ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 05/04/2021 ರಂದು ಪಿರ್ಯಾದಿದಾರರಾದ ಮೊಹಮ್ಮದ್ ಅರಫಾತ್ (20), ತಂದೆ: ಬಿ.ಎ ಹುಸೈನ್ ವಾಸ: ಅರಫಾ ರೆಸಿಡೆನ್ಸಿ, 1ನೇ ಮಹಡಿ, ಮೂಳೂರು ಉಚ್ಚಿಲ ಅಂಚೆ, ಕಾಪು ತಾಲೂಕು ಇವರು ಅವರ ಸ್ನೇಹಿತ ಫರ್ವೇಝ್ ರವರ KA-02-MF-2996 ನೇ ಮಾರುತಿ ರಿಟ್ಜ್ ಕಾರನ್ನು ಪಡೆದುಕೊಂಡು ಕಾರಿನಲ್ಲಿ ಪಿರ್ಯಾದಿದಾರರು ಅವರ ತಾಯಿ ಮಮ್ತಾಜ್ (46), ಅಕ್ಕ ಅಫ್ನಾಜ್ (22) ಹಾಗೂ ತಂಗಿ ಆಶಿಮಾ (16) ರವರನ್ನು ಸಹ ಪ್ರಯಾಣಿಕರನ್ನಾಗಿ ಕುಳ್ಳಿರಿಸಿಕೊಂಡು ಬೀಜಾಡಿಯಿಂದ ಹೊರಟು ರಾಹೆ 66 ರಲ್ಲಿಉಡುಪಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ರಾತ್ರಿ 9:15 ಗಂಟೆಗೆ ಉಪ್ಪೂರು ಗ್ರಾಮದ ಕೆಜಿ ರೋಡ್ ಕ್ರಾಸ್‌ನಲ್ಲಿ ಅವರ ಮುಂದಿನಿಂದ ಉಡುಪಿ ಕಡೆಗೆ ಆರೋಪಿ ಜಗದೀಶ್ ಅವರ KA-47-A-0504 ನೇ ನಂಬ್ರದ ಕಂಟೈನರ್ ಗೂಡ್ಸ್ ಲಾರಿಯನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಿದ್ದವರು, ಯಾವುದೇ ಸೂಚನೆ ನೀಡದೇ ಒಮ್ಮೇಲೆ ಬಲ ಬದಿಯ ರಸ್ತೆಗೆ ಉಡುಪಿ-ಕುಂದಾಪುರ ರಾ.ಹೆ 66 ರ ರಸ್ತೆಯ ಕಡೆಗೆ ಹೊಗಲು ಬಲ ಬದಿಗೆ “U-Turn“ ಮಾಡಿದ್ದು, ಆಗ ಕಂಟೈನರ್ ಲಾರಿಯ ಹಿಂದಿನ ಬಲ ಭಾಗ ಪಿರ್ಯಾದಿದಾರರ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಎಡಕೈ ಬೆರಳುಗಳಿಗೆ, ಹಣೆಗೆ, ತಲೆಗೆ, ಎಡಕೈ ಮೊಣಗಂಟಿನ ಬಳಿ, ಎಡಕಾಲಿನ ಮೊಣಗಂಟಿಗೆ ತರಚಿದ ರಕ್ತಗಾಯವಾಗಿದ್ದು, ಮಮ್ತಾಜ್‌ರವರಿಗೆ ಎಡಕಣ್ಣಿಗೆ, ಎಡಕಟ್ಟಿನ ಬಳಿ, ಎಡ ಭುಜಕ್ಕೆ ಗುದ್ದಿದ ಒಳನೋವು, ಬಲಕೈ ಮೊಣಗಂಟಿಗೆ ತರಚಿದ ಗಾಯ, ತುಟಿ ಮತ್ತು ನಾಲಿಗೆ ರಕ್ತಗಾಯವಾಗಿರುತ್ತದೆ. ಅಫ್ನಾಜ್‌ರವರ ಮೈಕೈಗೆ ಗುದ್ದಿದ ಒಳನೋವು ಆಗಿದ್ದು, ಆಶಿಮಾಳಿಗೆ ಯಾವುದೇ ಗಾಯ ಆಗಿರುವುದಿಲ್ಲ. ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 06/04/2021 ರಂದು ಬೆಳಿಗ್ಗೆ 09:30 ಗಂಟೆಗೆ ಕುಂದಾಪುರ ತಾಲೂಕು, ಕಟ್‌‌ಬೇಲ್ತೂರು ಗ್ರಾಮದ ಸುಲ್ಸೆ ಬಸ್‌‌ ಸ್ಟಾಪ್‌‌ ಹತ್ತಿರ ರಸ್ತೆಯಲ್ಲಿ, ಆಪಾದಿತ ಅಬ್ದುಲ್‌ ‌‌ಅಜೀಜ್‌‌ KA-51-D-1827ನೇ ಕಾರನ್ನು ವಂಡ್ಸೆ ಕಡೆಯಿಂದ ಹೆಮ್ಮಾಡಿ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು ಕಾರಿನ ಮುಂದುಗಡೆಯಲ್ಲಿ ಹೋಗುತ್ತಿದ್ದ ಇನ್ನೊಂದು ವಾಹನವನ್ನು ಓವರ್ ಟೇಕ್‌‌ಮಾಡುತ್ತ ಕಾರನ್ನು ರಸ್ತೆಯ ಬಲಬದಿಗೆ ಚಲಾಯಿಸಿ ರಸ್ತೆಯ ಬದಿಯಲ್ಲಿ ರಸ್ತೆ ದಾಟಲು ನಿಂತುಕೊಂಡಿದ್ದ ಬಾಬು ನಾಯ್ಕ ಎಂಬುವವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರ ತಲೆಗೆ, ಹಣೆಗೆ ಹಾಗೂ ಸೊಂಟಕ್ಕೆ ಗಾಯ ನೋವು ಆಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಚೆನ್ನಮ್ಮ(60), ಗಂಡ: ಸಿದ್ದನಗೌಡ, ವಾಸ: ಮಾರ್ಪಳ್ಳಿ ರೈಲ್ವೇ ಬ್ರಿಡ್ಜ್‌ಬಳಿ, 76 ಬಡಗುಬೆಟ್ಟು ಉಡುಪಿ ಇವರು 76 ಬಡಗುಬೆಟ್ಟು ಮಾರ್ಪಳ್ಳಿ ರೈಲ್ವೆ ಬ್ರಿಡ್ಜ ಬಳಿ ತನ್ನ ವಾಸದ ಮನೆಯಲ್ಲಿ ದಿನಾಂಕ 05/04/2021 ರಂದು ರಾತ್ರಿ 22:30 ಗಂಟೆಗೆ ಸೆಕೆ ಇರುವ ಕಾರಣ ಮನೆಯ ಮುಂಬದಿಯ ಛಾವಣಿಯಲ್ಲಿ ಮಲಗಿದ್ದು ಅ ಸಮಯ 5 ಗ್ರಾಂ ನ ಬೋರ್‌ಮಾಳ ಸರ ಹಾಗೂ ಕೀ ಪ್ಯಾಡ್ ಮೊಬೈಲ್ ಫೋನ್‌ನನ್ನು ಒಂದು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ತಲೆದಿಂಬಿನ ಅಡಿಯಲ್ಲಿ ಇಟ್ಟದರು, ಪಕ್ಕದಲ್ಲಿ ಮಗ ಮಂಜುನಾಥ ಕೂಡ ತನ್ನ ಒಪ್ಪೋ ಮೊಬೈಲ್‌ ಇಟ್ಟುಕೊಂಡು ಮಗಲಗಿದ್ದು ದಿನಾಂಕ 06/04/2021 ರಂದು ಬೆಳಿಗ್ಗೆ 3:40 ಕ್ಕೆ ಎದ್ದು ನೋಡಿದಾಗ ಪಿರ್ಯಾದಿದಾರರ ಮೊಬೈಲ್ ಚಿನ್ನದ ಸರ ಹಾಗೂ ಮಗನ ಮೊಬೈಲ್ ಕಾಣೆಯಾಗಿರುತ್ತದೆ. ಕಳುವಾದ ಚಿನ್ನದ ಮೌಲ್ಯ 20,000/- ಮತ್ತು ಮೊಬೈಲ್ಗಳ ಮೌಲ್ಯ ಒಟ್ಟು 7000/ ರೂಪಾಯಿ ಅಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 60/2021ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಕಿಟ್ಟ ಎಂ (66), ತಂದೆ: ದಿ. ನರಂಗ, ವಾಸ: ಮಾರ್ಪಳ್ಳಿ,ಮಾಹಾಲಿಂಗೇಶ್ವರ ದೇವಸ್ಥಾನದ ಬಳಿ ಕೊರಂಗ್ರಪಾಡಿ ಉಡುಪಿ ಇವರು ಕಂಬಿಗಾರ ಬಬ್ಬುಸ್ವಾಮಿ ದೈವಸ್ಥಾನ ಮಾರ್ಪಳ್ಳಿ ಇದರ ಅಧ್ಯಕ್ಷರಾಗಿರುತ್ತಾರೆ. ದಿನಾಂಕ 05/04/2021 ರಂದು ರಾತ್ರಿ 07:30 ಗಂಟೆಗೆ ಪಿರ್ಯಾದಿದಾರರು ದೈವಸ್ಥಾನಕ್ಕೆ ಬಂದು ವಿದ್ಯುತ್ತ್‌ ದೀಪ ಹಚ್ಚಿ ಹೋಗಿದ್ದು ನಂತರ ದಿನಾಂಕ 06/04/2021ರ ಬೆಳಿಗ್ಗೆ 07:00 ಗಂಟೆಗೆ ದೈವಸ್ಥಾನದ ಅರ್ಚಕರಾದ ರಾಜು ಮೇಸ್ತ್ರಿಯವರು ದೈವಸ್ಥಾನಕ್ಕೆ ಬಂದಾಗ ದೈವಸ್ಥಾನದ ಕಾಣಿಕೆ ಡಬ್ಬಿಯು ಹೊರ ಆವರಣದಲ್ಲಿ ತೆರೆದುಕೊಂಡು ಬಿದ್ದಿದ್ದು, ಒಳಗೆ ಹೋಗಿ ನೋಡಿದಾಗ ಗರ್ಭಗುಡಿಯ ಬಾಗಿಲಿನ ಚಿಲಕವನ್ನು ಮುರಿದಿರುವುದನ್ನು ಕಂಡು ಪಿರ್ಯಾದಿದಾರರಿಗೆ ತಿಳಿಸಿದಂತೆ ಅವರು ಹೋಗಿ ನೋಡಲಾಗಿ, ದಿನಾಂಕ 05/04/2021 ರ ರಾತ್ರಿ 07:30 ಗಂಟೆಯಿಂದ 06/04/2021ರ ಬೆಳಿಗ್ಗೆ 07:00 ಗಂಟೆಯ ಮಧ್ಯಾವಧಿಯಲ್ಲಿ ಯಾರೋ ಕಳ್ಳರು ದೈವಸ್ಥಾನದ ಒಳಗಡೆ ಪ್ರವೇಶಿಸಿ ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿದ್ದ 300 ರಿಂದ 400 ರೂಪಾಯಿ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ:457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಉಡುಪಿ: ಪಿರ್ಯಾದಿದಾರರಾದ ಶುಭಲ್ ದಾಸ್(43), ತಂದೆ: ನಿರೇಶ್ದಾಸ್, ವಾಸ: ಸೆಯಿದ್‌‌ಪುರ ಗ್ರಾಮ , ಚಾಂದಿ ನಗರ, ಕಟ್ಟಿಗೋರ, ಕಚಾರ್‌ಜಿಲ್ಲೆ, ಅಸ್ಸಾಂ ರಾಜ್ಯ ಇವರ ತಮ್ಮ ಸುರಜಿತ್‌ ಕುಮಾರ್‌ ದಾಸ್‌ (24) ರವರು ಕಳೆದ ಮೂರು ವರ್ಷಗಳಿಂದ ಉಡುಪಿಯಲ್ಲಿ ಕೂಲಿ ಕಾರ್ಮಿಕನಾಗಿದ್ದವರು ಉಡುಪಿ ತಾಲೂಕು 76ನೇ ಬಡಗುಬೆಟ್ಟು ಗ್ರಾಮದ ಚಿಟ್ಪಾಡಿ ತಾಪಂಡೆ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದು, ದಿನಾಂಕ 29/03/2021 ರಂದು ಹೋಳಿ ಹಬ್ಬದ ನಿಮಿತ್ತ ವಿಪರೀತ ಮದ್ಯಪಾನ ಮಾಡಿ ರಾತ್ರಿ 9:30 ಗಂಟೆಗೆ ಬಾಡಿಗೆ ಮನೆಯಲ್ಲಿ ಮಲಗಿಕೊಂಡಿದ್ದವರು ಬೆಳಿಗ್ಗೆಯಾದರೂ ಏಳದಿದ್ದವರನ್ನು ಸಹ ಕೂಲಿ ಕಾರ್ಮಿಕರು ಚಿಕಿತ್ಸೆಯ ಬಗ್ಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ಕರೆತಂದಲ್ಲಿ ದಿನಾಂಕ 30/03/2021ರಂದು ಬೆಳಿಗ್ಗೆ 10:00 ಗಂಟೆಗೆ ಪರೀಕ್ಷಿಸಿದ ವೈದ್ಯರು ಸುರಜಿತ್‌ ಕುಮಾರ್‌ ದಾಸ್‌ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: : ದಿನಾಂಕ 05/04/2021 ರಂದು ರಾತ್ರಿ 8.45 ಗಂಟೆಗೆ ಪಿರ್ಯಾದಿದಾರರಾದ ಸುಕೇಶ (30), ತಂದೆ : ಶೇಖರ ಕೋಟ್ಯಾನ್, ವಾಸ : ಹೆಬ್ರಿ ಚಾರ, ಸ್ವಾತಿ ನಿಲಯ, ಗಾಂಧಿ ನಗರ, ಹೆಬ್ರಿ ಉಡುಪಿ ಜಿಲ್ಲೆ ಇವರ ಸಂಬಂಧಿ ಅಖಿಲೇಶ ಎಂಬವರು ಕರೆ ಮಾಡಿ ನಿನ್ನ ತಂದೆ ಶೇಖರ ಕೋಟ್ಯಾನ್ (60) ರವರು ನಮ್ಮ ಮನೆಯ ದೈವದ ಕೋಲಕ್ಕೆ ಬಂದಿದ್ದವರು ರಾತ್ರಿ 8:00 ಗಂಟೆಗೆ ಕಟಪಾಡಿ ಬಸ್‌ನಿಲ್ದಾಣದ ಬಳಿ ಮಲಗಿದ ಸ್ಥಿತಿಯಲ್ಲಿದ್ದು ಅವರನ್ನು ಚಿಕಿತ್ಸೆಯ ಬಗ್ಗೆ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಯ ವೈದ್ಯರಲ್ಲಿ ತೋರಿಸಿದ್ದಲ್ಲಿ, ಮೃತ ಪಟ್ಟಿರುವುದಾಗಿ ತಿಳಿಸಿದ್ದು ಮೃತ ಶರೀರವನ್ನು ಶವಾಗಾರದಲ್ಲಿ ಇರಿಸಲಾಗಿದ್ದು ಕೂಡಲೇ ಬರುವಂತೆ ತಿಳಿಸಿದ್ದು, ಪಿರ್ಯಾದಿದಾರರು ಬಂದು ಅಖಿಲೇಶರವರಲ್ಲಿ ವಿಚಾರಿಸಿದಾಗ ಶೇಖರ ಕೋಟ್ಯಾನ್ ದಿನಾಂಕ 27/03/2021 ರಂದು ಕಟಪಾಡಿಗೆ ನೇಮೋತ್ಸವ ಬಗ್ಗೆ ಬಂದಿದ್ದು ನೀಮೋತ್ಸೆವ ಮುಗಿದ ನಂತರವೂ ಅವರ ಜೊತೆ ಮನೆಯಲ್ಲಿದ್ದು ಮಧ್ಯಪಾನ ಮಾಡುತ್ತಿದ್ದು, ದಿನಾಂಕ 05/04/2021 ರಂದು ರಾತ್ರಿ 8:00 ಗಂಟೆಗೆ ಕಟಪಾಡಿ ಪೇಟೆಯಲ್ಲಿರುವ ಬಸ್‌ನಿಲ್ದಾಣದಲ್ಲಿ ಅಸ್ವಸ್ಥಗೊಂಡು ಬಿದ್ದಿರುವ ಸ್ಥಿತಿಯಲ್ಲಿರುವುದಾಗಿ ಹೇಳಿದಂತೆ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 03/07/2020 ರಂದು ಸಂಜೆ 5.00 ಗಂಟೆಗೆ ಪಿರ್ಯಾದಿದಾರರಾದ ರತ್ನ ( 65), ಗಂಡ : ಶ್ರೀನಿವಾಸ ನಾಯ್ಕ, ವಾಸ : ಮುಕುಡೆ ಕೊಡಂಗಳ ಮಣಿಪುರ ಗ್ರಾಮ ಉಡುಪಿ ಜಿಲ್ಲೆ ಇವರ ಗಂಡ ಶ್ರೀನಿವಾಸ ನಾಯ್ಕ(72) ರವರು ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಹೊಳೆಯ ಸೇತುವೆ ಬದಿಯಲ್ಲಿ ಕಾಣೆಯಾದವರು ಇದುವರೆಗೂ ಪತ್ತೆಯಾಗದೇ ಇದ್ದು, ದಿನಾಂಕ 06/04/2021 ರಂದು ಬೆಳಗ್ಗೆ 10:00 ಗಂಟೆಗೆ ಸ್ಥಳೀಯರೊಬ್ಬರು ಫೋನ್ ಕರೆ ಮಾಡಿ ಮಣಿಪುರದ ಮೂಡು ಕಲ್ಮಂಜೆ ಹೊಳೆಯ ಬದಿಯಲ್ಲಿ ಅಡ್ಡ ಬಿದ್ದ ಮರದ ಸಮೀಪ ಮನುಷ್ಯನ ಮೂಳೆ ಇರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಮತ್ತು ಅವರ ಮಗ ಮಣಿಪುರದ ಮೂಡು ಕಲ್ಮಂಜೆ ಹೊಳೆಯ ಬದಿಗೆ ಬಂದು ನೋಡುವಾಗ ಹೊಳೆಯ ಬದಿಯಲ್ಲಿ ಅಡ್ಡ ಬಿದ್ದ ಮರದ ಸಮೀಪ ಮೂಳೆಗಳು ಬಿದ್ದಿದ್ದು, ಮೂಳೆಯ ಸಮೀಪದಲ್ಲಿ ಕೈಯ ಮೂಳೆಗೆ ಅಂಗಿಯ ಕೈ ಹಾಕಿದಂತೆ ಇದ್ದು, ಅಂಗಿಯನ್ನು ನೋಡುವಾಗ ಅದು ಪಿರ್ಯಾದಿದಾರರ ಗಂಡ ಶ್ರೀನಿವಾಸ ನಾಯ್ಕ ರವರು ಕಾಣೆಯಾದ ದಿನ ಧರಿಸಿದ ಅಂಗಿಯಾಗಿದ್ದು, ಅಂಗಿಯ ಸಮೀಪದಲ್ಲಿ ಒಂದು ಬಿಳಿ ವೆಸ್ಟೆ ಮರಕ್ಕೆ ಸಿಕ್ಕಿ ಹಾಕಿಕೊಂಡಿದ್ದು ಆ ವೆಸ್ಟೆ, ಕಾಣೆಯಾದ ದಿನ ಧರಿಸಿದ ಲುಂಗಿ ಯಾಗಿದ್ದು, ಅಂಗಿಗೆ ಸಿಕ್ಕಿಕೊಂಡ ಒಂದು ಬೆಳ್ಳಿಯಂತೆ ಕಾಣುವ ಉಡಿದಾರ ಈ ಎಲ್ಲಾ ಸೋತ್ತುಗಳು ಪಿರ್ಯಾದಿದಾರರ ಗಂಡ ಶ್ರೀನಿವಾಸ ನಾಯ್ಕರವರದು ಆಗಿರುವುದರಿಂದ ಮೂಳೆ ಮತ್ತು ಸೋತ್ತುಗಳು ಪಿರ್ಯಾದಿದಾರರು ಗುರುತಿಸಿದ್ದು ಇದು ಪಿರ್ಯಾದಿದಾರರ ಗಂಡನದು ಆಗಿರುತ್ತದೆ. ಪಿರ್ಯಾದಿದಾರರ ಗಂಡ ಶ್ರೀನಿವಾಸ ನಾಯ್ಕ ನವರು ದಿನಾಂಕ 03/07/2020 ರಂದು ಸಂಜೆ ವೇಳೆ ವಿಪರೀತ ಮಳೆ ಬರುವಾಗ ಮಣಿಪುರ ಗ್ರಾಮದ ಕೊಡಂಗಳ ವಿಷ್ಣುಮೂರ್ತಿ ದೇವಸ್ಥಾನದ ಸಮೀಪ ಚಪ್ಪಲಿ ಮತ್ತು ಚೀಲ ಬದಿಯಲ್ಲಿ ಇಟ್ಟು ಯಾವುದೋ ಕಾರಣಕ್ಕೆ ಹೊಳೆಯ ಬದಿಗೆ ಹೋದವರು ಆಕಸ್ಮಿಕ ಹೊಳೆಯ ನೀರಿಗೆ ಬಿದ್ದು ಕಾಣೆಯಾದವರು ಮೃತ ಪಟ್ಟು ಅವರ ಮೃತ ದೇಹದ ಅವಶೇಷಗಳು ದೊರಕಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 13/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-04-2021 06:07 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080