆಟ್ಟು ಉಡುಪಿ ಇವರು KA-20-AB-0533ನೇ  ನಂಬರಿನ  ಬಜಾಜ್ ಆಟೋರಿಕ್ಷಾದ  ನೋಂದಣಿ ಮಾಲಕರಾಗಿದ್ದು ಆಟೋರಿಕ್ಷಾವನ್ನು ಉಡುಪಿ  ಜಿಲ್ಲೆಯ  76ನೇ ಬಡಗುಬೆಟ್ಟು ಗ್ರಾಮದ  ಬೈಲೂರು-ಎನ್ಜಿಓ  ಕಾಲೋನಿಯ  9ನೇ ಅಡ್ಡರಸ್ತೆಯ ಮನೆ ನಂಬ್ರ  5-36ಎ  ' ಕರೀಮ್ ಮಂಝಿಲ್'ನ  ಗೇಟಿನ ಎದುರು ಎಂದಿನಂತೆ  ಪಾರ್ಕ್  ಮಾಡಿದ್ದನ್ನು ದಿನಾಂಕ 05/04/2021ರಂದು ರಾತ್ರಿ  1:00 ಗಂಟೆಯಿಂದ 2:00  ಗಂಟೆಯ  ಮಧ್ಯಾವಧಿಯಲ್ಲಿ  ಯಾರೋ  ಇಬ್ಬರು ಅಪರಿಚಿತ  ದುಷ್ಕರ್ಮಿಗಳು ಆಟೋ ರಿಕ್ಷಾಕ್ಕೆ ಬೆಂಕಿ  ಹಚ್ಚಿದ, ಪರಿಣಾಮ ಆಟೋರಿಕ್ಷಾ   ಸಂಪೂರ್ಣ  ಸುಟ್ಟು  ಹೋಗಿ 2,25,000/- ರೂಪಾಯಿ ನಷ್ಟವುಂಟಾಗಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2021 ಕಲಂ:435 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಇತ್ತೀಚಿನ ನವೀಕರಣ​ : 06-04-2021 10:04 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080