ಅಭಿಪ್ರಾಯ / ಸಲಹೆಗಳು

 

ಅಫಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ  05/02/2022 ರಂದು ಪಿರ್ಯಾದಿ ಮೌನೇಶ್ ಆಚಾರ್ಯ ಇವರು ಅವರ ಬಾಬ್ತು KA.20.EP.9197 ನೇ ಮೋಟಾರ್‌ ಸೈಕಲ್‌ನ್ನು ಸವಾರಿ ಮಾಡಿಕೊಂಡು ಉಡುಪಿ ಕಡೆಯಿಂದ ಬ್ರಹ್ಮಾವರಕ್ಕೆ ರಾ.ಹೆ 66 ರಲ್ಲಿ ಹೊರಟು ಮಧ್ಯಾಹ್ನ ಸುಮಾರು 1:45 ಗಂಟೆಗೆ ಹೇರೂರು ಗ್ರಾಮದ, ಬ್ರಹ್ಮಾವರ ದೂಪದ ಕಟ್ಟೆ ಬಳಿ ತಲುಪಿದಾಗ ರಾಹೆ 66 ರ ಪಶ್ಚಿಮ ದಿಕ್ಕಿನಲ್ಲಿ ರಸ್ತೆಯ ಬದಿಯಲ್ಲಿ ಆರೋಪಿಯು ನಿಲ್ಲಿಸಿದ್ದ KA.20.AA.4237 ನೇ ನಂಬ್ರದ ಏಸ್‌ ಗೂಡ್ಸ್ ಟೆಂಪೋ ವನ್ನು ಆರೋಪಿಯು ಯಾವುದೇ ಮುನ್ಸೂಚನೆ ನೀಡದೇ ನಿರ್ಲಕ್ಷತನದಿಂದ ಒಮ್ಮೇಲೆ ರಾಷ್ಟ್ರೀಯ ಹೆದ್ದಾರಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದಿರುವುದಾಗಿದೆ. ಸದ್ರಿ ಅಪಘಾತದ ಪರಿಣಾಮ ಪಿರ್ಯಾದಿದಾರರು ಮೋಟಾರ್‌ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಅವರ ಎಡಕಾಲು ಮೊಣಗಂಟಿನ ಬಳಿ ಹಾಗೂ ಸೊಂಟಕ್ಕೆ ತೀವ್ರ ತರಹದ ಒಳ ಜಖಂ ಹಾಗೂ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 20/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಬ್ರಹ್ಮಾವರ : ಪಿರ್ಯಾದಿ ಮಂಜುನಾಥ ಇವರು ದಿನಾಂಕ 04/02/2022 ರಂದು ರಾತ್ರಿ ಸಾಸ್ತಾನ ದಲ್ಲಿ ಮದುವೆಯ ಮೆಹಂದಿ ಕಾರ್ಯಕ್ರಮ ಮುಗಿಸಿ ಅವರ ಜೊತೆ ಕೆಲಸ ಮಾಡುವ ಆರೋಪಿ ಸಂದೀಪನ ಬಾಪ್ತು KA.14.ED.1026 ನೇ ನಂಬ್ರದ  ಮೋಟಾರ್‌ ಸೈಕಲ್‌ನಲ್ಲಿ ಸಹ ಸವಾರನಾಗಿ ಕುಳಿತು ಸಾಸ್ತಾನದಿಂದ ವಾಪಾಸ್ಸು ಸಂತೆಕಟ್ಟೆಯಲ್ಲಿರುವ ಅವರ ಮನೆಗೆ ಹೊರಟು ರಾ.ಹೆ 66 ರಲ್ಲಿ ಬರುತ್ತಾ ದಿನಾಂಕ 05/02/2022 ರಂದು ಬೆಳಿಗ್ಗೆ 00:30 ಗಂಟೆಗೆ ವಾರಂಬಳ್ಳಿ ಗ್ರಾಮದ ಆಕಾಶವಾಣಿ ಜಂಕ್ಷನ್‌ ನಿಂದ ಫ್ಲೈ ಓವರ್‌ ಮೇಲೆ ಬರುತ್ತಿರುವಾಗ ಆರೋಪಿಯು ಮೋಟಾರ್‌ ಸೈಕಲ್ಲನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಹೋಗಿ ಎದುರಿನಲ್ಲಿ ಹೋಗುತ್ತಿದ್ದ ಒಂದು ಲಾರಿಯ ತೀರಾ ಸಮೀಪಕ್ಕೆ ಹೋಗಿ ಒಮ್ಮೆಲೇ ಬ್ರೇಕ್‌ ಹಾಕಿದಾಗ ಮೋಟಾರ್‌ ಸೈಕಲ್‌ ಆತನ ನಿಯಂತ್ರಣ ತಪ್ಪಿ ಸ್ಕಿಡ್‌ ಆಗಿ ಬಿದ್ದು ಮೋಟಾರ್‌ ಸೈಕಲ್‌ ಸಮೇತ್‌ ಫ್ಲೈ ಓವರ್‌ನ ತಡೆಗೋಡೆಗೆ ವರೆಸಿಕೊಂಡು ಹೋಗಿ ಬಿದ್ದಿರುತ್ತದೆ. ಸದ್ರಿ ಅಫಘಾತದಿಂದ ಫಿರ್ಯಾದಿದಾರರ ಮುಖದ ಬಲ ಬದಿ ತೀವೃ ಸ್ವರೂಪದ ರಕ್ತಗಾಯವಾಗಿದ್ದು ಆರೋಪಿಯ ತಲೆಗೆ ಹಾಗೂ ಎಡ ಮತ್ತು ಬಲ ಭುಜಕ್ಕೆ ಒಳ ಜಖಂ ಆಗಿರುತ್ತದೆ. ಗಾಯಗೊಂಡ ಬಗ್ಗೆ ಪಿರ್ಯಾದಿದಾರರನ್ನು ಹಾಗೂ ಆರೋಪಿಯನ್ನು ಕೆಎಮ್‌ಸಿ ಆಸ್ಪತ್ರೆ ಮಣಿಪಾಲಕ್ಕೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 21/2022 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಕಾಪು: ದಿನಾಂಕ 05-02-2022 ರಂದು ಪಿಕ್‌‌ಅಪ್‌ ವಾಹನ ನಂಬ್ರ  ಕೆ.ಎ. 51 ಎ.ಬಿ. 8391 ನೇದರ ಚಾಲಕ ಅಬುಬಕ್ಕರ್‌ ರವರ ಎಡಬದಿ ಸೀಟಿನಲ್ಲಿ ಪಿರ್ಯಾದಿ ಕಬೀರ್ ಚಂದ್ ದ್ರುವೆ ಅಲಿಯಾಸ್ ಸೋನು ದ್ರುವೆ ಇವರು ಕುಳಿತುಕೊಂಡು ಮಂಗಳೂರು ಉಡುಪಿ ರಾ ಹೆ 66 ರಲ್ಲಿ  ಕಟಪಾಡಿ ಕಡೆಯಿಂದ ಉಡುಪಿ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿರುವಾಗ ಕಟಪಾಡಿ ಪೇಟೆಗೆ ಹೋಗುವ ರಸ್ತೆಯ ಬಳಿ ತಲುಪುತ್ತಿದ್ದಂತೆ, ಸಮಯ ಅಪರಾಹ್ನ 3.20 ಗಂಟೆಯ ಸುಮಾರಿಗೆ ಪಿಕ್‌ಅಪ್‌ ಚಾಲಕ ಅಬುಬಕ್ಕರ್ ರವರು ಅತೀ ವೇಗ ಹಾಗೂ ಅಜಾಗರೂತೆಯಿಂದ ರಸ್ತೆಯ ತೀರಾ ಎಡಬದಿಗೆ ಹೋಗಿ ನಂತರ ಬಲಬದಿಗೆ ಬಂದ ಪರಿಣಾಮ  ಪಿಕ್‌ಅಪ್ ವಾಹನ ಮುಗುಚಿ ಬಿದ್ದು ಪಿರ್ಯಾದಿದಾರರಿಗೆ ಎಡಕೈಗೆ ತೀವೃ ತರದ ರಕ್ತಗಾಯವಾಗಿದ್ದು, ಕೂಡಲೇ ಪಿಕ್‌ಅಪ್ ವಾಹನದ ಚಾಲಕ ಚಿಕಿತ್ಸೆಯ ಬಗ್ಗೆ ಅಂಬುಲೇನ್ಸ್ ನಲ್ಲಿ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಚಿಕಿತ್ಸೆ ನೀಡಿ ಕಳುಹಿಸಿತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 11/2022 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 05/02/2022 ರಂದು ಪಿರ್ಯಾದಿ ಹರೀಶ ಮರಾಠಿ ತನ್ನ ತಂಗಿ  ಹರ್ಷಿದಾ @ ಹರ್ಷಿತಾ ಎಂಬುವರೊಂದಿಗೆ ಉಡುಪಿ ರಾಜಾಂಗಣ ಪಾರ್ಕ್ ಬಳಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 1:30 ಗಂಟೆಗೆ ಕಲ್ಸಂಕ ಕಡೆಯಿಂದ ಕೃಷ್ಣ ಮಠದ ಕಡೆಗೆ  KA 20 D 3987 ನೇ ಕಾರಿನ ಚಾಲಕ ಕೆವೀನ್ ರಾಜ್ ಕಿಶೋರ್ ಡಿಸೋಜ ಎಂಬಾತ ತನ್ನ ಕಾರನ್ನು ಚಲಾಯಿಸಿಕೊಂಡು ಬಂದು ರಾಜಾಂಗಣ ಪಾರ್ಕ್ ಬಳಿ ಇರುವ ಸರ್ಕಲ್ ನಲ್ಲಿ ದುಡುಕುತನ ಮತ್ತು ನಿರ್ಲಕ್ಷತನದಿಂದ ತೀರಾ ಎಡ ಬದಿಗೆ ಚಲಾಯಿಸಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ತಂಗಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಎಸೆಯಲ್ಪಟ್ಟು ತಲೆಗೆ ಗಂಭಿರ ಸ್ವರೂಪದ ಗಾಯವಾಗಿ ಆದರ್ಶ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 13/2022 ಕಲಂ 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    .

ಇತರ ಪ್ರಕರಣ

  • ಉಡುಪಿ: ಪಿರ್ಯಾದಿ ಶ್ರೀಮತಿ ಚಾಂದಿನಿ ಇವರು 1 ನೇ ಆರೋಪಿತ ಮಹಮ್ಮದ್ ಯೂನಿಸ್ ನನ್ನು ದಿನಾಂಕ:08/05/2011 ರಂದು ಉಡುಪಿ ಮಣಿಪಾಲದ ವೆಸ್ಟರ್ನ್ ಕಂಟ್ರಿ ಕ್ಲಬ್ ಶುಭೋದಯ ಸಭಾ ಭವನದಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದು, ಅವರ ದಾಂಪತ್ಯ ಜೀವನದಲ್ಲಿ 4 ವರ್ಷದ ಹೆಣ್ಣು ಮಗು ಇರುತ್ತದೆ. ಮದುವೆ ಸಮಯದಲ್ಲಿ 1 ನೇ ಆಪಾದಿತನು ಪಿರ್ಯಾದುದಾರರ ತಂದೆಯವರಿಂದ ಒತ್ತಾಯ ಪೂರ್ವಕವಾಗಿ 40 ಪವನ್‌ ಚಿನ್ನವನ್ನು ವರದಕ್ಷಿಣೆ ರೂಪದಲ್ಲಿ ಪಡೆದುಕೊಂಡಿದ್ದು, ನಂತರದ ದಿನಗಳಲ್ಲಿ 1ನೇ ಆಪಾದಿತನು ಪಿರ್ಯಾದುದಾರರನ್ನು ಸ್ವಲ್ಪ ಸಮಯ ಚೆನ್ನಾಗಿ ನೋಡಿಕೊಂಡು ತದನಂತರ ಅನಾವಶ್ಯಕವಾಗಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದುದಲ್ಲದೆ ಪಿರ್ಯಾದುದಾರರ ಶೀಲದ ಬಗ್ಗೆ ಅನುಮಾನ ವ್ಯಕ್ತಪಡಿಸಿ ಕಿರುಕುಳ ನೀಡುತ್ತಿದ್ದು,  ಆಪಾದಿತ  1.ಮಹಮ್ಮದ್ ಯೂನಿಸ್ 2.ಸುಲೈಮಾನ್3.ಉಬೇದ್ 4. ಫರ್ ಜಾನ 5. ನೇಹಾ6.ಸಬೀನಾ ಬಾನು7.ಜುಬೇದಾ ಬಾನು ಇವರುಗಳು ಸೇರಿ ಮದುವೆ ವೇಳೆ ನೀಡಿದ ವರದಕ್ಷಣೆ ಹಣ ಕಡಿಮೆಯಾಯಿತೆಂದು ಇನ್ನೂ ಹೆಚ್ಚಿನ 5 ಲಕ್ಷ ರೂ ವರದಕ್ಷಿಣೆ ಹಣ ತರಬೇಕೆಂದು ಆಗಾಗ್ಗೆ ಮಾನಸಿಕ ಹಿಂಸೆ ನೀಡಿ 1 ನೇ ಆರೋಪಿಯು ವರದಕ್ಷಿಣೆ ಹಣ ನೀಡದಿದ್ದಲ್ಲಿ ಪೋನ್ ಮೂಲಕ ತಲಾಖ್ ನೀಡುವುದಾಗಿ ಹೇಳಿದ್ದು, ದಿನಾಂಕ:11/01/2021 ರಂದು ವಿದೇಶದಿಂದ ಊರಿಗೆ ಬಂದಿದ್ದು ಪಿರ್ಯಾದಿದಾರ ಹಾಗೂ ಮಗುವಿನ ಹತ್ತಿರ ಮಾತಾನಾಡದೇ , ಹಣವನ್ನು ನೀಡದೇ  ಮಾನಸಿಕ ಹಿಂಸೆ ನೀಡಿರುತ್ತಾರೆ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 13/2022 ಕಲಂ:498(ಎ), 149 ಐಪಿಸಿ ಮತ್ತು ಕಲಂ:3,4 ಡಿ.ಪಿ.ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ :  ಈ ಪ್ರಕರಣದ ಸಂಕ್ಷಿಪ್ತ ಸಾರಾಂಶವೇನೆಂದರೆ ಫಿರ್ಯಾದಿ ವಿ. ಗೋಪಾಲ ಇವರು 2003 ರಲ್ಲಿ RNI Certificate ಹೊಂದಿ ಅಧಿಕೃತವಾಗಿ ಬೆಂಗಳೂರಿನಿಂದ ಪ್ರಕಟವಾಗುವ ಹಾಯ್‌ ಕರಾವಳಿ ಎನ್ನುವ ಕನ್ನಡ ಪಾಕ್ಷಿಕ ಪತ್ರಿಕೆಯ ಮಾಲಿಕ/ ಪ್ರಕಾಶಕ/ ಮುದ್ರಕ/ ಸಂಪಾದಕರಾಗಿರುತ್ತಾರೆ. ಫಿರ್ಯಾದುದಾರರು ಯಾರೊಂದಿಗೂ ಪ್ರಕಾಶನ/ ಸಂಪಾದಕ/ ಮುದ್ರಕ/ ಮಾಲಕತ್ವಕ್ಕೆ ಯಾವುದೇ ಒಪ್ಪಿಗೆ ಮಾಡಿಕೊಂಡಿರುವುದಿಲ್ಲ. ಇತ್ತೀಚೆಗೆ ಅಮ್ಮಾರವಿ ಎಂಬಾತನು ನಕಲಿ ದಾಖಲೆಗಳನ್ನು ಸೃಷ್ಠಿಸಿ ಕಂದಾಯ ಇಲಾಖೆ ಹಾಗೂ ಪೊಲೀಸ್‌ ಇಲಾಖೆ ಮತ್ತು ಇನ್ನಿತರ ಇಲಾಖೆಗಳಿಗೆ ತಪ್ಪು ಹಾಗೂ ಸುಳ್ಳು ದಾಖಲಾತಿಗಳನ್ನು ನೀಡಿ ಸದ್ರಿ ಪತ್ರಿಕೆಯನ್ನು ಮೋಸದಿಂದ ಪ್ರಕಟಿಸಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ PDF ಮೂಲಕ ಪ್ರಕಟಿಸಿದ್ದೂ ಅಲ್ಲದೇ ಹಾಯ್‌ ಕರಾವಳಿ ಎಂಬ ಯೂಟ್ಯೂಬ್‌ ಹಾಗೂ ನ್ಯೂಸ್‌ ವೆಬ್‌ಸೈಟ್‌ ಅನ್ನು ಅಭಿವೃದ್ದಿಪಡಿಸಿ ಪತ್ರಿಕೆಯನ್ನು ದುರುಪಯೋಗಪಡಿಸಿಕೊಂಡಿದ್ದು ಹಾಗೂ ಫಿರ್ಯಾದುದಾರರ ಸಂಪಾದಕೀಯದಲ್ಲಿರುವ ಹಾಯ್‌ ಕರಾವಳಿ ಪತ್ರಿಕೆಯ ಮುಖಪುಟದ ಕ್ಯಾಲೆಂಡರ್‌ ಅನ್ನು ಕೂಡಾ ಪ್ರಕಟಿಸಿ ಅದರಲ್ಲಿ ಅಮ್ಮಾರವಿ ಎನ್ನುವ ಫೋಟೋ ಹಾಕಿ ಅದರ ಕೆಳಗಡೆ ಸಂಪಾದಕ ಹಾಯ್‌ ಕರಾವಳಿ ಎಂದು ಪ್ರಕಟಿಸಿರುತ್ತಾರೆ ಹಾಗೂ ಈ ಬಾರಿಯ ಉಡುಪಿ ಪರ್ಯಾಯ ನಿಮಿತ್ತ ಶ್ರೀಕೃಷ್ಣ ಮಠ ವಿಶೇಷಾಂಕ 2022 ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ಅದರಲ್ಲಿಯೂ ಸಂಪಾದಕ ಅಮ್ಮಾರವಿ ಎಂಬುದಾಗಿ ನಮೂದಿಸಿದ್ದು, ಆದರೆ ಅದರಲ್ಲಿ RNI ನಂಬರ್‌ ಆಗಲೀ ಅಥವಾ ಅದಕ್ಕೆ ಸಂಬಂಧಪಟ್ಟ ಡಿಕ್ಲರೇಷನ್‌ ಆಗಲೀ ಮುದ್ರಿಸದೇ ಸುಮಾರು 10 ಲಕ್ಷಕ್ಕೂ ಅನಧಿಕೃತವಾದ ಜಾಹೀರಾತು ಪ್ರಕಟ ಮಾಡಿ ತನ್ನ ಸ್ವಂತ ಲಾಭಕ್ಕಾಗಿ ಫಿರ್ಯಾದುದಾರರಿಗೆ ವಂಚಿಸುವ ಉದ್ದೇಶದಿಂದ ಮೋಸ ಮಾಡಿರುತ್ತಾರೆ ಎಂಬಿತ್ಯಾದಿ. ಈ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 08/2022 ಕಲಂ: 420, 465, 471 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 06-02-2022 10:37 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080