ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ  05/02/2023 ರಂದು 17:30 ಗಂಟೆಗೆ ಕಾರ್ಕಳ ತಾಲೂಕು ಮಾಳ ಗ್ರಾಮದ ಮಾಳ ಘಾಟಿಯ ಅಬ್ಬಾಸ್ ಕಟ್ಟಿಂಗ್ ಎಂಬಲ್ಲಿ ಹಾದುಹೋಗಿರುವ ಮಾಳ-ಶೃಂಗೇರಿ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಎಸ್ಕೆ ಬಾರ್ಡರ್ ಕಡೆಯಿಂದ ಮಾಳ ಕಡೆಗೆ KA-70-H-7177 ನೇ ನಂಬ್ರದ ಬೈಕ್ ಸವಾರ ಸಾಕ್ಷತ್ ಸತೀಶ ಎಂಬುವವರನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ತನ್ನ ಬೈಕ್ ನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತಿರುವಿನಲ್ಲಿ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಮಾಳ ಕಡೆಯಿಂದ ಎಸ್,ಕೆ ಬಾರ್ಡರ್ ಕಡೆಗೆ ಹೋಗುತ್ತಿದ್ದ KA-18-C-2867 ನೇ ನಂಬ್ರದ ಟಿಪ್ಪರ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಟಿಪ್ಪರ್ ನ ಚಕ್ರದ ಅಡಿಗೆ ಸಿಲುಕಿದ ಪರಿಣಾಮ ಬೈಕ್ ಸವಾರ ಸಾಕ್ಷತ್ ನ ಬಲಕಾಲು ಹಾಗೂ ಎಡಕೈ ಗೆ ತೀವ್ರ ಸ್ವರೂಪದ ಗಾಯ ಹಾಗೂ ತಲೆಗೆ ತರಚಿದ ಗಾಯ ಮತ್ತು ಸಹಸವಾರ ಸತೀಶನ ಕಣ್ಣಿನ ಮೇಲ್ಭಾಗದಲ್ಲಿ ಸಣ್ಣಪುಟ್ಟು ಗಾಯವಾಗಿದ್ದು ಗಾಯಾಳುಗಳನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2023  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಮೊಹಮ್ಮದ್ ಝಾಹಿದ್ (20), ತಂದೆ: ಅಬ್ದುಲ್ ಅಜೀಜ್, ವಾಸ: ಆಯಿಶಾ ವಿಲ್ಲಾ, ಕೈನೋತ್, ಮೇಲ್ಪರಂಬ್ ಗ್ರಾಮ, ಕಲ್ನಾಡ್ ಅಂಚೆ, ಕಾಸರಗೋಡು ಜಿಲ್ಲೆ, ಕೇರಳ ರಾಜ್ಯ ಇವರ ಗೆಳೆಯರಾದ ಮೊಯಿದ್ದೀನ್ ಅನ್ಫಾ, ಮೊಹಮ್ಮದ್ ಅನಾಸ್, ಮೊಯಿದ್ದೀನ್ ಮನಾಝ್, ಮೊಯಿದ್ದೀನ್ ಅಲಾಫ್ ರವರೊಂದಿಗೆ ಅವರ ಸ್ನೇಹಿತನ  KL-60-S-3545  ನೇ ನಂಬ್ರದ ಕಾರಿನಲ್ಲಿ ಮೊಯಿದ್ದೀನ್ ಅನ್ಫಾ ಚಾಲಕನಾಗಿ ಉಡುಪಿ ಮತ್ತು ಮಲ್ಪೆ ಕಡೆಗೆ ತಿರುಗಾಡಿ ಬರಲು  ದಿನಾಂಕ 04/02/2023 ರಂದು ಕಾಸರಗೋಡಿನಿಂದ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಬರುತ್ತಾ 21:30  ಗಂಟೆಗೆ ಕಾಪು ತಾಲೂಕು ಬಡಾ ಗ್ರಾಮ ಉಚ್ಚಿಲದ ಮಸೀದಿಯಿಂದ ಸ್ವಲ್ಪ ಮುಂದೆ ತಲುಪುತ್ತಿದ್ದಂತೆ ಕಾರಿನ ಚಾಲಕ ಮೊಹಮ್ಮದ್ ಅನ್ಫಾ ಕಾರನ್ನು ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿದ್ದರಿಂದ ಕಾರು ಚಾಲಕನ ನಿಯಂತ್ರಣ  ತಪ್ಪಿ ರಸ್ತೆಯ ಬಲ ಭಾಗಕ್ಕೆ ಚಲಿಸಿ ಡಿವೈಡರ್ ಹತ್ತಿ ಡಿವೈಡರ್ ಮೇಲೆ ಇದ್ದ ವಿದ್ಯುತ್ ದಾರಿ ದೀಪದ ಕಂಬಕ್ಕೆ ಡಿಕ್ಕಿ ಹೊಡೆದು ಹಿಮ್ಮುಖವಾಗಿ ಚಲಿಸಿ ರಸ್ತೆಯ ಮೇಲೆ ಬಂದು ತಿರುಗಿ ನಿಂತಿದ್ದು, ಕಾರು ಚಾಲಕ ಮೊಯಿದ್ದೀನ್ ಅನ್ಫಾನಿಗೆ ಎಡ ಕಾಲಿಗೆ ಹಾಗೂ ಸೊಂಟಕ್ಕೆ ಗುದ್ದಿದ ನೋವು ಉಂಟಾಗಿದ್ದು, ಉಳಿದವರಿಗೆ ಯಾವುದೇ ಗಾಯ ನೋವು ಆಗಿರುವುದಿಲ್ಲ. ನಂತರ ಗಾಯಾಳು ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2023, ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಉಮೇಶ (43), ತಂದೆ: ದಿ.ತಿಮ್ಮಯ್ಯ, ವಾಸ:ದೆಗ್ಗನಹಳ್ಳಿ ಗ್ರಾಮ ತಿಪ್ಪುರು ಅಂಚೆ ಕೆ ಆರ್‌ನಗರ  ತಾಲೂಕು ಮೈಸೂರು ಜಿಲ್ಲೆ  ಹಾಗೂ ಅವರ ಸೊಸೆ ದಿನಾಂಕ 31/01/2023 ರಂದು ಕುಟುಂಬಸ್ಥರ ಸಮೇತ  KA-51-C-3537 ಬಸ್ಸಿನಲ್ಲಿ ಮೈಸೂರುನಿಂದ ಚಿತ್ರದುರ್ಗ,ಹಂಪಿ,ಬಾದಾಮಿ,ಐಹೊಳೆ,ಗೊಕರ್ಣ,ಮುರುಡೇಶ್ವರದಲ್ಲಿ ದೇವರ ದರ್ಶನ ಪಡೆದು ದಿನಾಂಕ 05/02/2023 ರಂದು ಮದ್ಯಾಹ್ನ 13:00 ಗಂಟೆಗೆ ತ್ರಾಸಿ  ಬೀಚ್ ನೋಡಲು ಬಸ್ಸನ್ನು NH 66 ರಸ್ತೆ ಬದಿ ನಿಲ್ಲಿಸಿ ಪಿರ್ಯಾದಿದಾರರ ಹೆಂಡತಿ ಹಾಗೂ ಮಗಳು ಹಾಗೂ ಅವರ ಸೊಸೆ ಮಹಾದೇವಿ ರಸ್ತೆ ಬದಿ ನಿಂತುಕೊಂಡಿರುವಾಗ ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ KA-47-M-6998 ನಂಬ್ರನ ಕಾರು ಅತಿ ವೇಗ ಹಾಗೂ ಅಜಾಗೂರಕತೆಯಿಂದ ಚಲಾಯಿಸಿಕೊಂಡು ಬಂದು ತೀರಾ ಎಡಬದಿಗೆ ಬಂದು ಮಣ್ಣು ರಸ್ತೆಯಲ್ಲಿ ನಿಂತಿದ್ದ ಪಿರ್ಯಾದಿದಾರರ ಸೊಸೆ ಮಹಾದೇವಿಗೆ ಡಿಕ್ಕಿ ಹೊಡೆದು ಪರಿಣಾಮ ಅವರ ತಲೆಗೆ ಹಾಗೂ ಬಲ ಕೈಗೆ ರಕ್ತ ಗಾಯವಾಗಿದ್ದು ಬಲ ಕಾಲಿನ ಮೊಣಗಂಟಿನ ಕೆಳ ಭಾಗ ಮೂಳೆ ಮುರಿತದ ಗಾಯವಾಗಿರುತ್ತದೆ.  ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 14/2023 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಪ್ರಶಾಂತ ಆರ್ ಕೆ (47), ತಂದೆ: ದಿ. ಆರ್ ಕೆ ರಾಮನ್,  ವಾಸ: ಸನ್ನಿದಿ, 7 ನೇ ಆಡ್ಡ ರಸ್ತೆ, ಅಚ್ಯುತ್ ನಗರ, ಪರ್ಕಳ ಹೆರ್ಗಾ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ತಾಯಿ ಸರೋಜಿನಿ (79) ಇವರು ವಯೋ ಸಹಜ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 05/02/2023 ರಂದು ಮಧ್ಯಾಹ್ನ 01:00 ಗಂಟೆಗೆ ವಾಂತಿ ಶುರು ಆಗಿದ್ದು ಇದರಿಂದ ಆಸ್ವಸ್ಥಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯರು ಪಿರ್ಯಾದಿದಾರರ ತಾಯಿ ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 05/2023 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಿರ್ವಾ: ಪಿರ್ಯಾದಿದಾರರಾದ ಶ್ರೀಮತಿ ಸರಸು (45), ಗಂಡ: ದಿ. ಮಂಜುನಾಥ, ವಾಸ: ತೊಟ್ಲಗುರಿ, ಶಿರ್ವ ಗ್ರಾಮ, ಕಾಪು ತಾಲೂಕು, ಉಡುಪಿ  ಜಿಲ್ಲೆ ಇವರ ನೆರೆಕರೆಯ  ವಾಸಿ ರಾಜು (45) ಇವರು ವಿಪರೀತವಾಗಿ  ಕುಡಿಯುವ  ಚಟವನ್ನು   ಹೊಂದಿದ್ದು, ದಿನಾಂಕ  05/02/2023 ರಂದು  ಮಧ್ಯಾಹ್ನ  1:00  ಗಂಟೆಗೆ  ವಿಪರೀತವಾಗಿ ಕುಡಿದುಕೊಂಡು  ಮನೆಯಲ್ಲಿದ್ದವನು ಶಿರ್ವ ಗ್ರಾಮದ  ತೊಟ್ಲಗುರಿ  ಎಂಬಲ್ಲಿರುವ  ಸ್ಟ್ಯಾನಿ ರವರಿಗೆ  ಸಂಬಂಧಿಸಿದ ಖಾಸಗಿ  ಬಾವಿಗೆ  ಹಾರಿದ್ದು, ನಂತರ  ಪಿರ್ಯಾದಿದಾರರು  ನೆರೆಕರೆಯವರಿಗೆ  ತಿಳಿಸಿ  ಅವರ  ಸಹಾಯದಿಂದ  ಆತನನ್ನು ಬಾವಿಯಿಂದ  ಮೇಲಕ್ಕೆತ್ತಲೂ  ಪ್ರಯತ್ನಿಸಿದರೂ   ಆತನು  ಬಾವಿಯ ನೀರಿನಿಂದ ಮೇಲೆ  ಬಾರದೆ ನೀರಿನ  ಆಳದಲ್ಲಿ  ಮುಳುಗಿರುತ್ತಾನೆ.    ನಂತರ  ಈಜು ತಜ್ಞರು  ಬಾವಿಯಲ್ಲಿ ಮುಳುಗಿದ  ರಾಜು ರವರನ್ನು ಮಧ್ಯಾಹ್ನ 3:30 ಗಂಟೆಗೆ ಮೇಲಕ್ಕೆತ್ತಿ ನೋಡಲಾಗಿ ಯಾವುದೇ ಪ್ರತಿಕ್ರಿಯೆ ನೀಡಿರುವುದಿಲ್ಲ. ರಾಜು ವಿಪರೀತವಾಗಿ  ಕುಡಿಯುತ್ತಿದ್ದು,  ಯಾವುದೋ ಕಾರಣಕ್ಕೆ  ಜೀವನದಲ್ಲಿ  ಜಿಗುಪ್ಸೆಗೊಂಡು  ದಿನಾಂಕ 05/02/2023 ರಂದು   ಮಧ್ಯಾಹ್ನ  1:00  ಗಂಟೆ ಸುಮಾರಿಗೆ  ಶಿರ್ವ ಗ್ರಾಮದ ತೊಟ್ಲಗುರಿ ಎಂಬಲ್ಲಿರುವ  ಸ್ಟ್ಯಾನಿ  ರವರಿಗೆ  ಸಂಬಂಧಿಸಿದ ಖಾಸಗಿ ಬಾವಿಗೆ  ಹಾರಿ  ಆತ್ಮಹತ್ಯೆ  ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಶಿರ್ವಾ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 01/2023  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಮುಹಮ್ಮದ್ ಇರ್ಫಾನ್ (31), ತಂದೆ ಅಬ್ದುಲ್ ಖಾದಿರ್, ವಾಸ: ಮನೆ ಸೀಮಾ ಮಂಜಿಲ್,ಕಂಡಲ್ಕೆ, ಕೌಡೂರು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 03/02/2023  ರಂದು ಬೆಳಿಗ್ಗೆ ಕಡ್ತಲ ಎಂಬಲ್ಲಿಗೆ ಜಾತ್ರೆಯಲ್ಲಿ ವ್ಯಾಪಾರ ಮಾಡಲು ಹೋಗಿದ್ದು , ಅವರ  ಹೆಂಡತಿ ದಿನಾಂಕ 04/02/2023 ರಂದು ಬೆಳಿಗ್ಗೆ 08:00 ಗಂಟೆಗೆ ಬೈಲೂರು ಎಂಬಲ್ಲಿರುವ  ಅವರ ತಾಯಿ ಮನೆಗೆ  ಹೋಗಿದ್ದು ಆ ಸಮಯದಲ್ಲಿ ಯಾರೋ ಕಳ್ಳರು ಮನೆಯ  ಮುಂದಿನ ಬಾಗಿಲನ್ನು ಯಾವುದೋ ಸಾಧನದಿಂದ ಬಲಪ್ರಯೋಗಿಸಿ ಮುರಿದು ಒಳಪ್ರವೇಶಿಸಿ ಒಳಗೆ ಬೆಡ್‌ರೂಮಿನಲ್ಲಿದ್ದ ಸ್ಟೀಲ್‌ನ  ಕಾಣಿಕೆ  ಡಬ್ಬಿಯ ಬೀಗವನ್ನು ಮುರಿದು ಅದರಲ್ಲಿದ್ದ ನಗದು  ರೂಪಾಯಿ 4000/-  ಹಾಗೂ  ಇನ್ನೊಂದು ಬೆಡ್ ರೂಮಿನ ಒಳಗೆ  ಅಲ್ಮೆರಾದ ಲಾಕರ್‌ನ  ಬೀಗವನ್ನು ಮುರಿದು ಒಳಗೆ ಇದ್ದ (1) 5 ಪವನ್‌ನ ಚಿನ್ನದ ಕರಿಮಣಿ ಸರ-1, (2) 6 ಪವನ್ ತೂಕದ ಚಿನ್ನದ ಗಿಡ್ಡ ನೆ್ಕಲೆಸ್-1,(3) 2 ಪವನ್ ತೂಕದ ಚಿನ್ನದ ಬಳೆ-2,(4) 4ಪವನ್ ತೂಕದ ಚಿನ್ನದ ಬ್ರಾಸ್‌ಲೆಟ್-1,(5) 5 ಪವನ್  ತೂಕದ ಚಿನ್ನದ ಉದ್ದ ನೆಕ್‌ಲೆಸ್-1,(6) 1 ಪವನ್ ತೂಕದ ಮಗುವಿನ ಚಿನ್ನದ ಚೈನ್-1 , (7) 1ಪವನ್ ತೂಕದ  ಮಗುವಿನ ಚಿನ್ನದ ಕರಿಮಣಿ ಬಳೆಗಳು-2,(8) 1 ಪವನ್ ತೂಕದ  ಚಿನ್ನದ  ಉಂಗುರ-3, (9) 1 ಪವನ್ ತೂಕದ ಮಗುವಿನ ಚಿನ್ನದ ಬ್ರಾಸ್‌ಲೆಟ್-1, ಇವುಗಳನ್ನು ಕಳವು ಮಾಡಿಕೊಂಡು  ಹೋಗಿದ್ದು ಕಳವಾದ ಚಿನ್ನಾಭರಗಳ ಒಟ್ಟು ಮೌಲ್ಯ ನಗದು ಸೇರಿ ರೂಪಾಯಿ 6,28,000/ ಆಗಿರುತ್ತದೆ . ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2023 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಕೊಲೆ ಪ್ರಕರಣ

  • ಕಾಪು: ದಿನಾಂಕ 04/02/2023 ರಂದು ಪಿರ್ಯಾದಿದಾರರಾದ ಚಂದ್ರಹಾಸ ಶೆಟ್ಟಿ (57), ತಂದೆ : ದಿ. ದಾಬ ಶೆಟ್ಟಿ, ವಾಸ : ಗಿರಿಜ ಸದನ, ಮಂಡೇಡಿ ಇನ್ನಂಜೆ ಅಂಚೆ  ಮತ್ತು ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ಊರಿನ ಬಬ್ಬುಸ್ವಾಮಿ ಪರಿವಾರ ದೈವದ ನೇಮೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ಕಾರ್ಯಕ್ರಮವು  ದಿನಾಂಕ 05/02/2023 ರಂದು ಮುಂದುವರೆದಿದ್ದು, ನೇಮೋತ್ಸವದ ಕಾರ್ಯಕ್ರಮದಲ್ಲಿ ಪಿರ್ಯಾದಿದಾರರು ಭಾಗಿಯಾಗಿ ಸಂಜೆ 4:45 ಗಂಟೆಗೆ ಹೆಂಡತಿಯೊಂದಿಗೆ ಮನೆಗೆ ಹೊರಟು ಹೋಗಿರುತ್ತಾರೆ. ಸಂಜೆ 5:15 ಗಂಟೆಗೆ ಪಿರ್ಯಾದಿದಾರರಿಗೆ ಪರಿಚಯದ ರಾಜೇಶರವರು ಪಿರ್ಯಾದಿದಾರರ ಮೊಬೈಲ್‌ಗೆ ಕರೆ ಮಾಡಿ ನಿಮ್ಮ ಹೆಂಡತಿ ತಮ್ಮ ಶರತಗೆ ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ ಮಂಗಳೂರು ರಸ್ತೆಯ ಸಮೀಪವಿರುವ ವಿಶ್ವಕರ್ಮ ವುಡ್‌ಕರ್ಮಿಂಗ್‌ವರ್ಕ್ ಅಂಗಡಿ ಬಳಿ ಯಾರೋ ಅಪರಿಚಿತರು ಸಂಜೆ ಸಮಯ 5:00 ಗಂಟೆಗೆ ಚೂರಿಯಿಂದ ತಿವಿದು ಹೋಗಿದ್ದು ದೈವಸ್ಥಾನದಲ್ಲಿದ್ದ ನನಗೆ ಮಾಹಿತಿ ಬಂದಿದ್ದು ನಾನು ಸುಧೀರ ಎಂಬುವವರ ಕಾರಿನಲ್ಲಿ ಶರತನನ್ನು ಕುಳ್ಳಿರಿಸಿಕೊಂಡು ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದು ಕೂಡಲೇ ಬರುವಂತೆ ತಿಳಿಸಿದಂತೆ ಪಿರ್ಯಾದಿದಾರರು ಅವರ ಪರಿಚಯದ ಪ್ರಶಾಂತರವರೊಂದಿಗೆ ಹೊರಟು ಉಡುಪಿ ಆದರ್ಶ ಆಸ್ಪತ್ರೆಗೆ ಬಂದಿದ್ದು, ಆಸ್ಪತ್ರೆಯಲ್ಲಿ  ನೋಡಲಾಗಿ ಪಿರ್ಯಾದಿದಾರರ  ಭಾವ ಶರತ ಶೆಟ್ಟಿರವರು ದಾರಿ ಮಧ್ಯದಲ್ಲಿ ಮೃತ ಪಟ್ಟಿರುವುದಾಗಿ ವೈದ್ಯರು ತಿಳಿಸಿರುತ್ತಾರೆ.  ಪಿರ್ಯಾದಿದಾರರು ಶರತ ದೇಹವನ್ನು ನೋಡಲಾಗಿ ಎದೆಗೆ ಎಡಭಾಗಕ್ಕೆ ಚೂರಿಯಿಂದ ತಾಗಿದ ಗಾಯ ಹಾಗೂ ಬಲಕೈಯ ಹೆಬ್ಬೆರಳ ಹಿಂಭಾಗದಲ್ಲಿ ಚೂರಿ ಇರಿತದಿಂದ ಉಂಟಾದ ಗಾಯ ಕಂಡು ಬಂದಿದ್ದು, ಆತನ ದೇಹ ಸಂಪೂರ್ಣ ರಕ್ತದಿಂದ ತೊಯ್ದು ಹೋಗಿರುತ್ತದೆ.   ಶರತನು ಬಿಳಿ ಬಣ್ಣದ ಕಪ್ಪು ಹೂವುಗಳ ಚಿತ್ರವಿರುವ ತುಂಬು ತೋಳಿನ ಅಂಗಿ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸುತ್ತಾನೆ. ಈ ಶರ್ಟ್‌ ಹಾಗೂ ಪ್ಯಾಂಟ್‌ ರಕ್ತದಿಂದ ತುಂಬಿರುತ್ತದೆ. ಈ ಕೊಲೆಯು ಯಾವುದೇ ಪೂರ್ವದ್ವೇಷದಿಂದ ಮಾಡಿರುವ ಸಾಧ್ಯತೆ ಇರುವುದಾಗಿ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 16/2023 ಕಲಂ: 302 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಬೈಂದೂರು: ದಿನಾಂಕ 04/02/2023 ರಂದು ನಿರಂಜನ ಗೌಡ ಬಿ ಎ̧ಸ್̧  ಪೊಲೀಸ್ ಉಪ ನಿರೀಕ್ಷಕ̧ರು  ಬೈಂದೂರು ಪೊಲೀಸ್ ಠಾಣೆ ಇವರು ರೌಂಡ್ಸ್ ಕರ್ತವ್ಯದಲ್ಲಿರುವಾಗ ಯಡ್ತರೆ ಗ್ರಾಮದ ಹಡಿನ್ ಗದ್ದೆ ಕ್ರಾಸ್ ಹತ್ತಿರ ಹಿಂಬದಿಯ ಹಾಡಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟು ಜುಗಾರಿ ಆಟ ನಡೆಯುತ್ತಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ  ದಾಳಿ ನಡೆಸಿ ಇಸ್ಪೀಟು ಆಟವಾಡುತ್ತಿದ್ದ 1] ಶ್ರೀಧರ ಜಟ್ಟಪ್ಪ ನಾಯ್ಕ ಪ್ರಾಯ 38  ವರ್ಷ, ತಂದೆ:  ಜಟ್ಟಪ್ಪ, ವಾಸ; ಕರಿನಮನೆ, ಸರ್ಪನಕಟ್ಟೆಬಳಿ, ಎಲ್ಲೋಡಿ ಕೌರ್ ಗ್ರಾಮ, ಭಟ್ಕಳ ತಾಲೂಕು ಉ.ಕ ಜಿಲ್ಲೆ , 2]ಮಂಗಳಿ ಸಣ್ಣುಗೊಂಡ ಪ್ರಾಯ: 54 ವರ್ಷ ತಂದೆ: ಸಣ್ಣು ಮಾಸ್ತಿಗೊಂಡ , ವಾಸ; ತಲಾಂದ್ ಹೊಸ್ಮನೆ, ಮುಟ್ಟಳ್ಳಿ ಗ್ರಾಮ, ಭಟ್ಕಳ ತಾಲೂಕು, ,3] ಗಣಪತಿ ಪೂಜಾರಿ ಪ್ರಾಯ: 34 ವರ್ಷ ತಂದೆ: ನಾರಾಯಣ ಪೂಜಾರಿ ವಾಸ:ಅಯ್ಯನಮನೆ, ತೂದಳ್ಳಿ, ಯಡ್ತರೆ ಗ್ರಾಮ, ಬೈಂದೂರು ತಾಲೂಕು , 4] ನಾಗೇಶ್ ತಿಮ್ಮಯ್ಯ ನಾಯ್ಕ ಪ್ರಾಯ 29 ವರ್ಷ ತಂದೆ: ತಿಮ್ಮಯ್ಯ  ನಾಯ್ಕ ವಾಸ: ಮದ್ಗರ್ ಮನೆ, ಬೆಳ್ಕೆ, ಭಟ್ಕಳ ತಾಲೂಕು ಉ.ಕ ಜಿಲ್ಲೆ, 5]  ಮಂಜುನಾಥ ಗಣಪತಿ ನಾಯ್ಕ ಪ್ರಾಯ: 48 ವರ್ಷ ತಂದೆ: ಗಣಪತಿ ನಾಯ್ಕ  ವಾಸ: ಮಾರುತಿನಗರ, ಭಟ್ಕಳ ತಾಲೂಕು ಉ.ಕ ಜಿಲ್ಲೆಇವರನ್ನು  ಸುತ್ತುವರೆದು ಹಿಡಿದುಕೊಂಡಿದ್ದು 05 ಜನ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು ಆಟಕ್ಕೆ ಬಳಸಿದ ಹಳೆಯ ನ್ಯೂಸ್‌ಪೇಪರ್‌, ಇಸ್ಪಿಟ್‌ಕಾರ್ಡ್-52, ಹಾಗೂ  8,950/- ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡಿದ್ದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 23/2023 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 06-02-2023 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080