ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ:

  • ಕುಂದಾಪುರ: ದಿನಾಂಕ 05/03/2022  ರಂದು ಬೆಳಿಗ್ಗೆ ಸುಮಾರು 8:30  ಗಂಟೆಗೆ, ಕುಂದಾಪುರ ತಾಲೂಕು, ಕುಂಭಾಶಿ ಗ್ರಾಮದ ಕುಂಭಾಶಿ ಕರ್ನಾಟಕ ಬ್ಯಾಂಕ್‌‌  ಬಳಿ ರಾಷ್ಟ್ರೀಯ  ಹೆದ್ದಾರಿ 66 ರ ರಸ್ತೆಯಲ್ಲಿ,   ಆಪಾದಿತ ಮನಸ್‌  ಎಂಬವರು KA20-EY-2829 ನೇ ಬೈಕನ್ನು ಕುಂದಾಪುರ ಕಡೆಯಿಂದ  ಉಡುಪಿ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನ ದಿಂದ  ಸವಾರಿ ಮಾಡಿಕೊಂಡು ಬಂದು,  ರಸ್ತೆಯ ಎಡಬದಿಯಲ್ಲಿ ಕುಂದಾಪುರ ಕಡೆಗೆ  ನಡೆದುಕೊಂಡು ಹೋಗುತ್ತಿದ್ದ ಗಣೇಶ ರವರಿಗೆ  ಡಿಕ್ಕಿ ಹೊಡೆದ ಪರಿಣಾಮ ಗಣೇಶ ರವರ ತಲೆಗೆ ಗಂಭೀರ ಗಾಯವಾಗಿ ಕೋಟೇಶ್ವರ ಎನ್ ಆರ್ ಆಚಾರ್ಯ  ಆಸ್ಪತ್ರೆಯಲ್ಲಿ  ಹಾಗೂ  ಬಳಿಕ  ಉಡುಪಿ  ಜಿಲ್ಲಾ ಆಶ್ಪತ್ರೆಯಲ್ಲಿ  ಚಿಕಿತ್ಸೆ  ಪಡೆದು  ಹೆಚ್ಚಿನ  ಚಿಕಿತ್ಸೆ  ಬಗ್ಗೆ ಮಣಿಪಾಲ ಕೆ.ಎಂ .ಸಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ  ದಾಖಲಾಗಿರುತ್ತಾರೆ. ಹಾಗೂ  ಈ  ಅಪಘಾತದಿಂದ ಮನಸ್‌  ರವರು ಸಹ ಕೋಟೇಶ್ವರ ಎನ್ ಆರ್ ಆಚಾರ್ಯ  ಆಸ್ಪತ್ರೆಯಲ್ಲಿ  ಹೊರ ರೋಗಿಯಾಗಿ  ಚಿಕಿತ್ಸೆ ಪಡೆದಿರುತ್ತಾರೆ.  ಈ ಬಗ್ಗೆ ಮುರುಗನ್‌  ಪ್ರಾಯ  37 ವರ್ಷ ತಂದೆ ಸುಬ್ರಹ್ಮಣ್ಯ ವಾಸ: ವಿನಾಯಕ  ನಗರ ಕುಂಭಾಶಿ  ಗ್ರಾಮ,  ಇವರು ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣಾ ಅಪರಾಧ ಕ್ರಮಾಂಕ: 34/2022 ಕಲಂ 279, 338  IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣ:

  • ಉಡುಪಿ :ಪಿರ್ಯಾದಿ ಶಾಹಿದ್‌ ಪ್ರಾಯ: 28 ವರ್ಷ ತಂದೆ: ಮುನ್ನಾ ಸಾಹೇಬ್‌ ವಿಳಾಸ: ನಂಬ್ರ: 1-68/39, ನಾಗಯಕ್ಷಿ ದೇವಸ್ಥಾನದ ಬಳಿ, ದುಗ್ಲಿಪದವು, ಮಂಚಿ, ಶಿವಳ್ಳಿ ಗ್ರಾಮ ಇವರು ಖಾಸಗಿ ಬಸ್‌ನ ಚಾಲಕರಾಗಿದ್ದು, ದಿನಾಂಕ 19/06/2019 ರಂದು ಕೊರಂಗ್ರಪಾಡಿಯಲ್ಲಿ ಆಟೋ ರಿಕ್ಷಾ ಚಾಲಕನ ನಿರ್ಲಕ್ಷತನದಿಂದ ನಡೆದ ರಸ್ತೆ ಅಪಘಾತದಲ್ಲಿ ಓರ್ವ ಹುಡುಗ ಮೃತಪಟ್ಟಿದ್ದು, ಈ ಬಗ್ಗೆ ಪಿರ್ಯಾದುದಾರರು ನೀಡಿದ ದೂರಿನ ಮೇರೆಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆಯಲ್ಲಿ ಅಪರಾಧ .ಕ್ರಮಾಂಕ: 73/2019 ದಾಖಲಾಗಿ, ಮಾನ್ಯ ನ್ಯಾಯಾಲಯದಲ್ಲಿ ಸಿಸಿ ನಂಬ್ರ: 420/2020 ವಿಚಾರಣೆಯಲ್ಲಿರುತ್ತದೆ. ಸದ್ರಿ ಕೇಸಿನ ಸಂಬಂಧ ಪಿರ್ಯಾದುದಾರರು 5-6 ಬಾರಿ ಮಾನ್ಯ ನ್ಯಾಯಾಲಯಕ್ಕೆ ಸಾಕ್ಷಿ ನುಡಿಯಲು ಹಾಜರಾದರೂ ಎದ್ರಿ ವಕೀಲರು ಮಾನ್ಯ ನ್ಯಾಯಾಧೀಶರಲ್ಲಿ ಪದೇ ಪದೇ ಮುಂದಿನ ದಿನಾಂಕ ಕೇಳಿಕೊಂಡು ಕೇಸನ್ನು ಮುಂದೂಡುತ್ತಿದ್ದು, ದಿನಾಂಕ 05/03/2022 ರಂದು ಸಾಕ್ಷಿ ವಿಚಾರಣೆಯ ದಿನಾಂಕ ನಿಗದಿಯಾದ ಮೇರೆಗೆ ಪಿರ್ಯಾದುದಾರರು ಬೆಳಿಗ್ಗೆ ಮಾನ್ಯ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದು, 16:25 ಗಂಟೆಗೆ ಕೋರ್ಟ್‌ ಹಾಲ್‌ನಲ್ಲಿ ವಿಚಾರಣೆಗೆ ಕರೆದಿದ್ದು, ಕೋರ್ಟ್‌ ಹಾಲ್‌ನಲ್ಲಿ ಹಾಜರಿದ್ದ ಕೇಸಿನ ಎದ್ರಿ ವಕೀಲರು ಪುನಃ ಮುಂದಿನ ದಿನಾಂಕ ನೀಡುವಂತೆ ಕೇಳಿಕೊಂಡಾಗ, ಪಿರ್ಯಾದುದಾರರು ಪದೇ ಪದೇ ಕೋರ್ಟ್‌ಗೆ ಹಾಜರಾಗುವುದರಿಂದ ತಮಗಾಗುವ ಕಷ್ಟದ ಬಗ್ಗೆ ಮಾನ್ಯ ನ್ಯಾಯಾಧೀಶರಲ್ಲಿ ಹೇಳಿಕೊಂಡಾಗ, ಎದ್ರಿ ವಕೀಲರು ಪಿರ್ಯಾದುದಾರರನ್ನು ಉದ್ದೇಶಿಸಿ, ‘ಕೇಸು ನೀನೆ ಮಾಡಿದ್ದು, ಪದೇ ಪದೇ ಕೋರ್ಟ್‌ಗೆ ಬರಬೇಕು’ ಎಂದು ಹೇಳಿದರು. ಈ ಬಗ್ಗೆ ಪಿರ್ಯಾದುದಾರರು ಮಾನ್ಯ ನ್ಯಾಯಾಧೀಶರಲ್ಲಿ ಪದೇ ಪದೇ ಬರಲು ಕಷ್ಟ ಆಗುತ್ತದೆ ಎಂದಾಗ ಎದ್ರಿ ವಕೀಲರು, ‘ನೀನು ಬಹಳ ಮಾತನಾಡುತ್ತೀಯಾ, ನೀನು ಹೊರಗೆ ಬಾ, ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂದು ಹೇಳಿದ್ದು, ಮಾನ್ಯ ನ್ಯಾಯಾಧೀಶರು ಮುಂದಿನ ದಿನಾಂಕ ನೀಡಿದ ಬಳಿಕ 16:45 ಗಂಟೆಗೆ ಪಿರ್ಯಾದುದಾರರು ಕೋರ್ಟ್‌ ಹಾಲ್‌ನಿಂದ ಹೊರಗೆ ಬಂದಾಗ ಪ್ಯಾಸೇಜ್‌ನಲ್ಲಿ ಎದ್ರಿ ವಕೀಲರಾದ ಆರೋಪಿ 1ನೇಯವರು ಓಡೋಡಿ ಬಂದು ಪಿರ್ಯಾದುದಾರರನ್ನು ಅಡ್ಡತಡೆದು ನಿಲ್ಲಿಸಿ, ಪಿರ್ಯಾದುದಾರರ ಎಡಕೆನ್ನೆಗೆ ಒಮ್ಮೆಲೆ ತನ್ನ ಕೈಯಿಂದ ಜೋರಾಗಿ ಹಲ್ಲೆ ನಡೆಸಿದ್ದು, ಪ್ರತಿಯಾಗಿ ಪಿರ್ಯಾದುದಾರರೂ ಸಹ ಅವರ ಕೆನ್ನೆಗೆ ಹೊಡೆದು, ವಿಷಯವನ್ನು ಮಾನ್ಯ ನ್ಯಾಯಾಧೀಶರಲ್ಲಿ ಹೇಳಲು ಕೋರ್ಟ್‌ ಹಾಲ್‌ ಒಳಗೆ ಹೋದಾಗ ಮಾನ್ಯ ನ್ಯಾಯಾಧೀಶರು ಕೋರ್ಟ್‌ ಹಾಲ್‌ ಒಳಗೆ ಇರುವ ಬೆಂಚ್‌ನಲ್ಲಿ ಕುಳಿತುಕೊಳ್ಳಲು ಸೂಚಿಸಿದಂತೆ ಕುಳಿತಿರುವಾಗ, ಹಾಲ್‌ ಹೊರಗಡೆ 1ನೇ ಆರೋಪಿಯು ಹಲವು ಜನ ವಕೀಲರನ್ನು ಸಮಾನ ಉದ್ದೇಶದಿಂದ ಅಕ್ರಮಕೂಟ ಸೇರಿಸಿದ್ದು, ಪೊಲೀಸರು ಬಂದು ಕೋರ್ಟ್ ಹಾಲ್‌ ಒಳಗೆ ಕುಳಿತಿದ್ದ ಪಿರ್ಯಾದುದಾರರನ್ನು ಕರೆದುಕೊಂಡು ಹೋಗುತ್ತಿರುವಾಗ ಸುಮಾರು 5-6 ಜನ ವಕೀಲರು ಬಂದು ಪಿರ್ಯಾದುದಾರರಿಗೆ ಕೈಯಿಂದ ಹೊಡೆದು, ಕಾಲಿನಿಂದ ತುಳಿದಿದ್ದಲ್ಲದೆ, ಧರಿಸಿದ್ದ ಟೀ-ಶರ್ಟ್‌ ನ್ನು ಎಳೆದಾಡಿ ಹರಿದು, ಎಲ್ಲಾ ಆಪಾದಿತರು ಸೇರಿ ಪಿರ್ಯಾದುದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು, ‘ನಿನ್ನನ್ನು ಮುಂದಕ್ಕೆ ಸುಮ್ಮನೆ ಬಿಡುವುದಿಲ್ಲ’ ಎಂಬುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  42/2022, ಕಲಂ: 143, 147, 341, 323, 504, 506 Rw 149  IPC  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ : ಪಿರ್ಯಾದಿ ಗುರುರಾಜ್‌ ಜಿ.ಎಸ್‌ ಪ್ರಾಯ: 37 ವರ್ಷ ತಂದೆ: ಸೋಮಯ್ಯ ಜಿ ವಿಳಾಸ: ಶ್ರೀ ನಿಲಯ, ಮಟ್ಟು ಅಣೆಕಟ್ಟು ಬಳಿ, ಮಟ್ಟು-ಕಟಪಾಡಿ ಇವರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದು, ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲರಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಪಿರ್ಯಾದುದಾರರು ಮಾನ್ಯ ನ್ಯಾಯಾಲಯದ ಸಿಸಿ ನಂಬ್ರ: 420/2020 ರಲ್ಲಿ ಆರೋಪಿತನ ಪರವಾದ ವಕೀಲರಾಗಿದ್ದು, ದಿನಾಂಕ 05/03/2022 ರಂದು ವಿಚಾರಣೆ ನಿಗದಿಯಾಗಿದ್ದು, ತುಂಬಾ ಸಾಕ್ಷಿ ವಿಚಾರಣೆ ಇದ್ದುದರಿಂದ 17:15 ಗಂಟೆಗೆ ವಿಚಾರಣೆಗೆ ಕರೆದಿದ್ದು, ಪಾಟಿ ಸವಾಲು ಮಾಡಲು ಸಮಯ ಸಾಕಾಗದ ಕಾರಣ ಮುಂದಿನ ದಿನಾಂಕ ಕೇಳಿದ್ದು, ಮಾನ್ಯ ನ್ಯಾಯಾಧೀಶರು ಮುಂದಿನ ದಿನಾಂಕ ಬರುವಂತೆ ಸೂಚಿಸಿದಾಗ ಈ ಪ್ರಕರಣದ ಆಪಾದಿತ ಶಾಹಿದ್‌ ನು ಏರುಧ್ವನಿಯಲ್ಲಿ ‘ಈಗಾಗಲೇ 3-4 ಸಲ ಬಂದಿರುತ್ತೇನೆ, ಇನ್ನು ಬರಲು ಆಗುವುದಿಲ್ಲ, ನೀವು ಬೆಳಿಗ್ಗೆಯಿಂದ ಕಾಯಿಸಿದ್ದೀರಿ, ಈಗ ಅಧಿಕ ಪ್ರಸಂಗ ಮಾತನಾಡುತ್ತೀರಿ ಎಂದು ಹೇಳಿದ್ದು, 17:30 ಗಂಟೆಗೆ ಪಿರ್ಯಾದುದಾರರು ಕೋರ್ಟ್‌ ಹಾಲ್‌ನಿಂದ ಹೊರಗೆ ಬರುತ್ತಿರುವಾಗ ಆಪಾದಿತನು ಹಿಂದಿನಿಂದ ದೂಡುತ್ತಾ ಬಂದು, ‘ನೀನು ವಕೀಲನಾದರೆ ನಿನಗಾಯಿತು’ ಎಂದು ಅಡ್ಡ ತಡೆದು ನಿಲ್ಲಿಸಿ, ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದುದಾರರ ಎಡ ಕೆನ್ನೆಗೆ ಮತ್ತು ಹೊಟ್ಟೆಗೆ ಕೈಯಿಂದ ಹೊಡೆದು, ‘ನೀವು ಕೆಳಜಾತಿಯವರು, ನನಗೆ ಏನು ಮಾಡಲಿಕ್ಕೆ ಆಗಲ್ಲ, ನನ್ನ ಬಳಿ ಕೂಡ ಜನ ಇದ್ದಾರೆ’ ಎಂದು ಜಾತಿ ನಿಂದನೆ ಮಾಡಿ ‘ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿರುವುದಾಗಿದೆ.ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  43/2022,ಕಲಂ:341, 323, 504, 506 IPC & ಕಲಂ:3(1)(r) 3(1)(s) SC ST ACT-1989 ರಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ:  ಪಿರ್ಯಾದಿ  ಶ್ರೀಮತಿ ಮೆಲ್ಬಾ ಮೋರಸ್, ಪ್ರಾಯ 36 ವರ್ಷ ಎಂಬವರು ದಿನಾಂಕ 05-01-2012 ರಂದು ರೋಷನ್ ಥೋಮಸ್ ಲೋಬೋ ಎಂಬಾತನನ್ನು ಮಿಯಾರು ಸೈಂಟ್ ಡೊಮಿನಿಕ್ ಚರ್ಚ್ ನಲ್ಲಿ ಮದುವೆಯಾಗಿದ್ದು ರಿಶೋನ್ 8 ವರ್ಷ ಮತ್ತು ರಿಯೋನ್ 6 ವರ್ಷ ಎಂಬ ಇಬ್ಬರು ಮಕ್ಕಳಿರುತ್ತಾರೆ. ಪಿರ್ಯಾದುದಾರರು ಕಳೆದ ಕೆಲವು ವರ್ಷಗಳಿಂದ ಮಂಗಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು   ಅಪಾದಿತ ರೋಷನ್ ಥೋಮಸ್ ಲೋಬೋ, ಮಿಯಾರು, ಕಾರ್ಕಳ ತಾಲೂಕು. ಇವರು 4 ವರ್ಷಗಳಿಂದ ಫಿರ್ಯಾದುದಾರರ ಮತ್ತು ಮಕ್ಕಳ ಸಂಪರ್ಕದಲ್ಲಿ ಇಲ್ಲದೇ  ಖರ್ಚಿಗೆ ತಿಂಗಳಿಗೆ 10,000/ ರೂ ಬ್ಯಾಂಕ್  ಖಾತೆಗೆ ಕಳುಹಿಸುತ್ತಿದ್ದನು. ಅಪಾದಿತನು  ಮಂಗಳೂರಿಗೆ ಬರುವ ವಿಚಾರವನ್ನು ಕುವೈಟ್‌ನಲ್ಲಿದ್ದ ಸಂಬಂಧಿಕ ರಿಂದ ತಿಳಿದು ಫಿರ್ಯಾದುದಾರರು  ದಿನಾಂಕ 03-03-2022 ರಂದು ಸಂಜೆ 16-30  ಗಂಟೆಗೆ     ಮಂಗಳೂರು ಏರ್‌ಪೋರ್ಟಿನಲ್ಲಿ ಹಿಡಿದು ಮದುವೆ ಮಾಡಿ ಕೊಟ್ಟ ಮನೆಗೆ ಬಂದಿದ್ದು ಜೊತೆಯಲ್ಲಿ ಇದ್ದರೂ ಅಪಾದಿತನು ಒಂದು ಶಬ್ದವನ್ನು  ಸಹಾ ಮಾತನಾಡಿರುವುದಿಲ್ಲ.  ಅಪಾದಿತನ ತಾಯಿ   ಫ್ಲೋರಿನ್ ಲೋಬೋ, ಮತ್ತು ಅಕ್ಕ ಐರಿನ್ ತುಂಬಾ ಮಾನಸಿಕ ಕಿರುಕುಳವನ್ನು ಕೊಟ್ಟಿರುತ್ತಾರೆ ಮತ್ತು ಫಿರ್ಯಾದುದಾರರ  ತಾಯಿ ಮದುವೆಗೆ ಕೊಟ್ಟ ಬಂಗಾರವನ್ನು ಕೊಟ್ಟಿರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣಾ  ಅಪರಾಧ ಕ್ರಮಾಂಕ 34/2022 ಕಲಂ 498 (A) ಜೊತೆಗೆ 34   ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಬೈಂದೂರು: ಫಿರ್ಯಾದಿ ನವೀನ ಕಂದಾವರ ಪ್ರಾಯ:55  ವರ್ಷ ತಂದೆ: ದಿ.ಕೆ .ಮಹಾಬಲ ಶೆಟ್ಟಿ ವಾಸ; ಜನ್ನಾಡಿ ಮನೆ ,ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಇವರು ಆರ್ಕೇಟೆಕ್ಟ್ ಇಂಜಿನಿಯರಿಂಗ್ ಕೆಲಸ  ಮಾಡಿಕೊಂಡಿದ್ದು ಸುಮಾರು ಒಂದೂವರೆ ವರ್ಷದ ಹಿಂದೆ ಭಟ್ಕಳದ ಹಾಡೋಹಳ್ಳಿ ಕಟ್ಟಡದ ಇಂಟಿರೀಯರ ಕೆಲಸವನ್ನು ನಡೆಸುತ್ತಿದ್ದು ಆ ಸಮಯ ಶಿರೂರಿನ ದೊಂಬೆ ರಸ್ತೆಯಲ್ಲಿರುವ ನಡುಹಿತ್ಲು ಎಂಬಲ್ಲಿ ಕೆ. ಹರಿ ಪ್ರಸಾದ ಶೆಟ್ಟಿ ಎಂಬುವವರಿಗೆ  ಸೇರಿದ  ಗೆಸ್ಟ್ ಹೌಸ್ ನಲ್ಲಿ  ಉಳಿದುಕೊಂಡ  ಸಮಯ ಪಿರ್ಯಾದಿದಾರರ ಕಾರು ಚಾಲಕ ಮತ್ತು ಹೆಲ್ಪರ್ ಆಗಿ ಕೆಲಸ  ಮಾಡಿಕೊಂಡಿದ್ದ ಅನೀಶ್ ಮ್ಯಾಥ್ಯೂ  ಎಂಬುವವನು ಕುಡಿದು ಕೆಲಸಗಾರರಲ್ಲಿ ಗಲಾಟೆ ಮಾಡಿ ಬಿಟ್ಟು ಹೋಗಿರುತ್ತಾನೆ. ದಿನಾಂಕ:21-02-2022 ರಂದು ಪಿರ್ಯಾದಿದಾರರು ಕುಂದಾಪುರಕ್ಕೆ ಹೋಗುವರೇ ನಡೆದುಕೊಂಡು ಹೋಗುವಾಗ ಸಮಯ ಸುಮಾರು ಬೆಳಿಗ್ಗೆ9:15 ಗಂಟೆಗೆ ಶಿರೂರಿನ ಮೊಮಿನ್ ಮೊಹಲ್ಲಾ ಬಳಿ ತಲುಪಿದಾಗ ಅನೀಷ್ ಮ್ಯಾಥ್ಯೂ ಆತನ ಬಾಬ್ತು ಪಲ್ಸರ್ ಬೈಕಿನಲ್ಲಿ ಬಂದು ಪಿರ್ಯಾದಿದಾರರನ್ನು ಅಡ್ಡಕಟ್ಟಿ  ಅವಾಚ್ಯ ಶಬ್ದಗಳಿಂದ ಬೈದು   ನನ್ನನ್ನು ಕೆಲಸದಿಂದ ತೆಗೆದು ಹಾಕಿದೆಯಲ್ಲ ಮುಂದಕ್ಕೆ ಕೆ. ಹರಿ ಪ್ರಸಾದ ಶೆಟ್ಟಿಯ ಕಂಪೌಂಡ್ ಗೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಹೋಗಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ  ಅಪರಾಧ ಕ್ರಮಾಂಕ 55 /2022 ಕಲಂ. 341,504,506 IPC  ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಣಿಪಾಲ: ಪಿರ್ಯಾದಿ ಮಹಮ್ಮದ್ ಆದಿಲ್  ಪ್ರಾಯ: 21 ವರ್ಷ ತಂದೆ: ಹಂಝ ಬ್ಯಾರಿ ವಾಸ: ಪ್ಲಾಟ್ ನಂ; 304, ಸುವಣ್ ರೆಸಿಡೆನ್ಸಿ , ಬ್ರಹ್ಮಾವರ  ಇವರು ದಿನಾಂಕ: 05.03.2022 ರಂದು ತನ್ನ ಬಾಬ್ತು  KA 20 MD 7985 ನೇ ಕಾರಿನಲ್ಲಿ ಕೇರಳದಿಂದ ಬರುತ್ತಿದ್ದ ತನ್ನ  ಸ್ನೇಹಿತರಾದ ತುಷಾರಾ ಹಾಗೂ ಥೇರೆಸಾ ಮತ್ತು ಅವರ ಗೆಳೆಯ ರೊಬಿ ತಂಗಜಾಚಲ್ ರವರನ್ನು ಕರೆದುಕೊಂಡು ಬ್ರಹ್ಮಾವರ  ಮನೆಗೆ ಹೋಗುತ್ತಿದ್ದಾಗ ಸಮಯ ಸುಮಾರು ರಾತ್ರಿ 08:10 ಗಂಟೆಗೆ ಮಣಿಪಾಲದ ಪೋಲಾರ್ ಬೀಯರ್  ಬಳಿಯ ಡಿವೈಡರ್ ತಲುಪುತ್ತಿದಂತೆ  ಪಿರ್ಯಾದಿದಾರ ಹಿಂದಿನಿಂದ ಬಂದ ಒಂದು  ಕಾರು ಪಿರ್ಯಾದಿದಾರ ಕಾರನ್ನು ಓವರ್ ಟೇಕ್ ಮಾಡಿ ಅಡ್ಡಗಟ್ಟಿದ್ದು ಕಾರಿನಲ್ಲಿ ಸುಮಾರು ಜನರಿದ್ದು ಅವರಲ್ಲಿ  ಪಿರ್ಯಾದಿದಾರರ ಪರಿಚಯದ ಆಶೀಕ್ ಎಂಬಾತನು ಕೆಳಗಿಳಿದು ಪಿರ್ಯಾದಿದಾರರಿಗೆ  ಅವಾಚ್ಯ ಶಬ್ದಗಳಿಂದ ಬೈದು, ಪಿರ್ಯಾದಿದಾರರ ಕಾರಿನ ಬಲಭಾಗದ ಗ್ಲಾಸಿಗೆ ಕಲ್ಲಿನಿಂದ ಹೊಡೆದು ಹಾನಿಗೊಳಿಸಿದಲ್ಲದೇ  ಪಿರ್ಯಾದಿದಾರನ್ನು ಉದ್ದೇಶಿಸಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿ ಹೋಗಿರುವುದಾಗಿದೆ,ಈ ಬಗ್ಗೆ ಮಣಿಪಾಲ ಠಾಣಾ ಅಪರಾಧ ಕ್ರಮಾಂಕ:34/2022, ಕಲಂ; 341, 427,504,506  ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ:

  • ಕೊಲ್ಲೂರು: ಪಿರ್ಯಾಧಿ ಜ್ಯೊತಿ(35)  ಗಂಡ: ಚಂದ್ರ ಶೇಖರ ವಾಸ:  ಸಾಧು ನಿಲಯ ಹರ ಕೆಳ ಹೊಸೂರು, ಹೊಸೂರು ಕುಂದಾಪುರ ತಾಲೂಕು ಇವರ ಗಂಡ ಚಂದ್ರ ಶೇಖರ (41) ರವರು  ವಿಪರೀತ ಮದ್ಯಪಾನ ಮಾಡುವ  ಅಭ್ಯಾಸದವರಾಗಿದ್ದು  ಕೈ ಸಾಲ ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು  ಮಗ ಕಿರಣನಿಗೆ ಕೈ ಗೆ ಪೆಟ್ಟಾಗಿದ್ದು ಆತನ ಆರೈಕೆಯಲ್ಲಿ  ಪಿರ್ಯಾದಿದಾರರು  ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿದ್ದ  ಸಮಯದಲ್ಲಿ  ಮೃತ ಚಂದ್ರಶೇಖರ್ ಮನೆಯಲ್ಲಿ ವಾಸವಿದ್ದ ವೇಳೆ  ಯಾರೂ  ಇಲ್ಲದ ಸಮಯದಲ್ಲಿ  ಹೊಸೂರು ಗ್ರಾಮದ ಹರ ಕೆಳ ಹೊಸೂರು ಎಂಬಲ್ಲಿರುವ ತನ್ನ ವಾಸ್ತವ್ಯದ ಮನೆ ಎದುರು  ಇರುವ  ಬಾವಿಗೆ  ದಿನಾಂಕ 02.03.2022 ರಂದು  ಸಂಜೆ 05:00 ಗಂಟೆಯಿಂದ  ದಿನಾಂಕ  05.03.2022 ರಂದು ಬೆಳಿಗ್ಗೆ  06-00 ಗಂಟೆಯ ಮಧ್ಯದ  ಅವಧಿಯಲ್ಲಿ  ಹಾರಿ ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ  ಮೃತರು ವೈಯಕ್ತಿಕ ಸಮಸ್ಯೆಗಳಿಂದ ಮನನೊಂದು  ಜೀವನದಲ್ಲಿ  ಜಿಗುಪ್ಸೆಗೊಂಡು  ಆತ್ಮಹತ್ಯೆ  ಮಾಡಿಕೊಂಡಿದ್ದು  ಮೃತರ  ಮರಣದಲ್ಲಿ  ಬೇರೆ  ಯಾವುದೇ  ಸಂಶಯವಿರುವುದಿಲ್ಲವಾಗಿ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌  ಠಾಣೆ  UDR 03/2022 U/S: 174 CRPC  ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಕುಂದಾಪುರ : ಫಿರ್ಯಾದಿ ಗುರುವ (45), ತಂದೆ: ಕುಷ್ಠ, ವಾಸ: ವಾಲ್ತೂರು, ಜೋಗಿಬೆಟ್ಟು, ಕಾವ್ರಾಡಿ ಗ್ರಾಮ, ಇವರ ಜೊತೆಯಲ್ಲಿ ವಾಸವಾಗಿರುವ ಅವರ ಹೆಂಡತಿಯ ತಂದೆ ಪ್ರಭಾಕರ (65) ಇವರು ವಿಪರೀತ ಮದ್ಯಪಾನ ಮಾಡುವ ಚಟ ಹೊಂದಿದ್ದು, ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಈ ದಿನ ದಿನಾಂಕ 05.03.2022 ರಂದು 20-00 ಗಂಟೆಗೆ ಅವರ ಮನೆಯ ಮುಂಬದಿ ಇರುವ ಸರಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಯುಡಿಆರ್‌‌ ನಂ: 08/2022  ಕಲಂ: 174  ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಹೆಂಗಸು ಕಾಣೆ ಪ್ರಕರಣ:

  • ಪಡುಬಿದ್ರಿ:  ಪಿರ್ಯಾದಿ ಪಾತುಂಙ್ಞಿ, ಪ್ರಾಯ: 60 ವರ್ಷ, ಗಂಡ: ಮೊಹಮ್ಮದ್, ಮಡ್ನಣ್, ಇನ್ನಾ ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು,ಇವರ ಮಗಳು ಜೀನತ್ (22) ಎಂಬುವರನ್ನು ಪಡುಬಿದ್ರಿ ಡೀನ್‌ಸ್ಟ್ರೀಟ್ ನಿವಾಸಿ ಮೊಹಮ್ಮದ್ ಇಲಿಯಾಸ್ ಎಂಬುವರಿಗೆ ಸುಮಾರು 3 ವರ್ಷಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು, ಅವರಿಗೆ ಮೊಹಮ್ಮದ್ ಇಲ್‌‌‌ಹಾನ್(2) ಎಂಬ ಮಗನಿರುತ್ತಾನೆ. ಪಿರ್ಯಾದುದಾರರಿಗೆ ಹುಷಾರಿಲ್ಲದ ಕಾರಣ ದಿನಾಂಕ: 02.03.2022 ರಂದು ಸಂಜೆ ಜೀನತ್  ಅವರ ಮಗನೊಂದಿಗೆ ಇನ್ನಾ ಗ್ರಾಮದಲ್ಲಿರುವ ಪಿರ್ಯಾದುದಾರರ ಮನೆಗೆ ಹೋಗಿದ್ದು, ಅಲ್ಲಿಂದ ದಿನಾಂಕ: 04.03.2022 ರಂದು 15:00 ಗಂಟೆಗೆ ಜೀನತ್‌ಳು ತಾನು ಪಡುಬಿದ್ರಿಯಲ್ಲಿರುವ ತನ್ನ ಗಂಡನ ಮನೆಗೆ ಹೋಗುವುದಾಗಿ ಹೇಳಿ ಮಗುವನ್ನು ಕರೆದುಕೊಂಡು ಪಿರ್ಯಾದುದಾರರ ಮನೆಯಿಂದ ಹೋದವಳು, ಅವಳ ಗಂಡನ ಮನೆಗೂ ಹೋಗದೆ, ವಾಪಾಸ್ಸು ಪಿರ್ಯಾದಿದಾರರ ಮನೆಗೂ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 25/2022 ಕಲಂ: ಹೆಂಗಸು ಕಾಣೆ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 06-03-2022 10:58 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080