ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ನೀಲಾವರ ಗ್ರಾಮದ, ಎಳ್ಳಂಪಳ್ಳಿ ಎಂಬಲ್ಲಿರುವ ಮನೆಯಲ್ಲಿ ಪಿರ್ಯಾದಿದಾರರಾದ ಸತೀಶ ಅಡಿಗ ವೈ. (45) ತಂದೆ:ವೆಂಕಟರಮಣ ಅಡಿಗ ವಾಸ: “ಸಂತರ್ಪಣ” ನೆಕ್ಲಾಜೆ, ಕಾರ್ಕಳ ಇವರ ತಂದೆಯಾದ ವೆಂಕಟರಮಣ ಅಡಿಗ (75) ಎಂಬವರು ಮೊದಲಿನಿಂದಲೂ ಒಬ್ಬರೇ ವಾಸವಾಗಿರುವುದಾಗಿದೆ. ಸತೀಶ ಅಡಿಗ ರವರು ಶಿಕ್ಷಕರಾಗಿ ಕಾರ್ಕಳದಲ್ಲಿ ವಾಸವಾಗಿದ್ದು, ಅವರ ತಾಯಿ ಹಾಗೂ ಅಕ್ಕಂದಿರು ಐರೋಡಿ ಹಾಗೂ ಉಡುಪಿಯಲ್ಲಿ ವಾಸವಾಗಿರುವುದಾಗಿದೆ. ಸತೀಶ ಅಡಿಗ ರವರು ಹಾಗೂ ಅವರ ಮನೆಯವರು ಆಗಾಗ ನೀಲಾವರಕ್ಕೆ ಹೋಗಿ ಅವರನ್ನು ಮಾತನಾಡಿಸಿ ಅವರಿಗೆ ಬೇಕಾದ ದಿನಸಿ ಹಾಗೂ ಔಷಧಗಳನ್ನು ನೀಡಿ ಬರುತ್ತಿರುವುದಾಗಿದೆ. ಸತೀಶ ಅಡಿಗ ಇವರ ತಂದೆಯನ್ನು ಅವರ ಜೊತೆ ಇರಲು ಎಷ್ಟು ಬಾರಿ ಹೇಳಿದರೂ ಕೇಳದೆ ನಾನು ಎಲ್ಲಿಗೂ ಬರುವುದಿಲ್ಲ, ಇಲ್ಲೇ ಸಾಯುತ್ತೇನೆ ಎಂದು ಹೇಳಿರುತ್ತಾರೆ. ವೆಂಕಟರಮಣ ಅಡಿಗ ರವರಿಗೆ ವಯಸ್ಸಾಗಿದ್ದು, ಇದೇ ಕಾರಣದಿಂದ ಹಾಗೂ ವಯೋ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು ಮಾನಸಿಕವಾಗಿ ಖಿನ್ನತೆ ಹೊಂದದ್ದು ಇದೇ ಕಾರಣದಿಂದ ಅವರು ದಿನಾಂಕ 01/03/2021 ರಂದು ಸಂಜೆ 6:30 ಗಂಟೆಯಿಂದ ದಿನಾಂಕ 05/03/2021 ರ ಸಂಜೆ 5:00 ಗಂಟೆ ಮದ್ಯಾವಧಿಯಲ್ಲಿ ಅವರು ವಾಸವಿರುವ ಮನೆಯ ಎದುರಿನ ಬಾವಿಯ ಕಬ್ಬಿಣದ ಪೋಲಿಗೆ ಹೊಸ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಬಾವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ:  ಪಿರ್ಯಾದಿದಾರರಾದ ರಮೇಶ ಶೆಟ್ಟಿ (58) ತಂದೆ: ದಿವಂಗತ ಶಿವಣ್ಣ ಶೆಟ್ಟಿ, ವಾಸ: ಅಶ್ವಿತ ನಿಲಯ, ಜಾರ್ಕಳ ಎರ್ಲಪಾಡಿ ಗ್ರಾಮ ಕಾರ್ಕಳ ಇವರು ಮೈ ಓನ್‌ಇಕೊ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ನಂ 1 ಮಧು ಹನ್ಸ್‌ ಬಿಲ್ಡಿಂಗ್‌ 263 ಡಾ. ಅನ್ನಿಬೆಸೆಂಟ್‌ರಸ್ತೆ, ಯೂನಿಯನ್‌ ಬ್ಯಾಂಕ್‌ಹಿಂಭಾಗ, ಪ್ರಭಾದೇವಿ ಮುಂಬೈ 400025 ಮಹರಾಷ್ಟ್ರ ಕಂಪೆನಿಯು ಪೆಟ್ರೋಲಿಯಂ ಡಿಸೀಲ್‌ ಹಾಗೂ ಇತರ ಉತ್ಪನ್ನಗಳನ್ನು ದೇಶದಾದ್ಯಂತ ಪೆಟ್ರೋಲ್‌ ಪಂಪ್‌ಗಳ ಮುಖೇನ ಮಾರಾಟ ಮಾಡುವ ಸಂಸ್ಥೆಯಾಗಿರುತ್ತದೆ. ಇವರ ಕಂಪೆನಿಯು ದೇಶದ ವಿವಿಧ ಪ್ರಾಂತ್ಯಗಳಿಂದ ಪೆಟ್ರೋಲಿಯಂ ಡಿಸೀಲ್‌ ಹಾಗೂ ಇತರ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಅರ್ಜಿಗಳನ್ನು ಅಹ್ವಾನಿಸಲಾಗಿತ್ತು. ಅರ್ಜಿದಾರರು ದಿನಾಂಕ 15/10/2018 ರಂದು ಇವರ ಕಂಪೆನಿಯನ್ನು ಸಂಪರ್ಕಿಸಿ ಪೆಟ್ರೋಲಿಯಂ ಉತ್ಪನ್ನ ಮಾರಾಟವನ್ನು ಕಾರ್ಕಳ ಕಸಬ ಗ್ರಾಮದಲ್ಲಿ ವ್ಯವಹಾರ ಮಾಡುವುದಾಗಿ ಪ್ರಸ್ತಾಪವನ್ನು ನೀಡಿ ಬಳಿಕ ಭದ್ರತಾ ಠೇವಣಿಯಾಗಿ ದಿನಾಂಕ 16/11/2018 ರಂದು ರೂಪಾಯಿ ಐದು ಲಕ್ಷ ಹಾಗೂ ದಿನಾಂಕ 04/12/2018 ರಂದು ರೂಪಾಯಿ ಹತ್ತು ಲಕ್ಷ ಹಣವನ್ನು ಈ ಕಂಪೆನಿಗೆ ಆನ್‌ಲೈನ್‌ಮೂಲಕ ಪಾವತಿಸಿರುತ್ತಾರೆ. ಕಂಪೆನಿಯು ಕಾನೂನಿನ ವಿಧಾನಗಳನ್ನು ಪೂರೈಸುವ ಬದಲಾಗಿ ಈವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ದುರ್ಲಾಭ ಪಡೆಯುವ ಉದ್ದೇಶದಿಂದ ಹಣವನ್ನು ಪಡೆದು ವಂಚನೆ ನಂಬಿಕೆ ದ್ರೋಹ ಹಾಗೂ ನಷ್ಟ ಉಂಟು ಮಾಡಿರುವುದಾಗಿದೆ. ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ     ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 28/2021 ಕಲಂ: 420, 406 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-03-2021 09:24 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080