ಅಭಿಪ್ರಾಯ / ಸಲಹೆಗಳು

06-02-2021 ದೈನಂದಿನ ಅಪರಾಧ ವರದಿ - ಅಪರಾಹ್ನ

 

ಅಪಘಾತ ಪ್ರಕರಣ

  • ಕೊಲ್ಲೂರು: ಪಿರ್ಯಾದಿದಾರರಾದ ಕೆ ಉಮೇಶ್(56) ತಂದೆ: ಜಿ.ಗುರು ವಾಸ: ಹಳೆ ಕೋಟೆ ಕತ್ಯಸಂದ್ರ, ರಿಂಗ್ ರೋಡ್ ಹತ್ತಿರ, ತುಮಕೂರು ಇವರು ದಿನಾಂಕ 05/02/2021 ರಂದು KA-01-MD-8711ನೇ ಕಾರಿನಲ್ಲಿ ತನ್ನ ಹೆಂಡತಿ ಗಂಗಾಂಬಿಕಾ ಮತ್ತು ಮಕ್ಕಳಾದ ರೀತು ಮತ್ತು ತಿಲಕ ಹಾಗೂ ಸಂಬಂದಿಕರಾದ ಹೇಮಲತಾ, ಅವರ ಮಕ್ಕಳಾದ ಧನ್ಯ ಮತ್ತು ರಜತ್ ರವರೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡಿ, ಸಿಗಂದೂರು ದೇವಸ್ಥಾನದಿಂದ ಕೊಲ್ಲೂರು ದೇವಸ್ಥಾನಕ್ಕೆ ಬರುತ್ತಿದ್ದಾಗ ಬೆಳಿಗ್ಗೆ 11:25 ಗಂಟೆಗೆ ಕೊಲ್ಲೂರು ಗ್ರಾಮದ ನಾಗೋಡಿ ಘಾಟಿಯ ತಿರುವಿನಲ್ಲಿ ಇವರ ಕಾರನ್ನು ಚಲಾಯಿಸುತ್ತಿದ್ದ ಚಾಲಕ ನಂದೀಶ್ ಕಾರನ್ನು ಅತೀ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿ ಎದುರಿನಿಂದ ಬರುತ್ತಿದ್ದ ವಾಹನವನ್ನು ತಪ್ಪಿಸುವ ಸಲುವಾಗಿ ತಿರುವು ರಸ್ತೆಯಲ್ಲಿ ಎಡಬದಿಗೆ ಚಲಾಯಿಸಿದ ಪರಿಣಾಮ ಕಾರು ಚಾಲಕನ ಹತೋಟಿ ತಪ್ಪಿ ರಸ್ತೆಯ ತಗ್ಗು ಪ್ರದೇಶಕ್ಕೆ ಮುಗುಚಿ ಬಿದ್ದು  ಜಖಂಗೊಂಡಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 04/2021 ಕಲಂ: 279 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾಧ ಇಂದಿರಾ (54) ಗಂಡ:ದಿ. ಸತೀಶ್ ಹವಾಲ್ದಾರ್ ವಾಸ:ಕೋಡಿ ಸರಕಾರಿ ಆಸ್ಪತ್ರೆಯ ಹಿಂಭಾಗ ಕಸಬಾ ಗ್ರಾಮ ಕುಂದಾಪುರ ಇವರ ತಂದೆ ಕೆ.ಹೆಚ್. ಕೃಷ್ಣಯ್ಯ ಶೇರಿಗಾರ್ (94) ರವರು ವಯೋಸಹಜ ಸಮಸ್ಯೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 06/02/2021 ರಂದು ಬೆಳಿಗ್ಗೆ 11:00 ಗಂಟೆಯಿಂದ ಮಧ್ಯಾಹ್ನ 01:00 ಗಂಟೆಯ ಮದ್ಯಾವಧಿಯಲ್ಲಿ ಅವರ ಮನೆಯ ಹಾಲ್‌ನ ಪಕ್ಕಾಸಿಗೆ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 07/2021 ಕಲಂ: 174 ಸಿ.ಆರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಮಲ್ಪೆ: ದಿನಾಂಕ 23/01/2021 ರಂದು ಸಂಜೆ ಸುಮಾರು 5:30 ಗಂಟೆಗೆ ಪಿರ್ಯಾದಿದಾರರಾದ ಗೋಪಾಲ ಬೆಲ್ಚಡ (65) ತಂದೆ :ದಿ ಚಂದು ಬೆಲ್ಚಡ ವಾಸ : ಭಗವತಿ ನಿಲಯ ಈಶ್ವರ ದೇವಸ್ಥಾನದ ಬಳಿ ತೆಂಕನಿಡಿಯೂರು ಗ್ರಾಮ ಉಡುಪಿರು ತನ್ನ ಮನೆಯ ಮುಖ್ಯ ಬಾಗಿಲಿಗೆ ಚಿಲಕ ಹಾಕಿ ಅಡುಗೆ ಮಾಡುತ್ತಿರುವ ಸಮಯ ನೆರೆಮನೆಯ ಮಧು ಭಟ್, ನಾಗರಾಜ್ ಗಾಣಿಗ, ಸತೀಶ್ ಗಾಣಿಗ, ಶಂಕರ ಎಂಬವರು ಗೋಪಾಲರವರ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಹೂವಿನ ಕುಂಡ ಒಡೆದು ಹಾಕಿ, ಟಿವಿಗೆ ಆಳವಡಿಸಿರುವ ಕೇಬಲ್ ವಯರ್ ಎಳೆದು ಹಾಕಿ, ಮನೆಯ ಸಿಮೆಂಟ್ ಸೀಟಿಗೆ ಕಲ್ಲು ಬಿಸಾಡಿ ಅವಾಚ್ಯ ಶಬ್ದಗಳಿಂದ ಬೈದು ಹೆಂಡತಿ ಹೋದ ಸ್ಥಳಕ್ಕೆ ನಿನ್ನನ್ನು ಕಳುಹಿಸಿಕೊಡುತ್ತೆನೆ ಎಂದು ಬೈದು, ಮನೆಯ ಬಾಗಿಲನ್ನು ಒಡೆದು ಗೋಪಾಲ ರವರನ್ನು ಹೊರಗೆ ಎಳೆದುಕೊಂಡು ಬಂದು ಅಂಗಳಕ್ಕೆ ದೂಡಿ, ಇವರ ಬಟ್ಟೆ ಬರೆಗಳನ್ನು ಹೊರಗೆ ಬಿಸಾಡಿ ಎಲ್ಲಾರು ಸೇರಿ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ನಾಗರಾಜ ಗಾಣಿಗೆ ಎಂಬವನು ಕತ್ತಿಯಿಂದ ಎಡಬದಿಯ ಕಾಲಿನ ಗಂಟಿನ ಕೆಳಗಡೆ ಮತ್ತು ಬಲ ಕೈಗೆ ಕಡಿದಿರುತ್ತಾನೆ. ಸತೀಶ ಎಂಬವನು ಸೊಂಟೆಯಿಂದ ಗೋಪಾಲ ಬೆಲ್ಚಡ ರವರ ಸೊಂಟಕ್ಕೆ, ಕೈಗೆ, ತಲೆಗೆ ಹೊಡೆದಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 12/2021 ಕಲಂ: 447 448 504,506,324 ಜೊತೆಗೆ 34 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಾಂಜಾ ಪ್ರಕರಣ

  • ಉಡುಪಿ: ದಿನಾಂಕ 06.02.2021 ರಂದು ನಾರಾಯಣ, ಪೊಲೀಸ್ ಉಪ ನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರಿಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಅವರು ಮೇಲಾಧಿಕಾರಿಯವರ ಅನುಮತಿ ಪಡೆದುಕೊಂಡು ಪಂಚರು, ಪತ್ರಾಂಕಿತ ಅಧಿಕಾರಿ, ಸಿಬ್ಬಂದಿಗಳ ಸಹಿತ, ಉಡುಪಿ ಜಿಲ್ಲೆ, ಮಣಿಪಾಲ ವಿದ್ಯಾರತ್ನ ನಗರದ ಅದಿತಿಪರ್ವ ಅಪಾರ್ಟ್ ಮೆಂಟ್ ಬಳಿ ಸಾರ್ವಜನಿಕ ಸ್ಥಳಕ್ಕೆ ಧಾಳಿ ನಡೆಸಿ ಅಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 1ನೇ ಆರೋಪಿ ವೇದಾಂತ ಶೆಟ್ಟಿ, ಪ್ರಾಯ 20 ವರ್ಷ, ತಂದೆ: ರಾಜೀವ ಶೆಟ್ಟಿ ವಾಸ: ಪ್ಲಾಟ್ ನಂಬ್ರ: 403, ಪ್ರೀಮಿಯಂ ಗ್ರೀನ್ ಪುಡ್ಸ್‌, ಮಣಿಪಾಲ. (ಮೂಲ ವಿಳಾಸ: EMP-30 , ಪ್ಲಾಟ್ ನಂಬ್ರ: 704, ಠಾಕೂರ್ ಗ್ರಾಮ, ಕಾಂದಿವಿಲಿ ಪೂರ್ವ ಮುಂಬಾಯಿ, ಮಹಾರಾಷ್ಟ್ರ ರಾಜ್ಯ) ನನ್ನು  ದಸ್ತಗಿರಿ ಮಾಡಿ, ಆತನಿಂದ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಹೊಂದಿದ್ದ 318 ಗ್ರಾಂ ತೂಕದ ಗಾಂಜಾ (ಅಂದಾಜು ಬೆಲೆ ಸುಮಾರು 9000/-), ಪಾಲಿಥಿನ್ ಚೀಲ, ಪ್ಲಾಸ್ಟಿಕ್ ತೊಟ್ಟೆ - 6 ಮುಂದಿನ ಕ್ರಮದ ಬಗ್ಗೆ ವಶಪಡಿಸಿಕೊಂಡು, ಕಾನೂನು ಕ್ರಮ ಜರುಗಿಸಿರುವುದಾಗಿದೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ: 04/2021 ಕಲಂ 8(c), 20 (ii) (A) ಎನ್.ಡಿ.ಪಿ.ಎಸ್. ಕಾಯ್ದೆ 1985ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 06-02-2021 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080