ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾಪು: ಪಿರ್ಯಾದಿದಾರರಾದ ಲತಾ ಬಂಗೇರಾ(31), ಗಂಡ : ಚೇತನ ಪಡುಬಿದ್ರಿ, ವಾಸ : ಗಂಗಾ ನಿವಾಸ ಆರ್ಯಾಡಿ ಪಾಂಗಾಳ ಗ್ರಾಮ ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ಮಾವ ರಾಜು ಪೂಜಾರಿ(64) ರವರು ದಿನಾಂಕ 05/02/2022 ರಂದು ರಾತ್ರಿ 8.45 ಗಂಟೆಯ ಸಮಯಕ್ಕೆ ಮೂಡಬೆಟ್ಟು ಗ್ರಾಮದ ಹೆಚ್.ಎಸ್.ಎಮ್. ಸ್ಟೀಲ್ ಫರ್ನಿಚರ್ ಬಳಿ ಮಂಗಳೂರು ಉಡುಪಿ ರಾ ಹೆ 66 ರ ಪಶ್ಚಿಮ ಬದಿಯ ಮಣ್ಣು ರಸ್ತೆಯಲ್ಲಿ ಪಾಂಗಾಳ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ ಅದೇ ರಸ್ತೆಯಲ್ಲಿ ಮಂಗಳೂರು ಉಡುಪಿ ರಾ ಹೆ 66 ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಯಾವುದೋ ವಾಹನದ ಚಾಲಕ ತನ್ನ ವಾಹನವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ತೀರಾ ಪಶ್ಚಿಮ ಬದಿಗೆ ಚಲಾಯಿಸಿಕೊಂಡು ಬಂದು, ಪಿರ್ಯಾದಿದಾರರ ಮಾವ ರಾಜು ಪೂಜಾರಿರವರಿಗೆ ಢಿಕ್ಕಿ ಹೊಡೆದು ವಾಹನ ನಿಲ್ಲಿಸದೇ ಪರಾರಿ ಯಾಗಿರುವುದಾಗಿದ್ದು, ಪರಿಣಾಮ ರಾಜು ಪೂಜಾರಿ ರವರು ಕೆಳಗೆ ಬಿದ್ದು ತೀವೃ ಗಾಯಗೊಂಡಿದ್ದು, ಚಿಕಿತ್ಸೆಯ ಬಗ್ಗೆ ಉಡುಪಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ರಾತ್ರಿ 10.00 ಗಂಟೆಗೆ ಪರೀಕ್ಷಿಸಿದ ಅಲ್ಲಿನ ವೈದ್ಯರು ಮೃತ ಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 12/2022 ಕಲಂ: 279, 304(ಎ) ಐಪಿಸಿ & ಕಲಂ: 134(ಎ & ಬಿ) ಐ.ಎಮ್.ವಿ. ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ದಿನಾಂಕ 05/02/2022 ರಂದು ಸಂಜೆ 7:20 ಗಂಟೆಗೆ ಪಿರ್ಯಾದಿದಾರರಾದ ಶ್ರೀಮತಿ ಭವ್ಯ (30), ಗಂಡ: ಪ್ರವೀಣ್‌ ಭಂಡಾರಿ ವಾಸ; ಶ್ರಿ ದೇವಿ ನಿಲಯ, ಹೈಪಾಲ್‌, ಮುಡಾರು ಗ್ರಾಮ, ಬಜಗೊಳಿ ಅಂಚೆಃ, ಕಾರ್ಕಳ ತಾಲೂಕು ಇವರು ತನ್ನ ತಮ್ಮ ನರಸಿಂಹ ರವರೊಂದಿಗೆ KA-20-EV- 8170 ನಂಬ್ರದ ಬೈಕ್‌ ನಲ್ಲಿ ಮನೆಯಿಂದ ಹೊರಟು ತನ್ನ ಗೆಳತಿ ಅಶ್ವಿನಿಯವರ ಮನೆ ನಲ್ಲೂರಿಗೆ ಊಟಕ್ಕೆ ಹೋಗುತ್ತ ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ನಲ್ಲೂರು ಸರ್ಕಲ್‌ ಬಳಿ ತಲುಪುವಾಗ ಸಂಜೆ 7:30 ಗಂಟೆಗೆ ಎದುರಿನಿಂದ ಒಮ್ಮೆಲೆ ಬಂದ ವಾಹನ ಕಂಡು ಬೈಕ್‌ಗೆ ಬ್ರೇಕ್‌ ಹೊಡೆದ ಪರಿಣಾಮ ತಾನು ರಸ್ತೆಗೆ ಬಿದ್ದು ಎಡಕಾಲಿನ ಮಣಿಗಂಟಿಗೆ ಒಳ ಜಖಂ ಆಗಿದ್ದು ಕೂಡಲೇ ಆತನು ಒಂದು ಅಟೋದಲ್ಲಿ ಪಿರ್ಯಾದಿದಾರರನ್ನು ತಂದು ನಿಟ್ಟೆ ಗಜ್ರಿಯಾ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡುತ್ತಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2022ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ರಾಜು ಅಂಚನ್‌ (51) ,ತಂದೆ: ದಾಬು ಪೂಜಾರಿ ,ವಾಸ: ಶ್ರೀ ಲಕ್ಷ್ಮಿ ಜನಾರ್ಧನ, ಮೂಡುಬೆಟ್ಟುಅಂಚೆ, ಕಲ್ಯಾಣಪುರ, ಉಡುಪಿ ಇವರ ಹೆಂಡತಿ ವಿದ್ಯಾಕುಂದರ್ ರವರ ಮಾಲೀಕತ್ವದಲ್ಲಿದ್ದ TVS JUPITER BS IV ಸ್ಕೂಟರ್‌ ನಂಬ್ರ: KA-20-EP-2096 (Chassis No: MD626EG4XH1E15986, Engine No: EG4EH1879411) . ದಿನಾಂಕ: 05/02/2022 ರಂದು ಬೆಳಿಗ್ಗೆ 09:30 ಗಂಟೆಗೆ ಪಿರ್ಯಾದಿದಾರರು ಎಂದಿನಂತೆ ಮಾನ್ಯ ನ್ಯಾಯಾಲಯ ಕರ್ತವ್ಯಕ್ಕೆ ಹೋಗಿದ್ದು, ತನ್ನ ಸ್ಕೂಟರ್‌ ನ್ನು ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ್ದು, ಸಂಜೆ 06:10 ಗಂಟೆಗೆ ಕರ್ತವ್ಯ ಮುಗಿಸಿ ವಾಪಾಸು ಬಂದು ನೋಡಿದಾಗ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ ತನ್ನ ಸ್ಕೂಟರ್‌ ಇಲ್ಲದೇ ಇದ್ದು, ಪಿರ್ಯಾದಿದಾರರು ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಿದ ಸ್ಕೂಟರ್‌ನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಎಲ್ಲಾ ಕಡೆ ಹುಡುಕಿದಲ್ಲಿ ಪತ್ತೆಯಾಗದೇ ಇದ್ದು, ಕಳವಾದ ಸ್ಕೂಟರ್‌ನ ಅಂದಾಜು ಮೌಲ್ಯ ರೂಪಾಯಿ 35,000/- ಆಗಿರುತ್ತದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 21/2022, ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 06-02-2022 07:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080