ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಮಣಿಪಾಲ: ಪಿರ್ಯಾದಿದಾರರಾದ ಸುನೀಲ್ (37), ತಂದೆ: ಲಕ್ಷಮ ಮಡಿವಾಳ, ವಾಸ: 1-97ಬಿ (1) ಹೆರಡೆ ದಾರ್ಖಾಸು ಪೆಡೂರು ಗ್ರಾಮ ಉಡುಪಿ ತಾಲೂಕು ಇವರು ದಿನಾಂಕ 04/03/2023 ರಂದು ಬೆಳಿಗ್ಗೆ 11:30 ಗಂಟಗೆ ಪಿರ್ಯಾದಿದಾರರು KA-20-EA-0756 ನೇ ಮೋಟಾರ್ ಸೈಕಲ್ ನಲ್ಲಿ ಮಣಿಪಾಲ ಕಡೆಯಿಂದ ಪೆರ್ಡೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಅದೇ ಮಾರ್ಗವಾಗಿ ಅಂದರೆ ಮಣಿಪಾಲ ಕಡೆಯಿಂದ ಪೆರ್ಡೂರು ಕಡೆಗೆ ಕಾರು ನಂಬ್ರ KA-19-MA-4727 ನೇ ಚಾಲಕ ಸತೀಶ್ ಎಂಬುವವರು ಅತೀ ವೇಗ ಹಾಗೂ ಅಜಾಗುರೂಕತೆಯಿಂದ ಚಲಾಯಿಸಿಕೊಂಡು ಬಂದು ಹೆರ್ಗಾ ಗ್ರಾಮದ ಪರ್ಕಳ ಹೈಸ್ಕೂಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಯಲ್ಲಿ ತೀರಾ ಎಡಬದಿಗೆ ಬಂದಿ ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮೋಟಾರ್ ಸೈಕಲ್ ಸಮೇತ ರಸ್ತೆ ಬಿದ್ದು ಎಡ ಕೈಗೆ ಹಣೆಗೆ ತೀವ್ರಗಾಯ, ಬೆನ್ನು ಹಿಂಬಾಗ ಗುದ್ದಿದ ಗಾಯ, ಬಲ ಕೈ ಮಣಿಗಂಟಿನಲ್ಲಿ ಹಾಗೂ ಬಲಕಾಲು ಪಾದದ ಬಳಿ ತರಚಿದ ಗಾಯವಾಗಿರುತ್ತದೆ. ಚಿಕಿತ್ಸೆ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ವಂಚನೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಸುಧಾಕರ ಕಾಂಚನ್ (51), ತಂದೆ:ಅಣಪ್ಪ ಕಾಂಚನ್, ವಾಸ:ಶೋಭಾ ನಿಲಯ,ಚರ್ಚ್ ರಸ್ತೆ, ಕುಂದಾಪುರ ಇವರು ಹೆಚ್.ಡಿ.ಎಫ್.ಸಿ ಬ್ಯಾಂಕ್, ಕುಂದಾಪುರ ಶಾಖೆಯಲ್ಲಿ ಖಾತೆ ಹೊಂದಿದ್ದು, ದಿನಾಂಕ 04/03/2023 ರಂದು ಯಾರೋ ಅಪರಿಚಿತ ವ್ಯಕ್ತಿ ಪಿರ್ಯಾದಿದಾರರಿಗೆ ಪಾನ್‌ಕಾರ್ಡ್‌ ಅಪ್ಡೇಟ್  ಮಾಡಲು ಸಂದೇಶ ಕಳುಹಿಸಿದ್ದು ಸಂದೇಶದಲ್ಲಿರುವ ಲಿಂಕ್‌ನ್ನು ಬ್ಯಾಂಕ್‌ನಿಂದ ಕಳುಹಿಸಿರುವುದಾಗಿದೆ ಎಂದು ಪಿರ್ಯಾದಿದಾರರು ನಂಬಿ ಲಿಂಕ್‌ನಲ್ಲಿ ವಿವರವನ್ನು ಅಪೌಡೇಟ್‌ ಮಾಡಿದಲ್ಲಿ ಮೇಲಿನ ಖಾತೆಯಿಂದ ರೂಪಾಯಿ 1,00,000/- ಹಣ ಆನ್ ಲೈನ್ ಮುಖೇನ ವರ್ಗಾವಣೆಗೊಂಡಿರುತ್ತದೆ. ಯಾರೋ ಅಪರಿಚಿತ ವ್ಯಕ್ತಿಗಳು ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ  ಪಿರ್ಯಾದುದಾರರನ್ನು ವಂಚಿಸಿ  ಮೋಸದಿಂದ ಹಣ ವರ್ಗಾವಣೆ ಮಾಡಿರುವುದಾಗಿದೆ. ಈ ಬಗ್ಗೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2023  ಕಲಂ: 66(C), 66(D), ಐ.ಟಿ. ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

 ಜುಗಾರಿ ಪ್ರಕರಣ

 • ಹಿರಿಯಡ್ಕ: ದಿನಾಂಕ  04/03/2023 ರಂದು ಅನಿಲ್ ಬಿ ಎಂ, ಪೊಲೀಸ್‌ ಉಪನಿರೀಕ್ಷಕರು,  ಹಿರಿಯಡ್ಕ ಪೊಲೀಸ್ ಠಾಣೆ ಇವರು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ದಿನಾಂಕ 05/03/2023 ರಂದು ಬೆಳಗಗಿನ ಜಾವ 1:00 ಗಂಟೆ ಸಮಯಕ್ಕೆ  ಬೆಳ್ಳಂಪಳ್ಳಿ ಗ್ರಾಮದ ಕ್ವಾಲಿಟಿ ವೈನ್ ಶಾಪ್‌ನ  ಹಿಂಭಾಗದಲ್ಲಿ ಕೆಲವು ಯುವಕರು ಸಾರ್ವಜನಿಕ ಸ್ಥಳದಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್‌ ಬಾಹರ್‌ ‌ಇಸ್ಪೀಟ್‌ಜುಗಾರಿ ಆಟ ಆಡುತ್ತಿರುವ ಬಗ್ಗೆ  ಬಂದ ಮಾಹಿತಿ ಮೇರೆಗೆ   ಸ್ಥಳಕ್ಕೆ ಹೋಗಿ ಅವರನ್ನು ಸುತ್ತುವರೆದಾಗ ಎಲ್ಲರೂ ಓಡಲು ಯತ್ನಿಸಿದ್ದು ಅವರಲ್ಲಿ ಇಬ್ಬರನ್ನು ಹಿಡಿದುಕೊಂಡಿದ್ದು,  3-4 ಜನ ಓಡಿ ಹೋಗಿ ತಪ್ಪಿಸಿಕೊಂಡಿರುತ್ತಾರೆ . ವಶಕ್ಕೆ ಪಡೆಯಲಾದ ಇಬ್ಬರನ್ನು ವಿಚಾರಿಸಲಾಗಿ ಓರ್ವ ನೆಲ್ಸನ್  ಹಾಗೂ  ನವೀನ್ ಎಂದು ತಿಳಿಸಿರುತ್ತಾರೆ. ಆರೋಪಿ ನೆಲ್ಸನ್ ನ ಅಂಗ ಜಪ್ತಿ ಮಾಡಲಾಗಿ ಆತನ ಅಂಗಿ ಕಿಸೆಯಲ್ಲಿ 3,200/-  ರೂಪಾಯಿ ಹಾಗೂ ನವೀನ್ ಮೆಂಡನ್ ನ ಅಂಗ ಜಪ್ತಿ ಮಾಡಲಾಗಿ ಆತನ ಬಳಿ 3000- ರೂಪಾಯಿ ಇದ್ದು  ಹಣವನ್ನು ಹಾಗೂ ಆರೋಪಿಗಳು ನೆಲಕ್ಕೆ ಹಾಕಿದ್ದ 1000/- ರೂಪಾಯಿ ಒಟ್ಟು 7200/- ರೂಪಾಯಿ  ಹಣ  ಹಾಗೂ  ಸ್ಥಳದಲ್ಲಿದ್ದ 52 ಇಸ್ಪೀಟ್ ಎಲೆಗಳನ್ನು ಹಾಗೂ ಓಡಿ ಹೋದವರ  ಮೋಟಾರು ಸೈಕಲ್  ನಂಬ್ರ 1. KA-20-ET-8433   2. KA-20-EV-7268  3. KA-20-EV-8203 ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 13/2023  ಕಲಂ: :87 ಕೆ.ಪಿ. ಕಾಯ್ದೆ  ಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣಗಳು

 • ಬೈಂದೂರು: ಪಿರ್ಯಾದಿದಾರರಾದ ರೇಷ್ಮಾ ಪೂಜಾರಿ (24), ಗಂಡ: ಕೃಷ್ಣ ಪೂಜಾರಿ, ವಾಸ: ಅರೆಹೊಳೆ ಮನೆ, ಯೆಳಜಿತ್ ಗೋಳಿಹೊಳೆ ಗ್ರಾಮ ಬೈಂದೂರು ತಾಲೂಕು ಇಬತ ಅಕ್ಕ ರೇಖಾ (29) ರವರು ಕಳೆದ 6 ತಿಂಗಳಿನಿಂದ ಮೂರ್ಛೆ ರೋಗ ಖಾಯಿಲೆಯಿಂದ ಬಳಲುತ್ತಿದ್ದು  ಈ ಬಗ್ಗೆ ಕೆ .ಎಂ.ಸಿ ಮಣಿಪಾಲ  ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದು  ದಿನಾಂಕ 05/03/2023 ರಂದು ಬೆಳಿಗ್ಗೆ  7:30 ಗಂಟೆಗೆ ಗೋಳಿಹೊಳೆ ಗ್ರಾಮದ ಅರೆಹೊಳೆಮನೆ ಎಂಬಲ್ಲಿನ ಮನೆಯ ಬಳಿಯ ತೋಟದಲ್ಲಿ ತೆಂಗಿನ ಮತ್ತು  ಅಡಿಕೆ ಮರಕ್ಕೆ ನೀರು ಬಿಡುತ್ತಿದ್ದ ಸಮಯ  ಮೂರ್ಛೆ ರೋಗದಿಂದ ಆಕಸ್ಮಿಕವಾಗಿ   ಕುಸಿದು ಬಿದ್ದವರನ್ನು  ಮೃತರ ಗಂಡ ಸತೀಶ್ ಪೂಜಾರಿ ಹಾಗೂ  ತಮ್ಮ ಲಕ್ಷ್ಮಣ  ಚಿಕಿತ್ಸೆ ಬಗ್ಗೆ  ಕೆ.ಎಂ.ಸಿ ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ  ವೈದ್ಯರು ಪರೀಕ್ಷಿಸಿ  ರೇಖಾ ರವರು ದಾರಿ ಮದ್ಯೆ  ಕರೆ ತರುವಾಗ  ಮೃತಪಟ್ಟಿರುವುದಾಗಿ ಬೆಳಿಗ್ಗೆ 9:25 ಗಂಟೆಗೆ ತಿಳಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 12/2023 ಕಲಂ:  174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ಪಿರ್ಯಾದಿದಾರರಾದ ಸದಾಶಿವ ನಾಯ್ಕ (33), ತಂದೆ: ಬಾಬುರಾಯ ನಾಯ್ಕ, ವಾಸ:ಆದರ್ಶ ನಗರ, ಗುಡ್ಡೆ ಅಂಗಡಿ ಅಂಚೆ, ಮೂಡು ಅಲೆವೂರು, ಅಲೆವೂರುಗ್ರಾಮ, ಉಡುಪಿ ತಾಲೂಕು ಇವರ ತಂದೆ ಬಾಬುರಾಯ ನಾಯ್ಕ (60) ರವರಿಗೆ ಸರಿಯಾಗಿ ಕಣ್ಣು ಕಾಣಿಸದೇ ಇದ್ದು ಹಾಗು ರಕ್ತದೊತ್ತಡ ಮತ್ತು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದರು. ಮನೆಯಲ್ಲಿ ಹಾಲು ಕರೆಯುವ 5 ದನಗಳಿದ್ದು, ಪ್ರತಿ ದಿನ ಪಿರ್ಯಾದಿದಾರರ ತಂದೆ-ತಾಯಿ ಬೈಲಿಗೆ ಮೇಯಲು ಕರೆದುಕೊಂಡು ಹೋಗುತ್ತಿದ್ದು, ದಿನಾಂಕ 05/03/2023 ರಂದು ಬೆಳಿಗ್ಗೆ 9:45 ಗಂಟೆಗೆ ದನಗಳನ್ನು ಮೇಯಲು ಬೈಲಿಗೆ  ಕರೆದುಕೊಂಡು ಹೋಗಿದ್ದು, ಪಿರ್ಯಾದಿದಾರರ ತಾಯಿ ಮುಂಚಿತವಾಗಿ ಮನೆಗೆ  ಬಂದಿದ್ದು, ಬೆಳಿಗ್ಗೆ 10:10 ಗಂಟೆಗೆ ಪಿರ್ಯಾದಿದಾರ ಪರಿಚಯದ ಮಂಜು ಎಂಬುವವರು ಕರೆ ಮಾಡಿ ತಂದೆ ಬೈಲಿನಲ್ಲಿ ಬಿದ್ದಿರುವುದಾಗಿ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಹೋದಾಗ ಪಿರ್ಯಾದಿದಾರರ ತಂದೆ ತೀವ್ರ ಅಸ್ವಸ್ಥಗೊಂಡು ಬಿದ್ದುಕೊಂಡಿದ್ದು ಅವರನ್ನು ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಬಂದು ವೈದ್ಯರಲ್ಲಿ ಪರೀಕ್ಷಿಸಿದಾಗ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.  ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 10/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ಪಿರ್ಯಾದಿದಾರರಾದ ಶಿವಾನಂದ (40), ತಂದೆ: ದಿ:ಗೋವಿಂದ ಸೇರ್ವೆಗಾರ  , ವಾಸ: ದುರ್ಗಾನಿಲಯ  ಹೆರಾಯಿಬೆಟ್ಟು ಉಪ್ಪೂರು ಗ್ರಾಮ ಬ್ರಹ್ಮಾವರ ತಾಲೂಕು ಇವರ ತಾಯಿ ಶ್ರೀಮತಿ ಕಮಲ ಸೇರ್ವೆಗಾರ್ತಿ (73)  ಇವರು  ಮನೆವಾರ್ತೆ ಕೆಲಸ ಮಾಡಿಕೊಂಡು ತನ್ನ ಅಂಗವಿಕಲ ಮಗ  ಮಂಜುನಾಥ ರವರೊಂದಿಗೆ ಉಪ್ಪೂರು ಗ್ರಾಮದ ಹೆರಾಯಿಬೆಟ್ಟು  ದುರ್ಗಾನಿಲಯ ಮನೆಯಲ್ಲಿ ವಾಸವಾಗಿದ್ದವರು  ದಿನಾಂಕ 28/02/2023 ರಂದು ಮಧ್ಯಾಹ್ನ 2:30 ಗಂಟೆಯ ಸಮಯಕ್ಕೆ  ಶ್ರೀಮತಿ ಕಮಲ ಸೇರ್ವೆಗಾರ್ತಿ ಇವರು ತನ್ನ ಅಂಗವಿಕಲ ಮಗನಿಗೆ ಸ್ನಾನ ಮಾಡುವ ಬಗ್ಗೆ ಮನೆಯ ಹೊರಗಡೆಯ ಒಲೆಯಲ್ಲಿ  ಬಿಸಿ ನೀರನ್ನು  ಕಾಯಿಸುವ ಬಗ್ಗೆ  ಒಲೆಗೆ ತೆಂಗಿನಕಾಯಿಯ  ಸಿಪ್ಪೆ  ಹಾಗೂ ಗರಟೆಗಳನ್ನು  ಹಾಕಿ ಬೆಂಕಿ ಮಾಡಿ ನೀರನ್ನು  ಕಾಯಿಸುತ್ತಿರುವಾಗ ಒಲೆಯಲ್ಲಿನ ಬೆಂಕಿಯು ಅಕಸ್ಮಿಕವಾಗಿ ಶ್ರೀಮತಿ ಕಮಲ ಸೇರ್ವೆಗಾರ್ತಿಯವರ ಸೀರೆಗೆ ಅಕಸ್ಮಿಕವಾಗಿ ತಗಲಿ  ಬೆಂಕಿಯು 2 ಕಾಲು ಹಾಗೂ ಹೊಟ್ಟೆಯ ತನಕ ತಗಲಿ ಸುಟ್ಟುಹೋಗಿದ್ದು ಆಗ ಪಿರ್ಯಾದಿದಾರರು ಜೋರಾಗಿ ಕೂಗಾಡಿದನ್ನು ಕೇಳಿ  ಪಕ್ಕದ ಮನೆಯವರು ರಿಕ್ಷಾದರಿಗೆ ಪೋನ್‌ ಮಾಡಿ  ಚಿಕಿತ್ಸೆಯ  ಬಗ್ಗೆ  ಬ್ರಹ್ಮಾವರ  ಮಹೇಶ  ಆಸ್ಪತ್ರೆಗೆ  ದಾಖಲಿಸದವರನ್ನು  ಪರೀಕ್ಷಿಸಿದ  ವೈಧ್ಯರು  ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಗೆ  ಕರೆದುಕೊಂಡು ಹೋಗುವಂತೆ  ಸೂಚಿಸಿದಂತೆ  ಮಣಿಪಾಲ ಕೆ.ಎಮ್‌.ಸಿ ಆಸ್ಪತ್ರೆಯಲ್ಲಿ  ಚಿಕಿತ್ಸೆಗೆ  ದಾಖಲಿಸಿ ಚಿಕಿತ್ಸೆ ಯಲ್ಲಿರುತ್ತ ದಿನಾಂಕ  05/03/2023  ರಂದು  ಸಂಜೆ 4:55 ಗಂಟೆಗೆ  ಶ್ರೀಮತಿ ಕಮಲ ಸೇರ್ವೆಗಾರ್ತಿ  ಚಿಕಿತ್ಸೆ ಫಲಕಾರಿಯಾಗದೇ  ಮೃತ ಪಟ್ಟಿರುವುದಾಗಿ ವೈಧ್ಯರು  ಪರೀಕ್ಷಿಸಿ ತಿಳಿಸಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 16/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

 • ಮಲ್ಪೆ: ದಿನಾಂಕ 04/03/2023  ರಂದು  ಪಿರ್ಯಾದಿದಾರರಾದ ಶಾಂತಿ ಶಾಲಿನಿ ಸಲ್ಡಾನ್ಹ, ತಂದೆ:  ಜೊಕಿಂ ಬ್ರಿಟ್ಟೂ,ವಾಸ: ಪ್ಲಾಟ್‌ ನಂಬ್ರ 504 ಎಕ್ರೊಪೊಲಿಸ್‌  ಉಡುಪಿ ಇವರು ಅಗ್ನೇಲ್  ಡಿಸೋಜ ರವರ ಕೊಡವೂರು ಗ್ರಾಮ ತೊಟ್ಟಂ ಎಂಬಲ್ಲಿ ಇರುವ ಸರ್ವೆ ನಂಬ್ರ 285/5  ಜಾಗದ  ಪವರ್  ಆಪ್ ಅಟಾರ್ನಿಯನ್ನು  ಹೊಂದಿದ್ದು  ಬರ್ತಡೆ   ನಿಮಿತ್ತ ಪಿರ್ಯಾದಿದಾರರು ಅಗ್ನೇಲ್  ರವರ  ಜಾಗದಲ್ಲಿ  ಕೂತಿರುವ  ಸಮಯ ರಾತ್ರಿ 10:00  ಗಂಟೆಯಿಂದ  10:30  ಗಂಟೆಯ  ಸಮಯಕ್ಕೆ   5  ರಿಂದ  6  ಜನರು MH-46-P- 7813 ನೇ ಮಾರಿತಿ ವ್ಯಾಗನರ್ ಕಾರಿನಲ್ಲಿ ಬಂದು ರೋನಿ ಡಿಸೋಜ ರವರ   ಮನೆಗೆ ಹೋಗಿ   ಬಳಿಕ ಅಕ್ರಮ ಕೂಟ ರಚಿಸಿಕೊಂಡು  ಬಳಿಕ  ಪಿರ್ಯಾದಿದಾರರು  ಕೂತ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ   ಬಂದು  ಪಿರ್ಯಾದಿದಾರರಿಗೆ  ಅವಾಚ್ಯ  ಶಬ್ದಗಳಿಂದ  ಬೈದು ಹಲ್ಲೆ ಮಾಡಿ ಜೀವ  ಬೆದರಿಕೆ ಹಾಕಿರುತ್ತಾರೆ . ತಡೆಯಲು ಬಂದ  ಕಿರಣ್  ಲಸ್ರಾದೊರವರಿಗೆ 1.ರೋನಿ ಡಿಸೋಜಾ, 2. ರೋನಿ ಡಿಸೋಜಾ ರವರ ಹೆಂಡತಿ, 3. ಗಣೇಶ, 4. ಇತರೆ 6 ಜನ  ಅವರೆಲ್ಲರು ಸೇರಿ  ಕೈ ಯಿಂದ  ಹೊಡೆದು ಹಲ್ಲೆ ನಡೆಸಿರುವುದಾಗಿದೆ.  ಅವರ ಇದಕ್ಕೆಲ್ಲಾ  ರೋನಿ  ಡಿಸೋಜ ಹಾಗೂ ಅವರ  ಪತ್ನಿ  ನೇರ ಕುಮ್ಮಕ್ಕು ನೀಡಿರುವುದೇ  ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 21/2023 ಕಲಂ: 506,504,143,147,148,149,447,323,354 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 06-03-2023 09:43 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080