ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ:

  • ಕೋಟ: ಫಿರ್ಯಾದಿ ಯೋಗೇಶ ಪ್ರಾಯ 37 ವರ್ಷ ತಂದೆ: ನಾರಾಯಣ ವಾಸ: ಕುದ್ರಿಕಟ್ಟೆ ಶಿರಿಯಾರ ಗ್ರಾಮ ಬ್ರಹ್ಮಾವರ ಇವರ ತಮ್ಮ ವಿಜಯ (32 ವರ್ಷ),ಈತನು ಗಾರೆ ಕೆಲಸ ಮಾಡಿಕೊಂಡಿದ್ದವನು ಕೌಟುಂಬಿಕ ವಿಚಾರದಲ್ಲಿ ಅಥವಾ ಬೇರೆ ಯಾವುದೋ ಕಾರಣದಿಂದ ದಿನಾಂಕ 03/03/2022 ರಂದು ಬೆಳೀಗ್ಗೆ ಮನೆಯಿಂದ ಹೊರಗೆ ಹೋದವನು ಮಧ್ಯಾಹ್ನ ವಾಪಾಸ್ಸು ಬಂದು ತಾನು ವಿಷ ಕುಡಿದಿದ್ದು ಹೊಟ್ಟೆ ನೋಯುತ್ತಿರುವುದಾಗಿ  ಅಕ್ಕ ಜಯಂತಿಯವರಲ್ಲಿ ತಿಳಿಸಿದಂತೆ ಚಿಕಿತ್ಸೆಯ ಬಗ್ಗೆ ಆಸ್ಪತ್ರೆಗೆ ದಾಖಲಿಸಿದ್ದು ,ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲ ಕಾರಿಯಾಗದೇ ಈ ದಿನ ದಿನಾಂಕ 06/03/2022 ರಂದು 5.40 ಗಂಟೆಗೆ  ಮೃತ ಪಟ್ಟಿರುತ್ತಾನೆ . ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್ ನಂಬ್ರ 09/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಮಲ್ಪೆ: ಪಿರ್ಯಾಧಿ ವಿಠಲ್ ಮೊಗವೀರ (38) ತಂದೆ: ನಾರಾಯಣ ಮೊಗವೀರ ಪೂಜಾರಿ ವಾಸ: ಶ್ರೀ ಸಿದ್ಧಿ ಕೃಪಾ ನಿಲಯ, ಹೆಗ್ಗೂರು ಹೊಳೆ, ಕೊಮೆ ತೆಕ್ಕಟ್ಟೆ ಇವರ ತಂದೆ ನಾರಾಯಣ ಮೋಗವೀರ(64) ಇವರು ಮಲ್ಪೆಯ ಪುರಂದರ ತಿಂಗಳಾಯ ರವರ ಸತ್ಯನಾರಾಯಣ  ಬೋಟಿನಲ್ಲಿ 3 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು ದಿನಾಂಕ 01-03-2022 ರಂದು ಸಂಜೆ ಮನೆಗೆ ಬಂದಿದ್ದು, ದಿನಾಂಕ 02-03-2022 ರಂದು ಸಂಜೆ 5 ಗಂಟೆಗೆ ಕೆಲಸಕ್ಕೆ ಹೋಗಿರುತ್ತಾರೆ. ಅದೇ ದಿನ ಸಂಜೆ 06:45 ಕ್ಕೆ ಪಿರ್ಯಾಧಿದಾರರಿಗೆ ಕರೆ ಮಾತನಾಡಿರುತ್ತಾರೆ. ದಿನಾಂಕ 03-03-2022 ರಂದು ಬೆಳಿಗ್ಗೆ 06:00 ಗಂಟೆಗೆ ಪಿರ್ಯಾಧಿದಾರರಿಗೆ ಪುರಂದರ ತಿಂಗಳಾಯರವರು ಕರೆ ಮಾಡಿ ನಿಮ್ಮ ತಂದೆ ದಿನಾಂಕ 02-03-2022 ರಂದು ರಾತ್ರಿ 07:30 ಗಂಟೆಗೆ ಬಂದು ಬೋಟಿನಲ್ಲಿ ಮಲಗಿದ್ದವರು ದಿನಾಂಕ 03-03-2022 ರಂದು ಬೆಳಿಗ್ಗೆ 05:00 ಗಂಟೆಗೆ ನೋಡಿದಾಗ ಇಲ್ಲವೆಂದು ತಿಳಿಸಿರುತ್ತಾರೆ. ನಂತರ ಪಿರ್ಯಾಧಿದಾರರು ಹಾಗೂ ಅವರ ಮನೆಯವರು ಮಲ್ಪೆಗೆ ಬಂದು ಬೋಟಿನ ಮಾಲಕರ ಜೋತೆ ಸೇರಿ ಹುಡುಕಾಡಿದರೂ ಪತ್ತೆಯಾಗಿರುವುದಿಲ್ಲ. ದಿನಾಂಕ 06-03-2022 ರಂದು ಬೆಳಿಗ್ಗೆ 08:30 ಗಂಟೆಗೆ ಬೋಟಿನ ಮಾಲಿಕರಾದ ಪುರಂದರ ತಿಂಗಳಾಯರವರು ಪಿರ್ಯಾಧಿದಾರರಿಗೆ ಕರೆ ಮಾಡಿ ನಿಮ್ಮ ತಂದೆಯ ಮೃತ ದೇಹವು ಮಲ್ಪೆಯ ಲೈಟ್ ಹೌಸ್ ಬಳಿ ಕಲ್ಲಿನಲ್ಲಿ ಸಿಕ್ಕಿಹಾಕಿಕೊಂಡಿರುವುದಾಗಿ ತಿಳಿಸಿರುತ್ತಾರೆ. ನಂತರ ಪಿರ್ಯಾಧಿದಾರರು ಹಾಗೂ ಅವರ ಸಂಬಂಧಿಕರು ಮಲ್ಪೆಗೆ ಬಂದು ಬೋಟ್ ಮಾಲಿಕರ ಜೋತೆ ಸ್ಥಳಕ್ಕೆ ಹೋಗಿ ನೋಡಿದಾಗ ಮೃತ ದೇಹವು ಪಿರ್ಯಾಧಿದಾರರ ತಂದೆಯದಾಗಿದ್ದು, ಮೃತ ದೇಹವು ಕೊಳೆತ ಸ್ಥಿತಿಯಲ್ಲಿರುತ್ತದೆ. ನಂತರ ಮೃತ ದೇಹವನ್ನು ತೆಗೆದುಕೊಂಡುಬಂದು ಮಲ್ಪೆ ಸೀ ವಾಕ್ ಬಳಿ ಇಟ್ಟಿರುತ್ತಾರೆ. ಪಿರ್ಯಾಧಿದಾರರ ತಂದೆ ಬೋಟಿನಲ್ಲಿ ಮಲಗಿದ್ದವರು ಆಕಸ್ಮಿಕವಾಗಿ ದಕ್ಕೆಯ ನೀರಿಗೆ ಬಿದ್ದು ಮೃತ ಪಟ್ಟಿರುತ್ತಾರೆ.ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್ ನಂಬ್ರ  12/2022  ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ:

  • ಕುಂದಾಪುರ: ದಿನ  ದಿನಾಂಕ 06/03/2022 ರಂದು ಬೆಳಿಗ್ಗೆ ಸುಮಾರು 9:20 ಗಂಟೆಗೆ ಕುಂದಾಪುರ ತಾಲೂಕು, ಆನೆಗಳ್ಳಿ ಗ್ರಾಮದ  ಹೇರಿಕುದ್ರು ಬಳಿ, NH 66 ರಸ್ತೆಯಲ್ಲಿ ಆಪಾದಿತ ಚಂದ್ರಕಾಂತ ಎಂಬವರು KA20MD-8834 ಮಾರುತಿ Alto ಕಾರನ್ನು ತಲ್ಲೂರು ಕಡೆಯಿಂದ ಕುಂದಾಪುರ  ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಶ್ರೀಧರ್‌ ಮೈಯ್ಯ ರವರು  ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸೈಕಲ್ ಗೆ ಹಿಂದಿನಿಂದ  ಡಿಕ್ಕಿ ಹೊಡೆದ  ಪರಿಣಾಮ ಶ್ರೀಧರ್‌ ಮೈಯ್ಯ ರವರ ತಲೆಗೆ ಗಂಭೀರ ಗಾಯವಾಗಿ ಕುಂದಾಪುರ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿರುತ್ತಾರೆ. ಈ ಬಗ್ಗೆ ಯು. ಪ್ರಸನ್ನ ಕುಮಾರ್‌ ಮೈಯ್ಯ ಪ್ರಾಯ  54   ವರ್ಷ  ತಂದೆ :  ದಿ. ಯು. ಆನಂತ ಮಯ್ಯ    ವಾಸ:   ಶ್ರೀ ಕೃಷ್ಣ ನಿವಾಸ, ಉಪ್ಪಿನಕುದ್ರು   ಇವರು ಕುಂದಾಪುರ ಸಂಚಾರ ಠಾಣೆಗೆ ದೂರು ನೀಡಿದ್ದು ಠಾಣಾ ಅಪರಾಧ ಕ್ರಮಾಂಕ : 35/2022 ಕಲಂ 279,  304 (ಎ)  IPC ಯಂತೆ ಪ್ರಕರಣ ದಾಖಲಿಸಲಾಗಿದೆ. 
  • ಉಡುಪಿ: ಪಿರ್ಯಾದಿ ಸಂಜೀವ ನಾಯ್ಕ್ ಪ್ರಾಯ 38  ವರ್ಷ, ತಂದೆ: ದಿ. ಗೋಪಾಲ ನಾಯ್ಕ್, ವಾಸ: 7-92ಎ , ಸೂರೆಬೆಟ್ಟು ಪೇತ್ರಿ ಅಂಚೆ, ಸೂರೆಬೆಟ್ಟು,  ಚೇರ್ಕಾಡಿ ಗ್ರಾಮ, ಇವರು  ದಿನಾಂಕ:05-03-2022 ರಂದು ತನ್ನ ಹೆಂಡತಿ ರವಿಜಾರವರೊಂದಿಗೆ ಅಂಬಲಪಾಡಿ ಬಲೈಪಾದೆ ರಸ್ತೆಯಲ್ಲಿರುವ ಮಹೇಂದ್ರ ಶೋ ರೂಮ್ ಬಳಿ ಸರ್ವಿಸ್ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 1-30 ಗಂಟೆಗೆ ಕಿನ್ನಿಮುಲ್ಕಿ ಸ್ವಾಗತಪುರದ ಕಡೆಯಿಂದ KA20EP6988ನೇ  ಮೋಟಾರ್ ಸೈಕಲ್ ಸವಾರ ಸಚಿನ್.ಕೆ.ಸಿ ಎಂಬಾತ ಮೋಟಾರು ಸೈಕಲ್ ನ್ನು ದುಡುಕುತನ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಎಡ ಬದಿಗೆ ಸವಾರಿ ಮಾಡಿ ಶ್ರೀಮತಿ ರವೀಜಾರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು, ಬಲಕಾಲಿನ ಮೂಳೆಮುರಿತದ ಗಂಭೀರ ಸ್ವರೂಪದ ಗಾಯವಾಗಿ ಮಣಿಪಾಲ ಕೆ.ಎಮ್.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ :22/2022 ಕಲಂ: 279, 338 ಐ.ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ ವಿಜಯ್ ಡೆರಿಕ್ ಡಿಸೋಜ (46)  ತಂದೆ: ಆನಟೋನಿ ಫ್ರಾನ್ಸಿಸ್ ಡಿಸೋಜ ವಾಸ: ಹೌಸ್ ನಂ 5-1-112 ಮಿಶನ್ ಕಂಪೌಂಡ್ ಹತ್ತಿರ, 76 ಬಡಗುಬೆಟ್ಟು ಉಡುಪಿ ಇವರು  ದಿನಾಂಕ:06/03/2022 ರಂದು ತನ್ನ ಬಾಬ್ತು KA20 MC8315 ನೇ ಇಕೋ ಕಾರನ್ನು ಬೆಳಿಗ್ಗೆ  06:45 ಗಂಟೆಗೆ ಉಡುಪಿ ಮಿಶನ್ ಕಂಪೌಂಡ್ ರಸ್ತೆಯಿಂದ 1 ನೇ ಮುಖ್ಯ ರಸ್ತೆಯಾಗಿ ಚಲಾಯಿಸಿಕೊಂಡು  ಬಂದು ಉಡುಪಿ ಕಿನ್ನಿಮುಲ್ಕಿಯಲ್ಲಿರುವ ಕಾರ್ ಶೋರೂಂ ಜಂಕ್ಷನ್ ತಲುಪುವಾಗ, KA20D8831 ನೇ ಬೋಲೆರೋ ಮ್ಯಾಕ್ಷಿ ಟ್ರಕ್ ಚಾಲಕ ರಾಘವೇಂದ್ರ ಎಂಬಾತ ತನ್ನ ಟ್ರಕ್ ನ್ನು ವಾಹನಗಳು ಹಾದು ಹೋಗುವ ಎಕಮುಖ ರಸ್ತೆಯ ವಿರುದ್ಧ ದಿಕ್ಕಿನಿಂದ ಕಿನ್ನಿಮುಲ್ಕಿ ಕಡೆಯಿಂದ ಜೋಡು ಕಟ್ಟೆಯ ಕಡೆಗೆ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಮುಂಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ. ಪಿರ್ಯಾದಿದಾರರ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿರುತ್ತದೆ.ಈ ಬಗ್ಗೆ ಉಡುಪಿ ಸಂಚಾರ ಠಾಣೆ ಅಪರಾಧ ಕ್ರಮಾಂಕ :23/2022 ಕಲಂ: 279, ಐ.ಪಿಸಿ ಮತ್ತು  218 ಜೊತೆಗೆ 177 ಐಎಂವಿ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.  

ಇತ್ತೀಚಿನ ನವೀಕರಣ​ : 06-03-2022 06:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080