ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಸಂಕೇತ್ ಶೇಟ್ (37), ತಂದೆ: ಭವಾನಿಶಂಕರ್ ಶೇಟ್, ವಾಸ: ಮಹಾಮಾಯ ಕೃಪಾ ಎಲ್.ವಿ.ಟಿ.ಎದುರು ಸಂತೆಕಟ್ಟೆ ಪುತ್ತೂರು ಗ್ರಾಮ ಉಡುಪಿ ಜಿಲ್ಲೆ ಇವರು ದಿನಾಂಕ 05/01/2023 ರಂದು ಸಂತೆಕಟ್ಟೆಯ ಮನೆಯಿಂದ  ಹೆಂಡತಿ , ಮಗು ಹಾಗೂ ಅವರ ತಂದೆ ತಾಯಿಯವರೊಂದಿಗೆ ತನ್ನ KA-20-ME-6108 ನೇ  XUV300 ಕಾರಿನಲ್ಲಿ 15:20 ಕ್ಕೆ ಮಂಗಳೂರು ಸಂಭಂದಿಕರ ಮನೆಗೆ ಹೋಗಲು ಸಂತೆಕಟ್ಟೆಯಿಂದ ಉಡುಪಿ ಮಾರ್ಗವಾಗಿ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಹೊರಟಿದ್ದು ಕರಾವಳಿ ಫ್ಲೈ ಓವರ್ ನಲ್ಲಿ  ಬಂದು ರಿಬ್ಕೋ ಸ್ಟೀಲ್ ಎದುರು ತಲುಪುವಾಗ 15:40 ಗಂಟೆಗೆ ಎದುರು ಹೋಗುತ್ತಿದ್ದ ಮತ್ತೊಂದು ಕಾರು ನಿಧಾನವಾಗಿ ಚಲಿಸುತ್ತಿದ್ದ ಕಾರಣ ಪಿರ್ಯಾದಿದಾರರು ಸಹ ಕಾರನ್ನು ನಿಧಾನವಾಗಿ ಚಲಾಯಿಸಿಕೊಂಡು ಹೋಗುತ್ತಿರುವಾಗ ಪಿರ್ಯಾದಿದಾರರ ಹಿಂದಿನಿಂದ ಒಂದು ಲಾರಿ ದುಡುಕುತನ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಅವರ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕಾರು ಮುಂದೆ ಹೋಗುತ್ತಿದ್ದ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆಯಿತು ಹಾಗೂ ಮುಂದಿನ ಕಾರು ಅದರ ಮುಂದೆ ಇದ್ದ ಮತ್ತೊಂದು ಇನ್ನೋವ ಕಾರಿಗೆ ಹಿಂದಿನಿಂದ ಡಿಕ್ಕಿ ಹೊಡೆದಿರುತ್ತದೆ. ಈ ಅಘಾತದಿಂದ ಪಿರ್ಯಾದಿದಾರರ ಹೆಂಡತಿ ಪೂಜಾ ಸಂಕೇತ್ ಶೇಟ್ ರವರಿಗೆ ಕುತ್ತಿಗೆಯಲ್ಲಿ ಒಳ ನೋವಾಗಿರುತ್ತದೆ. ನಂತರ ಅಪಘಾತಪಡಿಸಿದ ಲಾರಿ ನಂಬ್ರ ನೋಡಲಾಗಿ KA-01-AE-0676 ನೇದಾಗಿದ್ದು ಎದುರು ಇದ್ದ ನೆಕ್ಸಾನ್ ಕಾರಿನ ನಂಬ್ರ ನೋಡಲಾಗಿ  KA-03-NL-4940 ಆಗಿರುತ್ತದೆ. ನಂತರ ಅದರ ಮುಂದೆ ಇದ್ದ ಇನ್ನೋವಾ ಕಾರಿನ ನಂಬ್ರ ನೋಡಲಾಗಿ  KA-20-MC-0978 ಆಗಿರುತ್ತದೆ. ನಂತರ ಗಾಯಗೊಂಡ ಪಿರ್ಯಾದಿದಾರರ ಪತ್ನಿಯನ್ನು ಹೈಟೆಕ್ ಆಸ್ಪತ್ರೆ ಗೆ ಕಳಿಸಿಕೊಟ್ಟಿದ್ದು ಅವರನ್ನು ಪರೀಕ್ಷಿಸಿದ ಹೈಟೆಕ್ ಆಸ್ಪತ್ರೆಯ ವೈಧ್ಯಾಧಿಕಾರಿಯವರು ಒಳರೋಗಿಯಾಗಿ ದಾಖಲು ಮಾಡಿಕೊಂಡಿರುತ್ತಾರೆ.  ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2023 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಮಲ್ಪೆ: ಪಿರ್ಯಾದಿದಾರರಾದ ಬೊನ್ನ ಪೂಜಾಪಲ್ಲಿ(36), ತಂದೆ:ಮುಕುಂದ, ವಾಸ: ನಂಬ್ರ 1-931  ಕೊಟ್ಟವಿಧಿ ಲಕ್ಷ್ಮೀದೇವಿ  ಪೇಟಾ ಶ್ರೀಕಾಪುಲಂ  ಜಿಲ್ಲೆ  ಆಂದ್ರಪ್ರದೇಶ  ಇವರು 10 ವರ್ಷಗಳಿಂದ ಮಲ್ಪೆ ಬಂದರಿನಲ್ಲಿ ಪರ್ಸಿಯನ್ ಬೋಟ್ ನ ಬಲೆ ಕೆಲಸ ಮಾಡಿ ಕೊಂಡಿದ್ದು ಮಲ್ಪೆ ಬಂದರಿನಲ್ಲಿ ಖಾಲಿ ಸ್ಥಳದಲ್ಲಿ ಮಲಗುತ್ತಿದ್ದರು. ದಿನಾಂಕ 04/01/2023 ಪಿರ್ಯಾದಿದಾರರು ಕೆಲಸ ಮುಗಿಸಿ ಮಲ್ಪೆ  ಬಂದರಿನಲ್ಲಿ ಮಲಗಿದ್ದು ಕೆಲಸದ  ಬಗ್ಗೆ  ದಿನಾಂಕ 05/01/2023 ರಂದು ಮಲ್ಪೆ ಯಾಂತ್ರಿಕ ಟ್ರಾಲ್  ದೋಣಿ ಮೀನುಗಾರರ  ಸಂಘದ ಡಿಸೇಲ್  ಬಂಕ್ ಬಳಿ   ಬೆಳಿಗ್ಗೆ 5:00 ಗಂಟೆ ಸಮಯಕ್ಕೆ ನಡೆದುಕೊಂಡು ಹೋಗುತ್ತಿರುವಾಗ  KA-20-D-6266 ನೇ ಡಿಸೇಲ್ ಟ್ಯಾಂಕರ್ ನ ಚಾಲಕನು ತನ್ನ ಟ್ಯಾಂಕರ್ ನ್ನು ಅಜಾಗರೂಕತೆ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಕೆಳಗೆ ಬಿದ್ದಿದ್ದು, ಟ್ಯಾಂಕರಿನ ಹಿಂಬದಿಯ ಚಕ್ರ  ಪಿರ್ಯಾದಿದಾರರ ಎರಡು ಕಾಲುಗಳ ಪಾದದ ಮೇಲೆ ಟ್ಯಾಂಕರ ಚಕ್ರ ಹರಿದು ಪಿರ್ಯಾದಿದಾರರ ಎರಡು ಕಾಲುಗಳ ಪಾದದ ಮೇಲಿನ ಭಾಗದ ಮೂಳೆ ಜಖಂ ಗೊಂಡಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 03/2023 ,ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಸುರೇಶ ಭಂಡಾರಿ (59), ತಂದೆ: ದಿ: ಅಂತಯ್ಯ ಭಂಡಾರಿ ವಾಸ: ಕುಂದೇಶ್ವರ ಮನೆ ಹಿರ್ಗಾನ ಗ್ರಾಮ ಕಾರ್ಕಳ ತಾಲೂಕು ಇವರ ಮಗ  ಸಂಪತ ಭಂಡಾರಿ (31) ಇವರು ವಿಪರೀತ ಕುಡಿತದ ಚಟವನ್ನು ಹೊಂದಿದ್ದು ಮತ್ತು ಸಾಲವನ್ನು ಮಾಡಿಕೊಂಡಿದ್ದು, ಅದೇ ಕಾರಣದಿಂದ  ದಿನಾಂಕ 04/01/2023 ರಂದು ಮಧ್ಯಾಹ್ನ  3:00 ಗಂಟೆಯಿಂದ ದಿನಾಂಕ 05/01/2023 ರಂದು ಬೆಳಿಗ್ಗೆ 11:00 ಗಂಟೆಯ ಮಧ್ಯಾವಧಿಯಲ್ಲಿ ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ತನ್ನ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಯುಡಿಅರ್‌ ಕ್ರಮಾಂಕ 01/2022 ಕಲಂ: 174 CRPC ಯಂತೆ ಪ್ರಕರಣ ದಾಖಲಾಗಿರುತ್ತದೆ .

ಕಳವು ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಶೈಲೇಶ್‌ ನಾಯಕ್‌ (47), ತಂದೆ: ಕೆ. ರಘುಪತಿ ನಾಯಕ್‌, ವಾಸ: ಫ್ಲ್ಯಾಟ್‌ ನಂಬ್ರ 301, ಶಾಂತಾನಂದ ಅಪಾರ್ಟ್‌ಮೆಂಟ್‌, ಕಿನ್ನಿಮೂಲ್ಕಿ, ಉಡುಪಿ ತಾಲೂಕು ಇವರು HONDA ACTIVA ಸ್ಕೂಟರ್‌ ನಂಬ್ರ KA-20-ET-9124 (Chassis No: ME4JF50AGKW115747 & Engine No: JF50EW0115789) ನೇದನ್ನು ದಿನಾಂಕ 01/01/2023 ರಂದು ಬೆಳಿಗ್ಗೆ 10:00 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ನಾರಾಯಣಗುರು ಮಂದಿರದ ಎದುರು ನಿಲ್ಲಿಸಿದ್ದು, ವಾಪಾಸು ಬೆಳಿಗ್ಗೆ 10:30 ಗಂಟೆಗೆ ಬಂದು ನೋಡಿದಾಗ ಸ್ಕೂಟರ್‌ ನಿಲ್ಲಿಸಿದ ಸ್ಥಳದಲ್ಲಿ ಇಲ್ಲದೆ ಇದ್ದು, ಯಾರೋ ಕಳ್ಳರು ಸದರಿ ಸ್ಕೂಟರ್‌ ನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸ್ಕೂಟರ್‌ ನ  ಮೌಲ್ಯ ರೂಪಾಯಿ  50,000/- ಆಗಿರುತ್ತದೆ . ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2023 ಕಲಂ:  379  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಕಾರ್ಕಳ: ಪಿರ್ಯಾದಿದಾರರಾದ ಹರೀಶ್‌ ಕರ್ಕೇರ (48), ತಂದೆ: ಕೆ.ಪಿ ನಾರಾಯಣ, ವಾಸ: ಆರ್.ಎನ್‌ ನಿವಾಸ, ಜೋಡುಕಟ್ಟೆ, ಮಿಯಾರು ಗ್ರಾಮ, ಕಾರ್ಕಳ ತಾಲೂಕು ಇವರ ಮನೆಯ ಹತ್ತಿರ ತನ್ನ ದೊಡ್ಡಮ್ಮ ರಮಣಿ ಎಂ ಎಂಬುವವರ ಮನೆಯಿದ್ದು,  ದೊಡ್ಡಮ್ಮ ಹಾಗೂ ಅವರ ಮನೆಯವರು ಅಮೇರಿಕಾದಲ್ಲಿ ವಾಸವಾಗಿದ್ದು, ಒಂದು ವರ್ಷದ ಹಿಂದೆ ಊರಿಗೆ ಬಂದು ಹೋಗಿರುತ್ತಾರೆ. ಪಿರ್ಯಾದಿದಾರರು ಮನೆಗೆ ಆಗಾಗ ಹೋಗಿ ಬರುತ್ತಿದ್ದು, ದಿನಾಂಕ 03/01/2023 ರಂದು ಅವರ ತಮ್ಮ ಪ್ರಕಾಶ್‌ ಎಂಬುವವರು ಮನೆಗೆ ಹೋಗಿ ಬಂದಿರುತ್ತಾರೆ. ದಿನಾಂಕ 05/01/2023 ರಂದು ಮದ್ಯಾಹ್ನ 1:00 ಗಂಟೆಗೆ ತೋಟದ ಕೆಲಸಕ್ಕೆ ಹೋದ ರಾಘು ಎಂಬುವವರು ಮನೆಯ ಮುಂದಿನ ಬಾಗಿಲು ಒಡೆದಿರುವುದಾಗಿ ತಿಳಿಸಿದ ಕೂಡಲೇ ಪಿರ್ಯಾದಿದಾರರು ಮನೆಗೆ ಬಂದು ನೋಡಿದಾಗ ಮನೆಯ ಮುಂಬಾಗಿಲು ಒಡೆದು ಹಾನಿಯಾಗಿದ್ದು, ಮನೆಯ ಒಳಗಿನ ಕಪಾಟುಗಳನ್ನು ತೆರೆದು ಬಟ್ಟೆ ಬರೆಗಳನ್ನು ಮತ್ತು ವಸ್ತುಗಳನ್ನು ಯಾರೋ ಕಳ್ಳರು ಚೆಲ್ಲಾಪಿಲ್ಲಿ ಮಾಡಿರುವುದು ಕಂಡು ಬಂದಿರುತ್ತದೆ. ಪಿರ್ಯಾದಿದಾರರು ಅಮೇರಿಕಾದಲ್ಲಿರುವ ತನ್ನ ದೊಡ್ಡಮ್ಮನಿಗೆ ವಿಚಾರ ತಿಳಿಸಿದ್ದು, ಮನೆಯಲ್ಲಿ ಯಾವ ಯಾವ ವಸ್ತುಗಳು ಕಳವಾಗಿರುವ ಬಗ್ಗೆ ತನ್ನ ದೊಡ್ಡಮ್ಮ ಬಂದು ಪರಿಶೀಲಿಸಿ ಹೇಳುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 01/2023 ಕಲಂ: 454, 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ . 

ಇತ್ತೀಚಿನ ನವೀಕರಣ​ : 06-01-2023 10:22 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080