ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾರ್ಕಳ: ದಿನಾಂಕ 02/02/2023 ರಂದು ಮಧ್ಯಾಹ್ನ 1:30 ಗಂಟೆಗೆ ಕಾರ್ಕಳ ತಾಲೂಕು, ನಿಟ್ಟೆ ಗ್ರಾಮದ ಹಾಳೆ ಕಟ್ಟೆ ಜಂಕ್ಷನ್‌‌ಸಮೀಪ ಹಾದು ಕಾರ್ಕಳ-ಪಡುಬಿದ್ರಿ ರಾಜ್ಯ ಹೆದ್ದಾರಿಯಲ್ಲಿ ಪಿರ್ಯಾದಿದಾರರಾದ ರಾಮು ನಾಯ್ಕ್ (60) ತಂದೆ: ದಿ/ ಸಿದ್ದಪ್ಪ ವಾಸ: ಪುನಾರ್ ಶಾಲೆಯ ಬಳಿ ಬೆಳ್ಮಣ್ ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಉಡುಪಿ ಇವರು ತಮ್ಮ ಮಾರುತಿ ಓಮ್ನಿ ಕಾರು ನಂಬ್ರ KA-19 MD-7906 ನೇಯದನ್ನು ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ, ಹಾಳೆಕಟ್ಟೆ ಜಂಕ್ಷನ್ ನಿಂದ ಸ್ವಲ್ಪ ಮುಂದಕ್ಕೆ ರಾಜ್ಯ ಹೆದ್ದಾರಿ ಮೇಲೆ ಹಾಕಿರುವ ಹಂಪ್ಸ್ ಮೇಲೆ ನಿಧಾನವಾಗಿ ಚಲಾಯಿಸಿಕೊಂಡು ಹೋಗುವಾಗ, ಬೊಗ್ಗು ಎಂಬವರು ದ್ವಿಚಕ್ರ ವಾಹನ KA-20 HA-2314 ನೇಯದನ್ನು ಹಾಳೆ ಕಟ್ಟೆ ಜಂಕ್ಷನ್ ಕಡೆಯಿಂದ ನಿಟ್ಟೆ ಕಡೆಗೆ ಅತಿವೇಗ ಹಾಗೂ ಅನಿರ್ಲಕ್ಷತನದಿಂದ ಸವಾರಿ ಮಾಡಿಕೊಂಡು ಬಂದು ಮಾರುತಿ ಓಮ್ನಿ ಕಾರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರನ ತಲೆಯ ಹಿಂಭಾಗಕ್ಕೆ ಮತ್ತು ಬಲಕಾಲಿಗೆ ಗಾಯವಾಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 15/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಫುರ: ದಿನಾಂಕ 05/02/2023 ಸಂಜೆ ಸುಮಾರು 06:30 ಗಂಟೆಗೆ ಕುಂದಾಪುರ  ತಾಲೂಕಿನ, ತಲ್ಲೂರು  ಗ್ರಾಮದ ತಲ್ಲೂರು  ಜಂಕ್ಷನ್‌ಬಳಿ  ಎನ್‌. ಹೆಚ್‌66 ರಸ್ತೆಯಲ್ಲಿ, ಆಪಾದಿತ ಸುಹೇಲ್‌ಎಸ್‌ ಎಂಬವರು KL-36-C-6741 ನೇ ಲಾರಿಯನ್ನು ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ಹೋಗಿ, ಲಾರಿಯನ್ನು ರಸ್ತೆಯ ಬಲಬದಿಯಿಂದ ರಸ್ತೆ ಎಡಬದಿಗೆ ಚಲಾಯಿಸಿ ಒಮ್ಮೇಲೆ ಬ್ರೇಕ್‌‌ಹಾಕಿ ನಿಲ್ಲಿಸಿದ ಪರಿಣಾಮ,  ಸದ್ರಿ ಲಾರಿಯ ಹಿಂಭಾಗದಲ್ಲಿ ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ರವಿ @ ರವೀಂದ್ರ (52) ತಂದೆ ನಾಗಪ್ಪ ಪೂಜಾರಿ ವಾಸ: ಸುಲ್ಸೆ ರಸ್ತೆ, ಕಟ್‌‌ಬೇಲ್ತೂರು ಗ್ರಾಮ, ಕುಂದಾಪುರ ತಾಲೂಕು ಎಂಬವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20-EJ-5267 Yamaha Alpha ಸ್ಕೂಟರ್‌, ಲಾರಿಯ ಹಿಂಬದಿಗೆ ತಾಗಿ  ಅಪಘಾತಕ್ಕೆ ಒಳಗಾಗಿ, ಇವರ ಬಲಭುಜ, ಬಲಎದೆಗೆ ಹಾಗೂ ಕೆನ್ನಗೆ ಒಳನೋವಾದ ಗಾಯವಾಗಿ  ಕುಂದಾಪುರ ಆದರ್ಸ ಆಸ್ಪತ್ರೆಯಲ್ಲಿ  ಚಿಕಿತ್ಸೆ ಬಗ್ಗೆ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 14/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ನಾಗರಾಜ ನಾಯ್ಕ(49)  ತಂದೆ: ರಾಮ ನಾಯ್ಕ  ವಾಸ: ಮಾರಿಕಟ್ಟೆ  ಕೊಲ್ಲೂರು ಗ್ರಾಮ  ಬೈಂದೂರು ಇವರು  ಅವರ ಹೆಂಡತಿ ಶಾಂತ ಜೂತೆಯಲ್ಲಿ ದಿನಾಂಕ 05/02/2023 ರಂದು ಹಾಲಾಡಿಯಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ರಮ ಮುಗಿಸಿ ತಮ್ಮ KA-20 EU-0396 ಮೋಟಾರು ಸೈಕಲ್‌ನಲ್ಲಿ  ಶಾಂತ ರವರನ್ನು ಹಿಂಬದಿ ಕುಳ್ಳಿರಿಸಿಕೊಂಡು ಹಾಲಾಡಿಯಿಂದ  ಕೊಲ್ಲೂರು ಕಡೆಗೆ ಕುಂದಾಪುರ - ಕೊಲ್ಲೂರು  ರಾಜ್ಯ ಹೆದ್ದಾರಿಯಲ್ಲಿ ಚಲಾಯಿಸಿಕೊಂಡು ಹೋಗುತ್ತಿದಾಗ ಬೈಂದೂರು ತಾಲೂಕು  ಜಡ್ಕಲ್‌ಗ್ರಾಮದ  ಹಾಲ್ಕಲ್‌ಜಂಕ್ಷನ್‌ ಸಮೀಪ  ತಲುಪಿದಾಗ  ಎದುರಿನಿಂದ  ಹಾಲ್ಕಲ್‌ಜಂಕ್ಷನ್‌ ಕಡೆಯಿಂದ  ಜಡ್ಕಲ್‌ಕಡೆಗೆ  KA-53  HD-2976 ನೇ ಮೋಟಾರು ಸೈಕಲ್‌ನ್ನು  ಅದರ  ಸವಾರ ಆರೋಪಿ ನಾಗರಾಜ ಶೆಟ್ಟಿ ವೇಗವಾಗಿ ದುಡುಕಿನಿಂದ ತೀರ ಬಲಬದಿಗೆ  ಚಲಾಯಿಸಿ ನಾಗರಾಜ ನಾಯ್ಕ ಇವರ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ನಾಗರಾಜ ನಾಯ್ಕ ರವರು ಮೋಟಾರು ಸೈಕಲ್‌ಸಮೇತ ರಸ್ತೆಗೆ ಬಿದ್ದ ಪರಿಣಾಮ  ನಾಗರಾಜ ನಾಯ್ಕ ರವರಿಗೆ  ಎಡಕಾಲಿನ ಪಾದದ  ಗಂಟಿನ ಬಳಿ  ಒಳ ಜಖುಂ  ನೋವು ಉಂಟಾಗಿರುತ್ತದೆ. ಮತ್ತು ನಾಗರಾಜ ನಾಯ್ಕ ರವರ ಮೋಟಾರು ಸೈಕಲ್‌ನಲ್ಲಿ  ಹಿಂಬದಿ  ಸಹ ಸವಾರರಾದ  ಶಾಂತರವರಿಗೆ ಎಡ ಕೈಗೆ ನೋವು ಉಂಟಾಗಿರುತ್ತದೆ. ನಾಗರಾಜ ನಾಯ್ಕ ರವರು  ಕುಂದಾಪುರ ಆದರ್ಶ ಆಸ್ಪತ್ರೆ ಯಲ್ಲಿ ಒಳ ರೋಗಿಯಾಗಿ ಚಿಕಿತ್ಸೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 04/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾಧ ಯಶೋಧ, (55) ಗಂಡ: ಶಿವರಾಮ ಶೆಟ್ಟಿ, ವಾಸ ಯಶೋಧ ನಿವಾಸ, ಯರ್ಲಪಾಡಿ ಗ್ರಾಮ, ಕಾಂತರಗೋಳಿ, ಕಾರ್ಕಳ ತಾಲೂಕು, ಉಡುಪಿ ಇವರ ತಮ್ಮ ಗುಣಶೀಲ ಶೆಟ್ಟಿ(45) ಎಂಬುವರು ಕಾಪು ತಾಲೂಕು ನಡ್ಸಾಲು ಗ್ರಾಮದ ಪಡುಬಿದ್ರಿಯ ಶ್ರೀದೇವಿ ಹೋಟೆಲ್‌ನಲ್ಲಿ ಕಳೆದ 6-7 ವರ್ಷಗಳಿಂದ ಅಡುಗೆ ಕೆಲಸ ಮಾಡಿಕೊಂಡಿದ್ದು, ಪಡುಬಿದ್ರಿಯ ಅಬ್ಬೇಡಿ ರಸ್ತೆಯಲ್ಲಿ ಹರೀಶ್ ಎಂಬುವರ ಮನೆಯಲ್ಲಿ ಬಾಡಿಗೆಗೆ ವಾಸವಾಗಿರುತ್ತಾರೆ. ಅವರು ಮೂಲವ್ಯಾಧಿ ಮತ್ತು ಕಾಲುನೋವಿನಿಂದ ಬಳಲುತ್ತಿದ್ದು, ಆರೋಗ್ಯ ಸರಿ ಇಲ್ಲದ ಕಾರಣ ಜೀವನಲದಲ್ಲಿ ಜಿಗುಪ್ಸೆಗೊಂಡು ದಿನಾಂಕ 04/02/2023 ರಂದು 08:00 ಗಂಟೆಯಿಂದ ದಿನಾಂಕ 06/02/2023 ರ ಬೆಳಿಗ್ಗೆ 07:30 ಗಂಟೆಯ ಮಧ್ಯಾವಧಿಯಲ್ಲಿ ಅವರ ಬಾಡಿಗೆಯ ಮನೆಯ ತಾರಸಿಯ ಕೊಕ್ಕೆಗೆ ನೈಲಾನ್ ಹಗ್ಗವನ್ನು ಕಟ್ಟಿ, ಇನ್ನೊಂದು ತುದಿಯಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದು, ಸದ್ರಿಯವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 02/2023, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ರಾಜೇಶ್‌ ಶ್ರೀಯಾನ್‌ (40) ತಂದೆ : ಕೃಷ್ಣಪ್ಪ ಸಾಲ್ಯನ್‌ ವಾಸ : ಕೃಪಾಕ್ಷ  ಪಡುಕೆರೆ ಉದ್ಯಾವರ ಗ್ರಾಮ, ಉಡುಪಿ ತಾಲೂಕು ಇವರು  ದಿನಾಂಕ 06/02/2023 ರಂದು ಮನೆಯಲ್ಲಿರುವ ಸಮಯ 10:45 ಗಂಟೆ ಸುಮಾರಿಗೆ  ಉದ್ಯಾವರ ಕಡೇತೋಟದ ನಿವಾಸಿಯಾದ ಜಗದೀಶ್‌ ಪುತ್ರನ್‌ ಎಂಬವರು ರಾಜೇಶ್‌ ಶ್ರೀಯಾನ್‌ ರವರಿಗೆ  ಕರೆ ಮಾಡಿ  ಕಡೇತೋಟದಲ್ಲಿರುವ ವಾರಿಜಾನ್‌  ಲ್ಯಾಂಡ್ಸ್‌ ಎಂಡ್‌  ಸಮೀಪ  ಪಾಪನಾಶೀನಿ ನದಿಯಲ್ಲಿ ಒಬ್ಬ ಅಪರಿಚಿತನ ಮೃತದೇಹ ತೇಲುತ್ತಿರುವುದಾಗಿ  ತಿಳಿಸಿದಂತೆ ರಾಜೇಶ್‌ ಶ್ರೀಯಾನ್‌ ರವರು ಸ್ಥಳಕ್ಕೆ ಹೋಗಿ ನೋಡಲಾಗಿ  ಅಪರಿಚಿತ ಗಂಡಸಿನ ಮೃತ ದೇಹವು ನದಿಯಲ್ಲಿ ತೇಲುತ್ತಿರುವುದು ಕಂಡು ಬಂದಿರುತ್ತದೆ. ಸದ್ರಿ ಮೃತ ದೇಹವನ್ನು ಸ್ಥಳೀಯರ ಸಹಾಯದಿಂದ ನೀರಿನಿಂದ ಮೇಲೆ ಎತ್ತಿ ನೋಡಲಾಗಿ ಸುಮಾರು 40-45 ವಷ೯ ಪ್ರಾಯದ ಗಂಡಸಿನ ಮೃತದೇಹವಾಗಿದ್ದು ಸದ್ರಿ ಮೃತದೇಹವು ಸುಮಾರು 3-4 ದಿನದ ಹಿಂದೆ ನೀರಿಗೆ ಬಿದ್ದು ಮೃತಪಟ್ಟಂತೆ ಕಂಡು ಬಂದಿರುತ್ತದೆ. ಮೃತ ದೇಹದ ಮೈಮೇಲೆ ಕಂದು ಬಣ್ಣದ ಟಿ ಶಟ೯ ಮತ್ತು  ಮಿಲಿಟರಿ ಯೂನಿಪಾಮ೯ ಬಣ್ಣದ ಬಮು೯ಡಾ  ಚೆಡ್ಡಿ ಹಾಕಿರುವುದು ಕಂಡು ಬಂದಿರುತ್ತದೆ.  ಮೃತರು ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರುವ ಸಾಧ್ಯತೆ ಇದ್ದು, ಮೃತರ ಮೈ ಮೇಲಿನ ಚಮ೯ವು   ಅಲ್ಲಲ್ಲಿ ಕಿತ್ತು ಬಂದಂತಿದ್ದು,  ಅಲ್ಲಲ್ಲಿ ರಕ್ತ ಸ್ರಾವ ಆಗಿರುತ್ತದೆ.  ಸದ್ರಿ ಮೃತ ದೇಹದ ವಾರೀಸುದಾರರ ಬಗ್ಗೆ ಯಾವುದೇ ಮಾಹಿತಿ ದೊರೆಯದೇ ಇರುವುದಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 02/2023, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ: ಪಿರ್ಯಾದಿದಾರರಾಧ ಜೀವನ್ ಶೆಟ್ಟಿ (54) ತಂದೆ: ದಿ|| ಶ್ಯಾಮ ಶೆಟ್ಟಿ ವಾಸ: ಶ್ರೀ ಸಾಯಿಕೃಪಾ, ಶ್ರಿ ಸಾಯಿ ಸರ್ವಿಸ್ ಸೆಂಟರ್  ಬಳಿ ಕುಕ್ಕೆಹಳ್ಳಿ  ಗ್ರಾಮ  ಉಡುಪಿ ಇವರ  ಹೆಂಡತಿ ಜ್ಯೋತಿ  ಶೆಟ್ಟಿ (42) ರವರು ಆರೋಗ್ಯವಂತರಾಗಿದ್ದು, ದಿನಾಂಕ 04/02/2023 ರಂದು ಜ್ವರ ಹಾಗೂ ತಲೆನೋವು ಇದ್ದು, ಈ ಬಗ್ಗೆ ಸೂಕ್ತ ಚಿಕಿತ್ಸೆಯನ್ನು ಮಾಡಿದ್ದು, ದಿನಾಂಕ 05/02/2023 ರಂದು ರಾತ್ರಿ ಊಟ ಮಾಡಿ ಮಲಗಿದವರು ಅವರ ಗಂಡ ಬೆಳಗಿನ ಜಾವ 04:30 ಗಂಟೆಗೆ ಎದ್ದು ನೋಡಲಾಗಿ ಮೃತರು ಹಾಸಿಗೆಯಲ್ಲಿ ಇಲ್ಲದೆ ಇದ್ದು, ಸ್ನಾನ ಗೃಹಕ್ಕೆ ಹೋಗಿ ನೋಡಲಾಗಿ ಅಲ್ಲಿಅಂಗಾತನೆ ಬಿದ್ದಿದ್ದು, ಪರಿಶಿಲಿಸಲಾಗಿ ಮಾತನಾಡದೇ ಇದ್ದು, ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದಲ್ಲಿ ಪರೀಕ್ಷಿಸಿದ ವೈದ್ಯರು ಬೆಳಗ್ಗೆ 05:40 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿದ್ದು, ಮೃತರು ದಿನಾಂಕ 05/02/2023  ರ ರಾತ್ರಿ 10:00 ಗಂಟೆಯಿಂದ ದಿನಾಂಕ 06/02/2023 ರ ಬೆಳಗ್ಗೆ 05:40 ಗಂಟೆಯ ಮಧ್ಯಾವಧಿಯಲ್ಲಿ ಹಾಸಿಗೆಯಿಂದ ಎದ್ದವರು ಸ್ನಾನಗೃಹಕ್ಕೆ ಮೂತ್ರ ವಿಸರ್ಜನೆಗೆಂದು ಹೋದವರು ಅಲ್ಲಿ ತಲೆ ತಿರುಗಿ  ಅಥವಾ ಆಯಾ ತಪ್ಪಿ ಬಿದ್ದು ಮೃತ ಪಟ್ಟಿರಬಹುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 06/2023, ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

  • ಕುಂದಾಫುರ: ದಿನಾಂಕ 05/02/2023 ರಂದು ಪಿರ್ಯಾದಿದಾರರಾದ ಪ್ರಸಾದ್ ಕುಮಾರ್  ಕೆ  ಪಿ.ಎಸ್.ಐ (ತನಿಖೆ)ರವರು ರೌಂಡ್ಸ್  ಕರ್ತವ್ಯದಲ್ಲಿರುವಾಗ  ಕುಂದಾಪುರ ತಾಲೂಕು ವಡೇರಹೋಬಳಿ  ಗ್ರಾಮದ  ಟಿ.ಟಿ.ರೋಡ್‌  ಎಂಬಲ್ಲಿ ನೀರು ಟ್ಯಾಂಕ್‌ ಬಳಿ ಸಾರ್ವಜನಿಕ  ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ಕುಂದಾಪುರ ಪೊಲೀಸ್‌ ಠಾಣಾ  ಪೊಲೀಸ್‌  ನಿರೀಕ್ಷಕರು ನಂದಕುಮಾರ್‌ ಯು.ಬಿ  ರವರಿಗೆ ದೊರೆತ ಖಚಿತ ಮಾಹಿತಿಯಂತೆ ದಾಳಿ ನಡೆಸಲು ಆದೇಶ  ನೀಡಿದಂತೆ ಇವರು ಸಿಬ್ಬಂದಿಯವರಾದ ಪಿಸಿ 2545 ನೇ ಅಶ್ವಿನ್, ಪಿ.ಸಿ. 26 ಮಾರುತಿ  ಪಿ.ಸಿ. 145 ಗಣೇಶ ಇವರೊಂದಿಗೆ ಇಲಾಖಾ ವಾಹನ ನಂಬ್ರ KA-20 G-253 ನೇದರಲ್ಲಿ ಠಾಣೆಯಿಂದ 18:00  ಗಂಟೆಗೆ ಹೊರಟು 18:30 ಗಂಟೆಗೆ ಕುಂದಾಪುರ ತಾಲೂಕು ವಡೇರಹೋಬಳಿ ಗ್ರಾಮದ ಟಿ.ಟಿ.ರೋಡ್‌  ನೀರು ಟ್ಯಾಂಕ್‌  ಬಳಿ ತಲುಪಿ ಜೀಪನ್ನು ಮರೆಯಲ್ಲಿ ನಿಲ್ಲಿಸಿ ಅಲ್ಲಿಂದ ನಡೆದುಕೊಂಡು ಹೋಗಿ ಮರೆಯಲ್ಲಿ ನಿಂತು ನೋಡಲಾಗಿ ಸಾರ್ವಜನಿಕ ಸ್ಥಳದಲ್ಲಿ ಜನರು ಕುಳಿತುಕೊಂಡಿದ್ದು ಅವರಲ್ಲಿ ಓರ್ವ ವ್ಯಕ್ತಿಯು ಇಸ್ಪೀಟ್ ಎಲೆಗಳನ್ನು ಹಿಡಿದುಕೊಂಡು ಅದೃಷ್ಟದ ಒಂದು ಎಲೆಯನ್ನು  ಪೇಪರಿನ ಒಂದು ಬದಿಯಲ್ಲಿ ಹಾಕಿ ಸದ್ರಿ ವ್ಯಕ್ತಿಯು ಒಳಗೆ ಹೊರಗೆ ಎಂದು ಹೇಳುತ್ತಾ ತನ್ನ ಕೈಯಲ್ಲಿದ್ದ ಇಸ್ಪೀಟ್ ಎಲೆಗಳನ್ನು ಹೊರಗಡೆ ಮತ್ತು ಒಳಗಡೆ ಹಾಕುತ್ತಿದ್ದು, ಉಳಿದವರು ತಮ್ಮ ಕೈಯಲ್ಲಿ ಹಣವನ್ನು ಹಿಡಿದುಕೊಂಡು ಒಳಗೆ- ಹೊರಗೆ ಎಂದು ಹೇಳುತ್ತಾ ಹಣವನ್ನು ಪೇಪರಿನ ಮೇಲೆ ಹಾಕಿ ಅಂದರ್ ಬಾಹರ್ ಎಂಬ ಇಸ್ಪೀಟ್ ಆಟ ಆಡುತ್ತಾ  ಹಣವನ್ನು ಪಣವಾಗಿಟ್ಟು ಜೂಜಾಟ ಆಡುತ್ತಿರುವುದನ್ನು  ಖಚಿತಪಡಿಸಿಕೊಂಡು ಪಂಚರನ್ನು ಬರಮಾಡಿಕೊಂಡು 18:45 ಗಂಟೆಗೆ ಸದ್ರಿ ಸ್ಥಳಕ್ಕೆ ದಾಳಿ ಮಾಡಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದ 2 ಜನರನ್ನು ಸಿಬ್ಬಂದಿಗಳ  ಸಹಾಯದಿಂದ  ಹಿಡಿದುಕೊಂಡು ಅವರ ಹೆಸರು ವಿಳಾಸ ವಿಚಾರಿಸಿ ಅವರುಗಳು ತಾವು ಇಸ್ಪೀಟ್ ಜುಗಾರಿ  ಆಟದಲ್ಲಿ ಹಣವನ್ನು ಪಣವಾಗಿಟ್ಟು ಜೂಜಾಟ ಆಟ ಆಡುತ್ತಿದ್ದುದಾಗಿ ಒಪ್ಪಿಕೊಂಡಿದ್ದ ರಿಂದ ಅವರನ್ನು ವಶಕ್ಕೆ ಪಡೆದು  ಆರೋಪಿತರು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ  1) ಹಳೆಯ ದಿನಪತ್ರಿಕೆ-1,  2) ಡೈಮಾನ್,ಆಟಿನ್,ಇಸ್ಪೀಟ್ ಕಳವಾರ್ ಚಿತ್ರಗಳಿರುವ 52 ಇಸ್ಪೀಟ್ ಎಲೆಗಳು 3) ನಗದು ರೂ 6,460/-  ಇವುಗಳನ್ನು ಸ್ವಾಧೀನಪಡಿಸಿಕೊಂಡು ವರದಿ ನೀಡಿದಂತೆ ಠಾಣೆಯಲ್ಲಿ ಎನ್ ಸಿ ನಂಬ್ರ: 46/ptn/2023 ರಂತೆ ಸ್ವೀಕರಿಸಿ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 14/2023  ಕಲಂ:  87 KP ACT   ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ: ಪಿರ್ಯಾದಿದಾರರಾಧ ಮನ್ಸೂರ್ ಇಬ್ರಾಹಿಮ್, (46)  ತಂದೆ: ಇಬ್ರಾಹಿಮ್ ಸಾಹೇಬ್ , ಆನಿಷಾ ಮಂಜಿಲ್, ಮರವಂತೆ ಗ್ರಾಮ, ಬೈಂದೂರು ತಾಲ್ಲೂಕು ಇವರು ಕಳೆದ ಎರಡು ವರ್ಷಗಳ ಹಿಂದೆ ಬೈಂದೂರು ತಾಲ್ಲೂಕು ಮರವಂತೆ ಗ್ರಾಮದ ಮರವಂತೆ ಎಂಬಲ್ಲಿ ಮನ್ಸೂರ್ ಇಬ್ರಾಹಿಮ್ ರವರ ಮನೆಗೆ ಆಪಾದಿತ ಅಬ್ಬಾಸ್ ಬಡಾಕೆರೆ ಎಂಬವನು ತನ್ನ ಸ್ನೇಹಿತರಾದ ನಾವುಂದದ ಸುಲೈಮಾನ್ , ಗುಲ್ವಾಡಿಯ ಉಬೈದುಲ್ಲಾ ಎಂಬವರೊಂದಿಗೆ ಮನೆಗೆ ಬಂದಿರುತ್ತಾರೆ. ಇವರಲ್ಲಿ ಆಪಾದಿತರು ವಿವಾಹ ಕಾರ್ಯಕ್ರಮಕ್ಕೆ ಹೋಗಲು ಮನ್ಸೂರ್ ಇಬ್ರಾಹಿಮ್ ರವರ ಹೆಂಡತಿ ಮಕ್ಕಳ ಚಿನ್ನಾಭರಣ ಕೇಳಿರುತ್ತಾರೆ. ಸದ್ರಿ ಚಿನ್ನವನ್ನು ಒಂದು ದಿನದ ಕಾರ್ಯಕ್ರಮವನ್ನು ಮುಗಿಸಿ ನೀಡುವುದಾಗಿ ನಂಬಿಸಿರುತ್ತಾರೆ. ಮನ್ಸೂರ್ ಇಬ್ರಾಹಿಮ್ ರವರು ಅವರ ಮಾತನ್ನು ನಂಬಿ ತನ್ನ ಹೆಂಡತಿಯ ಮೂರು ನೆಕ್ಲೆಸ್ ಗಳು, ಮಕ್ಕಳ ಬ್ರಾಸ್ಲೆಟ್ , ಸೊಂಟದ ಚೈನ್, ಬಳೆ, ಮತ್ತೊಂದು ಚೈನ್ ಒಟ್ಟು ಸುಮಾರು 12 ಪವನ್ ಚಿನ್ನಾಭರಣ ಅಂದಾಜು ಮೌಲ್ಯ4,50,000/-   ಗಳನ್ನು  ನೀಡಿರುತ್ತಾರೆ. ತದ ನಂತರ ನಿಗಧಿತ ಸಮಯದಲ್ಲಿ ಚಿನ್ನದ ಒಡವೆಗಳನ್ನು ಹಿಂತಿರುಗಿಸದೇ ಇದ್ದು ಈ ಬಗ್ಗೆ  ವಿಚಾರಿಸಿದಾಗ ಚಿನ್ನಾಭರಣಗಳನ್ನು ವಿವಿಧ ಹಣಕಾಸು ಸಂಸ್ಥೆಯಲ್ಲಿಅಡವಿಟ್ಟಿರುವುದಾಗಿಯೂ ಒಂದು ತಿಂಗಳಿನಲ್ಲಿ ಬಿಡಿಸಿಕೊಡುವುದಾಗಿ ನಂಬಿಸಿರುತ್ತಾರೆ. ಅದರಂತೆ ಹಿಂತಿರುಗಿಸದೇ ಇದ್ದು ಪುನಃ ವಿಚಾರಿಸಿದಾಗ ಚಿನ್ನಾಭರಣ ಬಿಡಿಸಲು ನಾಲ್ಕು ಲಕ್ಷ ರೂಪಾಯಿ ಹಣದ ಬೇಡಿಕೆ ಇಟ್ಟಿದ್ದು ಚಿನ್ನಾಭರಣವನ್ನು ಬಿಡಿಸಿ ಆರು ತಿಂಗಳಲ್ಲಿ ಒಟ್ಟಿಗೆ ನೀಡುವುದಾಗಿ ನಂಬಿಸಿ ನಾಲ್ಕು ಲಕ್ಷ ಹಣವನ್ನು ಪಡೆದುಕೊಂಡಿರುತ್ತಾರೆ. ಆಪಾದಿತರು ಮನ್ಸೂರ್ ಇಬ್ರಾಹಿಮ್ ರವರಿಗೆ ನಂಬಿಸಿ ವಂಚಿಸುವ ಉದ್ದೇಶದಿಂದ ಚಿನ್ನಾಭರಣ ಮತ್ತು ಹಣವನ್ನು ಮೋಸ ಮಾಡಿ ಪಡೆದುಕೊಂಡು ಹಿಂತಿರುಗಿಸದೇ ನಂಬಿಸಿ ಮೋಸ  ಮಾಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 15/2023 ಕಲಂ: 406, 417, 420, 34   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-02-2023 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080