ಅಭಿಪ್ರಾಯ / ಸಲಹೆಗಳು

ಗಂಡಸು ಕಾಣೆ ಪ್ರಕರಣ

  • ಬ್ರಹ್ಮಾವರ: ಪೆಜಮಂಗೂರು ಗ್ರಾಮದ, ಕೊಕ್ಕರ್ಣೆ ಗಾಂಧಿನಗರದಲ್ಲಿರುವ ಡಿ.ಆರ್.ಎಸ್ ಕಂಪೆನಿಯಲ್ಲಿ ಗುಲಬರ್ಗಾ ಜಿಲ್ಲೆಯ ನಿವಾಸಿಗಳಾದ  ಪಿರ್ಯಾದಿದಾರರಾದ ಪಂಡಿತರಾಯ ಮರಾಠ (38), ತಂದೆ: ಲಕ್ಷ್ಮಣ, ವಾಸ: ಮುದ್ದಡಗಾ, ಕಮಲಾಪುರ ತಾಲೂಕು, ಗುಲಬರ್ಗಾ ಇವರು ಹಾಗೂ ಅವರ ಜೋತೆ  ರೇವಣ ಸಿದ್ದಪ್ಪಾ, ಸುನೀಲ, ಸತೀಶ, ಸ್ವಾಮಿ ಹಾಗೂ ಇತರರು ಕೂಲಿ ಕೆಲಸ ಮಾಡಿಕೊಂಡಿದ್ದು, ಅಲ್ಲಿಯೇ ಶೆಡ್ಡಿನಲ್ಲಿ ವಾಸವಾಗಿರುವುದಾಗಿದೆ. ಅವರಲ್ಲಿ ರೇವಣ ಸಿದ್ದಪ್ಪ (40) ಎಂಬವರು ವಿಪರೀತ ಮದ್ಯಪಾನ ಮಾಡುವ ಚಟಹೊಂದಿದ್ದು, ಅವರು ದಿನಾಂಕ 02/02/2021 ರಂದು ವಿಪರೀತ ಮದ್ಯಪಾನ ಮಾಡಿಕೊಂಡು ನಾನು ಇಲ್ಲಿ ಕೆಲಸ ಮಾಡುವುದಿಲ್ಲ, ನಮ್ಮ ಊರಿಗೆ ಹೋಗುತ್ತೇನೆ ಎಂದು ಹೇಳಿ ಅವರ ಬಟ್ಟೆಯನ್ನು ಪ್ಯಾಕ್‌ ಮಾಡಿಕೊಂಡು ಮಧ್ಯಾಹ್ನ 2:00 ಗಂಟೆ ಸುಮಾರಿಗೆ ಕೊಕ್ಕರ್ಣೆ ಬಸ್ಸ್ ನಿಲ್ದಾಣದ ಕಡೆಗೆ ಹೋದವರು ಊರಿಗೂ ಹೋಗದೇ, ಸಂಬಂಧಿಕರ ಮನೆಗೂ ಹೋಗದೇ ಪುನಃ ಕೆಲಸಕ್ಕೂ ಬಾರದೇ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 17/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಗಂಗೊಳ್ಳಿ: ಮರವಂತೆ ಗ್ರಾಮದ ಸರ್ವೆ ನಂಬ್ರ 207/1 ರಲ್ಲಿ 0.73 ಎಕ್ರೆ ಮತ್ತು ಇತರೆ ಸ್ಥಳಗಳನ್ನು ಪಿರ್ಯಾದಿದಾರರಾಧ ನಾಗ ಪೂಜಾರಿ (69) ತಾಯಿ: ದಿ ಲಿಂಗಿ ಯಾನೆ ನಾಗಿ, ವಾಸ: ಮಕ್ಕಿಮನೆ, ಮರವಂತೆ ಗ್ರಾಮ, ಬೈಂದೂರು ಇವರ ಮಾವ ಪಂಜು ಪೂಜಾರಿ ಯವರು ಅಳಿಯ ಸಂತಾನ ಕುಟುಂಬದ ಹಿರಿಯನಾಗಿ ಖರೀದಿ ಮಾಡಿಕೊಂಡಿರುತ್ತಾರೆ. ಪಂಜು ಪೂಜಾರಿ ಯವರು ದಿನಾಂಕ 03/09/1985 ರಂದು ಮೃತಪಟ್ಟಿರುತ್ತಾರೆ. ಅವರ ಕಾಲಾನಂತರ ನಾಗ ಪುಜಾರಿ ಇವರ  ತಾಯಿ ಮತ್ತು ಮಾವನ ಜಂಟಿ ಹೆಸರಿನಲ್ಲಿ ಡಿಕ್ಲರೇಷನ್ ಆದ ಸ್ಥಳ ಮತ್ತು ಮಾವನು ಖರೀದಿ ಮಾಡಿದ ಸ್ಥಳವನ್ನು ಅವರ ವಾರೀಸುದಾರರು ಆದ ಇವರ ಅಳಿಯ ಸಂತಾನ ಪದ್ದತಿಯಂತೆ ಒಟ್ಟಿಗೆ ಸ್ವಾಧೀನದಾರರಾಗಿ ಅನುಭವಿಸಿಕೊಂಡಿರುತ್ತಾರೆ. ಹೀಗಿರುವಾಗ  ನಾಗ ಪೂಜಾರಿ ರವರ ಮಾವನ ಮಗಳಾದ ಸೀತು ಇವರು ಸರ್ವೆ.ನಂಬ್ರ 207/1 ರಲ್ಲಿ 0.73 ಎಕ್ರೆ ಸ್ಥಳವನ್ನು ಬರೆದುಕೊಟ್ಟಿರುವುದಾಗಿ ಒಂದು ವೀಲುನಾಮೆ ಹಾಜರುಪಡಿಸಿಕೊಂಡು ತನ್ನ ಹೆಸರಿಗೆ ಆರ್.ಟಿ.ಸಿ ಮಾಡಿಕೊಂಡಿರುತ್ತಾರೆ. ಪಂಜು ಪೂಜಾರಿ ಇವರು ಸಹಿ ಮಾಡುತ್ತಿದ್ದು, ವೀಲುನಾಮೆಯಲ್ಲಿ ಹೆಬ್ಬೆಟ್ಟಿನ ಗುರುತು ಹಾಕಿರುತ್ತಾರೆ.  ಸೀತು ರವರು ನಕಲಿ ಸಹಿ ಮಾಡಿ, ನಕಲಿ ವೀಲುನಾಮೆ ಮಾಡಿ ಅದನ್ನು ಸತ್ಯವಾದುದೆಂದು ಬಳಸಿ ಆಸ್ತಿಯನ್ನು ಲಪಟಾಯಿಸಿ ಮೋಸ ಮಾಡಿರುತ್ತಾರೆ, ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2021 ಕಲಂ: 198, 463, 465, 467, 468 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  
  • ಉಡುಪಿ: ಪಿರ್ಯಾದಿದಾರರಾದ ಆಯಿಶಾಬಿ (47) ಗಂಡ: ಎಂ ರಝಾಕ್  ವಾಸ: ಡೋರ್ ನಂ 146/98-82(7) 2ನೇ ಅಡ್ಡ ರಸ್ತೆ, ಕಲ್ಯಾಣಪುರ, ಸಂತೆಕಟ್ಟೆ ಇವರಿಗೆ ಅರೋಪಿತ 1)ನೂರ್‌ಜಹಾನ್ (49)ಗಂಡ: ನಝೀರ್ ಅಹಮ್ಮದ್ 2) ನಝೀರ್ ಅಹಮ್ಮದ್ ಗಂಡ: ಶೇಖ್ ಅಹಮ್ಮದ್ ವಾಸ: ಪ್ಲಾಟ್ ನಂ 2 , ದಶರಥ ನಗರ ಅಪಾರ್ಟಮೆಂಟ್, ದಶರಥ ನಗರ, ಮಣಿಪಾಲ ಉಡುಪಿ ಇವರ ಪರಿಚಯವಿದ್ದು ಅರೋಪಿತರು ದಿನಾಂಕ 15/09/2018 ರಂದು ಉಡುಪಿಯ ಕುಂಜಿಬೆಟ್ಟುವಿನ ಅರ್ಚನಾ ಅರ್ಕೆಡ್ ಪ್ಲಾಟ್ ನಂ 207 ಡೋರ್ ನಂ 8-1-1ಇ1(9)ನ್ನು ಪ್ಲಾಟ್‌ನ್ನು ಅರೋಪಿತರು ಆಯಿಶಾಬಿ ಇವರಿಗೆ 3 ವರ್ಷದ ಅವಧಿಗೆ ಲೀಸ್‌ಗೆ ನೀಡದ್ದು, ಸದ್ರಿ ಕರಾರಿನಂತೆ  ಆಯಿಶಾಬಿ ರವರು  ಎಸ್‌ಬಿಐ ಮತ್ತು ಸಿಂಡಿಕೇಟ್ ಬ್ಯಾಂಕ್‌ನ ಚೆಕ್ ಮೂಲಕ ತಲಾ 2,00,000 ರೂಪಾಯಿ ಅರ್‌ಟಿಜಿಎಸ್ ಮಾಡಿರುತ್ತಾರೆ. 1,00,000 ರೂಪಾಯಿವನ್ನು ಬಾಡಿಗೆ ಕರಾರನ್ನು ಮಾಡಿಕೊಂಡಿದ್ದು ಬಾಡಿಗೆ ರೂಪದಲ್ಲಿ ನೀಡಿರುತ್ತಾರೆ. ಈ ರೀತಿಯಾಗಿ ಅರೋಪಿತರು 5,00,000 ರೂಪಾಯಿವನ್ನು  ಆಯಿಶಾಬಿ ರವರಿಂದ ಪಡೆದಿದ್ದು, ನಂತರ ಅರೋಪಿತರು  ಆಯಿಶಾಬಿ ರವರಿಗೆ ಪ್ಲಾಟ್‌‌ನ್ನು ಲೀಸ್‌ಗೆ  ನೀಡಿರುವುದಿಲ್ಲ. ಈ ಬಗ್ಗೆ ಅನೇಕ ಬಾರಿ ಕೇಳಲು ಹೋದಾಗ ಕಾರಣ ಮುಂದೂಡುತ್ತಾ ಬಂದಿದ್ದು. ನಂತರ 3 ಚೆಕ್ಕುಗಳನ್ನು ನೀಡಿದ್ದು ಚೆಕ್ ಅಮಾನ್ಯಗೊಂಡಿದ್ದು ವಿಷಯವನ್ನು ಆಯಿಶಾಬಿ ರವರು ಅರೋಪಿತರಲ್ಲಿ ವಿಚಾರಿಸಿದಾಗ ‘’ನಾವು ಹಣ  ಕೊಡುವುದಿಲ್ಲ ನೀನು ಏನು ಬೇಕಾದರು ಮಾಡಿಕೋ ನಿನ್ನೊಂದಿಗೆ ಹೇಗೆ ವ್ಯವಹರಿಸಬೇಕೆಂದು ಗೊತ್ತಿದೆ. ಇನ್ನುಮುಂದೆ ಹಣ ಕೇಳಲು ಬಂದಲ್ಲಿ ನಿನ್ನ ಕೈಕಾಲು ಕಡಿದು ಕೊಂದು ಹಾಕಿ ಬಿಡುತ್ತೇವೆ.’’ ಎಂಬುದಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿರುವುದಾಗಿದೆ. ಮಾನ್ಯ ನ್ಯಾಯಾಲಯದ ಖಾಸಗಿ ಪ್ರಕರಣದಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021 ಕಲಂ: 420,504,506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 06-02-2021 10:05 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080